ನನಗೂ ಈಶ್ವರ್​ ಖಂಡ್ರೆಯವರಿಗೂ ಬಿರುಕು ಎಂಬುದು ಶುದ್ಧ ಸುಳ್ಳು: ದಿನೇಶ್​ ಗುಂಡೂರಾವ್​


Updated:July 24, 2018, 6:53 PM IST
ನನಗೂ ಈಶ್ವರ್​ ಖಂಡ್ರೆಯವರಿಗೂ ಬಿರುಕು ಎಂಬುದು ಶುದ್ಧ ಸುಳ್ಳು: ದಿನೇಶ್​ ಗುಂಡೂರಾವ್​

Updated: July 24, 2018, 6:53 PM IST
- ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 24):  ಕರ್ನಾಟಪ ಪ್ರದೇಶ ಕಾಂಗ್ರೆಸ್​ ಸಮಿತಿ (ಕೆಪಿಸಿಸಿ) ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹಾಗೂ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಮಾತುಗಳು ಪಕ್ಷದ ಮೂಲಗಳಿಂದ ಕೇಳಿ ಬಂದಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಗುಂಡೂರಾವ್​ ಅವರ ಮತ್ತು ಈಶ್ವರ್​ ಖಂಡ್ರೆ ನಡುವೆ ಯಾವುದೇ ವೈಮನಸ್ಸಿಲ್ಲ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್​ನಲ್ಲಿ ಬಿರುಕು ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕರ ನಡುವೆ ಶೀತಲ ಸಮರ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ದಿನೇಶ್​ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ ನಡುವೆ ಅಧಿಕಾರಿ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮನಸ್ತಾಪ ಉಂಟಾಗಿದ್ದು, ಕೆಪಿಸಿಸಿ ಅಧ್ಯಕ್ಷರು ಪೂರ್ವಕ್ಕೆ, ಕಾರ್ಯಾಧ್ಯಕ್ಷರು ಪಶ್ಚಿಮಕ್ಕೆ ಮುಖ ಮಾಡಿ ಕೂತಿದಾರೆ ಎನ್ನಲಾಗಿತ್ತು.

ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಧಿಕೃತ ಪತ್ರಿಕಾಗೋಷ್ಠಿ ನಡೆಸುವಾಗ ಒಮ್ಮೆಯೂ ಖಂಡ್ರೆಗೆ ಆಹ್ವಾನ ನೀಡಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದ್ದವು. 15 ದಿ‌ನ ಕಳೆದರೂ ಇಬ್ಬರು ಸೇರಿ ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ. ಅಧ್ಯಕ್ಷರಿಗಿಂತ ಕಾರ್ಯಾಧ್ಯಕ್ಷರು ಚುರುಕಾಗಿರುವುದೇ ಮನಸ್ತಾಪಕ್ಕೆ ಕಾರಣ ಎಂದು ಕೆಪಿಸಿಸಿ ಕಚೇರಿ ಮೂಲಗಳು ತಿಳಿಸಿದ್ದವು.

ಆದರೆ ದಿನೇಶ್​ ಗುಂಡೂರಾವ್​ ಇವೆಲ್ಲವೂ ಊಹಾಪೋಹಗಳಷ್ಟೇ, ಇದು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ. ಜತೆಗೆ ತಾವು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾಗ ಮಾಡಿದ ಕೆಲಸವನ್ನು ಈಗ ಈಶ್ವರ್​ ಖಂಡ್ರೆ ಮಾಡುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ಪತ್ರಿಕಾಗೋಷ್ಠಿ ಕರೆಯಬೇಕು ಎಂಬ ಷರತ್ತೇನಿಲ್ಲ. ಖಂಡ್ರೆ ಒಂದು ಕಡೆಯಿಂದ ಪಕ್ಷ ಸಂಘಟನೆಯನ್ನು ಬಲ ಪಡಿಸುತ್ತಿದ್ದಾರೆ, ತಾವು ಇನ್ನೊಂದು ಕಡೆಯಿಂದ ಕೆಲಸ ಮಾಡುತ್ತಿರುವುದಾಗಿ ಗುಂಡೂರಾವ್​ ಹೇಳಿದ್ಧಾರೆ. ಈ ಸಂಬಂಧ ಈಶ್ವರ್​ ಖಂಡ್ರೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ