ಡಿಕೆ ಶಿವಕುಮಾರ್​ಗೆ ಪಕ್ಷದಲ್ಲಿ ಎಲ್ಲರೂ ಸಹಕಾರ ಕೋಡಬೇಕು ; ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ ವ್ಯಕ್ತಿಯ ಸಾವು ವಿಚಾರದಲ್ಲಿ ಯಾಕೆ ಹೀಗಾಯ್ತು ಅಂತ ಸರ್ಕಾರ ಪರಿಶೀಲನೆ ಮಾಡಬೇಕಿದೆ. ಸೌದಿಯಿಂದ ವ್ಯಕ್ತಿ ಬಂದ ಮೇಲೆ‌ ನೂರಾರು ಜನರನ್ನು ಭೇಟಿ ಮಾಡಿದ್ದಾರೆ. ಅವರೆಲ್ಲರ ತಪಾಸಣೆ ನಡೆಸಬೇಕಿದೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ

  • Share this:
ಬೆಂಗಳೂರು(ಮಾ.14): ಕೆಪಿಸಿಸಿಗೆ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜೊತೆಗೆ ಅವರು ಬಯಸಿದಂತಹ ತಂಡ ಕೂಡ ಸಿಕ್ಕಿದೆ. ಪಕ್ಷಕ್ಕೆ ನಿಶ್ಚಿತ ಬಲ ಬರಲಿದೆ. ಆದರೆ, ಕೇವಲ ಒಬ್ಬ ವ್ಯಕ್ತಿಯಿಂದ ಪಕ್ಷ ಸಂಘಟನೆ ಮಾಡುವುದಕ್ಕೆ ಸಾಧ್ಯವಿಲ್ಲ. ಎಷ್ಟೇ ಸಮರ್ಥವಿದ್ದರೂ ಎಲ್ಲರೂ ಅವರಿಗೆ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಡಿಕೆ ಶಿವಕುಮಾರ್​ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಎಲ್ಲ ಕಾರ್ಯಕರ್ತರು ನೂತನ ಅಧ್ಯಕ್ಷರ ಕೈ ಬಲಪಡಿಸಬೇಕು. ಎಲ್ಲರೂ ಬೆಂಬಲ ಕೊಟ್ಟರೇ ಮಾತ್ರ ಪಕ್ಷ ಬಲಗೊಳ್ಳುತ್ತದೆ  ಎಂದರು.

ಕೊರೋನಾ ವೈರಸ್​​ ಭೀತಿಯಲ್ಲಿ ಕಲಬುರ್ಗಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ನಾನು ಸಹ ಜಿಲ್ಲಾಧಿಕಾರಿಗಳಿಂದ ಮಾಹಿತಿ‌ ಪಡೆದಿದ್ದು. ಎಲ್ಲ ಸುರಕ್ಷತಾ ಕ್ರಮಗಳನ್ನೂ ತಗೊಂಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಸೌದಿಯಿಂದ ಬಂದ ವ್ಯಕ್ತಿಗೆ ವಯಸ್ಸಾಗಿತ್ತು. ತಪಾಸಣೆ ವೇಳೆ ಕೊರೋನಾ ಇರುವ ಬಗ್ಗೆ ಗೊತ್ತಾಗಲಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ .ಇನ್ನು ಮುಂದಿನ ಸುರಕ್ಷತಾ ಕ್ರಮಗಳನ್ನು ಕಲಬುರ್ಗಿಯಲ್ಲಿ ಕೈಗೊಳ್ಳಬೇಕಿದೆ. ಕೊರೋನಾ ಹರಡದಂತೆ ಸರ್ಕಾರ ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿದರು.

ಕಲಬುರ್ಗಿ ವ್ಯಕ್ತಿಯ ಸಾವು ವಿಚಾರದಲ್ಲಿ ಯಾಕೆ ಹೀಗಾಯ್ತು ಅಂತ ಸರ್ಕಾರ ಪರಿಶೀಲನೆ ಮಾಡಬೇಕಿದೆ. ಸೌದಿಯಿಂದ ವ್ಯಕ್ತಿ ಬಂದ ಮೇಲೆ‌ ನೂರಾರು ಜನರನ್ನು ಭೇಟಿ ಮಾಡಿದ್ದಾರೆ. ಅವರೆಲ್ಲರ ತಪಾಸಣೆ ನಡೆಸಬೇಕಿದೆ. ಸರ್ಕಾರ ಮತ್ತು ಅಧಿಕಾರಿಗಳು ಇಬ್ಬರು ಎಚ್ಚರದಲ್ಲಿ ಕೆಲಸ ಮಾಡಬೇಕು ಎಂದರು.

ಕೊರೋನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ :  ಡಿಕೆ ಶಿವಕುಮಾರ್​

ಕೊರೋನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ನಮ್ಮ ಸಹಕಾರವನ್ನ ನಾವು ಕೊಡುತ್ತೇವೆ. ಹಲವು ಆತುರದ ನಿರ್ಧಾರ ತೆಗೆದುಕೊಂಡಿರಬಹುದು ಆದರೂ ಜಾಗೃತಿ ಅಗತ್ಯವಾಗಿದೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿದರು.

ಇದನ್ನೂ ಓದಿ : ಕೊರೋನಾಗೆ ವೃದ್ಧ ಸಾವು; ಕೆಮ್ಮಿನಿಂದ ಬಳಲುತ್ತಿರುವ ಕುಟುಂಬದ ನಾಲ್ವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ

ಪಕ್ಷ ಕಟ್ಟಲು ಎಲ್ಲರ ಸಹಕಾರ ಅಗತ್ಯ. ಹಾಗಾಗಿ ಎಲ್ಲರ ಸಹಕಾರವನ್ನು ಕೋರುತ್ತಿದ್ದೇನೆ. ದೆಹಲಿಗೆ ನಾನೊಬ್ಬನೇ ಹೋಗುವುಲ್ಲ, ಎಲ್ಲಾ ನಾಯಕರನ್ನು ಕರೆದುಕೊಂಡು ಹೋಗುತ್ತೇನೆ, ಕೆಪಿಸಿಸಿ ಅಧ್ಯಕ್ಷನಾಗಿ ಪದಗ್ರಹಣ ಯಾವಾಗ ಅಂತಾ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
First published: