Evening Digest: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ

Latha CG | news18-kannada
Updated:November 23, 2019, 6:40 PM IST
Evening Digest: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • Share this:
1.ಮಹಾ ಶಾಕ್ - ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ತರಾತುರಿ ಪ್ರಮಾಣ ವಚನ, ಸೇನೆಗೆ ಭಾರೀ ಮುಖಭಂಗ

ಮಹಾರಾಷ್ಟ್ರ ರಾಜಕಾರಣವೀಗ ಶನಿವಾರ ಬೆಳಿಗ್ಗೆಯೇ ಸ್ಟೋಟಕ ತಿರುವು ಪಡೆದುಕೊಂಡಿದೆ. ಇದುವರೆಗೂ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಶಿವಸೇನಾ ಮುಖ್ಯಸ್ಥ ಉದ್ಬವ್​ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೀಗ ದಿಢೀರ್​​ ಬೆಳವಣಿಗೆಯಲ್ಲಿ ಎನ್​​ಸಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದೆ. ದೇವೇಂದ್ರ ಪಡ್ನವೀಸ್ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ ಎನ್​​ಸಿಪಿಯ ಅಜಿತ್​​ ಪವರ್​​​​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ತೆಗೆದುಕೊಂಡಿದ್ಧಾರೆ.

2. ಮಹಾರಾಷ್ಟ್ರದಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಶುರು; ಜೈಪುರ, ಭೋಪಾಲ್​ನತ್ತ ಮುಖ ಮಾಡಿದ ಶಿವಸೇನಾ, ಕಾಂಗ್ರೆಸ್ ಶಾಸಕರು

ಮಹಾರಾಷ್ಟ್ರದಲ್ಲಿ ನಿನ್ನೆಯವರೆಗೂ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ಎಂದಿದ್ದ ಸಮೀಕರಣ ರಾತ್ರೋರಾತ್ರಿ ಬಿಜೆಪಿ-ಎನ್​ಸಿಪಿಯಾಗಿ ಬದಲಾಗಿ ಹೋಗಿದೆ. ಇಂದು ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದರು. ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ಪಡೆದರು. ಮೂಲಗಳ ಪ್ರಕಾರ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಬಹುಮತ ಸಾಬೀತುಪಡಿಸಲು ಇನ್ನೊಂದು ವಾರ ಕಾಲ, ಅಂದರೆ ನ. 30ರವರೆಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಶಿವಸೇನಾ ರೆಸಾರ್ಟ್​ಗಳನ್ನ ಆಯ್ಕೆ ಮಾಡಿಕೊಂಡಿವೆ. ಶಿವಸೇನಾದವರು ತಮ್ಮ ಶಾಸಕರನ್ನು ರಾಜಸ್ಥಾನದ ರಾಜಧಾನಿ ಜೈಪುರಕ್ಕೆ ಕರೆದೊಯ್ಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನ ರೆಸಾರ್ಟ್​​ನಲ್ಲಿ ಒಂದು ವಾರ ವಾಸ್ತವ್ಯ ಹೂಡಲಿದ್ದಾರೆ.

3.ಗೂಳಿ ರಕ್ಷಿಸಲು ಹೋಗಿ ಪಲ್ಟಿಯಾದ ಬಸ್​​​​​; 12 ಮಂದಿ ದಾರುಣ ಸಾವು

ರಸ್ತೆಯಲ್ಲಿ ಅಡ್ಡಲಾಗಿ ಬಂದ ಗೂಳಿಯನ್ನು ರಕ್ಷಿಸಲು ಹೋಗಿ ಮಿನಿ ಬಸ್​ ಉರುಳಿ ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ನಾಗೌರ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿದವರು ಮಹಾರಾಷ್ಟ್ರದ ಲಾತೂರ್​​ನಿಂದ ಹರಿಯಾಣದ ಹಿಸರ್​ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

4. ‘ಮಹಾ’ ಬೆಳವಣಿಗೆ: ಮೈತ್ರಿಧರ್ಮ ಪಾಲಿಸದ ಶಿವಸೇನಾಗೆ ತಕ್ಕ ಪಾಠ – ಲಕ್ಷ್ಮಣ ಸವದಿಮಹಾರಾಷ್ಟ್ರದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಎನ್​ಸಿಪಿಯ ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಯಾಗಿದೆ. ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆ ನಿನ್ನೆಯವರೆಗೂ ಮೈತ್ರಿ ಮಾತುಕತೆಯಲ್ಲಿ ತೊಡಗಿದ್ದ ಶಿವಸೇನಾಗೆ ಶಾಕ್ ಆಗಿದೆ. ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಈಶ್ವರಪ್ಪ, ಬಸವರಾಜ್ ಬೊಮ್ಮಾಯಿ ಮೊದಲಾದ ರಾಜ್ಯ ಬಿಜೆಪಿ ನಾಯಕರು ಮಹಾರಾಷ್ಟ್ರದ ಈ ನಾಟಕೀಯ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

5. ಬೆಂಗಳೂರಿನಲ್ಲಿ ಟೈಡಾಲ್ ಮಾತ್ರೆ​ ಸೇವಿಸಿ ಇಬ್ಬರು ಸಾವು; ಅಕ್ರಮ ಔಷಧ ಮಾರಾಟ ಮಾಡಿದ್ದ ಮೆಡಿಕಲ್ ಶಾಪ್ ಮಾಲೀಕನ ಬಂಧನ

ನಗರದ ಮಲ್ಲೇಶ್ವರಂನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್​ ಮಾದರಿಯ ಟೈಡಾಲ್ ಮಾತ್ರೆಯನ್ನು ಸಿರಿಂಜ್ ಮೂಲಕ ಸೇವಿಸಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್​ನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ನ. 20ರಂದು ನಡೆದ ಪಾರ್ಟಿಯಲ್ಲಿ ಇಬ್ಬರು ಯುವತಿಯರೂ ಸೇರಿದಂತೆ 11 ಜನ ಪಾಲ್ಗೊಂಡಿದ್ದರು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. 9 ಜನರ ಸ್ಥಿತಿ ಗಂಭೀರವಾಗಿತ್ತು. ಆ ಡ್ರಗ್ಸ್​ ಎಲ್ಲಿಂದ ಖರೀದಿಸಿದ್ದಾರೆಂಬುದರ ಪತ್ತೆ ಮಾಡಿದ ಪೊಲೀಸರಿಗೆ ರಾಜಾಜಿನಗರ ಮನ್ ದೀಪ್ ಫಾರ್ಮ್​ನಲ್ಲಿ ಟೈಡಾಲ್ ಟ್ಯಾಬ್ಲೆಟ್, ಸಿರಿಂಜ್, ಡಿಸ್ಟಿಲ್ ವಾಟರ್ ಖರೀದಿ ಮಾಡಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಔಷಧ ಮಾರಾಟ ಮಾಡಿದ್ದ ಆ ಮೆಡಿಕಲ್ ಶಾಪ್ ಮಾಲೀಕನನ್ನು ಬಂಧಿಸಿದ್ದಾರೆ.

6. ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಅತ್ಯುತ್ತಮ ಆಡಳಿತಗಾರ; ಕಡು ವೈರಿಯನ್ನು ಹಾಡಿ ಹೊಗಳಿದ ಎಚ್. ವಿಶ್ವನಾಥ್!

ರಾಜಕೀಯದಲ್ಲಿ ಯಾರಿಗೆ ಯಾರು ಬೇಕಾದರೂ ಶತ್ರುವಾಗಬಹುದು, ಯಾರು ಯಾವಾಗ ಬೇಕಾದರೂ ಮಿತ್ರನಾಗಬಹುದು. ಇಂತಹ ಪವಾಡಗಳು ರಾಜಕಾರಣದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಕರ್ನಾಟಕದಲ್ಲೂ ಅಂಥದ್ದೊಂದು ಅಚ್ಚರಿಯ ಸಂಗತಿ ನಡೆದಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಾಗಲೂ ಸಿದ್ದರಾಮಯ್ಯ ಇದ್ದ ಕಡೆ ಕಾಲನ್ನೂ ಇಡದ ಅನರ್ಹ ಶಾಸಕ ಎಚ್. ವಿಶ್ವನಾಥ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ! ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಅವರೊಬ್ಬ ಒಳ್ಳೆಯ ಆಡಳಿತಗಾರ. ಆ ಕಾರಣದಿಂದಲೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದ ಜನತೆ ಸಿದ್ದರಾಮಯ್ಯರನ್ನು ಪ್ರೀತಿಸುತ್ತಾರೆ. ವಿಪಕ್ಷದವರೂ ಅವರನ್ನು ಇಷ್ಟಪಡುತ್ತಾರೆ. ನಾನೂ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

7.ರಮೇಶ್​​ ಜಾರಕಿಹೊಳಿಗೆ ಸರ್ಕಾರ ಬೀಳಿಸುವ ಶಕ್ತಿ ಇದೆ, ಆದ್ರೆ ಹಳ್ಳಿಗಳಿಗೆ ಬಸ್​ ಬಿಡಿಸುವ ಶಕ್ತಿ ಇಲ್ಲ; ಸತೀಶ್​ ಜಾರಕಿಹೊಳಿ ವ್ಯಂಗ್ಯ

ಇಂದು ಗೋಕಾಕ್​​​ನಲ್ಲಿ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಸತೀಶ್​​ ಜಾರಕಿಹೊಳಿ, ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ‌ ವಿರುದ್ಧ ಎಂದರು. ಇದೇ ವೇಳೆ, ರಮೇಶ್ ಜಾರಕಿಹೊಳಿ  ಮತ್ತು ಅವರ ಬೆಂಬಲಿಗರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇಡೀ ಸರ್ಕಾರ ಬೀಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ. ಆದರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ರಮೇಶ್ ಬಳಿ ಇಲ್ಲ. ಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ, ಕುಡಿಯಲು ನೀರು ಇಲ್ಲ. ಒಂದ್ಯಾವುದು ಬ್ಯುಸಿನೆಸ್ ಇಲ್ಲ, ಸಮಾಜಸೇವೆ ಇಲ್ಲ ಆದರೂ ಇವನು ಅಷ್ಟು ಬ್ಯುಸಿ ಇರುತ್ತಾನೆ ಎಂದು ಹಿಗ್ಗಾಮುಗ್ಗಾ ಜಾಡಿಸಿದರು.

8.ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕ ಜನಾದೇಶವಿದೆ; ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕ ಜನಾದೇಶ ಇದೆ ಎಂದು ಶನಿವಾರ ಬಿಜೆಪಿ ಪ್ರತಿಪಾದಿಸಿದೆ. ಚುನಾವಣೆ ಸಮಯದಲ್ಲಿ ಎನ್​ಸಿಪಿ ಅಜಿತ್ ಪವಾರ್ ಅವರನ್ನು ಭ್ರಷ್ಟ ಎಂದು ಪ್ರಚಾರದುದ್ದಕ್ಕೂ ಹೇಳಿ ಇದೀಗ ಅದೇ ಅಜಿತ್ ಪವಾರ್ ಸಹಕಾರದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ. ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿರುವ ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್, ಎನ್​ಸಿಪಿ ಮತ್ತು ಶಿವಸೇನೆ ವಿರುದ್ಧ ಹರಿಹಾಯ್ದರು. ಸೈದ್ಧಾಂತಿಕವಾಗಿ ತದ್ವಿರುದ್ಧವಾಗಿರುವ ಪಕ್ಷಗಳು ಅಧಿಕಾರಕ್ಕಾಗಿ ಒಂದಾದವು. ಕೇಸರಿ ಪಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜನಾದೇಶದೊಂದಿಗೆ ಸರ್ಕಾರ ರಚಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

9. ತನ್ನ ಬಾಲ್​ಗೆ ಕೊಹ್ಲಿ ಬೌಂಡರಿ ಬಾರಿಸಿದಾಗ ಬಾಂಗ್ಲಾ ಬೌಲರ್ ಮಾಡಿದ್ದೇನು ಗೊತ್ತಾ..?

ಬಾಂಗ್ಲಾದೇಶ ವಿರುದ್ಧದ ಎರಡನೇ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಈಗಾಗಲೇ ಎರಡನೇ ದಿನದಾಟ ಆರಂಭಿಸಿರುವ ಭಾರತ ಪರ ವಿರಾಟ್ ಕೊಹ್ಲಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ನಿನ್ನೆ ಬಾಂಗ್ಲಾವನ್ನು 106 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಶುರು ಮಾಡಿದ ಭಾರತ, ಆರಂಭದಲ್ಲೇ ಮಯಾಂಕ್ ಅಗರ್ವಾಲ್(14) ಹಾಗೂ ರೋಹಿತ್ ಶರ್ಮಾ(21) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿ ಅತ್ಯುತ್ತಮ ಜೊತೆಯಾಟ ಆಡಿದರು.ಅದ್ದೂರಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಅವರ ಮದುವೆ ಸಂಭ್ರಮ ಜೋರಾಗಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಬಹುಕಾಲದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಸರ್ಜಾ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನಾಳೆ (ನ. 24) ಜೆ.ಪಿ. ನಗರ 7ನೇ ಫೇಸ್​ನಲ್ಲಿರುವ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್​ನಲ್ಲಿ ಧ್ರುವ ಸರ್ಜಾ- ಪ್ರೇರಣಾ ಶಂಕರ್ ಮದುವೆ ನಡೆಯಲಿದೆ. ಈಗಾಗಲೇ ಪ್ರೇರಣಾ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನೆರವೇರಿದ್ದು, ಧ್ರುವ ಸರ್ಜಾ, ಮೇಘನಾ ರಾಜ್, ಚಿರಂಜೀವಿ ಸರರ್ಜಾ ಸೇರಿದಂತೆ ಕುಟುಂಬದವರು ಪಾಲ್ಗೊಂಡಿದ್ದರು.

First published: November 23, 2019, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading