Evening Digest: ಈ ದಿನ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

Latha CG | news18
Updated:May 4, 2019, 5:44 PM IST
Evening Digest: ಈ ದಿನ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
  • News18
  • Last Updated: May 4, 2019, 5:44 PM IST
  • Share this:
  1. #KarnatakaJobsForKannadigas: ಟ್ವಿಟ್ಟರ್​ ಅಭಿಯಾನ

"ಕರ್ನಾಟಕ ಜಾಬ್ಸ್​​​ ಫಾರ್​​ ಕನ್ನಡಿಗಾಸ್" ಎಂದು ಆಗ್ರಹಿಸಿ ಟ್ವೀಟರ್‌ ಅಭಿಯಾನ ಶುರು ಮಾಡಲಾಗಿದೆ. ರಾಜ್ಯದಲ್ಲಿ ಯಾರೇ ಆಗಲಿ ಉದ್ಯೋಗ ನೀಡಬೇಕಾದರೇ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಟ್ವಿಟ್ಟರ್​​ನಲ್ಲಿ ಅಭಿಯಾನ ಆರಂಭಿಸಲಾಗಿದೆ. #KarnatakaJobsForKannadigas ಎನ್ನುವ ಹ್ಯಾಶ್​​​​ ಟ್ಯಾಗ್​​ ಬಳಸುವ ಮೂಲಕ ಕನ್ನಡಿಗರು ಭಾರೀ ಪ್ರಮಾಣದಲ್ಲಿ ಟ್ವೀಟ್​​ ಮಾಡುತ್ತಿದ್ದಾರೆ. ಸದ್ಯ ಇದೇ ಹ್ಯಾಶ್​​ ಟ್ಯಾಗ್​​ ಟ್ರೆಂಡಿಂಗ್​​ ಆಗಿದೆ.
3. ಫನಿ ಚಂಡಮಾರುತ:

ಶುಕ್ರವಾರ ಒರಿಸ್ಸಾಕ್ಕೆ ಅಪ್ಪಳಿಸಿ 9 ಮಂದಿಯನ್ನು ಬಲಿಪಡೆದ ಫನಿ ಚಂಡಮಾರುತ ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ. ಮತ್ತೆ ಸಾವಿನ ಸಂಖ್ಯೆ 12 ಕ್ಕೇ ಏರಿದೆ. ಈಗಾಗಲೇ ಪಶ್ಚಿಮ ಬಂಗಾಳ ಸರ್ಕಾರ 45 ಸಾವಿರ ಜನರನ್ನು ನಿರಾಶ್ರಿತ ತಾಣಗಳಿಗೆ ಸ್ಥಳಾಂತರಿಸಿದೆ. ಫನಿ ಚಂಡಮಾರುತ ಸಂಜೆ ವೇಳೆಗೆ ಬಾಂಗ್ಲಾದೇಶದತ್ತ ಚಲಿಸಲಿದೆ ಎನ್ನಲಾಗಿದೆ. ಹೀಗಾಗಿ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಅಲರ್ಟ್​ ಘೋಷಿಸಲಾಗಿದೆ.

4. ನದಿಗೆ ಅಪ್ಪಳಿಸಿದ ಬೋಯಿಂಗ್​​ 737 ವಿಮಾನ: 

ಅಮೇರಿಕದ ಬೋಯಿಂಗ್​ 737 ವಿಮಾನ ರನ್​​ ವೇ ಯಿಂದ ಜಾರಿ ಸಮೀಪದ ಸೆಂಟ್​ ಜಾನ್​​​​ ನದಿಗೆ ಇಳಿದಿರುವ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದೆ. ವಿಮಾನದಲ್ಲಿ 136 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಎಲ್ಲರು ಅಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಅಮೇರಿಕದ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 21 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.


5. ಗಾನಕೋಗಿಲೆ ಎಸ್​​.ಜಾನಕಿಗೆ ಅನಾರೋಗ್ಯ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಂದೇ ಹೆಸರಾಗಿರುವ ಎಸ್​​.ಜಾನಕಿ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜಾನಕಿ ಅವರು ಕೆಲವು ದಿನಗಳ ಹಿಂದೆ ಮೈಸೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಕಾಲು ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಸೊಂಟದ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಜಾನಕಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
6. ಶಾಲಾ ಮಕ್ಕಳ ಹೊರೆ ಇಳಿಸಿದ ರಾಜ್ಯ ಸರ್ಕಾರ:


ಶಾಲಾ ಮಕ್ಕಳು ದೊಡ್ಡದೊಡ್ಡ ಬ್ಯಾಗುಗಳನ್ನ ನೇತುಹಾಕಿಕೊಂಡು ಹೋಗುವುದರಿಂದ ಅವರ ಆರೋಗ್ಯಕ್ಕೆ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬ್ಯಾಗ್ ಭಾರದ ಮೇಲೆ ಮಿತಿ ಏರಿದೆ. ಸರಕಾರಿ ಶಾಲೆ, ಅನುದಾನಮತ್ತು ಅನುದಾನರಹಿತ ಶಾಲೆಗಳಿಗೂ ಈ ನಿಯಮ ಅನ್ವಯವಾಗುತ್ತದೆ.


7. ಬೆಂಗಳೂರಿನಲ್ಲಿ ಎಸಿಬಿ ದಾಳಿ: 


ಸರಕಾರಿ ಅಧಿಕಾರಿಗಳೊಂದಿಗೆ ಸೇರಿ ಭಾರೀ ಅಕ್ರಮಗಳನ್ನ ಎಸಗಿದ ಆರೋಪವಿರುವ ವಾಲ್ ಮಾರ್ಕ್ ಸೇರಿದಂತೆ ಐದು ಕಂಪನಿಗಳ ಮೇಲೆ ಇವತ್ತು ಎಸಿಬಿ ದಾಳಿ ನಡೆಸಿದೆ. ರಿಯಲ್ ಎಸ್ಟೇಟ್ ಕಂಪನಿಯಾದ ವಾಲ್ ಮಾರ್ಕ್ ಸಂಸ್ಥೆ ಬಿಬಿಎಂಪಿ ಮತ್ತು ಬಿಡಿಎಯಿಂದ ಅಕ್ರಮವಾಗಿ ಟಿಡಿಆರ್ ಗಳಿಸಿದ್ದು ಇತ್ತೀಚೆಗೆ ಬೆಳಕಿಗೆ ಬಂದು, ನ್ಯೂಸ್18 ಕನ್ನಡ ವಾಹಿನಿ ಸತತವಾಗಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಎಸಿಪಿ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್​ಪಿಗಳ ನೇತೃತ್ವದ ಐದು ಎಸಿಬಿ ತಂಡಗಳು ಏಕಾಏಕಿ ದಾಳಿ ನಡೆಸಿವೆ.


8. ಧೋನಿಗಿದು ಕೊನೆಯ ಐಪಿಎಲ್​ ಸೀಸನ್​:


ಚೆನ್ನೈ ಸೂಪರ್​ ಕಿಂಗ್ಸ್​ ಐಪಿಎಲ್​ನ ಬಹು ಯಶಸ್ವಿ ತಂಡ. ಅರದಲ್ಲು ಮಹೇಂದ್ರ ಸಿಂಗ್​ ಧೋನಿ ಹಾಗೂ ಸಿಎಸ್​ಕೆ ನಡುವಿನ ಸಂಬಂಧ ಗಾಢವಾದುದು. ಧೋನಿ ಎಂದರೆ ಚೆನ್ನೈ ಅಭಿಮಾನಿಗಳಷ್ಟೇ ಅಲ್ಲದೆ ಇಡೀ ದೇಶದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ, ಈ ಚಾಣಾಕ್ಯ ನಾಯಕ ಈ ಬಾರಿ ಕೊನೆಯ ಐಪಿಎಲ್​ ಸೀಸನ್ ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಇದ್ದಕ್ಕೆ ಕಾರಣ ಸುರೇಶ್​ ರೈನಾ ಉತ್ತರಾಧಿಕಾರತ್ವ.9. ಮಂಡ್ಯ ಕ್ಷೇತ್ರದ ಮತ್ತೊಂದು ಸುತ್ತಿನ ಸಮೀಕ್ಷೆಗೆ ಸಿಎಂ ಸೂಚನೆ:


ಮಂಡ್ಯ ಚುನಾವಣೆ ಮುಗಿದು ದಿನಗಳು ಉರುಳಿದರೂ ಅದರ ಕಾವು ಮಾತ್ರ ಇನ್ನೂ ಆರುವ ಸೂಚನೆಗಳು ಕಾಣಿಸುತ್ತಿಲ್ಲ. ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಇದೀಗ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮೀಕ್ಷೆಗೆ ಆದೇಶಿಸಿದ್ದಾರೆ.


10. ಶ್ರೀಲಂಕಾ ಚರ್ಚ್​ ದಾಳಿ; ಉಗ್ರರು ಭಾರತದಲ್ಲಿ ತರಬೇತಿ ಪಡೆದಿದ್ದರೆಂದು ಲಂಕಾ ಸೇನೆ ಆರೋಪ

ಶ್ರೀಲಂಕಾದಲ್ಲಿ ಏಪ್ರಿಲ್ 21 ರ ಈಸ್ಟರ್ ಭಾನುವಾರದ ದಿನದ ಪ್ರಾರ್ಥನೆ ಸಮಯದಲ್ಲಿ ಚರ್ಚ್​ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸುವ ಮೂಲಕ 290ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾದ ಭಯೋತ್ಪಾದಕರು ದಾಳಿಗೂ ಮುನ್ನ ಭಾರತದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥ ಮಹೇಶ್ ಸೇನಾನಾಯಕ ಆರೋಪಿಸಿದ್ದಾರೆ.
 


First published: May 4, 2019, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading