Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18-kannada
Updated:March 7, 2020, 6:17 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಠಾಗೋರ್ ಹಾಡಿಗೆ ಅಶ್ಲೀಲ ರೂಪ ಕೊಟ್ಟು ಅಸಭ್ಯವಾಗಿ ವರ್ತಿಸಿದ ಘಟನೆ: ನೈತಿಕ ಹೊಣೆಹೊತ್ತು ಉಪಕುಲಪತಿ ರಾಜೀನಾಮೆ

ರಬೀಂದ್ರ ಭಾರತಿ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕ ಯುವತಿಯರು ತಮ್ಮ ದೇಹದ ಮೇಲೆ ಅಶ್ಲೀಲ ಪದಗಳನ್ನು ಬರೆದುಕೊಂಡು ಓಡಾಡುತ್ತಿದ್ದ ಪೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆದ ಹಿನ್ನೆಲೆಯಲ್ಲಿ ನೈತಿಕ ಹೊಣೆಯನ್ನು ಹೊತ್ತು ವಿಶ್ವವಿದ್ಯಾಲಯದ ಉಪ ಕುಲಪತಿ ಸಭ್ಯಸಾಚಿ ಬಸು ರೇ  ಚೌಧುರಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ನಮಗೆ ಚೌಧರಿ ಅವರು ರಾಜೀನಾಮೆ ನೀಡಿರುವ ವಿಷಯ ತಿಳಿದಿದೆ, ಆದರೆ ರಾಜೀನಾಮೆ ಅಂಗೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2.ಯೆಸ್ ಬ್ಯಾಂಕ್​ ಪುನಶ್ಚೇತನಕ್ಕೆ ಕ್ರಮ; ಎಸ್​ಬಿಐನಿಂದ ಶೇ. 49ರಷ್ಟು ಹೂಡಿಕೆ

ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್​​​​​​​​​​​​ನ ಶೇ. 49 ರಷ್ಟು ಪಾಲನ್ನು ಖರೀದಿಸಬೇಕಾದರೆ 2,450 ಕೋಟಿ​​ ರೂಪಾಯಿ ಹೂಡಿಕೆ ಮಾಡುವ ಅಗತ್ಯವಿದೆ ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ​​​ ಹೇಳಿದೆ. ಯೆಸ್ ಬ್ಯಾಂಕನ್ನು ಸೂಪರ್​ಸೀಡ್ ಮಾಡಿರುವ ಆರ್​ಬಿಐ ಆ ಬ್ಯಾಂಕ್​ನ ಪುನಶ್ಚೇತನಕ್ಕೆ ರೂಪುರೇಖೆ ಹಾಕಿದೆ. ಅದರಂತೆ, ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡುವವರು ಶೇ. 49 ಪಾಲನ್ನು ಖರೀದಿಸಬೇಕು ಎಂಬ ಷರತ್ತೂ ಇದೆ. ಮೂಲಗಳ ಪ್ರಕಾರ, ಎಸ್​ಬಿಐ 2,450 ಕೋಟಿ ಹಣ ಹೂಡಲು ನಿರ್ಧರಿಸಿದೆ ಎನ್ನಲಾಗಿದೆ.

3.International Women's Day: ಸಂಸ್ಕೃತಿ ಸಚಿವಾಲಯದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್​​​

ನಾಳೆ ಅಂದರೆ ಮಾರ್ಚ್​ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಎಲ್ಲೆಡೆ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.  ನಾಳೆ ಮಹಿಳಾ ದಿನಾಚರಣೆ ಹಿನ್ನೆಲೆ, ಸಂಸ್ಕೃತಿ ಸಚಿವಾಲಯ ಮಹಿಳೆಯರಿಗೆ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ.

4.ಜಯಪ್ರದಾ ವಿರುದ್ಧ ದೆಹಲಿ ಕೋರ್ಟ್​ನಿಂದ ಜಾಮೀನು ರಹಿತ ವಾರೆಂಟ್ಕಳೆದ ವರ್ಷದ ಲೋಕಸಭಾ ಚುನಾವಣೆಯ ಸಮಯದಲ್ಲಿ ನೀತಿ ಸಂಹಿತ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಕೋರ್ಟ್ ಜಯಪ್ರದಾ ಅವರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

5.ಕೇಂದ್ರದಿಂದ ಬರಬೇಕಾದ ಜಿಎಸ್​​ಟಿ ಪಾಲಿನ ಬಗ್ಗೆ ಸಂಸದರು ಬಾಯಿ ಬಿಡಬೇಕು: ಎಚ್​. ವಿಶ್ವನಾಥ್​​

ರಾಜ್ಯ, ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ರಾಜ್ಯ ಬಜೆಟ್​ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ. ಸತ್ಯದ ರೂಪದಲ್ಲಿ ಸರ್ಕಾರದ ವಿಚಾರ ಹೇಳಬೇಕಿದೆ. ಯಾಕೆಂದರೆ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ರಾಜಕಾರಣಿಗಳ ಆರ್ಥಿಕ‌ ಸ್ಥಿತಿ ಬಲವಾಗುತ್ತಾ ಹೋಗುತ್ತಿದೆ. ರಾಜ್ಯದ ಜಿಎಸ್​ಟಿ ಪಾಲಿನ ಬಗ್ಗೆ ಸಿಎಂ ಬಜೆಟ್‌ನಲ್ಲೇ ಹೇಳಿದ್ದಾರೆ. ಈ ಬಗ್ಗೆ ಸಂಸದರು ಬಾಯಿ ಬಿಡಬೇಕು. ಕೇಂದ್ರದ ಮೇಲೆ ಒತ್ತಡ ಹಾಕಿ ಬಿಎಸ್‌ವೈ ಕೈ ಬಲಪಡಿಸಬೇಕು ಎಂದು ಮಾಜಿ ಸಚಿವ ಎಚ್​.ವಿಶ್ವನಾಥ್​ ಒತ್ತಾಯಿಸಿದ್ದಾರೆ.

6.ದರಿದ್ರ ಸರ್ಕಾರ ಆಗಿದ್ರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಹೇಗೆ ಬರ್ತಿತ್ತು?; ಭೈರತಿ ಬಸವರಾಜ್ ಪ್ರಶ್ನೆ

ನಮ್ಮದು ದರಿದ್ರ ಸರ್ಕಾರ ಅಲ್ಲ, ಸುಭದ್ರ ಸರ್ಕಾರ. ಒಂದು ವೇಳೆ ಬಿಜೆಪಿ ದರಿದ್ರ ಸರ್ಕಾರ ಆಗಿದ್ದರೆ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಗೆ ಹೇಗೆ 630 ಕೋಟಿ ರೂಪಾಯಿ ಅನುದಾನ ಸಿಗುತ್ತಿತ್ತು ಎಂದು ಸಚಿವ ಭೈರತಿ ಬಸವರಾಜ್ ಮಾಜಿ ಸಿಎಂಗೆ ಪ್ರಶ್ನಿಸಿದ್ದಾರೆ.

7.ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ: 2 ಕೆಜಿ ಅಕ್ಕಿ ಬದಲು ರಾಗಿ, ಜೋಳ; ಬಿಸಿ ಪಾಟೀಲ್​​

ಬಿಪಿಎಲ್​ ಕಾರ್ಡ್​ಗಳಿಗೆ ನೀಡುತ್ತಿರುವ ಅನ್ನಭಾಗ್ಯ ಯೋಜನೆಯಲ್ಲಿ 7 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ, ಇನ್ಮುಂದೆ 5 ಕೆಜಿ ನೀಡಲಾಗುವುದು. ಉಳಿದ 2 ಕೆಜಿಗೆ ಜೋಳ ಅಥವಾ ರಾಗಿಯನ್ನು ನೀಡಲಾಗುವುದು ಎಂದು ಸಚಿವ ಬಿಸಿ ಪಾಟೀಲ್​ ತಿಳಿಸಿದ್ದಾರೆ.

8.ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ, ಪ್ರಧಾನಿ ದೇಶವನ್ನು ಹಾಳು ಮಾಡುತ್ತಿದ್ದಾರೆ; ಮಲ್ಲಿಕಾರ್ಜುನ ಖರ್ಗೆ ಕಿಡಿ

ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ದಿವಾಳಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಎಲ್ಲ ಭರವಸೆಗಳು ಹುಸಿಯಾಗಿವೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಧರ್ಮದ ಹೆಸರಿನಲ್ಲಿ, ರಾಷ್ಟ್ರೀಯತೆ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ತಪ್ಪಿನ ಬಗ್ಗೆ ಮಾತನಾಡಿದವರನ್ನು ದೇಶದ್ರೋಹಿಗಳೆಂದು ಪಾಕಿಸ್ತಾನದ ಏಜೆಂಟ್​ಗಳೆಂದು ಬಿಂಬಿಸುತ್ತಾರೆ ಎಂದು ಕಿಡಿಕಾರಿದರು.

9.ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಭೀಷ್ಮಾ ಚಿತ್ರತಂಡ: ರಶ್ಮಿಕಾ-ನಿತಿನ್​ರ ಹೊಸ ವಿಡಿಯೋ ಔಟ್​..!

ವಿಶ್ವದೆಲ್ಲೆಡೆ ಈಗ ಕೊರೋನಾ​ ಭೀತಿ. ಈ ಭಯಾನಕ ವೈರಸ್​ಗೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೆ, ಸೋಂಕಿತರ ಸಂಖ್ಯೆ ಲಕ್ಷಕ್ಕೂ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ನಿರ್ಮಾಪಕರು ಕರೋನಾಗೆ ಹೆದರಿ ವಿದೇಶಗಳಿಗೆ ಚಿತ್ರೀಕರಣಕ್ಕೆ ಹೋಗುತ್ತಲೇ ಇಲ್ಲ. ಅಲ್ಲಿ ಮಾಡಲು ಈಗಾಗಲೇ ಫಿಕ್ಸ್​ ಮಾಡಿದ್ದ ಹಾಡುಗಳ ಚಿತ್ರೀಕರಣವನ್ನೂ ಕ್ಯಾನ್ಸಲ್​ ಮಾಡುತ್ತಿದ್ದಾರೆ.  ಆದರೆ 'ಭೀಷ್ಮಾ' ಚಿತ್ರತಂಡ ಮಾತ್ರ ಕೊರೋನಾ ವೈರಸ್​ ಹರಡುವ ಮುನ್ನವೇ ವಿದೇಶಕ್ಕೆ ಹೋಗಿ ಸಖತ್ ರೊಮ್ಯಾಂಟಿಕ್​ ಹಾಡಿನ ಚಿತ್ರೀಕರಣ ಮಾಡಿಕೊಂಡು ಬಂದಿತ್ತು. ಆದರೆ ಆ ಹಾಡನ್ನು ಸಿನಿಮಾದಲ್ಲಿ ಬಳಸಲೇ ಇಲ್ಲ.

10.ಎಲ್ಲಾ ಮಾದರಿಯ ಕ್ರಿಕೆಟ್​ಗೆ ಅಂತಿಮ ತೆರೆ ಎಳೆದ ರಣಜಿಯ ರಾಜ ವಾಸೀಂ ಜಾಫರ್!

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ 42 ವರ್ಷದ ವಾಸೀಂ ಜಾಫರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 'ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಬೇಕು ಎಂಬುವುದು ನನ್ನ ತಂದೆಯ ಕನಸಾಗಿತ್ತು. ಈ ಕನಸು ನನಸು ಮಾಡಿದ್ದೇನೆ ಎಂಬ ಖುಷಿ ನನಗಿದೆ' ಎಂದು ತಿಳಿಸಿ ರಣಜಿ ಕ್ರಿಕೆಟ್​ನ ಕಿಂಗ್ ವಾಸೀಂ ಜಾಫರ್ ತಮ್ಮ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸಿದ್ದಾರೆ.

First published: March 7, 2020, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading