• Home
 • »
 • News
 • »
 • state
 • »
 • Evening Digest : ಸೆ. 21ರಿಂದ ತಾಜಮಹಲ್ ವೀಕ್ಷಣೆಗೆ ಮುಕ್ತ, ನಟಿ ಸಂಜನಾ 5 ದಿನ ಸಿಸಿಬಿ ಪೊಲೀಸರ ವಶಕ್ಕೆ: ಟಾಪ್​​ 10 ಸುದ್ದಿಗಳು

Evening Digest : ಸೆ. 21ರಿಂದ ತಾಜಮಹಲ್ ವೀಕ್ಷಣೆಗೆ ಮುಕ್ತ, ನಟಿ ಸಂಜನಾ 5 ದಿನ ಸಿಸಿಬಿ ಪೊಲೀಸರ ವಶಕ್ಕೆ: ಟಾಪ್​​ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷ ಉಂಟಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ಚೀನಾದ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ ಎಂಬ ಆತಂಕಕಾರಿ‌ ಮಾಹಿತಿಗಳು ಕೇಳಿಬರುತ್ತಿವೆ. ಈಗಾಗಲೇ ಚೀನಾದ ಸೇನೆ ಗಡಿಯಲ್ಲಿ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದೆ ಎಂಬ ಬಗ್ಗೆ ದಟ್ಟವಾದ ಅನುಮಾನಗಳು‌ ಮೂಡಿವೆ.


  ಭಾರತದ ಗಡಿಯೊಳಗೆ ನುಸುಳಲು ಚೀನಾ ಪ್ರಯತ್ನ; ಮುನ್ನೆಚ್ಚರಿಕೆ ವಹಿಸಲು ಭಾರತೀಯ ಸೈನಿಕರಿಗೆ ಸೂಚನೆ


  2.ವಿಶ್ವವಿಖ್ಯಾತ ತಾಜ್​ಮಹಲ್ ಮತ್ತು ಆಗ್ರಾ ಕೋಟೆಯ ಪ್ರವೇಶಕ್ಕೆ ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿತ್ತು. ಇದೀಗ 6 ತಿಂಗಳ ಬಳಿಕ ತಾಜಮಹಲ್ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 21ರಿಂದ ಪ್ರೇಮಸೌಧ ತಾಜಮಹಲ್ ಪ್ರವಾಸಿಗರಿಗೆ ಮುಕ್ತವಾಗಲಿದೆ.


  Taj Mahal: ಸೆ. 21ರಿಂದ ತಾಜಮಹಲ್ ವೀಕ್ಷಣೆಗೆ ಮುಕ್ತ; ದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಅನುಮತಿ


  3.ಸುಶಾಂತ್​ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಿಯಾ ಸೇರಿದಂತೆ ಸಾಕಷ್ಟು ಮಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ರಿಯಾಗೆ ಡ್ರಗ್​ ಜಾಲದೊಂದಿಗೆ ಸಂಪರ್ಕವಿದೆ ಎಂದು ಅನುಮಾನಿಸಲಾಗಿತ್ತು. ಅಲ್ಲದೆ ಡ್ರಗ್ಸ್​ ಬಗ್ಗೆ ರಿಯಾ ಅವರ ಮೊಬೈಲ್​ನಲ್ಲಿ ನಡೆಸಲಾಗಿದ್ದ ಸಂಭಾಷಣೆ ಯ ದಾಖಲೆ ಹೊರ ಬಿದ್ದಿತ್ತು. ಇದೇ ಕಾರಣದಿಂದ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇಂದು ಮೂರನೇ ದಿನ ರಿಯಾ ಎಂದಿನಂತೆ ಎನ್​ಸಿಬಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟಿ ರಿಯಾ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.


  Rhea Chakraborty Arrested: ಸುಶಾಂತ್​ ಸಿಂಗ್​ ಸಾವಿನ ಪ್ರಕರಣ: ರಿಯಾ ಚಕ್ರವರ್ತಿ ಬಂಧನ..!


  4.ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಳೆದ 2 ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಉಡುಪಿ, ಶಿವಮೊಗ್ಗ, ರಾಯಚೂರು, ಕೊಡಗಿನಲ್ಲಿ ಮಳೆ ಹೆಚ್ಚಾಗಿದೆ. ಸೆಪ್ಟೆಂಬರ್ 10ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಸೆ. 11ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅತ್ಯಧಿಕ ಮಳೆಯಾಗುವ ನಿರೀಕ್ಷೆಯಿದೆ.


  Karnataka Weather: ಕರ್ನಾಟಕದಲ್ಲಿ ಧಾರಾಕಾರ ಮಳೆ; ಮಲೆನಾಡು, ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್​


  5.ಕನ್ನಡದ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರಾದ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನ ಇಂದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಅವರ ಮಗನೆಂಬ ಹೆಗ್ಗಳಿಕೆಯನ್ನು ಮೀರಿ ತಮ್ಮದೇ ಅಸ್ಮಿತೆಯ ಛಾಪನ್ನು ಒತ್ತಿದವರು ಪೂರ್ಣಚಂದ್ರ ತೇಜಸ್ವಿ. ಕನ್ನಡ ಸಾಹಿತ್ಯವನ್ನು ಓದಲು ಆರಂಭಿಸುವ ಹೊಸಬರಲ್ಲಿ ಬಹುತೇಕರು ತೇಜಸ್ವಿಯಿಂದಲೇ ತಮ್ಮ ಓದನ್ನು ಆರಂಭಿಸುತ್ತಾರೆ. ಸರಳವಾದ ಭಾಷೆಯಲ್ಲಿ, ಆಸಕ್ತಿದಾಯಕ ಶೈಲಿಯಲ್ಲಿ ವಿಷಯವನ್ನು ತಿಳಿಸುವ ಸಾಮರ್ಥ್ಯ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯಕ್ಕಿದೆ.


  Poornachandra Tejaswi: ಇಂದು ಕನ್ನಡದ ಶ್ರೇಷ್ಠ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜನ್ಮದಿನ


  6. ಸ್ಯಾಂಡಲ್​ವುಡ್​​ ಡ್ರಗ್ಸ್​ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾರನ್ನು 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈಗಷ್ಟೇ ಸಿಸಿಬಿ ಪೊಲೀಸರು ನಟಿ ಸಂಜನಾರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.


  Sanjana Galrani Police Custody: ನಟಿ ಸಂಜನಾ 5 ದಿನ ಸಿಸಿಬಿ ಪೊಲೀಸರ ವಶಕ್ಕೆ - ಕೋರ್ಟ್​ ಆದೇಶ


  7.ಡ್ರಗ್ಸ್ ವಿಚಾರ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಆರೋಗ್ಯ ಸಚಿವ ರಾಮುಲು ಹೇಳಿದ್ದಾರೆ. ರಾಜಕೀಯ ರಂಗ, ರಾಜಕಾರಣಿಗಳ ಮಕ್ಕಳು, ಚಿತ್ರನಟರು ಯಾರೇ ಈ ಡ್ರಗ್ಸ್ ಮಾಫಿಯಾದಲ್ಲಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮಾಫಿಯಾದಿಂದ ಯುವ ಜನತೆಯನ್ನು ಕಾಪಾಡಬೇಕಿದೆ. ನಮ್ಮ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.


  ‘ಡ್ರಗ್ಸ್​ ಮಾಫಿಯಾ ಪ್ರಕರಣದಿಂದ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು‘ - ಆರೋಗ್ಯ ಸಚಿವ ಬಿ. ಶ್ರೀರಾಮುಲು


  8. ಡ್ರಗ್ಸ್ ಮಾಫಿಯಾ ಹಣದಿಂದಲೇ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಪತನವಾಯ್ತು ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಊಸರವಳ್ಳಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​​ ನಿಂದಿಸಿದ್ದರು. ಈ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಸಾರಾ ಮಹೇಶ್​​, ಕೃಷಿ ಸಚಿವ ಬಿ.ಸಿ. ಪಾಟೀಲ್ ನಿಜವಾದ ಉಸರವಳ್ಳಿ ಎಂದಿದ್ದಾರೆ.


  ‘ಕೃಷಿ ಸಚಿವ ಬಿ.ಸಿ ಪಾಟೀಲ್ ನಿಜವಾದ ಉಸರವಳ್ಳಿ‘ - ಮಾಜಿ ಸಚಿವ ಸಾರಾ ಮಹೇಶ್


  9.ರಂಗಭೂಮಿಯಿಂದ ಕಿರುತೆರೆ ಬಂದ ಪ್ರತಿಭಾವಂತ ಕಲಾವಿದ ಸಿದ್ಧರಾಜ ಕಲ್ಯಾಣಕರ್​ ಇನ್ನಿಲ್ಲ. ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಹಿರಿಯ ನಟ, ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಗಲಿದ ಹಿರಿಯ ಕಲಾವಿದನಿಗೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


  Siddharaj Kalyankar Passes Away: ಇಹಲೋಕ ತ್ಯಜಿಸಿದ ಕನ್ನಡದ ಹಿರಿಯ ನಟ ಸಿದ್ಧರಾಜ ಕಲ್ಯಾಣಕರ್​..!


  10. IPL 2020ಗೂ ವಿಘ್ನಗಳಿಗೂ ಎಲ್ಲಿಲ್ಲದ ನಂಟು ಇರುವಂತೆ ಭಾಸವಾಗುತ್ತಿದೆ. ಏಕೆಂದರೆ ಸೀಸನ್ 13 ಆರಂಭದಿಂದಲೂ ಒಂದಲ್ಲ ಒಂದು ಕಾರಣದಿಂದ ಐಪಿಎಲ್ ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದೆ. ಮಾರ್ಚ್​​ನಲ್ಲಿ ಆರಂಭವಾಗಬೇಕಿದ್ದ ಟೂರ್ನಿ ಕೊರೋನಾ ಕಾರಣದಿಂದ ಇದೀಗ ಸೆಪ್ಟೆಂಬರ್​ಗೆ ಬಂದು ನಿಂತಿದೆ.


  IPL 2020: ವಿವಾದದಲ್ಲಿ IPL ಟೈಟಲ್ ಸಾಂಗ್

  Published by:G Hareeshkumar
  First published: