• Home
 • »
 • News
 • »
 • state
 • »
 • Evening Digest : 2021ಕ್ಕೆ ಹಾರಲಿರುವ 3ನೇ ಚಂದ್ರಯಾನ ನೌಕೆ, ನಟಿ ರಾಗಿಣಿ 5 ದಿನ ಸಿಸಿಬಿ ವಶಕ್ಕೆ : ಟಾಪ್ 10 ಸುದ್ದಿಗಳು

Evening Digest : 2021ಕ್ಕೆ ಹಾರಲಿರುವ 3ನೇ ಚಂದ್ರಯಾನ ನೌಕೆ, ನಟಿ ರಾಗಿಣಿ 5 ದಿನ ಸಿಸಿಬಿ ವಶಕ್ಕೆ : ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1. ಈ ವರ್ಷ ಪ್ರಾರಂಭಿಸಬೇಕಿದ್ದ ಮೂರನೇ ಚಂದ್ರಯಾನ ಯೋಜನೆಯನ್ನ ಮುಂದೂಡಲಾಗಿದೆ. 2021ರ ವರ್ಷದ ಆರಂಭದಲ್ಲಿ ಚಂದ್ರಯಾನ ಉಡಾವಣೆಯಾಗಲಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ವಿಚಾರ ತಿಳಿಸಿದ್ದಾರೆ. ಕೊರೋನಾ ವೈರಸ್ ಬಿಕ್ಕಟ್ಟು ಉದ್ಭವಿಸಿದ ಹಿನ್ನೆಲೆಯಲ್ಲಿ ಚಂದ್ರಯಾನ ಯೋಜನೆಯನ್ನ ಮುಂದೂಡಲಾಗಿದೆ.


  Chandrayaan 3: ಈ ವರ್ಷ ಬದಲು 2021ಕ್ಕೆ ಚಂದ್ರನತ್ತ ಹಾರಲಿರುವ 3ನೇ ಚಂದ್ರಯಾನ ನೌಕೆ


  2. ಪೆರು ದೇಶದ ಲಿಮಾ ನಗರದಲ್ಲಿ ಅಮೆರಿಕದ ಪಬ್ಲಿಕ್ ಅಫೇರ್ಸ್ ಕಾನ್ಸುಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜುಡಿತ್ ರೇವಿನ್ ಅವರನ್ನು ಚೆನ್ನೈನಲ್ಲಿರುವ ಅಮೆರಿಕ ದೂತವಾಸದ ಕಾನ್ಸುಲರ್ ಜನರಲ್ ಆಗಿ ನೇಮಕ ಮಾಡಲಾಗಿದೆ. ಹಿಂದಿನ ಕಾನ್ಸುಲರ್ ಜನರಲ್ ರಾಬರ್ಟ್ ಜಿ ಬುರ್ಜೆಸ್ ಅವರ ಸ್ಥಾನವನ್ನು ಜುಡಿತ್ ತುಂಬಲಿದ್ದಾರೆ.


  ಚೆನ್ನೈನಲ್ಲಿರುವ ಅಮೆರಿಕ ದೂತವಾಸ ಮುಖ್ಯಸ್ಥೆಯಾಗಿ ಜ್ಯುಡಿತ್ ರೇವಿನ್ ನೇಮಕ


  3. ಭವಿಷ್ಯದ ಯುದ್ದಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೈಪರ್​ಸೋನಿಕ್ ಮಿಸೈಲ್​ಗಳ ತಯಾರಿಕೆ ನಿಟ್ಟಿನಲ್ಲಿ ಭಾರತ ಮುಂದಡಿ ಇಟ್ಟಿದೆ. ಒಡಿಶಾದ ಬಲಾಸೂರ್​ನಲ್ಲಿರುವ ಎಪಿಜೆ ಅಬ್ದುಲ್ ಕಲಾಮ್ ಪರೀಕ್ಷಾ ಕೇಂದ್ರದಲ್ಲಿ ಹೈಪರ್ ಸಾನಿಕ್ ತಂತ್ರಜ್ಞಾನದ ವಾಹನವೊಂದನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ದೇಶೀಯವಾಗಿ ತಯಾರಾಗಿರುವ ಈ ತಂತ್ರಜ್ಞಾನದಿಂದ ಅತಿವೇಗದ ಕ್ಷಿಪಣಿಗಳ ಅಭಿವೃದ್ಧಿಪಡಿಸುವ ಸಾಮರ್ಥ್ಯ ಭಾರತಕ್ಕೆ ಸಿಕ್ಕಿದಂತಾಗಿದೆ. ಭಾರತ ಈ ಭವಿಷ್ಯದ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೆ ದೇಶವಾಗಿದೆ.


  ಡಿಆರ್​ಡಿಒನ ಹೈಪರ್​ಸೋನಿಕ್ ವಾಹನದ ಯಶಸ್ವಿ ಪ್ರಯೋಗ; ಅಮೆರಿಕ, ರಷ್ಯಾ, ಚೀನಾ ಸಾಲಿಗೆ ಭಾರತ


  4. ಕಳೆದ ಎರಡು ವರ್ಷಗಳಿಂದ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಕೇಂದ್ರ ಸರ್ಕಾರ ಹಠಾತ್‌ ಘೋಷಿಸಿದ ನೋಟ್‌ ಬ್ಯಾನ್‌ ಮತ್ತು ಜಿಎಸ್‌ಟಿ ನೀತಿಯಿಂದಾಗಿ ಶೇ.07 ರಿಂದ 08ರ ಆಸುಪಾಸಿನಲ್ಲಿದ್ದ ಭಾರತದ ಜಿಡಿಪಿ ಶೇ.2ಕ್ಕೆ ಕುಸಿದಿತ್ತು. ಇನ್ನೂ ಕೊರೋನಾ ಮತ್ತು ಕೊರೋನಾ ಕಾರಣದಿಂದಾಗಿ ದೇಶದ ಮೇಲೆ ಹೇರಲಾದ ಲಾಕ್‌ಡೌನ್‌ನಿಂದಾಗಿ ಭಾರತದ ಜಿಡಿಪಿ ಇದೀಗ ಶೇ-24ಕ್ಕೆ ಋಣಾತ್ಮಕವಾಗಿ ಕುಸಿಯುತ್ತಲೇ ಇದೆ. ಇದೀಗ ವಿಶ್ವದ ಅತಿಕೆಟ್ಟ ಆರ್ಥಿಕತೆಯಾಗಿ ಭಾರತದ ಆರ್ಧಿಕತೆ ಬದಲಾಗಿದೆ. ಸ್ವತಃ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಸುಬ್ರಮಣಿಯನ್‌ ಸ್ವಾಮಿ ಸಹ ಇದನ್ನು ಟೀಕಿಸುತ್ತಿದ್ದರು.


  ಬಿಜೆಪಿ ಐಟಿ ಸೆಲ್ ರಾಕ್ಷಸೀಕರಣಗೊಂಡಿದೆ‌; ಸ್ವತಃ ಆರೋಪಿಸಿದ ಕಮಲ ನಾಯಕ ಸುಬ್ರಮಣಿಯನ್‌ ಸ್ವಾಮಿ


   5.ವಿಶ್ವದ ಐದು ಶ್ರೇಷ್ಠ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆಯೂ ಒಂದಾಗಿತ್ತು. ಏಷ್ಯಾದ ಬಲಿಷ್ಟ ಆರ್ಥಿಕತೆಗಳಲ್ಲೊಂದಾಗಿತ್ತು. ಆದರೆ, ಇದೀಗ ಭಾರತದ ಜಿಡಿಪಿ ಸಾರ್ವಕಾಲಿಕ ಕುಸಿತ ಕಂಡಿದೆ. ಶೇ.-24ರಷ್ಟು ಋಣಾತ್ಮಕವಾಗಿ ಪಾತಾಳಕ್ಕೆ ಕುಸಿದಿದೆ ಎಂದು ಇತ್ತೀಚೆಗೆ ವರದಿ ಮಾಡಲಾಗಿತ್ತು. ಈ ವರದಿಗೆ ಅರ್ಥಶಾಸ್ತ್ರಜ್ಞರು ಅಕ್ಷರಶಃ ಹೌಹಾರಿದ್ದರು. ಇದರ ಬೆನ್ನಿಗೆ ವಿಡಿಯೋ ಮೂಲಕ ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ದ ಕಿಡಿಕಾರಿರುವ ರಾಹುಲ್‌ ಗಾಂಧಿ, "ದೋಷಪೂರಿತ ಜಿಎಸ್‌ಟಿ ಅನುಷ್ಠಾನವು ಇಡೀ ದೇಶದ ಆರ್ಥಿಕತೆಯನ್ನು ನಾಶಪಡಿಸಿದೆ. ಯಾವುದೇ ಆರ್ಥಿಕತೆಯ ಬೆನ್ನೆಲುಬಾದ ಅಸಂಘಟಿತ ವಲಯ ಜಿಎಸ್‌ಟಿಯಿಂದಾಗಿ ದೊಡ್ಡ ಹೊಡೆತ ತಿಂದಿದ್ದು ನಷ್ಟ ಅನುಭವಿಸಿದೆ. ದೇಶದ ಆರ್ಥಿಕ ಕುಸಿತಕ್ಕೆ ಇದು ಪ್ರಮುಖ ಕಾರಣ" ಎಂದು ಆರೋಪಿಸಿದ್ದಾರೆ.


  ಜಿಎಸ್‌ಟಿಯಂತಹ ದೋಷಪೂರಿತ ತೆರಿಗೆ ವಿಧಾನದ ಅನುಷ್ಠಾನವೇ ದೇಶದ ಆರ್ಥಿಕ ಕುಸಿತಕ್ಕೆ ಕಾರಣ; ರಾಹುಲ್ ಗಾಂಧಿ ಕಿಡಿ


  6. ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರಾಗಿಣಿಗೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿದ್ದರಾಮಯ್ಯ, ಡ್ರಗ್ಸ್​​ ಮಾಫಿಯಾ ಬಗ್ಗೆ ಅಧಿವೇಶನದಲ್ಲಿ ಮಾತಾಡುತ್ತೇನೆ. ಡ್ರಗ್ಸ್ ನಮ್ಮ ಕಾಲದಲ್ಲೂ ಇತ್ತು. ಅವರ ಕಾಲದಲ್ಲೂ ಇತ್ತು, ಎಲ್ಲರ ಕಾಲದಲ್ಲೂ ಡ್ರಗ್ಸ್ ಇತ್ತು. ನಾವೂ ಕೂಡ ಅದನ್ನು ಮಟ್ಟಹಾಕಲು ಯತ್ನಿಸಿದ್ದೆವು. ಈಗ ಅವರ ಕಾಲದಲ್ಲಿ ಇದು ಬಯಲಿಗೆ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಆಗಬೇಕು.


  Drug Mafia: ‘ರಾಗಿಣಿ, ಜಮೀರ್​​ ಯಾರೇ ಆಗಲೀ ಡ್ರಗ್ಸ್ ಕೇಸಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ‘ - ಸಿದ್ದರಾಮಯ್ಯ ಆಗ್ರಹ


  7. ಪ್ರತಿಷ್ಠಿತ ಶ್ರೀಮಂತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳನ್ನು ಸೆಳೆಯಲು ದಂಧೆಕೋರರು ಐಸ್ ಕ್ರೀಂಗೆ ಡ್ರಗ್ಸ್ ಸವರಿ ಕೊಡುವ ದೊಡ್ಡ ಗುಮಾನಿ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಶ್ರೀಮಂತ  ಕುಟುಂಬಗಳ ವಿದ್ಯಾರ್ಥಿಗಳನ್ನು ಡ್ರಗ್ಸ್ ಬಲೆಗೆ ಕೆಡವಲು ದಂಧೆಕೋರರು, ಮಕ್ಕಳು ತಿನ್ನುವ ಐಸ್ ಕ್ರೀಂ ಅಥವಾ ಹಣ್ಣುಗಳಿಗೆ ಡ್ರಗ್ಸ್ ಸವರಿ ಕೊಡುವ ಅನುಮಾನವಿದೆ ಎಂದಿದ್ದಾರೆ. 


  Drugs Mafia: ಪ್ರತಿಷ್ಠಿತ ಶಾಲಾ ಮಕ್ಕಳಿಗೆ ಐಸ್​ಕ್ರೀಂನಲ್ಲಿ ಡ್ರಗ್ಸ್; ಸಚಿವ ಸುರೇಶ್ ಕುಮಾರ್ ಅನುಮಾನ


  8. ಮೈಸೂರಲ್ಲಿ ಈ ಬಾರಿ ಸರಳ ದಸರಾ ನಡೆಯುವುದು ಬಹುತೇಕ ಫೈನಲ್ ಆಗಿದ್ದು, ಅದರ ರೂಪುರೇಷೆ ಮಾತ್ರ ಸಿದ್ದವಾಗಬೇಕಿದೆ. ಈ‌ ನಡುವೆ ನಾಳೆ ಬೆಂಗಳೂರಲ್ಲಿ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಇದ್ದು, ಈ ಸಭೆಯಲ್ಲಿ ಮೈಸೂರು ಪ್ರವಾಸೋದ್ಯಮ ಬೂಸ್ಟ್ ಮಾಡುವುದಕ್ಕೆ ಹೊಸದೊಂದು ವಿಷಯ ಪ್ರಸ್ತಾಪ ಆಗಲಿದೆ.


  Mysuru Dasara 2020 : ಕೋವಿಡ್ ನಿಂದಾಗಿ ಈ ಬಾರಿ ಸರಳ ದಸರಾ ; ನಾಳೆ ನಡೆಯಲಿರುವ ಸಿಎಂ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರ


  9.ಡ್ರಗ್ಸ್​ ಜಾಲದೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ ಅವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಇಂದು ಸಿಸಿಬಿ ಪೊಲೀಸರು ಒಂದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಎರಡು ದಿನಗಳಿಂದ ರಾಗಿಣಿ ವಿಚಾರಣೆ ವೇಳೆ ಯಾವುದೇ ಮಾಹಿತಿಯನ್ನೂ ನೀಡದ ಕಾರಣ ಇನ್ನೂ 10 ದಿನ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಆದರೆ, ಇನ್ನು 5 ದಿನಗಳ ಕಾಲ ಸಿಸಿಬಿ ವಶಕ್ಕೆ ರಾಗಿಣಿಯನ್ನು ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.


  Ragini Dwivedi: ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ; ನಟಿ ರಾಗಿಣಿ ದ್ವಿವೇದಿ ಮತ್ತೆ 5 ದಿನ ಸಿಸಿಬಿ ವಶಕ್ಕೆ


  10.ಅನೇಕ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಪ್ರಾರಂಭವಾಗಿರುವ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಿಂದ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ. ನಿನ್ನೆ ಭಾನುವಾರ ನಡೆದ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ 5-6 ಗೇಮ್‌ಗಳ ಅಂತರದಲ್ಲಿ ಸ್ಪೇನ್‌ನ ಆಟಗಾರ ಪಾಬ್ಲೊ ಕರ್ರೆನೊ ಬುಸ್ಟಾ ಎದುರು ಹಿನ್ನಡೆಯಲ್ಲಿದ್ದ ನೊವಾಕ್‌, ಈ ಸಂದರ್ಭದಲ್ಲಿ ಲೈನ್‌ ಅಂಪೈರಿಂಗ್‌ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಕಡೆಗೆ ಚೆಂಡಿನಲ್ಲಿ ಜೋರಾಗಿ ಹೊಡೆದಿದ್ದಾರೆ.


  Novak Djokovic: ಲೈನ್ ಅಂಪೈರ್​ಗೆ ಬಡಿದ ಚೆಂಡು: ಯುಎಸ್ ಓಪನ್​ನಿಂದ ವಿಶ್ವದ ನಂ.1 ಆಟಗಾರ ಜೊಕೊವಿಕ್ ಔಟ್

  Published by:G Hareeshkumar
  First published: