• Home
 • »
 • News
 • »
 • state
 • »
 • Evening Digest : ನಾಲ್ವರನ್ನು ಹತ್ಯೆ ಮಾಡಿದ ನಕ್ಸಲರು, ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ: ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ನಾಲ್ವರನ್ನು ಹತ್ಯೆ ಮಾಡಿದ ನಕ್ಸಲರು, ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ: ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎನ್ನುವ ಅನುಮಾನ ಹಿನ್ನೆಲೆಯಲ್ಲಿ ಛತ್ತೀಸ್​ಗಢದಲ್ಲಿ ಮಾವೋವಾದಿಗಳು ನಾಲ್ಕು ಜನರನ್ನು ಹತ್ಯೆ ಮಾಡಿದ್ದಾರೆ. ಬಿಜಪುರ್​ ಜಿಲ್ಲೆಯ ದುಮ್ರಿ-ಪಾಲ್ನಾರ್​ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಲ್ಲಿ ನಾಲ್ಕು ಜನರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಡಿಗೆ ರಸ್ತೆ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಕೆಲ ಹಳ್ಳಿಗರು ಬೆಂಬಲ ಸೂಚಿಸಿದ್ದರು. ಅವರನ್ನು ಮಾವೋವಾದಿಗಳು ಕಾಡಿಗೆ ಬರುವಂತೆ ಕರೆದಿದ್ದರು. ಈ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ.


  ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಅನುಮಾನ; ನಾಲ್ವರನ್ನು ಹತ್ಯೆ ಮಾಡಿದ ನಕ್ಸಲರು


  2. 18 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 8 ಜನರು ಸಾಮೂಹಿಕ ಅತ್ಯಾಚಾರ ನಡೆಸಿರುವ ಭಯಾನಕ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರು, ನ್ಯೂಸ್​ ಚಾನೆಲ್​ನ ಇಬ್ಬರು ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು, ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಮಂದಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಕುರಿತು ಆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ 8 ಮಂದಿಯ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ.


  Gang Rape: ಒಡಿಶಾದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಪೊಲೀಸ್, ಪತ್ರಕರ್ತರ ಮೇಲೂ ಕೇಸ್ ದಾಖಲು


  3.ದೇಶದಲ್ಲಿ ಕೊರೋನಾ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ ಕೊರೋನಾ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್​ ಚಾಲಕನೇ ಆ ರೋಗಿಯ ಮೇಲೆ ಅತ್ಯಾಚಾರವೆಸಗಿರುವ ಅಮಾನುಷ ಘಟನೆ ಕೇರಳದ ಪಥನಾಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಕೇರಳದಲ್ಲಿ ಈ ಘಟನೆ ನಡೆದಿದ್ದು, ತನ್ನ ಸಂಬಂಧಿಕರ ಮನೆಯಲ್ಲಿ ಕ್ವಾರಂಟೈನ್ ಆಗಿದ್ದ ಯುವತಿಗೆ ನಿನ್ನೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಆ್ಯಂಬುಲೆನ್ಸ್​ ಚಾಲಕ ಮಾರ್ಗಮಧ್ಯೆ ಆ್ಯಂಬುಲೆನ್ಸ್​ನಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.


  Kerala: ಕೊರೋನಾ ರೋಗಿ ಮೇಲೆ ಆ್ಯಂಬುಲೆನ್ಸ್​ನಲ್ಲೇ ಅತ್ಯಾಚಾರ; ಕೇರಳದಲ್ಲೊಂದು ಅಮಾನುಷ ಘಟನೆ


  4.ಖಾಲಿ ಇರುವ 1.40 ಲಕ್ಷ ಹುದ್ದೆಗಳನ್ನು ತುಂಬಲು ರೈಲ್ವೆ ಇಲಾಖೆ ಮುಂದಾಗಿದೆ. ಡಿಸೆಂಬರ್​ 15ರಂದು ಪರೀಕ್ಷೆ ಕರೆದಿದ್ದು, ಅರ್ಹ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯಬಹದು ಎಂದು ರಾಷ್ಟ್ರೀಯ ಸಾರಿಗೆ ಮಂಡಳಿಯ ಮುಖ್ಯಸ್ಥ ವಿಕೆ ಯಾದವ್​ ಶನಿವಾರ ಹೇಳಿದ್ದಾರೆ. ಈ ಮೂಲಕ 1.40 ಲಕ್ಷ ಜನರನ್ನು ತೆಗೆದುಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ. ಗಾರ್ಡ್​, ಕ್ಲರ್ಕ್​, ಟ್ರ್ಯಾಕ್​ ನಿರ್ವಹಣಕಾರ, ಪಾಯಿಂಟ್ಸ್​ಮೆನ್​ಗ ಹುದ್ದೆಗಳಿಗೆ ರೈಲ್ವೆ ಇಲಾಖೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಪರೀಕ್ಷಾ ದಿನಾಂಕವನ್ನು ಟ್ವಿಟ್ಟರ್​ನಲ್ಲಿ ಘೋಷಣೆ ಮಾಡಿದ್ದಾರೆ.


  Railway Recruitment: 1.40 ಲಕ್ಷ ಹುದ್ದೆಗಳನ್ನು ತುಂಬಲು ಮುಂದಾದ ರೈಲ್ವೆ; ಯಾವ ಹುದ್ದೆ, ಪರೀಕ್ಷೆ ಯಾವಾಗ?, ಇಲ್ಲಿದೆ ಮಾಹಿತಿ


  5. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಡ್ರಗ್ಸ್‌ ಜಾಲವನ್ನು ಬುಡ ಸಮೇತ ಕೀಳಲು ಮುಂದಾಗಿರುವ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ನಟಿ ದ್ವಿವೇದಿಯನ್ನು ವಿಚಾರಣೆಗೆ ಕರೆದಿದ್ದರು. ಆದರೆ, ವಿಚಾರಣೆ ನಡೆಸಿದ ನಂತರ ಅಂದು ಸಂಜೆಯೇ ಆಕೆಯನ್ನು ಬಂಧಿಸಲಾಯಿತು. ಅಲ್ಲದೆ, ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿ ಮೂರು ದಿನಗಳ ಕಾಲ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಪಡೆಯಲಾಗಿತ್ತು. ಆದರೆ, ಪೊಲೀಸರು ವಶಕ್ಕೆ ಪಡೆದು ಎರಡು ದಿನಗಳಾದರೂ ಸಹ ವಿಚಾರಣೆ ವೇಳೆ ನಟಿ ರಾಗಿಣಿ ತುಟಿ ಬಿಚ್ಚುತ್ತಿಲ್ಲ. ವಿಚಾರಣೆಗೆ ಸಹಕರಿಸುತ್ತಿಲ್ಲ. ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡದೆ ಸತಾಯಿಸುತ್ತಿದ್ದಾರೆ. ಪರಿಣಾಮ ಪೊಲೀಶರು ಪ್ರಶ್ನೆ ಕೇಳಿಯೇ ಹೈರಾಣಾಗಿದ್ದಾರೆ ಎನ್ನಲಾಗುತ್ತಿದೆ.


  ಡ್ರಗ್ಸ್‌ ಜಾಲ; ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ, ಪ್ರಶ್ನೆ ಕೇಳಿ ಬಾಯ್‌ಬಿಡಿಸಲು ಸಾಧ್ಯವಾಗದೆ ಹೈರಾಣಾದ ಅಧಿಕಾರಿಗಳು


  6. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ಹಾವಳಿ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಸೋಂಕು ಪೀಡಿತರ ಚಿಕಿತ್ಸೆಗೆಂದು ರಾಜ್ಯ ಸರ್ಕಾರ ಮಾದಾವರ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸವಿಸ್ತಾರವಾದ ಕೋವಿಡ್‌ ಕೇರ್‌ ಸೆಂಟರ್‌ ಅನ್ನು ಸ್ಥಾಪಿಸಿತ್ತು. 10 ಸಾವಿರಕ್ಕೂ ಅಧಿಕ ಬೆಡ್‌ ವ್ಯವಸ್ಥೆ ಹೊಂದಿದ್ದ ಈ ಸೆಂಟರ್‌ ಇಡೀ ದೇಶದ ಮೆಚ್ಚುಗೆಗೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಈ ಸೆಂಟರ್‌ ಅನ್ನು ತನ್ನ ಪ್ರಚಾರಕ್ಕೂ ಬಳಸಿಕೊಂಡಿತ್ತು. ಆದರೆ, ದೇಶದ ಅತಿದೊಡ್ಡ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲೊಂದು ಎಂದು ಗುರುತಿಸಲಾಗಿರುವ ಈ ಸೆಂಟರ್‌ ಅನ್ನು ಸೆಪ್ಟೆಂಬರ್.15 ರಿಂದ ಮುಚ್ಚುವುದಾಗಿ ಬಿಬಿಎಂಪಿ ತಿಳಿಸಿದೆ


  ಮಾದಾವರ ಬಳಿಯ ಅತಿದೊಡ್ಡ ಕೋವಿಡ್‌ ಕೇರ್‌ ಮುಚ್ಚಲು ನಿರ್ಧಾರಿಸಿದ ಬಿಬಿಎಂಪಿ; ಸಾರ್ವಜನಿಕ ವಲಯದಿಂದ ಟೀಕೆ


  7.ಮೈತ್ರಿ ಸರ್ಕಾರ ಬೀಳಲು ಡ್ರಗ್ಸ್ ಹಣ ಉಪಯೋಗ ಮಾಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಹಳ್ಳಿಹಕ್ಕಿ ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಹುಶಃ ನೀವು ಮತ್ತು ಸಿದ್ದರಾಮಯ್ಯ ಡ್ರಗ್ಸ್ ತೆಗೆದುಕೊಂಡಿದ್ರಿ ಅನ್ಸತ್ತೆ. ಅಧಿಕಾರದ ಅಮಲು ನಿಮ್ಮಿಬ್ಬರ ತಲೆಯಲ್ಲಿ ಇತ್ತು. ಅದಕ್ಕೆ ಸರ್ಕಾರ ಬಿದ್ದ ಒಂದು ವರ್ಷದ ಮೇಲೆ ಎದ್ದಿದ್ದೀರಾ ಅಂತ ಲೇವಡಿ ಮಾಡಿದ್ದಾರೆ.


  ವರ್ಷವಾದ ಮೇಲೆ ಎದ್ದಿದ್ದೀರಲ್ಲ, ಯಾವ ಡ್ರಗ್ಸ್ ತಗೊಂಡು ಮಲಗಿದ್ರಿ?: ಕುಮಾರಸ್ವಾಮಿಗೆ ಹಳ್ಳಿಹಕ್ಕಿ ಪ್ರಶ್ನೆ


  8.ಆಕೆ ಏನೂ ಅರಿಯದ ಪುಟ್ಟ ಬಾಲಕಿ. ಕೇವಲ 6 ವರ್ಷದ ಮುದ್ದಾದ ಮಗು. ಆ ಪುಟಾಣಿಯನ್ನು ತನ್ನ ತಾಯಿಯೇ ಕೊಲೆ ಮಾಡಿಸಿದ್ದಾಳೆ. ಅಂತ್ಯ ಸಂಸ್ಕಾರವೂ ಮುಗಿದು ಹೋಗಿತ್ತು. ತಂದೆಯ ಅನುಮಾನದಿಂದಾಗಿ ಕೊಲೆ ಪ್ರಕರಣ ಪತ್ತೆಯಾಗಿದೆ. ಅದು ಸಹ ಎರಡನೇ ಗಂಡನಿಗೆ ಜನಿಸಿದ ಮಗಳ ಮೇಲಿನ ಪ್ರೀತಿಯಿಂದ ಮೊದಲ ಗಂಡನಿಗೆ ಜನಿಸಿದ ಮಗಳ ಮೇಲಿನ ದ್ವೇಷಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


  ಎರಡನೇ ಗಂಡನ ಮಗಳ ಮೇಲೆ ಆಸೆ, ಮೊದಲ ಗಂಡನ ಮಗಳನ್ನೇ ಕೊಂದ ತಾಯಿ : ಮೈಸೂರಿನಲ್ಲೊಂದು ಅಮಾನವೀಯ ಘಟನೆ


  9.ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪ್ರೇಯಸಿ ರಿಯಾ ಚಕ್ರವರ್ತಿಗೆ ಸಮನ್ಸ್​ ನೀಡಲಾಗಿದೆ. ಇದೀಗ ಎನ್​ಸಿಬಿ ಅಧಿಕಾರಿಗಳ ಎದುರು ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ. ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಜೈಲಿಗೆ ಹೋಗಲೂ ಸಿದ್ಧರಿದ್ದಾರೆ ಎಂದು ಅವರ ಪರ ವಕೀಲ ಸತೀಶ್ ಮಾನೆಶಿಂಧೆ ಹೇಳಿದ್ದಾರೆ.


  Rhea Chakraborty: ಪ್ರೀತಿಸಿದ್ದೇ ಅಪರಾಧವಾದರೆ ರಿಯಾ ಚಕ್ರವರ್ತಿ ಜೈಲು ಸೇರಲೂ ಸಿದ್ಧ; ವಕೀಲ ಸತೀಶ್ ಮಾನೆಶಿಂಧೆ


  10.ಅಂದುಕೊಂಡಂತೆ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಈ ಹಿಂದಿನ ವೇಳಾಪಟ್ಟಿಯಲ್ಲಿರುವಂತೆ ಕಳೆದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಎದುರಿಸಲಿದೆ.


  IPL 2020 Schedule: ಬಹುನಿರೀಕ್ಷಿತ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

  Published by:G Hareeshkumar
  First published: