• Home
 • »
 • News
 • »
 • state
 • »
 • Evening Digest : ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ನಟಿ ನಿವೇದಿತಾ ವಿರುದ್ಧ ದೂರು ದಾಖಲು : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ನಟಿ ನಿವೇದಿತಾ ವಿರುದ್ಧ ದೂರು ದಾಖಲು : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ತಮಿಳುನಾಡಿನ ಕಡ್ಡಲೂರು ಬಳಿ ಇರುವ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಐದು ಜನರು ಮೃತಪಟ್ಟರೆ ಅನೇಕರ ಸ್ಥಿತಿ ಗಂಭೀರವಾಗಿದೆ. ಚೆನ್ನೈನಿಂದ 190 ಕಿಮೀ ದೂರದಲ್ಲಿರುವ ಕಟ್ಟುಮನ್ನಾರ್ಕಾಯಿಲ್​ ಭಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.


  ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಐವರ ಸಾವು, ನಾಲ್ಕು ಜನರ ಸ್ಥಿತಿ ಗಂಭೀರ


  2. ಕೊರೋನಾ ಸಮಸ್ಯೆಯ ನಡುವೆಯೂ ಕೇಂದ್ರ ಸರ್ಕಾರ JEE-NEET ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಆದರೆ, ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಅನೇಕ ರಾಜ್ಯಗಳು ಸುಪ್ರೀಂ ಕದ ತಟ್ಟಿದ್ದವು. ಆದರೆ, ಕಳೆದ ಆಗಸ್ಟ್ 17ರಂದು ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.


  NEET, JEE 2020 Exam: ಪರೀಕ್ಷೆ ಮುಂದೂಡುವಂತೆ ಕೋರಿ 6 ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ


  3. ವ್ಯಕ್ತಿಯು ಕಾರು ಚಲಾಯಿಸುವಾಗ ಒಬ್ಬಂಟಿಯಾಗಿದ್ದರೆ ಆತ ಮಾಸ್ಕ್​ ಧರಿಸುವ ಅಗತ್ಯ ಬರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ. ಟ್ರಾಫಿಕ್ ಪೊಲೀಸರು ಸುಖಾಸುಮ್ಮನೆ ಕಾರು ಚಾಲಕರನ್ನು ತಡೆದು ಪ್ರಶ್ನಿಸುತ್ತಿದ್ದ ಹಿನ್ನೆಲೆ ಸಚಿವಾಲಯವು ಈ ಸ್ಪಷ್ಟನೆಯನ್ನು ನೀಡಿದೆ.


  ಮಾಸ್ಕ್ ಧರಿಸದೆ ಒಂಟಿಯಾಗಿ ಡ್ರೈವ್​ ಮಾಡುತ್ತಿದ್ದರೆ ದಂಡ ಹಾಕುವಂತಿಲ್ಲ; ಕೇಂದ್ರ ಆರೋಗ್ಯ ಸಚಿವಾಲಯ


  4. ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ವಿಚಾರ ಹೊತ್ತುರಿಯುತ್ತಿದೆ. ಸಾಕಷ್ಟು ನಟ-ನಟಿಯರ ಹೆಸರು ಕೇಳಿ ಬರುತ್ತಿದ್ದು, ಎಲ್ಲರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಇನ್ನು, ಡ್ರಗ್ಸ್​ ಜಾಲದ ನಂಟು ಹೊಂದುರು ಆರೋಪ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇಣಿಗೆ ನೋಟಿಸ್​ ನೀಡಿದ್ದರು. ಆದರೆ, ರಾಗಿಣಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್​ ಇಲಾಖೆಯ ನಾರ್ಕೋಟಿಸ್​ ವಿಭಾಗದ ಅಧಿಕಾರಿಗಳು ಇಂದು ಮುಂಜಾನೆಯೇ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.


  Ragini Dwivedi: ರಾಗಿಣಿ ದ್ವಿವೇದಿ ನಿವಾಸದ ಶೋಧ ಕಾರ್ಯ ಮುಕ್ತಾಯ; ಸಿಸಿಬಿ ಕಚೇರಿಗೆ ತೆರಳಿದ ನಟಿ


  5. ಹಣಕಾಸು ಸಚಿವರಾಗಿ ಮುಂದುವರೆಯಲು ನಿರ್ಮಲಾ ಸೀತಾರಾಮನ್ ಅವರಿಗೆ ಯಾವ ನೈತಿಕತೆ ಇದೆ. ಕರ್ನಾಟಕ ರಾಜ್ಯದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರಾಗಿದ್ದಾರೆ, ಇವರಿಂದ ಕರ್ನಾಟಕ ರಾಜ್ಯಕ್ಕೆ ಕೊಡುಗೆ ಏನು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಪ್ರಶ್ನಿಸಿದ್ದಾರೆ.


  ಕರ್ನಾಟಕದಿಂದ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ರಾಜ್ಯಕ್ಕೆ ಕೊಡುಗೆ ಏನು : ಆರ್. ಧ್ರುವನಾರಾಯಣ


  6.ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಇಂತ ಸಮಸ್ಯೆಗೆ ಕಾರಣ ಆಗಿದೆ. ಡಾ.ರಾಜ್ , ವಿಷ್ಣು, ಅಂಬರೀಷ್ ಇದ್ದಾಗ ಒಂದು ಭಯ ಇತ್ತು. ಅವರ ಮೇಲಿನ ಗೌರವಕ್ಕೆ ಹೆದರಿ ಯಾರು ದಾರಿ ತಪ್ಪಿರಲಿಲ್ಲ. ಆದರೀಗ ಕನ್ನಡ ಚಿತ್ರರಂಗ ಮೇಟಿ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿದೆ ಎಂದು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.


  Sandesh Nagaraj: ‘ಸ್ಯಾಂಡಲ್​​ವುಡ್​​ಗೆ ಹಿರಿಯರು ಅನ್ನೋರು ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ‘ - ಡ್ರಗ್ಸ್​ ಮಾಫಿಯಾ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್


  7. ಡ್ರಗ್ಸ್ ದಂಧೆಗೆ ಕಡಿವಾಣ ಹಾಕೋವರೆಗೂ ಕಾರ್ಯಾಚರಣೆ ನಿಲ್ಲದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇಂದು ಆರ್​ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಡ್ರಗ್ಸ್ ಜಾಲದ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಪ್ರಗತಿ ಕಾಣುತ್ತಿದೆ. ತನಿಖೆಯಲ್ಲಿ ಹೊಸ ಆಯಾಮಗಳು ಸಿಗುತ್ತಿವೆ. ಡ್ರಗ್ಸ್ ಪೂರೈಕೆಯ ಮೂಲವನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.


  Basavaraj Bommai: ‘ಡ್ರಗ್ಸ್​ ದಂಧೆಗೆ ಬ್ರೇಕ್​ ಹಾಕುವ ತನಕ ಪೊಲೀಸರ ಕಾರ್ಯಾಚರಣೆ ನಿಲ್ಲದು‘ - ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ


  8. ಇತ್ತೀಚೆಗಷ್ಟೆ ಗಾಂಜಾ ಗಿಡವನ್ನು ತುಳಸಿಗೆ ಹೋಲಿಕೆ ಮಾಡಿ ಮಾತನಾಡುವ ಮೂಲಕ ಸುದ್ದಿಯಾಗಿದ್ದ ಸ್ಯಾಂಡಲ್​ವುಡ್​ ನಟಿ ನಿವೇದಿತಾ ಅಲಿಯಾಸ್ ಸ್ಮಿತಾ ಜಗದೀಶ್ ವಿರುದ್ದ ದೂರು ದಾಖಲಾಗಿದೆ. ಗಾಂಜಾ ಸೇವನೆಗೆ ಉತ್ತೇಜನ ನೀಡಿದ ಆರೋಪ ಹಿನ್ನಲೆಯಲ್ಲಿ ನಟಿಯ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.


  Actress Niveditha: ಗಾಂಜಾ ಗಿಡ ತುಳಸಿಯಂತೆಯೇ ಪವಿತ್ರ ಎಂದಿದ್ದ ನಟಿ ನಿವೇದಿತಾ ವಿರುದ್ಧ ದಾಖಲಾಯ್ತು ದೂರು..!


  9. ಸ್ಯಾಂಡಲ್​ವುಡ್​ನಲ್ಲಿ ಸದ್ಯ ಡ್ರಗ್​ ವಿಚಾರ ತುಂಬಾನೇ ಸುದ್ದಿ ಮಾಡುತ್ತಿದೆ. ಡ್ರಗ್​ ಜಾಲ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾದ ರಾಹುಲ್​ ಎಂಬಾತತನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆತನ ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆತ ಕೆಲ ಹೆಸರುಗಳನ್ನು ಹೇಳಿದ್ದಾನೆ ಎನ್ನಲಾಗಿದೆ. ಇನ್ನು, ಈ ಪ್ರಕರಣದಲ್ಲಿ ಸಂಜನಾ ಹೆಸರು ಕೂಡ ಕೇಳಿ ಬಂದಿದ್ದು, ಈ ಬಗ್ಗೆ ನಟಿ ಸಿಟ್ಟಾಗಿದ್ದಾರೆ. ಆತನನ್ನು ಬಂಧಿಸಿದರೆ ನನ್ನನ್ನೇಕೆ ಪ್ರಕರಣದಲ್ಲಿ ಎಳೆದು ತರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ರಾಹುಲ್​ ಬಗ್ಗೆ ಗೊತ್ತಿರುವ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.


  Sanjana Galrani: ರಾಹುಲ್​ ತಪ್ಪು ಮಾಡಿದರೆ ನನಗೇಕೆ ಶಿಕ್ಷೆ ಕೊಡುತ್ತಿದ್ದೀರಾ?; ನಟಿ ಸಂಜನಾ ಗಲ್ರಾನಿ ಪ್ರಶ್ನೆ


  10. ಹರ್ಭಜನ್ ಸಿಂಗ್ ಗುರುವಾರ ಸಿಎಸ್​ಕೆ ತಂಡವನ್ನು ಕೂಡಿಕೊಳ್ಳಬೇಕಿತ್ತು. ಆದರೆ ಭಜ್ಜಿ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಅಲ್ಲದೆ ಐಪಿಎಲ್ 2020 ಯಿಂದ ಸಂಪೂರ್ಣ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. IPL ಶುರುವಾಗಲು ದಿನಗಳು ಮಾತ್ರ ಉಳಿದಿರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮತ್ತೋರ್ವ ಆಟಗಾರ ಹೊರಗುಳಿದಿದ್ದಾರೆ. ಈಗಾಗಲೇ ವೈಯುಕ್ತಿಕ ಕಾರಣಗಳಿಂದ ಸುರೇಶ್ ರೈನಾ ಭಾರತಕ್ಕೆ ಮರಳಿದ್ದಾರೆ.


  IPL 2020: CSK ಗೆ ಸೆಕೆಂಡ್ ಶಾಕ್, ತಂಡದಿಂದ ಹರ್ಭಜನ್ ಸಿಂಗ್ ಔಟ್..!

  Published by:G Hareeshkumar
  First published: