• Home
  • »
  • News
  • »
  • state
  • »
  • Evening Digest : ಅಲ್ಪ ಏರಿಕೆ ಕಂಡ ಚಿನ್ನದ ದರ, ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ಅಲ್ಪ ಏರಿಕೆ ಕಂಡ ಚಿನ್ನದ ದರ, ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

  • Share this:

    1.ಕೊರೋನಾ ಬರುವ ಮುನ್ನವೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಕೊರೋನಾ ಮತ್ತು ಲಾಕ್​​ಡೌನ್​​ ಕಾರಣಗಳಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರ್ಥಿಕ ಬಿಕ್ಕಟ್ಟು ಸಿಕ್ಕಾಪಟ್ಟೆ ಆಗಿರುವ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈಗ ಖರ್ಚು ಕಡಿಮೆ ಮಾಡಲು ಹೊರಟಿದೆ. ದೇಶದ ಆರ್ಥಿಕತೆ ಪಾತಾಳಮುಖಿ ಆಗಿರುವುದರಿಂದ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳಿಗೆ ಪತ್ರ ಬರೆದಿರುವ ಹಣಕಾಸು ಇಲಾಖೆ 'ವೆಚ್ಚ ಕಡಿತಗೊಳಿಸಿ' ಎಂದು ಸೂಚನೆ ನೀಡಿದೆ.


    ದೇಶದ ಆರ್ಥಿಕತೆ ಹದಗೆಟ್ಟ ಹಿನ್ನೆಲೆ; ಖರ್ಚು ಕಡಿಮೆ ಮಾಡುವಂತೆ ಹಣಕಾಸು ಇಲಾಖೆ ಸೂಚನೆ


    2.ಸಾಂಸಾರಿಕ ಜಂಜಾಟ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಉಳಿತಾಯ ಹಣವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ಕೆಲವರಿಗೆ ಸಹಜ. ಪ್ರಧಾನಿ ಅವರು ತಮ್ಮ ಬಹುಪಾಲು ವೈಯಕ್ತಿಕ ಹಣವನ್ನು ವಿವಿಧ ಸೇವೆಗಳಿಗೆ ದೇಣಿಗೆ ನೀಡುತ್ತಾ ಬಂದಿದ್ದಾರೆ. ಗುಜರಾತ್ ಸಿಎಂ ಆದಾಗಿನಿಂದಲೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಈವರೆಗೆ ಮಾಡಿರುವ ದೇಣಿಗೆಯ ಮೊತ್ತ 103 ಕೋಟಿ ಎಂದು ಲೆಕ್ಕ ಮಾಡಲಾಗಿದೆ.


    ನರೇಂದ್ರ ಮೋದಿ ತಮ್ಮ ಉಳಿತಾಯದ 2.25 ಲಕ್ಷ ಹಣ ಪಿಎಂ ಕೇರ್ಸ್ ಫಂಡ್​ಗೆ ದಾನ


    3.ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಕಾಣುತ್ತಿವೆ.


    Gold Rate: ಅಲ್ಪ ಏರಿಕೆ ಕಂಡ ಚಿನ್ನದ ದರ; ವಿವಿಧ ನಗರಗಳಲ್ಲಿನ ಇಂದಿನ ಬೆಲೆ ಇಲ್ಲಿದೆ


    4.ಭಾರತದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಪರವಾಗಿ ಫೇಸ್​ಬುಕ್ ನೀತಿ ಅನುಸರಿಸುತ್ತಿದೆ ಎಂಬ ಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಫೇಸ್​ಬುಕ್ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ನಿಷೇಧಿಸಿದೆ. ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಮ್​ನಲ್ಲಿ ರಾಜಾ ಸಿಂಗ್ ಅವರ ಖಾತೆಗಳನ್ನ ತೆಗೆದುಹಾಕಲಾಗಿದೆ. ಹಿಂಸಾಚಾರ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಫೇಸ್​ಬುಕ್ ಈ ಕ್ರಮ ಕೈಗೊಂಡಿದೆ.


    ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್​ಗೆ ಫೇಸ್​ಬುಕ್ ನಿಷೇಧ


    5.ಕೇಂದ್ರ ಸರ್ಕಾರ ನಿಯಮದಂತೆ ರಾಜ್ಯಗಳಿಗೆ ನೀಡಬೇಕಾಗಿರುವ ನ್ಯಾಯಯುತವಾದ ಜಿಎಸ್‌ಟಿ ಪರಿಹಾರ ಹಣವನ್ನು ನೀಡಲು ಹಿಂದೇಟು ಹಾಕುವುದು ಸರಿಯಲ್ಲ. ಇದು ನಮ್ಮ ರಾಷ್ಟ್ರದ ’ಫೆಡರಲಿಸ್ಟ್’‌ ನೀತಿಗೆ ಅಸಹನೀಯ ಹೊಡೆತ. ಹೀಗಾಗಿ ರಾಜ್ಯಗಳಿಗೆ ಸಾಲ ನೀಡುವ ಬದಲು ಕೇಂದ್ರ ಸರ್ಕಾರವೇ ಸಾಲ ಪಡೆದು ನಮ್ಮ ಪಾಲಿನ ಪಾಲನ್ನು ನೀಡಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.


    ಜಿಎಸ್‌ಟಿ ಪಾಲಿಗೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ, ಸಾಲ ಪಡೆಯಲು ಸಿದ್ದರಾದ ಯಡಿಯೂರಪ್ಪ


    6.ಡ್ರಗ್ಸ್ ಜೊತೆ ಸ್ಯಾಂಡಲ್​ವುಡ್ ನಂಟಿನ ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತಿರುವಂತೆ ತೋರುತ್ತಿದೆ. ನಿನ್ನೆ ನಟಿ ರಾಗಿಣಿ ಆಪ್ತ ರವಿಶಂಕರ್ ಅವರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಈಗ ಮತ್ತೊಬ್ಬ ನಟಿ ಸಂಜನಾ ಗಲ್​ರಾಣಿ ಅವರ ಆಪ್ತರೆನ್ನಲಾದ ರಾಹುಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸರು ರಾಹುಲ್​ರನ್ನು ವಶಕ್ಕೆ ಪಡೆದರೆನ್ನಲಾಗಿದೆ.


    ಡ್ರಗ್ ಕೇಸ್​ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?


    7.ಭದ್ರಾವತಿ  ಕ್ಷೇತ್ರದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನರಾಗಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು, ನಿನ್ನೆ ತಡರಾತ್ರಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಭದ್ರಾವತಿ ತಾಲೂಕಿನ ಗೋಣಿಬೀಡಿನಲ್ಲಿರುವ ತೋಟದಲ್ಲಿ ನಡೆಯಲಿದೆ.


    Appaji Gowda Passed Away: ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿಗೌಡ ನಿಧನ; ಸಂತಾಪ ಸೂಚಿಸಿದ ಸಿಎಂ ಬಿಎಸ್​ ಯಡಿಯೂರಪ್ಪ


    8.ಬೆಳಗಾವಿ ಬಳಿಯ ಪೀರನವಾಡಿ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ದೊಡ್ಡ ವಿವಾದ ಸೃಷ್ಠಿಯಾಗಿತ್ತು. ಆದರೆ, ಪೊಲೀಸ್ ಇಲಾಖೆಯ ಮಧ್ಯ ಪ್ರವೇಶದಿಂದ ಎರಡು ಸಮೂದಾಯಗಳ ನಡುವೆ ಸಂಧಾನ ನಡೆಸಲಾಗಿತ್ತು. ಇಂದು ಪರಸ್ಪರ ಒಪ್ಪಿಗೆಯ ಪ್ರಕಾರ ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ ಎಂದು ನಾಮಕರಣ ಮಾಡಲಾಯಿತು. ಈ ಸಂದರ್ಭದಲ್ಲಿ ಎರಡು ಸಮೂದಾಯದ ಜನ ಪಾಲ್ಗೊಂಡು ಗೌರವ ಸೂಚಿಸಿದರು.


    ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ : ರಾಯಣ್ಣ, ಶಿವಾಜಿ ಪ್ರತಿಮೆಗೆ ಗೌರವ ಸಲ್ಲಿಸಿದ ಗ್ರಾಮಸ್ಥರು..!


    9. ಕಾರು ಅಪಘಾತದಿಂದ ಸುದ್ದಿಯಲ್ಲಿದ್ದ ನಟಿ ಶರ್ಮಿಳಾ ಮಾಂಡ್ರೆ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸ್ಯಾಂಡಲ್​ವುಡ್​ಗೂ ಡ್ರಗ್​ ಮಾಫಿಯಾಗೂ ಇರುವ ನಂಟಿನ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದರು, ಕೆಲವೇ ದಿನಗಳ ಹಿಂದೆಯಷ್ಟೆ ತಮಗೆ ಕೋವಿಡ್​ನ ಲಕ್ಷಣಗಳು ಇರುವುದಾಗಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದ ನಟಿ, ಕ್ವಾರಂಟೈನ್​ ಆಗಿರುವುದಾಗಿಯೂ ತಿಳಿಸಿದ್ದರು. ಈಗ ತಮ್ಮೊಂದಿಗೆ ಕುಟುಂಬದ ಕೆಲವರಿಗೆ ಕೊರೋನಾ ಪಾಸಿಟಿವ್​ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.


    Sharmila Mandre: ಶರ್ಮಿಳಾ ಮಾಂಡ್ರೆ ಸೇರಿದಂತೆ ಕುಟುಂಬದ ಕೆಲವರಿಗೆ ಕೊರೋನಾ ಪಾಸಿಟಿವ್​..!


    10.ಮುಂಬೈ ಇಂಡಿಯನ್ಸ್ ತಂಡದಿಂದ ಲಸಿತ್ ಮಾಲಿಂಗ ಹೊರಗುಳಿಯುವುದಾಗಿ ತಿಳಿಸಿದ್ದಾರೆ. ವೈಯುಕ್ತಿಕ ಕಾರಣಗಳಿಂದ ಐಪಿಎಲ್ ಸೀಸನ್-13 ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ರೋಹಿತ್ ಪಡೆ ಬದಲಿ ಆಟಗಾರನನ್ನು ಕಣಕ್ಕಿಳಿಸಲಿದೆ.


    IPL 2020: ಮುಂಬೈ ತಂಡದಿಂದ ಮಾಲಿಂಗ ಔಟ್: ಆಸ್ಟ್ರೇಲಿಯಾ ವೇಗಿ ಇನ್..!

    Published by:G Hareeshkumar
    First published: