• Home
  • »
  • News
  • »
  • state
  • »
  • Top-5 News: ಬಾಂಬ್ ಸ್ಫೋಟಕ್ಕೆ 100 ಮಕ್ಕಳು ಬಲಿ, ಖರ್ಗೆ ಕೈಗೆ ಸಿಗುತ್ತಾ ಅಧಿಕಾರ, ಕಾಂತಾರಕ್ಕೆ ಜನರ ಜೈಕಾರ!

Top-5 News: ಬಾಂಬ್ ಸ್ಫೋಟಕ್ಕೆ 100 ಮಕ್ಕಳು ಬಲಿ, ಖರ್ಗೆ ಕೈಗೆ ಸಿಗುತ್ತಾ ಅಧಿಕಾರ, ಕಾಂತಾರಕ್ಕೆ ಜನರ ಜೈಕಾರ!

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ದೇಶದ 3ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ


ಗಾಂಧಿನಗರ, ಗುಜರಾತ್: ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ (Vande Bharat Express train) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಚಾಲನೆ ನೀಡಿದ್ದಾರೆ. ವಂದೇ ಭಾರತ್ ರೈಲು ಸರಣಿಯ ಮೂರನೇ ರೈಲು ಇದಾಗಿದೆ. ಮೊದಲ ರೈಲು ದೆಹಲಿ ಹಾಗೂ ವಾರಣಾಸಿ ಮಾರ್ಗದಲ್ಲಿ (Delhi to Varanasi) ಸಂಚರಿಸುತ್ತಿದೆ. ಇನ್ನು 2ನೇ ರೈಲು ದೆಹಲಿಯಿಂದ ಶ್ರೀ ಮಾತಾ ವೈಷ್ಣೋದೇವಿಗೆ (Delhi to Shri Mata Vaishno Devi) ಸಂಪರ್ಕ ಕಲ್ಪಿಸುವ ಕಾತ್ರಾ ನಿಲ್ದಾಣದವರೆಗೆ (Katra station) ಸಂಚರಿಸುತ್ತಿದೆ. ಇದೀಗ ಮೂರನೇ ರೈಲಿಗೆ ಗುಜರಾತ್‌ನ (Gujarat) ಗಾಂಧಿನಗರದಲ್ಲಿ (Gandhinagar) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್‌ನ ಗಾಂಧಿನಗರದಿಂದ ಮುಂಬೈಗೆ (Mumbai) ಸಂಚರಿಸುತ್ತದೆ. ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬಳಿಕ ಇದೇ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಸಂಚಾರವನ್ನೂ ಮಾಡಿದರು. ಗಾಂಧಿನಗರದಿಂದ ಅಹಮದಾಬಾದ್‌ನ ಕಲುಪುರ ರೈಲ್ವೆ ನಿಲ್ದಾಣದವರೆಗೆ (Ahmedabad's Kalupura railway station) ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚರಿಸಿದರು.


ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಖರ್ಗೆ ನಾಮಪತ್ರ


ನವದೆಹಲಿ: ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ (oldest political party) ಎಂಬ ಹೆಸರು ಪಡೆದ ಕಾಂಗ್ರೆಸ್‌ನಲ್ಲಿ (Congress) ಬದಲಾವಣೆ ಗಾಳಿ ಬೀಸುತ್ತಿದೆ. ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ (Sonia Gandhi) ಅನಾರೋಗ್ಯ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರ (AICC Precident) ಬದಲಾವಣೆ ಅನಿವಾರ್ಯವಾಗಿದೆ. ಹೀಗಾಗಿ ಶೀಘ್ರವೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಹಿರಿಯ ನಾಯಕರಾದ ಶಶಿ ತರೂರ್ (Shashi Tharoor), ದಿಗ್ವಿಜಯ್ ಸಿಂಗ್ (Digvijay Singh) ಸೇರಿದಂತೆ ಘಟಾನುಘಟಿಗಳು ಸ್ಪರ್ಧೆಗೆ ಮುಂದಾಗಿದ್ದರು. ಇದೀಗ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮತ್ತೊಂದೆಡೆ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ.


ಇದನ್ನೂ ಓದಿ: Mallikarjun Kharge: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಖರ್ಗೆ ನಾಮಪತ್ರ, ಕನ್ನಡಿಗನ 'ಕೈ'ಗೆ ಸಿಗುತ್ತಾ ಅಧಿಕಾರ?


ಲರ್-ಟೀಸರ್ ಬಿಟ್ಟಿಲ್ಲಾಂದ್ರು ನಿಮ್ ಸಿನಿಮಾ ನೋಡ್ತೀವಿ! 


ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ (Kantara) ಸಿನಿಮಾ ಅದ್ಧೂರಿಯಾಗಿ ಇಂದು ರಿಲೀಸ್ ಆಗಿದ್ದು ಸಕ್ಸಸ್​ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಕರಾವಳಿಯ (Coastal) ಟಚ್ ಇರುವ ಸಿನಿಮಾ ರಾಜ್ಯಾದ್ಯಂತ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಕಾಂತಾರಾ ಸಿನಿಮಾಗೆ ಕುಂದಾಪುರ (Kundapura) ಮಂದಿ ಕೊಟ್ಟ ರಿಯಾಕ್ಷನ್ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದಾರೆ. ಕುಂದಾಪುರ ಪ್ರೀಮಿಯರ್ ಶೋ (Premier Show) ಎಂಬ ಟೈಟಲ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಇದರಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷರ ಪ್ರತಿಕ್ರಿಯೆಗಳನ್ನು ನಾವು ನೋಡಬಹುದು. ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾ  ಕೂಡಾ ಇಂದೇ ರಿಲೀಸ್ ಆಗಿದ್ದು ಇದು ಟಫ್ ಕಾಂಪಿಟೇಷನ್ ಕೊಡುವ ಬಗ್ಗೆ ಈ ಹಿಂದೆ ಮಾತು ಕೇಳಿ ಬಂದಿತ್ತು. ಆದರೆ ಎರಡೂ ಸಿನಿಮಾಗಳೂ ತಮ್ಮದೇ ಟ್ರ್ಯಾಕ್​​ನಲ್ಲಿ ಪ್ರೇಕ್ಷಕರನ್ನು ತಲುಪಿರುವುದು ವಿಶೇಷ.


ಕಾಬೂಲ್‌ನ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 100 ಮಕ್ಕಳು ಸಾವನ್ನಪ್ಪಿರುವ ಶಂಕೆ!


ಕಾಬೂಲ್, ಅಫ್ಘಾನಿಸ್ತಾನ್: ತಾಲಿಬಾನ್ (Taliban) ಆಡಳಿತವಿರುವ ಅಘ್ಫಾನಿಸ್ತಾನದಲ್ಲಿ (Afghanistan) ಉಗ್ರರ ದಾಳಿ (Terror Attack) ಜೋರಾಗಿದೆ. ಇಂದು ಕಾಬೂಲ್‌ನ (Kabul) ಶಾಲೆಯೊಂದರ (School) ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ (Suicide Bomb Attack) ನಡೆಸಿದ್ದಾರೆ. ಪರಿಣಾಮ ಬರೋಬ್ಬರಿ 100 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯದ (Shia community) ಹೆಚ್ಚಿನ ಜನರು ವಾಸಿಸುತ್ತಿರುವ ಕಾಬೂಲ್‌ನ ದಷ್ಟಿ ಬರ್ಚಿ ಪ್ರದೇಶದಲ್ಲಿ (Dashti Barchi Area) ಈ ಭೀಕರ ಬಾಂಬ್ ಸ್ಪೋಟ ಸಂಭವಿಸಿದೆ. ಭೀಕರ ಬಾಂಬ್ ಸ್ಫೋಟದಿಂದಾಗಿ 32ಕ್ಕೂ ಹೆಚ್ಚು ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ಹೇಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು (School Students) ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಘ್ಫಾನಿಸ್ತಾನ್ ಸರ್ಕಾರದ (Afghan government) ಮೂಲಗಳು ಇದನ್ನು ಖಚಿತ ಪಡಿಸಿಲ್ಲ.


ಇದನ್ನೂ ಓದಿ: Kabul Bomb Attack: ಕಾಬೂಲ್‌ನ ಶಾಲೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 100 ಮಕ್ಕಳು ಸಾವನ್ನಪ್ಪಿರುವ ಶಂಕೆ!


ಟಿ20 ವಿಶ್ವಕಪ್ ಬಹುಮಾನದ ಮೊತ್ತ ಘೋಷಣೆ


ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿರುವ ಟಿ20 ವಿಶ್ವಕಪ್ ಗೆ (T20 World Cup 2022) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ತಂಡಗಳು ವಿಶ್ವಕಪ್​ಗಾಗಿ ಭರ್ಜರಿ ತಯಾರಿಯಲ್ಲಿದ್ದು, ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಿದೆ. ಇದರ ನಡುವೆ ಐಸಿಸಿ ಸಹ ಟಿ20 ವಿಶ್ವಕಪ್​ನ ಸಂಪೂರ್ಣ ವೇಳಾಪಟ್ಟಿಯನ್ನು ರಿಲೀಸ್​ ಮಾಡಿದೆ. ಆದರೆ ಇದೀಗ ಐಸಿಸಿ (ICC) ಟಿ20 ವಿಶ್ವಕಪ್​ನ ಬಹುಮಾನದ ಮೊತ್ತವನ್ನು ತಿಳಿಸಿದ್ದು, ಸೆಮಿಫೈನಲ್​, ಫೈನಲ್​ ಮತ್ತು ಚಾಂಪಿಯನ್​ ತಂಡಗಳಿಗೆ ಎಷ್ಟು ಮೊತ್ತದ ಹಣ (Prize Money) ದೊರಕಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಹೇಳಿಕೆ ನೀಡುವ ಮೂಲಕ ಈ ಮಾಹಿತಿ ಬಹಿರಂಗಪಡಿಸಿದೆ.

Published by:Annappa Achari
First published: