HOME » NEWS » State » EVENING DIGEST SEPTEMBER 29TH TOP 10 KANNADA POLITICAL SPORTS AND OTHER NEWS ARE HERE HK

Evening Digest: ಭಾರತದಲ್ಲಿ ಅಮ್ನೆಸ್ಟಿ ಕಾರ್ಯ ಸ್ಥಗಿತ, ನಟಿ ಸಂಜನಾ ಗಲ್ರಾನಿ ಆಪ್ತ ಸಿಸಿಬಿ ಬಲೆಗೆ : ಟಾಪ್​​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

news18-kannada
Updated:September 29, 2020, 5:10 PM IST
Evening Digest: ಭಾರತದಲ್ಲಿ ಅಮ್ನೆಸ್ಟಿ ಕಾರ್ಯ ಸ್ಥಗಿತ, ನಟಿ ಸಂಜನಾ ಗಲ್ರಾನಿ ಆಪ್ತ ಸಿಸಿಬಿ ಬಲೆಗೆ : ಟಾಪ್​​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಚೀನಾದ ವುಹಾನ್ ನಗರಿಯಿಂದ ಆರಂಭಗೊಂಡು ಭಾರತ ಸೇರಿದಂತೆ ಇಡೀ ವಿಶ್ವವೇ ತತ್ತರಿಸಿಹೋಗುವಂತೆ ಮಾಡಿರುವ ಬೆನ್ನಲ್ಲೇ ಈಗ ಚೀನಾದಿಂದ ಮತ್ತೊಂದು ವೈರಸ್ ಭಾರತಕ್ಕೆ ಅಡಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಕ್ಯಾಟ್ ಕ್ಯೂ ವೈರಸ್ (CQV - Cat Que Virus) ಎಂದು ಹೆಸರಿಸಲಾಗಿರುವ ಈ ವೈರಸ್ ಚೀನಾ ಮತ್ತು ವಿಯೆಟ್ನಾಂ ದೇಶಗಳ ಹಲವರಲ್ಲಿ ಈಗಾಗಲೇ ಸೋಂಕು ಸೃಷ್ಟಿಸಿದೆ. ಆತಂಕದ ವಿಚಾರವೆಂದರೆ ಭಾರತದಲ್ಲೂ ಈ ವೈರಸ್ ಅಡಿ ಇಟ್ಟಿರುವುದು ಪತ್ತೆಯಾಗಿದೆ.

ಭಾರತದಲ್ಲಿ ಹರಡುತ್ತಿದೆ ಮತ್ತೊಂದು ಚೀನೀ ವೈರಸ್; ಕರ್ನಾಟಕದಲ್ಲೇ ಕ್ಯಾಟ್ ಕ್ಯೂ ಪ್ರಕರಣ ಬೆಳಕಿಗೆ

2.ದೇಶವೇ ಕುತೂಹಲದಿಂದ ಕಾಯುತ್ತಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ನಾಳೆ (ಸೆಪ್ಟೆಂಬರ್ 30ರಂದು) ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ಸಿಸಿಬಿ ವಿಶೇಷ ಕೋರ್ಟ್​ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠವು 27 ವರ್ಷಗಳ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ.

ನಾಳೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ; ಅಡ್ವಾಣಿ, ಜೋಶಿ ಭವಿಷ್ಯ ನಿರ್ಧಾರ

3.ಜಾಗತಿಕ ಮಾನವ ಹಕ್ಕು ಸಂಸ್ಥೆ ಅಮ್ನೆಸ್ಟಿ ಇಂಟರ್​​ನ್ಯಾಷನಲ್ ಭಾರತದಲ್ಲಿ ತನ್ನ ಕಾರ್ಯಸ್ಥಗಿತಗೊಳಿಸಿದೆ. ಇಲ್ಲಿರುವ ತನ್ನ ಎಲ್ಲಾ ಸಿಬ್ಬಂದಿಯನ್ನೂ ಮನೆಗೆ ಕಳುಹಿಸಿದೆ. ಎಲ್ಲ ಸಂಶೋಧನಾ ಕಾರ್ಯಗಳನ್ನೂ ಸಂಪೂರ್ಣವಾಗಿ ನಿಲ್ಲಿಸಿದೆ.

ಭಾರತದಲ್ಲಿ ಅಮ್ನೆಸ್ಟಿ ಕಾರ್ಯಸ್ಥಗಿತ; ಸರ್ಕಾರದ ಉಪದ್ರವ ಕಾರಣ ಎಂದ ಮಾನವ ಹಕ್ಕು ಸಂಸ್ಥೆ

4.ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಗ್ಯಾಂಗ್ ರೇಪ್ ಆಗಿದ್ದ 19 ವರ್ಷದ ದಲಿತ ಯುವತಿ ಇಂದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹಲವು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಈ ಯುವತಿ ಇಂದು ಬೆಳಗ್ಗೆ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿ ಇಂದು ಸಾವು

5.ಮಂಗಳ ಗ್ರಹದಲ್ಲಿ ನೀರು ಇರುವುದಕ್ಕೆ ಇನ್ನಷ್ಟು ಸಾಕ್ಷ್ಯಗಳು ಸಿಕ್ಕಿವೆ. ಎರಡು ವರ್ಷಗಳ ಹಿಂದೆ ದೊಡ್ಡ ಸರೋವರವೊಂದು ಮಂಗಳ ಗ್ರಹದ ಹಿಮಗಳ ಕೆಳಗೆ ಹುದುಗಿಹೋಗಿರುವುದು ಪತ್ತೆಯಾಗಿತ್ತು. ಈಗ ಇನ್ನೂ ಮೂರು ಸರೋವರಗಳನ್ನ ಸಂಶೋಧಕರು ಕಂಡುಹಿಡಿದಿದ್ದಾರೆ.

ಮಂಗಳ ಗ್ರಹದಲ್ಲಿ ಹುದುಗಿಹೋದ ಇನ್ನೂ 3 ಸರೋವರಗಳು ಪತ್ತೆ

6. ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ನಾಲ್ಕು ವಿಧಾನಪರಿಷತ್ ಸ್ಥಾನಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕಗಳನ್ನ ಪ್ರಕಟಿಸಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರ ಸೇರಿದಂತೆ ದೇಶಾದ್ಯಂತ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದ್ದು, ನವೆಂಬರ್ 3ಕ್ಕೆ ಮತದಾನ ಆಗಲಿದೆ.

ಆರ್.ಆರ್.ನಗರ, ಶಿರಾ ಉಪಚುನಾವಣೆ; 4 ಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ

7.ಮುಂದಿನ ನಾಲ್ಕು ತಿಂಗಳಲ್ಲಿ ಸುರೇಶ್ ಅಂಗಡಿ ರಾಜ್ಯದ ಮುಖ್ಯಮಂತ್ರಿ ಆಗುತ್ತಿದ್ದರು. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಆಯ್ಕೆಯನ್ನು ಮಾಡಿದ್ದರು. ಆದರೆ, ದುರ್ದೈವ ಸುರೇಶ್ ಅಂಗಡಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಮಾಣಿಕ ಮತ್ತು ಹಾರ್ಡ್ ವರ್ಕರ್ ಆಗಿದ್ದರು. ಕುಟುಂಬಸ್ಥರಿಗೆ ಟಿಕೆಟ್ ನೀಡಿದ್ರೆ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಲ್ಲು ಸಾಧ್ಯ. ಇದೇ ನಿರೀಕ್ಷೆಯನ್ನು ಕ್ಷೇತ್ರ ಜನರು ಇದ್ದಾರೆ ಎಂದು ಲಿಂಗರಾಜ್ ಪಾಟೀಲ್ ಹೇಳಿದ್ದರು.

ಮುಂದಿನ ನಾಲ್ಕು ತಿಂಗಳಲ್ಲಿ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ದರು ; ಸೋದರ ಮಾವ ಲಿಂಗರಾಜ್ ಪಾಟೀಲ್ ಹೇಳಿಕೆ

8.ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಇನ್ನು ಭಯವಿದೆ. ಹೀಗಾಗಿ ಏಕಾಏಕಿ ಶಾಲೆ ಆರಂಭಿಸುವುದು ಬೇಡ. ಬದಲಿಗೆ ಪ್ರಯೋಗಿಕವಾಗಿ ಶಾಲೆ ಆರಂಭಿಸಿ ನೋಡಲಿ ಎಂದು ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​ ನಗರದಲ್ಲಿ ತಿಳಿಸಿದ್ದಾರೆ.

ಪೋಷಕರಲ್ಲಿ ಭಯ ಇದೆ; ಪ್ರಾಯೋಗಿಕವಾಗಿ ಶಾಲೆ ಆರಂಭಿಸಲಿ: ಸಚಿವ ಜಗದೀಶ್​ ಶೆಟ್ಟರ್​

9.ಕಳೆದ ಹಲವು ದಿನಗಳಿಂದ ಸಂಜನಾ ಹಾಗೂ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್​ ತಲೆಮರೆಸಿಕೊಂಡಿದ್ದಾನೆ. ಹೀಗಿರುವಾಗಲೇ ಸಿಸಿಬಿ ಪೊಲೀಸರು ಬಂಧಿತರ ಆಪ್ತರು ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಈಗಲೂ ಸಹ ಸಂಜನಾ ಗಲ್ರಾನಿ ಆವರ ಆಪ್ತನೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Sanjjanaa Galrani: ಸ್ಯಾಂಡಲ್​ವುಡ್​ ಮಾದಕ ವಸ್ತು ಪ್ರಕರಣ: ಸಂಜನಾ ಗಲ್ರಾನಿ ಆಪ್ತ ಸಿಸಿಬಿ ಬಲೆಗೆ

10. ಐಪಿಎಲ್​ 13ನೇ ಆವೃತ್ತಿಯಲ್ಲಿ ಸತತ ಎರಡು ಗೆಲುವು ಸಾಧಿಸಿರುವ ಡೆಲ್ಲಿ ಡೇರ್​ ಡೆವಿಲ್ಸ್​ ಹಾಗೂ ಸತತ ಎರಡು ಸೋಲು ಕಂಡಿರುವ ಸನ್​ ರೈಸರ್ಸ್​​ ಹೈದರಬಾದ್​ ತಂಡಗಳು ಇಂದು ಮುಖಾಮುಖಿ ಆಗುತ್ತಿವೆ. ಡೆಲ್ಲಿ ಹ್ಯಾಟ್ರಿಕ್​ ಗೆಲುವಿನ ಕನಸು ಕಂಡರೆ ಸನ್​ ರೈಸರ್ಸ್​ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸುವ ತವಕದಲ್ಲಿದೆ.

DC vs SRH Dream11: ಇಂದು ಡೆಲ್ಲಿ-ಸನ್​ರೈಸರ್ಸ್​ ನಡುವೆ ಹಣಾಹಣಿ; ಡ್ರೀಮ್​11ನಲ್ಲಿ ಮಾಡಬೇಕಾಗಿದ್ದೇನು?
Published by: G Hareeshkumar
First published: September 29, 2020, 4:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories