• Home
  • »
  • News
  • »
  • state
  • »
  • Top-5 News: ಅನುಷ್ಕಾ ಶೆಟ್ಟಿ ಮದ್ವೆ ಫಿಕ್ಸ್, ಟಿ20 ವಿಶ್ವಕಪ್‌ನಿಂದ ಬುಮ್ರಾ ಔಟ್​! ಇದು ಇಂದಿನ ಟಾಪ್ ನ್ಯೂಸ್

Top-5 News: ಅನುಷ್ಕಾ ಶೆಟ್ಟಿ ಮದ್ವೆ ಫಿಕ್ಸ್, ಟಿ20 ವಿಶ್ವಕಪ್‌ನಿಂದ ಬುಮ್ರಾ ಔಟ್​! ಇದು ಇಂದಿನ ಟಾಪ್ ನ್ಯೂಸ್

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಶುಭಯೋಗ ಕೂಡಿ ಬಂತಮ್ಮ, ಅನುಷ್ಕಾ ಶೆಟ್ಟಿ ಮದ್ವೆಯಂತಮ್ಮ


ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರಂತೆ. ಹೀಗಂತ ತುಂಬಾ ವರ್ಷಗಳಿಂದ ಮಾತುಗಳು ಕೇಳಿ ಬರುತ್ತಾನೇ ಇವೆ. ಅನುಷ್ಕಾ ಶೆಟ್ಟಿ ಹಾಗೂ ನಟ ಪ್ರಭಾಸ್ (Prabhas) ಪ್ರೀತಿಸುತ್ತಿದ್ದಾರಂತೆ, ಇನ್ನೇನು ಮದುವೆ ಆಗುತ್ತಾರಂತೆ ಅಂತೆಲ್ಲ ಮಾತುಗಳು ಆಗಾಗ ಕೇಳಿ ಬರುತ್ತಾನೆ ಇರುತ್ತದೆ. ಆದರೆ ಈ ಬಾರಿ ಅನುಷ್ಕಾ ಮದುವೆ ವಿಚಾರ ಸತ್ಯ ಅಂತಿದೆ ಟಾಲಿವುಡ್ ಮೂಲಗಳು. ಅಂದಹಾಗೆ ಅನುಷ್ಕಾ ಕೈ ಹಿಡಿಯುತ್ತಿರೋದು ನಟ ಪ್ರಭಾಸ್ ಅವರನ್ನು ಅಲ್ವಂತೆ! ಹಾಗಿದ್ರೆ ಅನುಷ್ಕಾ ಮನಗೆದ್ದ ಹುಡುಗ ಯಾರು? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ…


ಹೆಚ್ಚಿನ ಮಾಹಿತಿಗಾಗಿ ಓದಿ: Anushka Shetty Marriage: ಶುಭಯೋಗ ಕೂಡಿ ಬಂತಮ್ಮ, ಅನುಷ್ಕಾ ಶೆಟ್ಟಿ ಮದ್ವೆಯಂತಮ್ಮ! ಕನ್ನಡತಿ ಕೈ ಹಿಡಿಯೋ ವರ ಇವರೇ!


ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ?


ಉತ್ತರಾಖಂಡ್: ಜೈಲಿಗೆ (Jail) ಹೋಗೋದು ಅಂದ್ರೆ ಸಣ್ಣ ಮಾತಲ್ಲ. ಜೈಲಿಗೆ ಹೋಗಿ ಬಂದವರು ಅಂದ್ರೆ ಸಾಕು ಸಮಾಜ (Society) ಅವರನ್ನು ಒಂದು ರೀತಿಯ ಕೀಳು ದೃಷ್ಟಿಯಲ್ಲಿ ನೋಡುತ್ತದೆ. ಅದ್ರಲ್ಲೂ ಅಪರಾಧ (Crime) ಮಾಡಿ, ಜೈಲಿಗೆ ಹೋಗು ಶಿಕ್ಷೆ (Punishment) ಅನುಭವಿಸಿದವ್ರು ಜೈಲಿಂದ ಹೊರಗೆ ಬಂದ್ರೂ ಸಮಾಜದಲ್ಲಿ ತಲೆ ಎತ್ತಿ ಓಡಾಡುವ ವಾತಾವರಣವೇ ಇರೋದಿಲ್ಲ. ಹೀಗಾಗಿ ಜೈಲಿಗೆ ಹೋಗೋಕೆ ಯಾರೂ ಇಷ್ಟ ಪಡೋದಿಲ್ಲ. ಇನ್ನು "ನಾನು ಜೈಲು ಮೆಟ್ಟಿಲು ಹತ್ತಿದ ಮಗನೇ ಅಲ್ಲ" ಅಂತ ನೀವು ಮಾತು ಮಾತಿಗೂ ವಾದ ಮಾಡಬಹುದು! ಆದ್ರೆ ಜೈಲು ಮೆಟ್ಟಿಲು ಹತ್ತೋದೇನು, ಜೈಲಿನಲ್ಲೇ ನೀವು ಒಂದು ದಿನ ಇದ್ದು ಬರಬಹುದು! ಅದಕ್ಕಾಗಿ ನೀವು ಯಾವುದೇ ಅಪರಾಧ ಮಾಡೋದು ಬೇಕಿಲ್ಲ, ಬದಲಾಗಿ 500 ರೂಪಾಯಿ ಕೊಟ್ರೆ ಸಾಕು!


ಹೆಚ್ಚಿನ ಮಾಹಿತಿಗಾಗಿ ಓದಿ: ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ? ಜಸ್ಟ್ 500 ರೂಪಾಯಿ ಕೊಡಿ, ಒಂದು ದಿನ ಕಾರಾಗೃಹದಲ್ಲಿ ಇರಿ!


ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ!


ಪಿಎಫ್‌ಐ ಬ್ಯಾನ್ (PFI Ban) ಆದಂತೆ ಆರ್‌ಎಸ್‌ಎಸ್‌ (RSS) ಕೂಡ ಬ್ಯಾನ್ ಆಗಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದರು. ಇದೀಗ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು (BJP Leaders) ಆಕ್ರೋಶ ಹೊರಹಾಕಿದ್ದಾರೆ. “ಸಿದ್ದರಾಮಯ್ಯಗೆ ತಲೆಕೆಟ್ಟಿದೆ ಎನಿಸುತ್ತೆ, ಮೊದಲು ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು” ಅಂತ ಮಡಿಕೇರಿ ಶಾಸಕ (Madikeri MLA) ಅಪ್ಪಚ್ಚು ರಂಜನ್ (Appachu Ranjan) ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಓದಿ: Appachu Ranjan: ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ! ಮಾಜಿ ಸಿಎಂ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ


ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ರೇಸ್​ಗೆ ದಿಗ್ವಿಜಯ್ ಸಿಂಗ್ ಎಂಟ್ರಿ


ನವದೆಹಲಿ(ಸೆ.29): ವಾಸ್ತವವಾಗಿ, ಅಶೋಕ್ ಗೆಹ್ಲೋಟ್ (Ashok Gehlot) ಅವರ ಉಮೇದುವಾರಿಕೆ ಬಗ್ಗೆ ಸಸ್ಪೆನ್ಸ್ ಉಳಿದಿರುವ ಸಮಯದಲ್ಲಿ ದಿಗ್ವಿಜಯ್ ಸಿಂಗ್ (Digvijay Singh) ಅವರ ಉಮೇದುವಾರಿಕೆ ಘೋಷಣೆಯಾಗಿದೆ. ರಾಜಸ್ಥಾನದಲ್ಲಿನ ರಾಜಕೀಯ (Rajasthan Political Crisis)  ಬಿಕ್ಕಟ್ಟು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಮೇಲೆ ನೆರಳು ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಂಭಾವ್ಯ ಅಭ್ಯರ್ಥಿಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯ ನಂತರ, ಇದೀಗ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಶುಕ್ರವಾರ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಓದಿ: Congress President Poll: ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ರೇಸ್​ಗೆ ದಿಗ್ವಿಜಯ್ ಸಿಂಗ್ ಎಂಟ್ರಿ: ಇದು ಸೋನಿಯಾ 'ಪ್ಲಾನ್​ ಬಿ'?


T20 World Cup 2022: ಟೀಂ ಇಂಡಿಯಾಗೆ ಬಿಗ್​ ಶಾಕ್


ಐಸಿಸಿ ಟಿ20 ವಿಶ್ವಕಪ್‌ಗೂ (T20 World Cup 2022) ಮುನ್ನವೇ ಭಾರತ ಕ್ರಿಕೆಟ್ ತಂಡ (Team India) ಭಾರೀ ಹಿನ್ನಡೆ ಅನುಭವಿಸಿದೆ. ಗಾಯದಿಂದ ಚೇತರಿಸಿಕೊಂಡ ನಂತರ ಪುನರಾಗಮನ ಮಾಡಿದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತೆ ಗಾಯಗೊಂಡಿದ್ದಾರೆ. ಬೆನ್ನುನೋವಿನ ಕಾರಣ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಗೆ ಗೈರುಹಾಜರಾಗಿದ್ದರು. ಆದರೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಇತ್ತೀಚಿನ ಗಾಯದಿಂದ ಬುಮ್ರಾ ಚೇತರಿಸಿಕೊಳ್ಳಲು ನಾಲ್ಕರಿಂದ ಆರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಅವರು ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳಿವೆ. ಹೀಗಾಗಿ ಮೂಲಗಳು ತಿಳಿಸಿರುವ ಹಾಗೆ ಬುಮ್ರಾ ಟಿ20 ವಿಶ್ವಕಪ್​ಗೆ ಗೈರಾಗುವ ಎಲ್ಲಾ ಸಾಧ್ಯತೆಗಳಿದ್ದು, ಆದರೆ ಯಾವುದೇ ಅಧಿಕೃತ ಮಾಹಿತಿ ಲಭ್ಯ ವಾಗಿಲ್ಲ.

Published by:Annappa Achari
First published: