• Home
  • »
  • News
  • »
  • state
  • »
  • Top 5 News: ಪಿಎಫ್‌ಐ ನಿಷೇಧ, ಸುನೀಲ್ ಛೆಟ್ರಿಗೆ ಫಿಫಾ ಗೌರವ! ಈ ಸಂಜೆಯ ಸಖತ್ ಸುದ್ದಿ ಇಲ್ಲಿವೆ

Top 5 News: ಪಿಎಫ್‌ಐ ನಿಷೇಧ, ಸುನೀಲ್ ಛೆಟ್ರಿಗೆ ಫಿಫಾ ಗೌರವ! ಈ ಸಂಜೆಯ ಸಖತ್ ಸುದ್ದಿ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಪಿಎಫ್​ಐ ಜೊತೆ ಈ ಎಂಟು ಅಂಗಸಂಸ್ಥೆಗಳನ್ನೂ ಬ್ಯಾನ್ ಮಾಡಿದ ಕೇಂದ್ರ


ನವದೆಹಲಿ(ಸೆ.28): ಟೆರರ್ ಫಂಡಿಂಗ್ (Terror Funding) ಪ್ರಕರಣದ ತನಿಖೆ ಎದುರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (Popular Front Of India) ನಿಷೇಧಿಸಲಾಗಿದೆ. ದೆಹಲಿ, ಉತ್ತರ ಪ್ರದೇಶದಿಂದ ಹಿಡಿದು ದೇಶದ ವಿವಿಧ ರಾಜ್ಯಗಳಲ್ಲಿ, ಕೇಂದ್ರ ಸರ್ಕಾರವು ಯುಎಪಿಎ ಅಡಿಯಲ್ಲಿ ಈ ಸಂಘಟನೆಯನ್ನು ಅಕ್ರಮ ಎಂದು ಘೋಷಿಸಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಪಿಎಫ್‌ಐ ಮೇಲೆ ಐದು ವರ್ಷಗಳ ನಿಷೇಧ (Ban On PFI) ಹೇರಲಾಗಿದೆ. ಅಷ್ಟೇ ಅಲ್ಲ, ಪಿಎಫ್‌ಐ ಹೊರತಾಗಿ ಅದಕ್ಕೆ ಸಂಬಂಧಿಸಿದ ಎಂಟು ಸಂಘಟನೆಗಳನ್ನೂ ನಿಷೇಧಿಸಲಾಗಿದೆ. ಟೆರರ್ ಲಿಂಕ್ ಆರೋಪದ ಮೇಲೆ ದೇಶದ ಹಲವು ರಾಜ್ಯಗಳಲ್ಲಿ ಪಿಎಫ್ ಐ ಮೇಲೆ ನಿರಂತರ ದಾಳಿ ನಡೆಸಿದ ಬಳಿಕ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.


ಜೈಲಿನಲ್ಲೇ ಚೆಕ್​ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಸ್ವಾಮೀಜಿ


ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಸ್ವಾಮೀಜಿ (Murugha Swamiji) ಜೈಲಿನಿಂದಲೇ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ (Cheque) ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಯನ್ನು ಸಲ್ಲಿಸಿದ್ರು.  ಈ ಬಗ್ಗೆ ಪ್ರತಿಕ್ರಿಯಿಸಿರುವ ಹೈಕೋರ್ಟ್ (High Court) , ಈ ಬಗ್ಗೆ ನಿರ್ದಿಷ್ಟ ಮನವಿ ಸಲ್ಲಿಸಿ ಎಂದು ಅವರ ಪರ ವಕೀಲರಿಗೆ ನಿರ್ದೇಶಿಸಿದೆ. ಈ ಕುರಿತಂತೆ ಆರೋಪಿ ಮುರುಘಾ ಶ್ರೀಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು (Criminal application) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು (ಸೆಪ್ಟೆಂಬರ್​ 28) ರಂದು ವಿಚಾರಣೆ ನಡೆಸಿತು.


ಇದನ್ನೂ ಓದಿ: Murugha Swamiji: ಜೈಲಿನಲ್ಲೇ ಚೆಕ್​ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಸ್ವಾಮೀಜಿ; ಮನವಿ ಸಲ್ಲಿಸಲು ಹೈಕೋರ್ಟ್​ ಸೂಚನೆ


ದಸರಾ ದರ್ಶನಕ್ಕೆ ವಿಶೇಷ ಬಸ್​ಗಳ ವ್ಯವಸ್ಥೆ


ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಹಿನ್ನೆಲೆ ಅರಮನೆ ನಗರಿಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ. ದಸರಾ ಮಹೋತ್ಸವ ಅದ್ಧೂರಿಯಾಗಿಸಲು ಸರ್ಕಾರ (Government) ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಸಾಂಸ್ಕೃತಿಕ ನಗರಿ  ಸಡಗರದಲ್ಲಿ ಮಿಂದೇಳುತ್ತಿದೆ. ಇನ್ನು ಮೈಸೂರು ದಸರಾ ವೈಭವ ನೋಡಲು ಹಲವೆಡೆಗಳಿಂದ ಜನ ಸಾಗರವೇ ಹರಿದು ಬರ್ತಿದೆ. ಜನ ಸಾಮಾನ್ಯರಿಗೆ ಅನುಕೂಲವಾಗಲೆಂದು 81 ಕೆಎಸ್​ಆರ್​ಟಿಸಿ (KSRTC) ಬಸ್​ಗಳನ್ನು​ ನಿಯೋಜನೆ ಮಾಡಲಾಗಿದೆ.


ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್!


ಮಹಾರಾಷ್ಟ್ರ: ಆಕೆ ಏನೂ ಅರಿಯದ ಅಮಾಯಕಿ. ಕಾಲೇಜ್‌ (College) ಓದುತ್ತಿದ್ದವಳು ತಾನಾಯ್ತು, ತನ್ನ ವಿದ್ಯಾಭ್ಯಾಸ (Studies) ಆಯ್ತು ಅಂತ ಇದ್ದಳು. ಆದ್ರೆ ಆಕೆ ಬಾಳಲ್ಲಿ ಬಂದವನೇ ಈ ಯುವಕ. ಪ್ರೀತಿ ಪ್ರೇಮದ (Love) ಹೆಸರಲ್ಲಿ ಆತ ಆಕೆಯ ಮನಸ್ಸು ಕೆಡಿಸಿದ. ಆತನನ್ನು ನಂಬಿದ ಆಕೆ, ಆತ ಹೇಳಿದ ಕಡೆಗಳಲ್ಲೆಲ್ಲ ಹೋದಳು. ಹೀಗೆ ಆತನ ಹಿಂದೆ ಹೋದ ಆಕೆ ಮೇಲೆ ಆತ ಮೃಗದಂತೆ ಎರಗಿಬಿಟ್ಟಿದ್ದಾನೆ. ಬಳಿಕ ಮದುವೆ (Marriage) ಆಗುವುದಾಗಿ ನಂಬಿಸಿ ಮತ್ತೆ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಇದರಿಂದ ನೊಂದ ಆಕೆ ಇದೀಗ ದುಡುಕಿನ ನಿರ್ಧಾರ ಕೈಗೊಂಡು, ತನ್ನ ಜೀವಕ್ಕೆೇ ಕುತ್ತು ತಂದುಕೊಟ್ಟು ಬಿಟ್ಟಿದ್ದಾಳೆ.


ಇದನ್ನೂ ಓದಿ: Love Dhoka: ಆ ಹುಡುಗಿ ಪಾಲಿಗೆ ಪ್ರಿಯಕರನೇ ವಿಲನ್! ಅತ್ಯಾಚಾರದಿಂದ ನೊಂದು ವಿಷ ಕುಡಿದ ಸಂತ್ರಸ್ತೆ


ಇದು ರೊನಾಲ್ಡೊ, ಮೆಸ್ಸಿ ಕಥೆಯಲ್ಲ, ನಮ್ಮ ನಾಯಕ ಸುನೀಲ್​ ಛೆಟ್ರಿ ಸ್ಟೋರಿ! 


ಕೆಲ ತಿಂಗಳುಗಳಲ್ಲ ಫುಟ್ಬಾಲ್ (Football)​ ಪ್ರಿಯರಿಗೆ ಹಬ್ಬವೊಂದು ಆರಂಭವಾಗಲಿದೆ. ಹೌದು, ಫಿಫಾ ವಿಶ್ವಕಪ್​ 2022 (FIFA World Cup 2022) ಇದೇ ನವೆಂಬರ್​ ತಿಂಗಳಿನಿಂದ ಆರಂಭವಾಗಲಿದೆ. ಇದಕ್ಕಾಗಿ ಕತಾರ್ (Qatar)​ ಅದ್ಧೂರಿಯಾಗಿ ಸಿದ್ಧಗೊಳ್ಳುತ್ತಿದೆ. ಇನ್ನು ತಿಂಗಳುಗಳು ಇರುವ ಮುಂಚಿತವಾಗಿಯೇ ಪ್ರಪಂಚದಾದ್ಯಂತ ಎಲ್ಲಡೆ ನಿಧಾನವಾಗಿ ಫುಟ್ಬಾಲ್​ ಜ್ವರ ಆರಂಭವಾಗಿದೆ. ಆದರೂ ಭಾರತದಲ್ಲಿ ಕ್ರಿಕೆಟ್​ಗೆ ಸಿಗುವಷ್ಟು ಮನ್ನಣೆಯಾಗಲಿ, ಕ್ರೇಜ್​ ಆಗಲಿ ಫುಟ್ಬಾಲ್​ಗೆ ಇಲ್ಲ. ಆದರೂ ಭಾರತದ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ (Sunil Chhetri) ಎಂದರೆ ಭಾರತದ ಪ್ರತಿಯೊಬ್ಬರಿಗೂ ತಿಳಿದಿರುವಂತಹ ಹೆಸರು. ಫುಟ್ಬಾಲ್ ಲೋಕದಲ್ಲಿ ವಿಭಿನ್ನ ಛಾಪು ಮೂಡಿಸಿರುವ ಆಟಗಾರ ಛೆಟ್ರಿ. ಅಂತಾರಾಷ್ಟ್ರ ಮಟ್ಟದಲ್ಲಿ ಭಾರತ ತಂಡ ಫುಟ್ಬಾಲ್​ ಲೋಕದಲ್ಲಿ ಅಷ್ಟಾಗಿ ಸಾಧನೆ ಮಾಡದಿದ್ದರೂ ಛೆಟ್ರಿ ಮಾತ್ರ ಅದ್ಭುತ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯನ್ನು ಇದೀಗ ಸ್ವತಃ ಫಿಫಾ ಸಹ ಗುರುತಿಸಿ, ವಿಶೇಷ ಗೌರವ ಸಲ್ಲಿಸಿದೆ.

Published by:Annappa Achari
First published: