• Home
  • »
  • News
  • »
  • state
  • »
  • Top 5 News: ಇಂದೇ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರಿಶೀಲನಾ ಪಟ್ಟಿ ರಿಲೀಸ್​, ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ಇಂದಿನ ಟಾಪ್‌ ನ್ಯೂಸ್

Top 5 News: ಇಂದೇ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರಿಶೀಲನಾ ಪಟ್ಟಿ ರಿಲೀಸ್​, ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ಇಂದಿನ ಟಾಪ್‌ ನ್ಯೂಸ್

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

  • Share this:

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಬೆಂಗಳೂರು: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (Primary School Teacher Recruitment) ಪರೀಕ್ಷೆಯ 1:2 ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಪಟ್ಟಿಯನ್ನು ಇಂದೇ (ಸೆ. 27) ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (B C Nagesh) ಮಾಹಿತಿ ನೀಡಿದ್ದಾರೆ. 5 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದ ಬಳಿಕ ಇಲಾಖೆಯು ಸಿಇಟಿ ನಡೆಸಿ ಈಗಾಗಲೆ ಅಭ್ಯರ್ಥಿಗಳ ಫಲಿತಾಂಶ (Result) ಪ್ರಕಟಿಸಿದೆ. ಶಿಕ್ಷಕರ ನೇಮಕಾತಿಗೆ ಆಯ್ಕೆ ಪಟ್ಟಿ (Selection List For Recruitment) ಸಿದ್ಧಪಡಿಸಿದ್ದು, ಇದೀಗ ಸಚಿವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಇಂದೇ ದಾಖಲಾತಿ  ಪರಿಶೀಲನಾ ಪಟ್ಟಿ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ.


ಬೈಕ್ ಆ್ಯಂಬುಲೆನ್ಸ್​ಗೆ ಬ್ರೇಕ್​ ಹಾಕಿದ ಸರ್ಕಾರ


ಬೈಕ್ ಆ್ಯಂಬುಲೆನ್ಸ್ ಸೇವೆ ಕೈಬಿಡಲು ಆರೋಗ್ಯ ಇಲಾಖೆ ಇಲಾಖೆ ನಿರ್ಧರಿಸಿದೆ. 108 ಆ್ಯಂಬುಲೆನ್ಸ್ ಸೇವೆಯನ್ನು ಹೆಚ್ಚಿಸಿರೋ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ಮುಂತಾದ ಕಾರಣಗಳಿಂದ ಸೇವೆಯಲ್ಲಿ ವ್ಯತ್ಯಯವಾಗುತ್ತಿದ್ದ ಹಿನ್ನೆಲೆ ಸೇವೆ ಸ್ಥಗಿತ ಮಾಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಈ ವರ್ಷದ ಬಿಡ್ಡಿಂಗ್ನಿಂದ ಬೈಕ್ ಆ್ಯಂಬುಲೆನ್ಸ್ ಕೈ ಬಿಡಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್. ಡಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ 30 ಬೈಕ್ ಆ್ಯಂಬುಲೆನ್ಸ್ ಖರೀದಿ ಮಾಡಲಾಗಿತ್ತು. ಇದೀಗ 108 ಆ್ಯಂಬುಲೆನ್ಸ್ ಸೇವೆಯನ್ನು ಹೆಚ್ಚಿಸಿದ್ದು, ಆದಷ್ಟು ಬೇಗ 108 ಆ್ಯಂಬುಲೆನ್ಸ್ ಗಳು ಅಪಘಾತದ ಸ್ಥಳಕ್ಕೆ ತಲುಪಲಿದೆ.


ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ


ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸಾಮಾಜ ಸೇವೆಗಳಿಂದ ಭಾರೀ ಜನಪ್ರಿಯರಾಗಿದ್ದಾರೆ. ದೇಶದಾದ್ಯಂತ ಇವ್ರ ಕೆಲಸಗಳು ಚರ್ಚೆಯಾಗುತ್ತಿದೆ. ಆದ್ರೆ ಇದೀಗ ಸುಧಾಮೂರ್ತಿ (Sudha Murthy) ಬೇರೊಂದು ವಿಚಾರಕ್ಕೆ ಸುಧಾಮೂರ್ತಿ ಚರ್ಚೆಯಾಗಿದ್ದಾರೆ. ಸುಧಾಮೂರ್ತಿ ಅವ್ರು ರಾಜಮಾತೆ ಪ್ರಮೋದಾ ದೇವಿ ಅವರ ಪಾದಕ್ಕೆ ನಮಸ್ಕಾರ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜಪ್ರಭುತ್ವ ಕೊನೆಗೊಂಡು ದಶಕಗಳೇ ಕಳೆದರೂ ರಾಜವಂಶಸ್ಥರಿಗೆ ತಲೆ ಬಾಗಿ ನಮಸ್ಕರಿಸೋ ಪರಿಪಾಠ ಇನ್ನೂ ಹೋಗಿಲ್ಲ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.


ನೋಟ್ ಬ್ಯಾನ್ ನಿರ್ಧಾರ ಸುಪ್ರೀಂ ಅಂಗಳದಲ್ಲಿ! ನಾಳೆಯೇ ವಿಚಾರಣೆ


ಇದು ಅಜಾಗರೂಕ ನಿರ್ಧಾರ ಮತ್ತು ಭಾರತದ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ ಎಂದು ವಿರೋಧ ಪಕ್ಷಗಳು ಈ ಕ್ರಮವನ್ನು ಟೀಕಿಸಿದ್ದವು. ನೋಟು ಅಮಾನ್ಯೀಕರಣದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ನಡೆಸಲಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನಾಳೆ ಅರ್ಜಿಗಳ ವಿಚಾರಣೆ ನಡೆಸಲಿದೆ. ನವೆಂಬರ್ 9, 2016 ರಂದು ರಾಷ್ಟ್ರವನ್ನುದ್ದೇಶಿಸಿ ಹಠಾತ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿಯಿಂದ ಅಸ್ತಿತ್ವದಲ್ಲಿರುವ ₹ 500 ಮತ್ತು ₹ 1,000 ನೋಟುಗಳನ್ನು ಇನ್ನು ಮುಂದೆ ಯಾವುದೇ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಘೋಷಿಸಿದ್ದರು.


ಕಿಂಗ್​ಪಿನ್ ದಿವ್ಯಾ ಹಾಗರಗಿ ಪತಿಗೆ ಜಾಮೀನು


ಪಿಎಸ್ಐ ಹುದ್ದೆ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪತಿ ರಾಜೇಶ್​​ಗೆ ಜಾಮೀನು ಸಿಕ್ಕಿದೆ. ಪಿಎಸ್​ಐ ಅಕ್ರಮ ಪ್ರಕರಣದಲ್ಲಿ ರಾಜೇಶ್ ಬಂಧನವಾಗಿತ್ತು. ಇದೀಗ ಕಲಬುರಗಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರಾಜೇಶ್ ಪತ್ನಿ ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಾಗಿದ್ದು, ನಗರದಲ್ಲಿಯ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿಯಾಗಿದ್ದರು. ಈ ಶಾಲೆಯಲ್ಲಿ PSI ನೇಮಕಾತಿ ಪರೀಕ್ಷೆಗಳು ನಡೆದಿದ್ದವು. ಜ್ಞಾನಜ್ಯೋತಿ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಬಹುತೇಕ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಈ ಶಾಲೆಯಿಂದಲೇ ಅಕ್ರಮ ಬೆಳಕಿಗೆ ಬಂದಿತ್ತು.

Published by:ಪಾವನ ಎಚ್ ಎಸ್
First published: