• Home
  • »
  • News
  • »
  • state
  • »
  • Top 5 News: ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಪರಿಶುದ್ಧವಾಗಿದ್ದಾರಾ?; ಸಿನಿಮಾಗಳು ಸೋತಿದ್ದಕ್ಕೆ ಮನೆ ಮಾರಿಕೊಂಡ ನಟ! ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

Top 5 News: ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಪರಿಶುದ್ಧವಾಗಿದ್ದಾರಾ?; ಸಿನಿಮಾಗಳು ಸೋತಿದ್ದಕ್ಕೆ ಮನೆ ಮಾರಿಕೊಂಡ ನಟ! ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

  • Share this:

ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಪರಿಶುದ್ಧವಾಗಿದ್ದಾರಾ?


ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಸಿಟಿ ರವಿ (C T Ravi ಅವರು ಕಿಡಿಕಾರಿದ್ದಾರೆ. ಅರ್ಕಾವತಿ ರೀಡು ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ ಸಿದ್ದರಾಮಯ್ಯ, ಹಗಲು ದರೋಡೆ ಮಾಡಿದವರು ಎಂದ್ರು. ಸಿದ್ದರಾಮಯ್ಯ ಕೈಗೆ ಹ್ಯಾಂಡ್ ಗ್ಲೌಸ್ (Hand Gloves) ಹಾಕಿ ಅಕ್ರಮ ಮಾಡಿದ್ದಾರೆ. ಹೀಗಾಗಿ ಅವರ ಫಿಂಗರ್ ಪ್ರಿಂಟ್ ಕಾಣ್ತಾ ಇಲ್ಲ. ಅವ್ರು ಅಕ್ರಮ (Scam) ಮಾಡಿದ್ದು ಸುಳ್ಳಾ? ಸಿದ್ದರಾಮಯ್ಯ ಉಡುವಷ್ಟು ಪಂಚೆಯಷ್ಟೇ ಕ್ಲೀನ್ ಇದ್ದಾರಾ? ಎಂದು ಸಿಟಿ ರವಿ ಪ್ರಶ್ನೆ ಮಾಡೋ ಮೂಲಕ ವಾಗ್ದಾಳಿ ನಡೆಸಿದ್ದಾರೆ.


ಮೊದಲು ಕಮಿಷನ್ ಆರೋಪ ಮಾಡಿದ್ದು ಮೋದಿ


ಪೇಸಿಎಂ ಪೋಸ್ಟರ್​ ಅಂಟಿಸಿದ ನಾಯಕರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಕಿಡಿಕಾರಿದ್ರು. ಕಾಂಗ್ರೆಸ್ ಮಾಡ್ತಿರೋದು ಡರ್ಟಿ ಪಾಲಿಟಿಕ್ಸ್​ ಎಂದು ಹೇಳಿಕೆ ನೀಡಿದ್ರು. ಸಿಎಂ ಹೇಳಿಕೆ ವಿರುದ್ಧ ಇದೀಗ ಕಾಂಗ್ರೆಸ್​ ನಾಯಕರು (Congress Leaders) ಸಹ ಕಿಡಿಕಾರಿದ್ದಾರೆ. ಕೈ ನಾಯಕರಾದ ಪ್ರಿಯಾಂಕಾ ಖರ್ಗೆ, ರಾಮಲಿಂಗಾರೆಡ್ಡಿ ಹಾಗೂ ಯುಬಿ ವೆಂಕಟೇಶ್​ ಅವರು ಜಂಟಿ ಸುದ್ದಿಗೋಷ್ಠಿ ನಡಸಿ ಬಿಜೆಪಿ ಸರ್ಕಾರದ ಕಿಡಿಕಾರಿದ್ದಾರೆ.  ನಾವು ಹೇಳಿದ್ರೆ ಡರ್ಟಿ ಪಾಲಿಟಿಕ್ಸ್ ಅಂತ ಹೇಳ್ತಾರೆ. ಸ್ಕ್ಯಾನ್ ಮಾಡಿದ್ರೆ ಸಿಎಂ ಸ್ಥಾನದಿಂದ ಪೊಲೀಸ್ ಹುದ್ದೆವರೆಗೂ ಮಾರಾಟ ಮಾಡ್ತಿರುವುದರ ಬಗ್ಗೆ ಮಾಹಿತಿ ಸಿಗುತ್ತೆ. ಡರ್ಟಿ ಪಾಲಿಟಿಕ್ಸ್ ಮಾಡಿದ್ದು ನೀವು ಎಂದು ಪ್ರಿಯಾಂಕಾ ಖರ್ಗೆ ಹೇಳಿದ್ರು.


ಸದ್ಗುರು, ಅಸ್ಸಾಂ ಸಿಎಂ ವಿರುದ್ಧ ಗ್ರಾಮಸ್ಥರಿಂದ ಪೊಲೀಸ್ ಕೇಸ್


ಗುವಾಹಟಿ: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ (KNP) ಬಳಿ ವಾಸಿಸುವ ಇಬ್ಬರು ಗ್ರಾಮಸ್ಥರು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ (Sadhguru Jaggi Vasudev) ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ. ಶನಿವಾರ ಸಂಜೆ ಪ್ರವಾಸಿಗರಿಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸದ್ಗುರು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Assam CM Himanta Biswa Sarma) ಮತ್ತು ಅಸ್ಸಾಂ ಕ್ಯಾಬಿನೆಟ್ ಸಚಿವ ಜಯಂತ ಮಲ್ಲ ಬರುವಾ ಅವರೊಟ್ಟಿಗೆ ರಾತ್ರಿ ಜೀಪ್ ಸವಾರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಗ್ರಾಮಸ್ಥರು ದಾಖಲಿಸಿರುವ ದೂರಿನ ಪ್ರಕಾರ ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಉಲ್ಲಂಘನೆಯಾಗಿದೆ. ಪೂರ್ವ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬೊಕಾಖಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಮಾಧಿ


ಒಂದೇ ಕುಟುಂಬದ ಐವರು ಮನೆ ಕುಸಿದು ಮೃತಪಟ್ಟಿರುವುದು ಗ್ರಾಮಸ್ಥರಲ್ಲಿ ಭಾರೀ ವಿಷಾದ ಭಾವವನ್ನೇ ಮೂಡಿಸಿದೆ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ಮನೆ ಕುಸಿದು ನಾಲ್ವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ಸಮಾಧಿಯಾಗಿದ್ದಾರೆ. ರೋನ್ಹತ್ ಸಮೀಪದ ಖಿಜ್ವಾಡಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕೋಟಿ ಕೋಟಿ ಬೆಲೆ ಬಾಳುವ ಬಂಗಲೆ ಮಾರಿದ ಸ್ಟಾರ್​ ನಟ!


ಸ್ಟಾರ್​ ಹೀರೋಗಳ ಎಲ್ಲ ಸಿನಿಮಾಗಳೂ ಹಿಟ್ ಆಗುವುದಿಲ್ಲ. ಸತತ ಹಿಟ್ ಕೊಟ್ಟರೆ ಲಕ್​ ಅನ್ನುತ್ತಾರೆ. ಅದೇ ಸಿನಿಮಾಗಳು ಫ್ಲಾಪ್​ ಆದರೆ ದುರಾದೃಷ್ಟವೇ ಇರಬೇಕು ಅನ್ನುತ್ತಾರೆ. ಸ್ಟಾರ್​ ನಟರೊಬ್ಬರು ಮೂಢನಂಬಿಕೆಯಿಂದ ಕೋಟಿಗಟ್ಟಲೆ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಷ್ಟಪಟ್ಟು ಖರೀದಿಸಿದ ಮನೆಯನ್ನು ಅಕ್ಷಯ್ ಮಾರಿದ್ದಾರೆ. ಕೋಟಿಗಟ್ಟಲೆ ಬೆಲೆಬಾಳುವ ಬಂಗಲೆಯನ್ನು ಮಾರಿದರು. ಅದೂ ಅಗ್ಗದ ದರದಲ್ಲಿ. ಅದಕ್ಕೆ ಕಾರಣವೇನು ಎಂದು ಜನ ಕೇಳುತ್ತಿದ್ದಾರೆ. ಅಕ್ಷಯ್ ಕುಮಾರ್ ಅಂಧಾರಿ ವೆಸ್ಟ್ ನಲ್ಲಿ ಐಷಾರಾಮಿ ಆಸ್ತಿ ಹೊಂದಿದ್ದಾರೆ. ಅಕ್ಷಯ್ ಈ ಹಿಂದೆ 4.12 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದರು. ಆದರೆ ಇತ್ತೀಚಿಗೆ ಆ ಅಪಾರ್ಟ್ ಮೆಂಟ್ ಅನ್ನು ಸಂಗೀತ ನಿರ್ದೇಶಕರೊಬ್ಬರಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ.

Published by:ಪಾವನ ಎಚ್ ಎಸ್
First published: