• Home
  • »
  • News
  • »
  • state
  • »
  • Top 5 News: ಭಾರತ vs ಆಸ್ಟ್ರೇಲಿಯಾ, 108 ಆ್ಯಂಬುಲೆನ್ಸ್​ ಸಮಸ್ಯೆ; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

Top 5 News: ಭಾರತ vs ಆಸ್ಟ್ರೇಲಿಯಾ, 108 ಆ್ಯಂಬುಲೆನ್ಸ್​ ಸಮಸ್ಯೆ; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

  • Share this:

ಭಾರತ ಮತ್ತು ಆಸ್ಟ್ರೇಲಿಯಾ ಕುತೂಹಲಕರ ಪಂದ್ಯ
ಭಾರತ ಮತ್ತು ಆಸ್ಟ್ರೇಲಿಯಾ  (IND v AUS) ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ 3ನೇ ಪಂದ್ಯವು ಇಂದು  ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದ ತಂಡ ಸರಣಿಯನ್ನು ಗೆಲ್ಲಲಿದೆ. ಇದೇ ಕಾರಣಕ್ಕಾಗಿ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ.


108 ಆ್ಯಂಬುಲೆನ್ಸ್​ಗೆ ಕಾಲ್ ತಾಗ್ತಿಲ್ವೇ? ಈ ಸಂಖ್ಯೆಗೆ ಕರೆ ಮಾಡಿ
108 ಆಂಬುಲೆನ್ಸ್ ಸಮಸ್ಯೆ ವಿಚಾರವಾಗಿ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಆಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ  (CM Basavaraj Bommai) ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ಆರೋಗ್ಯ ಇಲಾಖೆ (Karnataka Health Department) ಕಮಿಷನರ್ ಡಿ ರಂದೀಪ್ ಟ್ವೀಟ್ ಮಾಡಿದ್ದು, ರಾಜ್ಯದ ಕೆಲವು‌ ಜಿಲ್ಲೆಗಳಲ್ಲಿ 108 ಸೇವೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಅದನ್ನು ಸರಿಪಡಿಸಿ ಸೇವೆ ಪುನರಾರಂಭ ಎಂದು ಟ್ವೀಟ್ ಮಾಡಿದ್ದಾರೆ.  ರಾಜ್ಯದ ಹಲವು ಜಿಲ್ಲೆಗಳಲ್ಲಿ 108 ಆ್ಯಂಬುಲೆನ್ಸ್ ಬದಲಿಗೆ ಪರ್ಯಾಯ ಕಂಟ್ರೊಲ್ ರೂಂಗಳನ್ನು ನಿರ್ಮಿಸಲಾಗಿದ್ದು ಆ ಮಾಹಿತಿ ಇಲ್ಲಿದೆ.


ನಾಳೆ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ
ವಿಶ್ವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara 2022) ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಝಗಮಗಿಸುವ ವಿದ್ಯುತ್ ಬೆಳಕಿನಲ್ಲಿ ಪಾರಂಪರಿಕ ನಗರಿ ಮೈಸೂರು (Mysuru) ಕಂಗೊಳಿಸುತ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟದ (Chamundi Hill) ಸನ್ನಿಧಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ನಾಳೆ ಬೆಳಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ (Goddess Chamundeshwari) ಪುಷ್ಪಾರ್ಚನೆ ಮಾಡುವ ಮೂಲಕ ಶರನ್ನವರಾತ್ರಿಯ 9 ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ರಾಷ್ಟಪತಿಗಳು ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸುವರು.


ಇದನ್ನೂ ಓದಿ: Mysuru Top 5 News: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು, ಮಹಿಷ ದಸರಾ ಆಚರಣೆ; ಮೈಸೂರಿನ ಟಾಪ್ ನ್ಯೂಸ್​


ಭಕ್ತಾದಿಗಳಿಗೆ ಖುಷಿಸುದ್ದಿ ನೀಡಿದ ಟಿಟಿಡಿ; ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ!
ತಿರುಪತಿ ತಿರುಮಲ ದೇಗುಲದಲ್ಲಿ ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ನಿಯಮ ಬದಲಿಸಲಾಗಿದೆ. ಟಿಟಿಡಿ ವಿಐಪಿಗಳ ದರ್ಶನದ ಸಮಯದಲ್ಲಿ ಬದಲಾವಣೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ವಿಐಪಿಗಳ ದರ್ಶನದ ಸಮಯವನ್ನು ಬೆಳಗ್ಗೆ 5.30ರ ಬದಲಾಗಿ 10ಕ್ಕೆ ಆರಂಭಿಸಲು ಟಿಟಿಡಿ ನಿರ್ಧಾರ ಕೈಗೊಂಡಿದೆ. ಈಮುನ್ನ ವಿಐಪಿಗಳು ಬೆಳಗ್ಗೆ 8 ಅಥವಾ 9 ಗಂಟೆಯವರೆಗೆ ದೇವರ ದರ್ಶನ ಪಡೆಯುತ್ತಿದ್ದರು. ಈ ನಿಯಮದಿಂದ ಜನಸಾಮಾನ್ಯರು ದರ್ಶನ ಪಡೆಯಲು ಸಮಸ್ಯೆ ಉಂಟಾಗುತ್ತಿತ್ತು. ಅಕ್ಟೋಬರ್ ತಿಂಗಳಿನಿಂದ ತಿರುಪತಿಯಲ್ಲಿ ಹೊಸ ನಿಯಮ ಜಾರಿಗೊಳಿಸಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಎಂದು ತಿಳಿಸಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ತಿರುಪತಿಯಲ್ಲಿ ಹೊಸ ನಿಯಮ ಜಾರಿಗೊಳಿಸಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Tirumala Tirupati: ಭಕ್ತಾದಿಗಳಿಗೆ ಖುಷಿಸುದ್ದಿ ನೀಡಿದ ಟಿಟಿಡಿ; ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭ!


ಅಕ್ಟೋಬರ್ 1ರಿಂದ ದುನಿಯಾ ಇನ್ನಷ್ಟು ದುಬಾರಿ! ಹೆಚ್ಚಲಿದೆ ಕರೆಂಟ್ ಬಿಲ್
ಅಕ್ಟೋಬರ್ 1ರಿಂದ ಕರ್ನಾಟಕದಲ್ಲಿ ಪರಿಷ್ಕೃತ ವಿದ್ಯುತ್ ದರ ಜಾರಿಯಾಗಲಿದೆ. ಹಿಂದಿನ ಏಪ್ರಿಲ್​ನಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಸ್ಕಾಂಗೆ ಪ್ರತಿ ತಿಂಗಳಿಗೆ ಪ್ರತಿ ಯೂನಿಟ್ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಅವಕಾಶ ನೀಡಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: