• Home
 • »
 • News
 • »
 • state
 • »
 • Evening Digest: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ, ಕಾಂಗ್ರೆಸ್​ ಶಾಸಕ ಬಿ.ನಾರಾಯಣ ರಾವ್​ ನಿಧನ

Evening Digest: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ, ಕಾಂಗ್ರೆಸ್​ ಶಾಸಕ ಬಿ.ನಾರಾಯಣ ರಾವ್​ ನಿಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಕೇಂದ್ರ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಮೂರು ಕೃಷಿ ಮಸೂದೆಗಳೂ ಪರಿಣಾಮಕಾರಿಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಏಕೆಂದರೆ ಈವರೆಗೆ ರೈತರು ತಮ್ಮ ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡುತ್ತಿದ್ದರು. ಆದರೆ, ಈ ಕಾಯ್ದೆಯ ಮೂಲಕ ರೈತರ ತಮ್ಮ ಉತ್ಪನ್ನಗಳನ್ನು ಯಾವುದೇ ಖರೀದಿದಾರರಿಗೆ ಮಾರಾಟ ಮಾಡಬಹುದಾಗಿದೆ.


  ನೂತನ ಕೃಷಿ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿವೆ; ಸಚಿವ ತೋಮರ್ ವಿಶ್ವಾಸ


  2.ಭಾರತದಲ್ಲಿ ಕಾಶ್ಮೀರಿಗಳನ್ನು ಗುಲಾಮರಂತೆ ಕಾಣಲಾಗುತ್ತಿದೆ. ಅವರು ದ್ವಿತೀಯ ದರ್ಜೆ ನಾಗರಿಕರಂತಾಗಿದ್ದಾರೆ. ಅವರಿಗೆ ಭಾರತೀಯತನವೆಂಬ ಭಾವನೆಯೇ ಬತ್ತಿಹೋಗಿದೆ. ಭಾರತಕ್ಕಿಂತ ಚೀನಾ ಆಡಳಿತವೇ ಎಷ್ಟೋ ವಾಸಿಯಾಗಿರುತ್ತದೆ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.


  ಕಾಶ್ಮೀರದ ಜನರಿಗೆ ಈಗ ಭಾರತಕ್ಕಿಂತ ಚೀನಾ ಆಡಳಿತವೇ ವಾಸಿ ಎನ್ನುವಂತಾಗಿದೆ: ಫಾರೂಕ್


  3. ದೆಹಲಿ ಗಲಭೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಚಾರ್ಜ್​ ಶೀಟ್​ನಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್​ ಖುರ್ಷಿದ್​ ಹೆಸರು ಕೂಡ ಸೇರಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಈ ಪೌರತ್ವ ತಿದ್ದುಪಡಿ ವಿರೋಧ ಗಲಭೆಯಲ್ಲಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಆರೋಪದ ಮೇಲೆ ಅವರ ಹೆಸರು ಚಾರ್ಜ್​ ಶೀಟ್​ನಲ್ಲಿ ಸೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಸಾವಿರ ಪುಟಗಳ ಚಾರ್ಜ್​ ಶೀಟ್​ ಅನ್ನು ಸೆ.17ರಂದು ಪೊಲೀಸರು ಸಲ್ಲಿಸಿದ್ದಾರೆ.


  ದೆಹಲಿ ಗಲಭೆ ಚಾರ್ಜ್​ ಶೀಟ್​ನಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಸಲ್ಮಾನ್​ ಖುರ್ಷಿದ್​ ಹೆಸರು


  4.ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಗೃಹ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ತಮ್ಮ ಬಿಡುಗಡೆ ಕುರಿತು ಯಾರೇ ಮಾಹಿತಿ ಕೇಳಿದರೂ ನೀಡಬಾರದು ಎಂದು ತಮ್ಮ ವಕೀಲರ ಮೂಲಕ ಪರಪ್ಪನ ಆಗ್ರಹಾರ ಕೇಂದ್ರದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


  ನನ್ನ ಬಿಡುಗಡೆ ದಿನಾಂಕ ಸೇರಿದಂತೆ ಯಾರಿಗೂ ಯಾವ ಮಾಹಿತಿ ನೀಡಬೇಡಿ; ಜೈಲಾಧಿಕಾರಿಗಳಿಗೆ ಶಶಿಕಲಾ ಪತ್ರ


  5.ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್​ ಶಾಸಕ  ಬಿ ನಾರಾಯಣ ರಾವ್​, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.  ಸೋಂಕಿಗೆ ತುತ್ತಾಗಿದ್ದ ಬಸವ ಕಲ್ಯಾಣದ ಶಾಸಕರು ಕಳೆದೆರಡು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟ ಸಮಸ್ಯೆ ಎದುರಾದ ಹಿನ್ನಲೆ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಗಂಭೀರಗೊಂಡಿದ್ದು, ಬಹು ಅಂಗಾಗ ವೈಫಲ್ಯದಿಂದ  ಸಾವನ್ನಪ್ಪಿದ್ದಾರೆ.


  Big News : ಕೊರೋನಾ ಸೋಂಕಿನಿಂದ ಕಾಂಗ್ರೆಸ್​ ಶಾಸಕ ಬಿ.ನಾರಾಯಣ ರಾವ್​ ಸಾವು


  6.ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಜಂಘೀ ಕುಸ್ತಿ ಇವತ್ತೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷ ಇವತ್ತು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆದರೆ, ಅಗತ್ಯ ಸಂಖ್ಯೆ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಆಡಳಿತ ಪಕ್ಷದ ಕೆಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿರ್ಣಯದ ಮೇಲೆ ಇವತ್ತೇ ಚರ್ಚೆಗೆ ಅವಕಾಶ ಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಸದಸ್ಯರ ಬೇಡಿಕೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದರು.


  ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ; ಇವತ್ತು ಚರ್ಚೆಗೆ ಅವಕಾಶ ಕೊಡದ ಸ್ಪೀಕರ್


  7.ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಮುಂದಾಗಿದೆ. ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೋಟೀಸ್ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಶಾಕ್ ನೀಡಿದ್ದಾರೆ.


  ಯಡಿಯೂರಪ್ಪ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದ ಸಿದ್ದರಾಮಯ್ಯ


  8.ಕಳೆದ ಎರಡು ತಿಂಗಳಿನಿಂದ ಡ್ರಗ್ಸ್​ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣ ಬೆಳಕಿಗೆ ಬಂದ ದಿನದಿಂದ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿವೆ. ಅದರಲ್ಲೂ ಡ್ರಗ್ಸ್​ ಮಾಫಿಯಾ ಜೊತೆಗೆ ಸ್ಯಾಂಡಲ್​ವುಡ್​ ನಂಟಿನ ಸುದ್ದಿ ಸದ್ದು ಮಾಡುತ್ತಲೇ ಪ್ರಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.


  Anushree: ಡ್ರಗ್ ಡೀಲರ್​ ಕಿಶೋರ್​ ಶೆಟ್ಟಿ ಜೊತೆಗಿನ ನಂಟೇ ಕಂಟಕವಾಯ್ತಾ ಅನುಶ್ರೀಗೆ; ಪೊಲೀಸರಿಂದ ನಿರೂಪಕಿಯ ವಿಚಾರಣೆ ಸಾಧ್ಯತೆ?


  9. ಶೂಟಿಂಗ್​ ಸಮಯದಲ್ಲೇ ಹೃದಯಾಘತ ಸಂಭವಿಸಿದ್ದರಿಂದ ಹಿರಿಯ ನಟ ರಾಕ್​ಲೈನ್​ ಸುಧಾಕರ್​ ಮೃತಪಟ್ಟಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಪೋಷಕ ಪಾತ್ರ ಹಾಗೂ ಕಾಮಿಡಿ ಪಾತ್ರಗಳಲ್ಲಿ ಅವರು ನಟಿಸಿದ್ದರು. ಅವರ ಅಗಲಿಕೆ ಇಡೀ ಚಿತ್ರರಂಗವೇ ಶೋಕ ವ್ಯಕ್ತಪಡಿಸಿದೆ.


  Rockline Sudhakar Passes Away: ಶೂಟಿಂಗ್ ವೇಳೆ ಹೃದಯಾಘಾತ; ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ


  10. ದುಬೈನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೆಲವೇ ಪಂದ್ಯಗಳಲ್ಲಿ ರಣೋತ್ಸಾಹ ಪಡೆದುಕೊಂಡಿದೆ. ಪ್ರತೀ ಪಂದ್ಯವೂ ರೋಚಕವಾಗಿ ಕ್ರಿಕೆಟ್ ಪ್ರೇಮಿಗಳನ್ನ ಸೂಜಿಗಲ್ಲಿನಂತೆ ಆಕರ್ಷಿಸಿವೆ. ಮೊನ್ನೆಯ ಪಂದ್ಯದಲ್ಲಿ ಆರ್​ಸಿಬಿ ಹುಡುಗ ದೇವದತ್ ಪಡಿಕ್ಕಲ್ ಆಡಿದ ಆಟಕ್ಕೆ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ.


  RCB vs Punjab - ಆರ್​ಸಿಬಿ ಹುಡುಗ ಪಡಿಕ್ಕಲ್ ಎದುರಾಳಿ ತಂಡದ ಕನ್ನಡಿಗರ ಬಗ್ಗೆ ಏನಂತಾರೆ?

  Published by:G Hareeshkumar
  First published: