• Home
 • »
 • News
 • »
 • state
 • »
 • Evening Digest: ಚಂದ್ರನ ಬಳಿ ಮಹಿಳೆ ಕಳುಹಿಸಲು ನಾಸಾ ಸಿದ್ಧ, ಸೆ. 28ರಂದು ಕರ್ನಾಟಕ ಬಂದ್ : ಟಾಪ್​​ 10 ಸುದ್ದಿಗಳು

Evening Digest: ಚಂದ್ರನ ಬಳಿ ಮಹಿಳೆ ಕಳುಹಿಸಲು ನಾಸಾ ಸಿದ್ಧ, ಸೆ. 28ರಂದು ಕರ್ನಾಟಕ ಬಂದ್ : ಟಾಪ್​​ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1. ಐದು ದಶಕಗಳ ಬಳಿಕ ಮೊದಲ ಬಾರಿಗೆ ಮಾನವ ಚಂದ್ರನ ಮೇಲೆ ಮತ್ತೊಮ್ಮೆ ಕಾಲಿಡಲಿದ್ದಾನೆ. ಇನ್ನು ಮೂರು ವರ್ಷದಲ್ಲಿ ಇಬ್ಬರು ಗಗನಯಾತ್ರಿಗಳು ಚಂದ್ರನಲ್ಲಿ ಇಳಿಯಲಿದ್ದಾರೆ. ಆ ಇಬ್ಬರಲ್ಲಿ ಒಬ್ಬರು ಮಹಿಳೆ ಇರಲಿದ್ದಾರೆ. 2024ಕ್ಕೆ ಮಾನಸಹಿತ ಗಗನನೌಕೆಯನ್ನು ಚಂದ್ರನ ಮೇಲಿಳಿಸಲು ಅಮೆರಿಕದ ನಾಸಾ ಯೋಜಿಸಿದೆ.


  NASA - ಚಂದ್ರನ ಬಳಿ ಮಹಿಳೆ ಕಳುಹಿಸಲು ನಾಸಾ ಸಿದ್ಧ; ಇಲ್ಲಿದೆ ಮೂನ್ ಮಿಷನ್ ವಿವರ


  2.ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗವಾದ ರಿಲಾಯನ್ಸ್ ರೀಟೇಲ್​ಗೆ ಎರಡನೇ ಹೂಡಿಕೆಯಾಗಿ 5,500 ಕೋಟಿ ಬಂಡವಾಳ ಹರಿದುಬಂದಿದೆ. ಕೆಕೆಆರ್​ ಆ್ಯಂಡ್​ ಕೋ ರಿಲಯನ್ಸ್ ರೀಟೇಲ್​ನಲ್ಲಿ ಶೇ. 1.28 ಪಾಲನ್ನು ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.  ಕೆಲ ದಿನಗಳ ಹಿಂದಷ್ಟೇ ಫ್ಯೂಚರ್ ರೀಟೇಲ್ ಎಂಬ ಎದುರಾಳಿ ಸಂಸ್ಥೆಯನ್ನು ಖರೀದಿಸಿದ್ದ ರಿಲಾಯನ್ಸ್ ರೀಟೇಲ್​ಗೆ ಕೆಕೆಆರ್​ ಜೊತೆಗಿನ ಒಪ್ಪಂದ ಇನ್ನಷ್ಟು ಪುಷ್ಟಿ ಕೊಟ್ಟಂತಾಗಿದೆ.


  Reliance Retail - KKR Deal: ರಿಲಯನ್ಸ್ ರೀಟೇಲ್ ಮೇಲೆ 5,550 ಕೋಟಿ ರೂ. ಹೂಡಿಕೆ ಮಾಡಲು ಮುಂದಾದ ಕೆಕೆಆರ್


  3.ಟಾಟಾ ಮತ್ತು ಮಿಸ್ತ್ರಿ ಕುಟುಂಬಗಳ ನಡುವಿನ ಏಳು ದಶಕಗಳ ಸ್ನೇಹ ಮತ್ತು ವ್ಯಾವಹಾರಿಕ ಸಂಬಂಧದ ಕೊಂಡಿ ಕಳಚಿಬೀಳುತ್ತಿದೆ. ಟಾಟಾ ಗ್ರೂಪ್ ಮತ್ತು ಶಾಪೂರ್​ಜಿ ಪಲ್ಲೋನ್​ಜಿ ಪರಸ್ಪರ ದೂರವಾಗುತ್ತಿವೆ. ಟಾಟಾ ಸನ್ಸ್ ಕಂಪನಿಯಲ್ಲಿ ಶೇ. 18.5 ಪಾಲನ್ನು ಹೊಂದಿರುವ ಶಾಪೂರ್​ಜಿ ಪಲ್ಲೋನ್​ಜಿ ಗ್ರೂಪ್ ಇದೀಗ ಟಾಟಾ ಜೊತೆಗಿನ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ. ನಾವು ಪ್ರತ್ಯೇಕವಾಗುವುದು ಎಲ್ಲರಿಗೂ ಒಳ್ಳೆಯದು ಎಂದು ಈ ಸಂಸ್ಥೆ ಹೇಳಿಕೊಂಡಿದೆ.


  Tata Group - ಟಾಟಾಗೆ ನಾವು ವಿದಾಯ ಹೇಳುವ ಸಮಯ ಬಂದಿದೆ: ಮಿಸ್ತ್ರಿ ಕುಟುಂಬ


  4.ಭಾರತ ಮತ್ತು ಚೀನಾದ ಎಲ್​​ಎಸಿ ಗಡಿಯಾದ್ಯಂತ ಪೈಪೋಟಿಯ ಮೇಲೆ ಎರಡೂ ದೇಶಗಳ ಸೇನಾ ಪಡೆಗಳ ನಿಯೋಜನೆಯಾಗಿ ಏರ್ಪಡುತ್ತಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನ ಮಾಡುವ ಪ್ರಯತ್ನ ಮುಂದುವರಿದಿದೆ. ಸದ್ಯಕ್ಕೆ ಪೂರ್ವ ಲಡಾಖ್ ಭಾಗದ ಎಲ್​ಎಸಿಯಲ್ಲಿ ಎರಡೂ ಕಡೆಯ ಮತ್ತಷ್ಟು ಸೇನಾಪಡೆಗಳ ನಿಯೋಜನೆ ಮಾಡದಿರಲು ನಿರ್ಧಾರ ಕೈಗೊಳ್ಳಲಾಗಿದೆ.


  ಲಡಾಖ್​ನ ಗಡಿಭಾಗಕ್ಕೆ ಮತ್ತಷ್ಟು ಸೈನಿಕರ ನಿಯೋಜನೆ ಮಾಡದಿರಲು ಭಾರತ-ಚೀನಾ ಸೇನೆ ನಿರ್ಧಾರ


  5.ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಜಾರಾಗಿ ಕೇಳಿ ಬರುತ್ತಿರುವಾಗ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ವಸತಿ ಸಚಿವ ವಿ. ಸೋಮಣ್ಣ, 'ನಾಯಕತ್ವ ಬದಲಾವಣೆ ಎಂಬುದಿಲ್ಲ, ಬಿ.ಎಸ್. ಯಡಿಯೂರಪ್ಪ ಅವರೇ ಉಳಿದ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ' ಎಂದು ಮುಖ್ಯಮಂತ್ರಿ ಪರ ಬ್ಯಾಟ್ ಬೀಸಿದ್ದಾರೆ.


  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಮುಂದೆಯೂ ಯಡಿಯೂರಪ್ಪ ಅವರೇ ಸಿಎಂ: ಸಚಿವ ವಿ ಸೋಮಣ್ಣ


  6. ಕೊರೋನಾ ಕಾಲದಲ್ಲೂ ಸಹ ಆಡಳಿತ ಬಿಜೆಪಿ ಸರ್ಕಾರ ಕೊರೋನಾ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಿದೆ. ಮುಂಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಈ ಲೂಟಿ ಹಿಂದಿನ ಪ್ರಮುಖ ವ್ಯಕ್ತಿ ಎಂದು ಕಳೆದ ಹಲವು ತಿಂಗಳುಗಳಿಂದ ಆರೋಪಿಸುತ್ತಲೇ ಬಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಸಂಬಂಧ ಇಂದು ಟ್ವೀಟ್​ ಮೂಲಕ ಕಟು ಸಂದೇಶವೊಂದನ್ನು ರವಾನಿಸಿದ್ದಾರೆ.


  ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರದಲ್ಲಿ ಮೋದಿ ಪಾಲೆಷ್ಟು ಎಂಬುದನ್ನು ಅವರೇ ಸ್ಪಷ್ಟಪಡಿಸಲಿ; ಸಿದ್ದರಾಮಯ್ಯ


  7. ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿ ಹಾಗೂ ಕಾಯ್ದೆಗಳನ್ನ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಸೆ. 28ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಸದ್ಯ ಒಂದು ಸಂಘಟನೆಗಳು ಈ ಬಂದ್​ಗೆ ಬೆಂಬಲ ಸೂಚಿಸಿವೆ. ಅಖಿಲ ಭಾರತ ರೈತ ಸಂಘರ್ಷ ಸಮಿತಿ ಈ ಬಂದ್​ಗೆ ನಿರ್ಧಾರ ಮಾಡಿದೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.


  Karnataka Band - ಸೆ. 28ರಂದು ಕರ್ನಾಟಕ ಬಂದ್; ಸೆ. 25, ಪ್ರತಿಭಟನೆಗೆ ಸೀಮಿತ: ರೈತ ಸಂಘಟನೆಗಳ ನಿರ್ಧಾರ


  8.ವಿಧಾನಸೌಧದಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಸರ್ಕಾರ ಕೊರೋನಾ ಚಿಕಿತ್ಸೆಯಲ್ಲಿ ಯಾವ ರೀತಿಯ ಅವ್ಯವಹಾರ ನಡೆಸುತ್ತಿದೆ, ಯಾವೆಲ್ಲ ರೀತಿ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಂಸದೀಯ ಪದ ಬಳಸಿದ ಘಟನೆ ನಡೆಯಿತು. ಆ ಪದ ಬಳಕೆ ಮಾಡುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು.


  Ramesh Kumar: ವಿಧಾನಸಭೆಯಲ್ಲಿ ಅಸಭ್ಯ ಪದ ಬಳಸಿದ ರಮೇಶ್ ಕುಮಾರ್​ಗೆ ಬಿಜೆಪಿ ನಾಯಕರ ತರಾಟೆ


  9.ಮಾದಕ ವಸ್ತು ಪ್ರಕರಣಕ್ಕೆ ಸಬಂಧಿಸಿದಂತೆ ಈಗಾಗಲೇ ಸ್ಟಾರ್​ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್​ ಅವರಿಗೆ ನೋಟಿಸ್​ ನೀಡಿ, ವಿಚಾರಣೆ ನಡೆಸಿದ್ದಾರೆ ಸಿಸಿಬಿ ಪೊಲೀಸರು. ಈ ಪ್ರಕರಣದಲ್ಲಿ ಒಮ್ಮೆ ವಿಚಾರಣೆಗೆ ಹಾಜರಾಗಿದ್ದ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರಿಗೆ ಮತ್ತೆ ನೋಟಿಸ್​ ನೀಡಲಾಗಿದೆ. ಹೌದು, ನಟ ದಿಗಂತ್​ಗೆ ಎರಡನೇ ಬಾರಿಗೆ ಸಿಸಿಬಿ ನೋಟೀಸ್ ನೀಡಿದೆ.


  Diganth: ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ನಟ ದಿಗಂತ್​ಗೆ ಎರಡನೇ ಸಲ ನೋಟಿಸ್​..!


  10.ಇಂಡಿಯನ್ ಪ್ರೀಮಿಯರ್ ಲೀಗ್​ನ 5ನೇ ಪಂದ್ಯ ಇಂದು ಅಬುಧಾಬಿಯಲ್ಲಿ ನಡೆಯಲಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋತಿರುವ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.


  IPL 2020, KKR vs MI: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವವರು ಯಾರು? ಇಲ್ಲಿದೆ ಮಾಹಿತಿ


  Published by:G Hareeshkumar
  First published: