Evening Digest : ಉಪವಾಸ ನಿರಶನ ಕೂತ ರಾಜ್ಯಸಭೆ ಉಪಸಭಾಪತಿ, ಅಧಿವೇಶನದಲ್ಲಿ 10ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ನಿನ್ನೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲವಾಗಿ ಎಂಟು ಸಂಸದರ ಅಮಾನತುಗೊಂಡ ಬಳಿಕವೂ ದಿಲ್ಲಿ ರಾಜಕೀಯ ಹೈಡ್ರಾಮ ಮುಂದುವರಿದಿದೆ. ಅಮಾನತುಗೊಂಡ ಎಂಟು ಸಂಸದರು ಅಹೋರಾತ್ರಿ ಧರಣಿ ನಡೆಸಿದರು. ನಿನ್ನೆ ಇದೇ ಸಂಸದರ ಆಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಉಪವಾಸ ನಿರಶನಕ್ಕೆ ಕೂತಿದ್ದಾರೆ.

  2. ಎಂಟು ರಾಜ್ಯಸಭಾ ಸದಸ್ಯರ ಅಮಾನತು ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಬಹುತೇಕ ವಿಪಕ್ಷಗಳು ಒಟ್ಟುಗೂಡಿ ರಾಜ್ಯಸಭೆಯನ್ನೇ ಬಹಿಷ್ಕರಿಸಿದ್ದಾರೆ. ಸಂಸದರ ಮೇಲಿನ ಅಮಾನತು ಕ್ರಮವನ್ನು ವಾಪಸ್ ಪಡೆಯುವವರೆಗೂ ರಾಜ್ಯಸಭೆಯ ಕಲಾಪವನ್ನು ವಿಪಕ್ಷಗಳು ಬಹಿಷ್ಕರಿಸುತ್ತವೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್. ಅಮಾನತು ಹಿಂಪಡೆಯುವಿಕೆ ಸೇರಿ ವಿಪಕ್ಷಗಳು ಒಟ್ಟು 3 ಬೇಡಿಕೆಗಳನ್ನ ಮುಂದಿಟ್ಟಿವೆ.

  ಅಮಾನತುಗೊಂಡ ಸಂಸದರ ಪರ ನಿಂತ ವಿಪಕ್ಷಗಳು; ರಾಜ್ಯಸಭೆಗೆ ಬಹಿಷ್ಕಾರ, 3 ಬೇಡಿಕೆಗಳು

  3.ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಬಂಧನಕ್ಕೊಳಗಾಗಿರುವ ಸುಶಾಂತ್​ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸೋದರ ಶೋವಿಕ್ ಚಕ್ರವರ್ತಿಯ ನ್ಯಾಯಾಂಗ ಬಂಧನದ ಅವಧಿಯನ್ನು ಅ. 6ರವರೆಗೆ ವಿಸ್ತರಿಸಲಾಗಿದೆ.

  Rhea Chakraborty: ಸುಶಾಂತ್ ಸಿಂಗ್ ಸಾವಿನ ಪ್ರಕರಣ; ಅ. 2ರವರೆಗೆ ರಿಯಾ ಚಕ್ರವರ್ತಿಗೆ ಜೈಲೇ ಗತಿ

  4.ಮಾರಕ ಕೊರೋನಾದಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ಕೆಲವೊಂದು ಬದಲಾವಣೆಗಳಾಗಿವೆ. ಶಾಲಾ-ಕಾಲೇಜುಗಳು ಮುಚ್ಚಿದ ಪರಿಣಾಮ ಆನ್​ಲೈನ್​ ತರಗತಿಗಳನ್ನು ನಡೆಸಲಾಗುತ್ತಿದೆ. ಈಗ ಮತ್ತೆ ಶಾಲಾ-ಕಾಲೇಜುಗಳನ್ನು ತೆರೆಯಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಹೀಗಾಗಿ ಕೆಲವೊಂದು ಬದಲಾವಣೆಗಳನ್ನು ತರಲು ಶಿಕ್ಷಣ ಸಚಿವಾಲಯವು ಮುಂದಾಗಿದೆ.

  ಯುಜಿ, ಪಿಜಿ ಮೊದಲ ವರ್ಷದ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ; ಗಮನಿಸಬೇಕಾದ ಅಂಶಗಳು ಇಲ್ಲಿವೆ

  5. ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಇಂದು ಸರ್ಕಾರ ಲೋಕಾಯುಕ್ತ ಮಸೂದೆ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ಮಂಡನೆ ಮಾಡಿದೆ. 2015ನೇ ಸಾಲಿನ ನಗರಪಾಲಿಕೆ ವಿಧೇಯಕವನ್ನು ಸರ್ಕಾರ ಈ ಸಂದರ್ಭದಲ್ಲಿ ಹಿಂಪಡೆಯಿತು. 2020ರ ಸಾಲಿನ ಬಿಬಿಎಂಪಿ ತಿದ್ದುಪಡಿ ವಿಧೇಯಕದ ಪರಿಶೀಲನಾ ವರದಿಯ ಮಂಡನೆ ಆಯಿತು.

  ವಿಧಾನಮಂಡಲ ಅಧಿವೇಶನದ ಎರಡನೇ ದಿನ 10ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ

  6.ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನಾಗರಿಕರ ಸಮಸ್ಯೆ ಆಲಿಸಿ ಪರಿಹರಿಸಲು ವಾರ್ಡ್ ಗೆ ಒಬ್ಬರಂತೆ 198 ನೋಡಲ್ ಅಧಿಕಾರಿಗಳನ್ನು ನೇಮಿಸಿ ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ. ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತು ಸಾರ್ವಜನಿಕರ ನಡುವೆ ಸಮನ್ವಯತೆ ಸಾಧಿಸುವುದಕ್ಕೆ ಕಷ್ಟಕರವಾಗಿರುವುದರಿಂದ ಪ್ರತಿ ವಾರ್ಡ್‌ಗೆ ಒಬ್ಬ ಹಿರಿಯ ಅಧಿಕಾರಿನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

  ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ ಬಿಬಿಎಂಪಿ ಆಯುಕ್ತರು

  7.ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ಇಂದು ವಿಧಾನ ಪರಿಷತ್ ನಲ್ಲಿ ನಡೆಯಿತು.

  Ayanur Manjunath: ಅತಿಥಿ ಉಪನ್ಯಾಸಕರಿಗೆ ವೇತನ ವಿಳಂಬ; ಸರ್ಕಾರದ ನಡೆ ಖಂಡಿಸಿ ಆಯನೂರು ಮಂಜುನಾಥ್​ ಧರಣಿ

  8. ದೇಶದಲ್ಲಿ ಕೊರೋನಾ ಬಹಳ ವ್ಯಾಪಕವಾಗಿ ಹರಡಿಹೋಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಇಂದು ವಿಧಾನಸಭೆಯಲ್ಲಿ ನೆರೆ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ನಿಲುವಳಿ ಮಂಡನೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ಫೆಬ್ರುವರಿ ತಿಂಗಳಲ್ಲೇ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೋವಿಡ್-19 ರೋಗ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

  ಫೆಬ್ರವರಿಯಲ್ಲೇ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೊರೋನಾ ಇಷ್ಟು ಹರಡುತ್ತಿರಲಿಲ್ಲ: ಸಿದ್ದರಾಮಯ್ಯ

  9.ಸ್ಯಾಂಡಲ್​ವುಡ್ ಡ್ರಗ್ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬರುತ್ತಿವೆ. ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಬಂಧನಕ್ಕೊಳಗಾಗಿದ್ದಾರೆ. ಚಿತ್ರರಂಗದ ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಂತೋಷ್ ಸೇರಿದಂತೆ ಹಲವರ ವಿಚಾರಣೆ ನಡೆಸಿದೆ. ಇದರ ಜೊತೆಗೆ ಕಿರುತೆರೆ ನಟರಿಗೂ ಡ್ರಗ್ ಕೇಸ್​ನ ಬಿಸಿ ತಟ್ಟಿದೆ. ಖ್ಯಾತ ಧಾರಾವಾಹಿಗಳ ಪ್ರಮುಖ ನಟ-ನಟಿಯರನ್ನು ಇಂದು ವಿಚಾರಣೆ ನಡೆಸಲಾಗಿದೆ.

  Sandalwood Drug Case: ಕನ್ನಡ ಕಿರುತೆರೆಗೂ ಡ್ರಗ್ ನಂಟು?; ಪ್ರಸಿದ್ಧ ಧಾರಾವಾಹಿಗಳ ನಟ-ನಟಿಯರ ವಿಚಾರಣೆ

  10. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 3ನೇ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್​ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್​ ಅಬ್ಬರಿಸಿದರೆ ಬೌಲಿಂಗ್​ನಲ್ಲಿ ಚಹಾಲ್ ಸ್ಲಿನ್ ಮೋಡಿಯಿಂದ ಕೊಹ್ಲಿ ಪಡೆ 10 ರನ್​ಗಳ ಜಯದೊಂದಿಗೆ ಐಪಿಎಲ್ 2020 ರಲ್ಲಿ ಶುಭಾರಂಭ ಮಾಡಿದೆ

  Mitchell Marsh: ಮೊದಲ ಪಂದ್ಯವಾಡಿ ಟೂರ್ನಿಯಿಂದಲೇ ಹೊರಕ್ಕೆ: ಐಪಿಎಲ್ ಅಭಿಮಾನಿಗಳಿಗೆ ಆರಂಭದಲ್ಲೇ ಬೇಸರ
  Published by:G Hareeshkumar
  First published: