Evening Digest : ರಾಜ್ಯಸಭೆಯಲ್ಲಿ ದುರ್ವರ್ತನೆ ಕಾರಣಕ್ಕೆ 8 ಸಂಸದರ ಅಮಾನತು, ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

news18-kannada
Updated:September 21, 2020, 5:06 PM IST
Evening Digest : ರಾಜ್ಯಸಭೆಯಲ್ಲಿ ದುರ್ವರ್ತನೆ ಕಾರಣಕ್ಕೆ 8 ಸಂಸದರ ಅಮಾನತು, ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
ಸಾಂದರ್ಭಿಕ ಚಿತ್ರ
  • Share this:
1 . ಭಾರತದಲ್ಲಿ ಡಿಜಿಟಲ್ ಮಾಧ್ಯಮಗಳು ಪ್ರಸ್ತುತ ವಿಷಪೂರಿತವಾಗಿವೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುತ್ತಿವೆ. ಹೀಗಾಗಿ ಸರ್ಕಾರದ ಮೊದಲು ಈ ವೆಬ್ ಆಧಾರಿತ ಮಾಧ್ಯಮಗಳನ್ನು ನಿಯಂತ್ರಿಸಬೇಕು. ಅದೇ ರೀತಿ ಎಲೆಕ್ಟ್ರಾನಿಕ್ ಮಾಧ್ಯಮಗಳೂ ಸಹ ನಿಯಮ ಮೀರಿ ವರ್ತಿಸುತ್ತಿದ್ದು, ಇವುಗಳಿಗೂ ಸೂಕ್ತ ನಿಯಮಾವಳಿಗಳನ್ನು ಸಿದ್ದಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಸಮಾಜದಲ್ಲಿ ವಿಷಪೂರಿತ ದ್ವೇಷವನ್ನು ಹರಡುತ್ತಿರುವ ಡಿಜಿಟಲ್ ಮಾಧ್ಯಮಗಳಿಗೆ ಕಡಿವಾಣ ಹಾಕಿ; ಕೇಂದ್ರಕ್ಕೆ ಸುಪ್ರೀಂ ಸೂಚನೆ

2.ಪೂರ್ವ ಲಡಾಖ್ ಭಾಗದಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದಲ್ಲಿ ಕಳೆದ 3 ವಾರಗಳಲ್ಲಿ ಭಾರತೀಯ ಸೇನೆ ಆರು ಗುಡ್ಡಗಳನ್ನ ವಶಪಡಿಸಿಕೊಂಡಿದೆ. ಪಾಂಗಾಂಗ್ ಸರೋವರ ಬಳಿಯ ಫಿಂಗರ್ 4ನ ಬೆಟ್ಟಗಳ ಸಾಲಿನಲ್ಲಿ ಆಯಕಟ್ಟಿನ ಎತ್ತರ ಜಾಗದಲ್ಲಿ ಈ ಆರು ಗುಡ್ಡಗಳಿವೆ. ಮಗರ್, ಗುರುಂಗ್ , ರೇಚೆನ್ ಲಾ, ರೆಜಾಂಗ್ ಲಾ, ಮೋಕಿಪಾರಿ ಗುಡ್ಡಗಳು ಸೇರಿ ಒಟ್ಟು ಆರು ಪ್ರಮುಖ ಜಾಗಗಳನ್ನ ಆಗಸ್ಟ್ 29ರಿಂದೀಚೆ ಭಾರತದ ಸೈನಿಕರು ತಮ್ಮ ಸುಪರ್ದಿಯಲ್ಲಿರಿಸಿಕೊಂಡಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾ ಗಡಿಭಾಗದಲ್ಲಿ ಮೂರು ವಾರಗಳಲ್ಲಿ 6 ಪ್ರಮುಖ ಗುಡ್ಡಗಳು ಭಾರತದ ವಶಕ್ಕೆ

3.ಕೇಂದ್ರ ಸರ್ಕಾರ ತಂದಿರುವ ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಲಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಸೋಮವಾರ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಯಾವತ್ತೂ ರೈತರು ಹಾಗೂ ಬಡವರ ಪರವಾಗಿಲ್ಲ: ಮಲ್ಲಿಕಾರ್ಜುನ ಖರ್ಗೆ

4.ನಿನ್ನೆ ಭಾನುವಾರ ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳ ಮಂಡನೆ ವೇಳೆ ದುರ್ವರ್ತನೆ ತೋರಿದ್ದಾರೆಂದು ಕಾರಣ ನೀಡಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಎಂಟು ಸದಸ್ಯರನ್ನು ಅಮಾನತುಗೊಳಿಸಿದ್ದಾರೆ.ರಾಜ್ಯಸಭೆಯಲ್ಲಿ ದುರ್ವರ್ತನೆ ಕಾರಣಕ್ಕೆ 8 ಸಂಸದರ ಅಮಾನತು

5.ವೇಗದ ಪ್ರಯಾಣ ಬಯಸುವ ಜನರಿಗಾಗಿ ನಿರ್ದಿಷ್ಟ ಮಾರ್ಗಗಳಲ್ಲಿ ಕ್ಲೋನ್ ಟ್ರೈನ್​ಗಳನ್ನ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಒಟ್ಟು 40 ಕ್ಲೋನ್ ಟ್ರೈನ್​ಗಳು ದೇಶದ ವಿವಿಧ ಮಾರ್ಗಳಲ್ಲಿ ಸಂಚರಿಸಲಿವೆ. ಈ ಕ್ಲೋನ್​ಗಳು ವೇಗವಾಗಿ ಸಂಚರಿಸಲಿವೆ. ಕಡಿಮೆ ನಿಲುಗಡೆ ಹಾಗೂ ವೇಗದ ಸಂಚಾರದಿಂದ, ಮಾಮೂಲಿಯ ರೈಲುಗಳಿಗಿಂತ 3-4 ಗಂಟೆ ಮುಂಚೆ ಪ್ರಯಾಣ ಮುಗಿಸುತ್ತವೆ. ರೈಲು ಪ್ರಯಾಣಿಕರ ದಟ್ಟನೆ ಹೆಚ್ಚಾಗಿರುವ ಮಾರ್ಗಗಳನ್ನ ಆರಿಸಿಕೊಂಡು ಈ ಪ್ರಯೋಗ ಮಾಡಲಾಗುತ್ತಿದೆ.

ಕರ್ನಾಟಕ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ವೇಗದ 40 ಕ್ಲೋನ್ ರೈಲುಗಳ ಸಂಚಾರಕ್ಕೆ ಚಾಲನೆ

6.ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೂರು ದಿನಕ್ಕೆ ಅಧಿವೇಶನ ಮುಗಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷಗಳು ಒಪ್ಪಲಿಲ್ಲ. ವಿರೋಧ ಪಕ್ಷಗಳ ಬಿಗಿಪಟ್ಟಿಗೆ ಬಗ್ಗಿದ ಸರ್ಕಾರ ಆರು ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಅಂದರೆ ಶನಿವಾರದವರೆಗೂ ವಿಧಾನಮಂಡಲ ಅಧಿವೇಶನ ನಡೆಯಲಿದೆ.

ಮೂರು ದಿನಕ್ಕೆ ಅಧಿವೇಶನ ಮುಗಿಸುವ ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷಗಳ ನಕಾರ; 6 ದಿನ ಅಧಿವೇಶನ

7. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಗೂ ಸರ್ಕಾರದ ಕೆಲ ನೀತಿಗಳನ್ನ ವಿರೋಧಿಸಿ ಇಂದು ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Karnataka Farmers Protest: ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿಂದು ರೈತರ ಪ್ರತಿಭಟನೆ

8.ಕೊರೋನಾ ಸಂಕಷ್ಟದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ ಪ್ರಾರಂಭವಾಗಿದೆ. ಅನುದಾನ ಹಂಚಿಕೆ, ಡಿಜೆ ಹಳ್ಳಿ ಗಲಭೆ, ಕೊರೋನಾ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಆಡಳಿತ ಪಕ್ಷದ ಮೇಲಿನ ಪ್ರವಾಹರಕ್ಕೆ ವಿಪಕ್ಷ ಸಜ್ಜಾಗಿದೆ. ಈ ನಡುವೆ ವಿಧಾನಸೌಧದ ಕ್ಯಾಂಟೀನ್​ನಲ್ಲಿ ಆಡಳಿತ ಪಕ್ಷದ ಶಾಸಕರು-ಸಚಿವರೇ ವಿರೋಧ ಪಕ್ಷದ ನಾಯಕರ ನಡುವೆ ಜಟಾಪಟಿ ನಡೆಸಿರುವ ಘಟನೆ ನಡೆದಿದೆ.

ವಿಧಾನಸೌಧದಲ್ಲಿ ಬಿಜೆಪಿ ಸಚಿವರು-ಶಾಸಕರ ಜಟಾಪಟಿ: ಅವರ ಪದ ಬಳಕೆ ಬೇಜಾರಾಯ್ತು ಎಂದ ನಾರಾಯಣಗೌಡ

9.ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ  ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗುಲ್ರಾನಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್​​ 24ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳ ಕಾಲ ನಟಿಯರಿಬ್ಬರು ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.

ಸೆ.24ರವರೆಗೆ ನಟಿ ಸಂಜನಾ, ರಾಗಿಣಿಗೆ ಜೈಲೇ ಗತಿ; ತನಿಖೆಗೆ ತುಪ್ಪದ ಬೆಡಗಿಯಿಂದ ಸಿಗುತ್ತಿಲ್ಲ ಸಹಕಾರ

10.ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಬಹುನಿರೀಕ್ಷಿತ ಪಂದ್ಯ ಇಂದು ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೇವಿಡ್ ವಾರ್ನರ್ ನಾಯಕನಾಗಿರುವ ಸನ್​ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್ 2020 ಮೂರನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ.

SRH vs RCB: ಚೊಚ್ಚಲ ಪಂದ್ಯದಲ್ಲೇ ಒಂದಲ್ಲಾ ಎರಡಲ್ಲಾ ಮೂರು ದಾಖಲೆ ಬರೆಯಲು ಕಿಂಗ್ ಕೊಹ್ಲಿ ರೆಡಿ
Published by: G Hareeshkumar
First published: September 21, 2020, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading