• Home
 • »
 • News
 • »
 • state
 • »
 • Evening Digest : ಪ್ರಣಬ್ ಮುಖರ್ಜಿ ಅಂತ್ಯಸಂಸ್ಕಾರ ನೆರವೇರಿಸಿದ ಮಗ ಅಭಿಜಿತ್, ಇಂದಿನಿಂದ ಬಾರ್‌ ಅಂಡ್ ರೆಸ್ಟೋರೆಂಟ್‌ ಓಪನ್ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ಪ್ರಣಬ್ ಮುಖರ್ಜಿ ಅಂತ್ಯಸಂಸ್ಕಾರ ನೆರವೇರಿಸಿದ ಮಗ ಅಭಿಜಿತ್, ಇಂದಿನಿಂದ ಬಾರ್‌ ಅಂಡ್ ರೆಸ್ಟೋರೆಂಟ್‌ ಓಪನ್ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ನಿನ್ನೆ ಸಂಜೆ ಮೃತಪಟ್ಟಿದ್ದ ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅಭಿಜಿತ್ ಮುಖರ್ಜಿ ತಮ್ಮ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದರು. ಈ ವೇಳೆ ಸರ್ಕಾರಿ ಮತ್ತು ಮಿಲಿಟರಿ ಗೌರವಗಳನ್ನ ಅರ್ಪಿಸಲಾಯಿತು.


  Pranab Mukherjee Funeral - ಪ್ರಣಬ್ ಮುಖರ್ಜಿ ಅಂತ್ಯಸಂಸ್ಕಾರ ನೆರವೇರಿಸಿದ ಮಗ ಅಭಿಜಿತ್


  2.ಟೆಲಿಕಾಂ ಸಂಶ್ಥೆಗಳು ಕಟ್ಟಬೇಕಿರುವ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ತೀರ್ಪು ನೀಡಿದೆ. ಬಾಕಿ ಇರುವ ಎಜಿಆರ್​ಅನ್ನು 10 ವರ್ಷದ ಒಳಗೆ ಕಟ್ಟುವಂತೆ ಸುಪ್ರೀಂಕೋರ್ಟ್ ಟೆಲಿಕಾಂ ಸಂಸ್ಥೆಗಳಿಗೆ​ ಸೂಚಿಸಿದೆ. ಇದರಿಂದ ಟೆಲಿಕಾಂ ಸಂಸ್ಥೆಗಳು ನಿಟ್ಟುಸಿರು ಬಿಟ್ಟಿವೆ.


  1.6 ಲಕ್ಷ ಕೋಟಿ ಬಾಕಿ ಹಣ ಪಾವತಿಸಲು ಟೆಲಿಕಾಂ ಕಂಪನಿಗಳಿಗೆ 10 ವರ್ಷ ಕಾಲಾವಕಾಶ ಕೊಟ್ಟ ಸುಪ್ರೀಂ


  3.ಕೊರೋನಾ ವೈರಸ್ ಹೆಚ್ಚುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಜಂಟೀ ಪ್ರವೇಶ ಪರೀಕ್ಷೆಯನ್ನು (ಜೆಇಇ) ನಡೆಸುತ್ತಿದೆ. ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳು ಹಾಗೂ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪರೀಕ್ಷೆ ನಡೆಯಬಾರದು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ಪರೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ.


  JEE Main Exam 2020: ಜೆಇಇ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ; ಬಾಂಬೆ ಹೈಕೋರ್ಟ್​


  4.ಕಾಂಗ್ರೆಸ್ ಪಕ್ಷ ಈಗ ಆರ್​​ಎಸ್​ಎಸ್​ ಮಾದರಿಯಲ್ಲಿ ಪಕ್ಷದ ಸಂಘಟನೆ ಮಾಡಲು ಮುಂದಾಗಿದೆ. ಅದಕ್ಕಾಗಿ ಜವಾಹರ್ ಬಾಲ ಮಂಚ್ ಎಂಬ ಹೊಸ ವಿಭಾಗವನ್ನೇ ಆರಂಭಿಸಿದೆ. 10ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ರಾಷ್ಟ್ರಾಭಿಮಾನವನ್ನು ಅರಿವು ಮೂಡಿಸುವುದು, ದೇಶದ ಐಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಜವಾಹರ್ ಬಾಲ ಮಂಚ್ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.


  ಆರ್​ಎಸ್​ಎಸ್​ ಮಾದರಿಯಲ್ಲೇ ಪಕ್ಷ ಸಂಘಟನೆ ಕಟ್ಟಲು ಮುಂದಾದ ಕಾಂಗ್ರೆಸ್; ಜವಾಹರ್ ಬಾಲ ಮಂಚ್ ಚಟುವಟಿಕೆ ಆರಂಭ


  5.ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್​ಎಸ್​ಎ) ಅಡಿ ಬಂಧಿತರಾಗಿದ್ದ ಡಾ. ಕಫೀಲ್ ಖಾನ್ ಅವರಿಗೆ ಆರೇಳು ತಿಂಗಳ ನಂತರ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಎನ್​ಎಸ್​ಎ ಪ್ರಕರಣವನ್ನು ಕೈಬಿಡುವಂತೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದ್ದಾರೆ. ಹಾಗೆಯೇ, ಅವರ ಕಸ್ಟಡಿಯಲ್ಲಿ ಇಟ್ಟಿರುವುದು ಅಕ್ರಮ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ವೈದ್ಯರೂ ಆಗಿರುವ ಡಾ. ಕಫೀಲ್ ಖಾನ್ ಅವರು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.


  ಸಿಎಎ ವಿರೋಧಿ ಹೋರಾಟಗಾರ ಡಾ. ಕಫೀಲ್ ಖಾನ್​ಗೆ ಬಿಡುಗಡೆ ಭಾಗ್ಯ; ಎನ್ಎಸ್ಎ ಬಂಧದಿಂದ ಮುಕ್ತಿ


  6.ಇಂದಿನಿಂದ ದೇಶದಾದ್ಯಂತ ಅನ್‌ಲಾಕ್‌-04ರ ಪ್ರಕ್ರಿಯೆ ಆರಂಭವಾಗಿದೆ. ಅನ್‌ಲಾಕ್ ಮಾರ್ಗಸೂಚಿಯ ಅನ್ವಯ ಇಂದು ಆರು ತಿಂಗಳ ಬಳಿಕ ರಾಜ್ಯಾದ್ಯಂತ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಓಪನ್‌ ಆಗಿವೆ. ಹೀಗಾಗಿ ನಿತ್ಯ 80 ಕೋಟಿಯ ಆದಾಯದ ನಿರೀಕ್ಷೆ ಇದೆ. ಅಲ್ಲದೆ, ಶೇ.50ರಷ್ಟು ಹೆಚ್ಚುವರಿ ಆದಾಯದ ಗುರಿ ಹೊಂದಲಾಗಿದೆ ಎಂದು ಅಬಕಾರಿ ಸಚಿವ ಹೆಚ್‌. ನಾಗೇಶ್‌ ತಿಳಿಸಿದ್ದಾರೆ.


  ಇಂದಿನಿಂದ ಬಾರ್‌ ಅಂಡ್ ರೆಸ್ಟೋರೆಂಟ್‌ ಓಪನ್ ಶೇ.50ರಷ್ಟು ಹೆಚ್ಚುವರಿ ಆದಾಯ ನಿರೀಕ್ಷೆ; ಹೆಚ್‌. ನಾಗೇಶ್


  7.ಒತ್ತುವರಿಯಾಗಿದ್ದ ಸರ್ಕಾರಿ ಜಮೀನೊಂದರಲ್ಲಿ ಬೆಳೆದಿದ್ದ ತೆಂಗಿನಸಸಿ ತೆರವು ವಿಚಾರವಾಗಿ ಕಳೆದ ಕೆಲ ದಿನಗಳಿಂದ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗಿದ್ದ ತುರುವೇಕೆರೆ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ.. ಬಿಜೆಪಿ ಶಾಸಕ ಹಾಗೂ ಮಾಜಿ ಜೆಡಿಎಸ್ ಶಾಸಕ ನಡುವೆ ಹೊತ್ತಿಕೊಂಡಿದ್ದ ಬೆಂಕಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೇ ತುರುವೇಕೆಗೆ ಅಗಮಿಸಿ, ಮನವಿ ನೀಡೋ ಮೂಲಕ ಇತಿಶ್ರೀ ಹಾಡಿದ್ದಾರೆ.


  ಹೆಚ್​ಡಿ ಕುಮಾರಸ್ವಾಮಿ ಮಧ್ಯಪ್ರವೇಶ ಬಳಿಕ ತುರುವೇಕೆರೆಯ ರಾಜಕೀಯ ಹೈಡ್ರಾಮಕ್ಕೆ ತೆರೆ


  8. ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿಚಾರ ಈಗ ಸುಖಾಂತ್ಯ ಕಂಡಿದೆ. ಆದರೆ, ಈ ಘಟನೆ ಮಾಸುವ ಮುನ್ನವೇ ಸಂಗೊಳ್ಳಿ ರಾಯಣ್ಣನ ಕಟೌಟ್ ಗೆ ಅವಮಾನ ಮಾಡುವ ಮೂಲಕ ದುಷ್ಕರ್ಮಿಗಳು ಸಾಮರಸ್ಯ ಕದಡಲು ಪ್ರಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ.


  ಸಂಗೊಳ್ಳಿ ರಾಯಣ್ಣನ ಕಟೌಟ್​​​ಗೆ ಅವಮಾನ ಮಾಡಿದ ದುಷ್ಕರ್ಮಿಗಳು : ಕಟೌಟ್​​ಗೆ ಕ್ಷೀರಾಭಿಷೇಕ ಮಾಡಿ ಗೌರವಿಸಿದ ಪಿಎಸ್ಐ


  9. ಖ್ಯಾತ ನಟ ಡಿ-ಬಾಸ್‌ ದರ್ಶನ್‌ ಕೆಲವೇ ದಿನಗಳ ಹಿಂದೆಯಷ್ಟೆ ದಾವಣಗೆರೆಗೆ ದೀಢೀರ್‌ ಭೇಟಿ ನೀಡುವ ಮೂಲಕ ಸುದ್ದಿಯಾಗಿದ್ದರು. ಅಲ್ಲಿ ಮಾಜಿ ಸಚಿವ ಎಸ್‌.ಎಸ್.‌ ಮಲ್ಲಿಕಾರ್ಜುನ್‌ ಅವರ ಮನೆಗೆ ಭೇಟಿ ನೀಡಿದ್ದಾಗ, ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.


  Darshan: ದರ್ಶನ್ ತೋಟಕ್ಕೆ ಎಂಟ್ರಿ ಕೊಟ್ಟ ದಾವಣಗೆರೆಯ ಹೊಸ ಅತಿಥಿಗಳು..!


  10. ಕೇನ್ ರಿಚರ್ಡ್ಸ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇದೇ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿಯಲು ಆರ್​ಸಿಬಿ ಆಟಗಾರ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ತಂಡದ ಪ್ರಮುಖ ವೇಗಿ ಕೇನ್ ರಿಚರ್ಡ್ಸನ್ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.


  IPL 2020: RCB ತಂಡಕ್ಕೆ ಹೊಸ ಆಟಗಾರನ ಎಂಟ್ರಿ..!

  Published by:G Hareeshkumar
  First published: