• Home
 • »
 • News
 • »
 • state
 • »
 • Evening Digest: ಏರ್​ ಇಂಡಿಯಾ ವಿಮಾನಕ್ಕೆ ದುಬೈನಲ್ಲಿ ನಿಷೇಧ, ಸೆ. 21ರಿಂದ ಶಾಲೆಗಳು ಆರಂಭ : ಟಾಪ್10 ಸುದ್ದಿಗಳು

Evening Digest: ಏರ್​ ಇಂಡಿಯಾ ವಿಮಾನಕ್ಕೆ ದುಬೈನಲ್ಲಿ ನಿಷೇಧ, ಸೆ. 21ರಿಂದ ಶಾಲೆಗಳು ಆರಂಭ : ಟಾಪ್10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಎನ್​ಡಿಎ ಮೈತ್ರಿ ಪಕ್ಷದ ಸಚಿವ ಹರ್ಸಿಮ್ರತ್​ ಕೌರ್ ತಮ್ಮ ಸಚಿವ ಸ್ಥಾನಕ್ಕೆ​ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಇದೊಂದು ರೈತ ವಿರೋಧಿ ಮಸೂದೆಯಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿ, ಪ್ರತಿಭಟನೆ ನಡೆಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಈ ಮಸೂದೆ ಕುರಿತು ಮೌನ ಮುರಿದಿರುವ ಪ್ರಧಾನಿ, ರೈತರ ಹಿತಕಾಯುವ ಈ ಮಸೂದೆಯ ವಿರುದ್ಧ ದೇಶದ ಜನರಿಗೆ ತಪ್ಪು ಮಾಹಿತಿ ಹರಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


  Farm bill: ಕೇಂದ್ರದ ಕೃಷಿ ಮಸೂದೆ ಕುರಿತು ತಪ್ಪು ಸಂದೇಶ; ವಿಪಕ್ಷದ​ ವಿರುದ್ಧ ಪ್ರಧಾನಿ ಕಿಡಿ


  2. ಜೈಪುರದಿಂದ ದುಬೈಗೆ ಕೊರೋನಾ ಸೋಂಕಿತರನ್ನು ವಿಮಾನದಲ್ಲಿ ಕರೆತಂದಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ಸಂಚಾರಕ್ಕೆ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ನಿಷೇಧ ಹೇರಿದೆ. ಹೀಗಾಗಿ, ಇಂದಿನಿಂದ ಅಕ್ಟೋಬರ್ 2ರವರೆಗೆ ಭಾರತದಿಂದ ದುಬೈಗೆ ಏರ್​ ಇಂಡಿಯಾ ವಿಮಾನಗಳು ಸಂಚರಿಸುವಂತಿಲ್ಲ.


  Air India: ಕೊರೋನಾ ರೋಗಿಯನ್ನು ಕರೆದೊಯ್ದ ಏರ್​ ಇಂಡಿಯಾ ವಿಮಾನಕ್ಕೆ ದುಬೈನಲ್ಲಿ ನಿಷೇಧ


  3.ಮಹಾರಾಷ್ಟ್ರದ ಮುಂಬೈನಲ್ಲಿ ಲಿಕ್ವಿಡ್ ನೈಟ್ರೋಜನ್ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡು ಕಟ್ಟಡದ ಒಂದು ಭಾಗ ನೆಲಕ್ಕುರುಳಿದೆ. ಮುಂಬೈನ ವೋರ್ಲಿ ಬಳಿ ಇರುವ ಮನೀಷ್ ಕಮರ್ಷಿಯಲ್ ಎಸ್ಟೇಟ್ ಬಿಲ್ಡಿಂಗ್​ನ ಮೇಲಿನ ಮಹಡಿ ಕುಸಿದುಬಿದ್ದಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.


  Mumbai: ಮುಂಬೈನ ಲ್ಯಾಬ್​ನಲ್ಲಿ ಗ್ಯಾಸ್​ ಟ್ಯಾಂಕ್ ಸ್ಫೋಟ; ಕಟ್ಟಡದ ಒಂದು ಭಾಗ ನೆಲಸಮ


  4.ಬಿಹಾರದ ಕಿಶನ್​ಗಂಜ್​ನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕಂಕೈ ನದಿಯ ಒಳಹರಿವು ಹೆಚ್ಚಾದ ಪರಿಣಾಮ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎನ್ನಲಾಗಿದೆ. ಸುಮಾರು 1.42 ಕೋಟಿ ಹಣ ಖರ್ಚು ಮಾಡಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಗೋಬರಿ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿತ್ತು. ಆದರೆ ಈ ಮಧ್ಯೆ ಕಂಕೈ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಕಟ್ಟಿದ್ದ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.


  Bihar Bridge Collapse: ಬಿಹಾರದಲ್ಲಿ ಉದ್ಘಾಟನೆಗೂ ಮುನ್ನವೇ ಕೊಚ್ಚಿ ಹೋದ ನೂತನ ಸೇತುವೆ


  5. ಕೇಂದ್ರ ಸರ್ಕಾರ ನಿನ್ನೆ ಲೋಕಸಭೆಯಲ್ಲಿ ಕೃಷಿ ಸುಧಾರಣೆಗೆ ಸಂಬಂಧಿಸಿದ 2 ಮಸೂದೆಗಳನ್ನ ಮಂಡಿಸಿ ಅನುಮೋದನೆ ಪಡೆದಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಪ್ರೋತ್ಸಾಹ ಸೌಲಭ್ಯ ಮಸೂದೆ 2020, ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ ಮಸೂದೆಗೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಸಮ್ಮತಿ ಸಿಕ್ಕಿತು.  ವಿಪಕ್ಷಗಳ ಸದಸ್ಯರು ಈ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಎನ್​ಡಿಎ ಮೈತ್ರಿಕೂಟದ ಅಂಗಪಕ್ಷ ಶಿರೋಮಣಿ ಅಕಾಲಿ ದಳ ಕೂಡ ವಿರೋಧ ವ್ಯಕ್ತಪಡಿಸಿದೆ.


  Agri Reforms - ಕೇಂದ್ರ ಸರ್ಕಾರದ ಕೃಷಿ ಸುಧಾರಣೆಯ ಮಸೂದೆಗಳು: ರೈತರ ಆತಂಕಕ್ಕೆ ಏನು ಕಾರಣ?


  6.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.  ಅದಕ್ಕೂ ಮೊದಲು ದೆಹಲಿಯ ಚಾಣಕ್ಯ ಪುರಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಮೋದಿ ಜೊತೆಗಿನ ಭೇಟಿ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.


  ಪಿಎಂ ಮೋದಿ ಜೊತೆ ಚರ್ಚಿಸುವ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಲು ಸಾಧ್ಯವಿಲ್ಲ; ಸಿಎಂ ಯಡಿಯೂರಪ್ಪ


  7.ಇದೇ ಸೆಪ್ಟೆಂಬರ್ 21ರಿಂದ ಕೇವಲ  ಶಾಲೆಗಳು ತೆರೆಯಲಿವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದರು.


  Schools Reopening: ಸೆ. 21ರಿಂದ ಕೇವಲ ಶಾಲೆಗಳು ತೆರೆಯಲಿವೆ, ಆದ್ರೆ ತರಗತಿ ಪ್ರಾರಂಭ ಇಲ್ಲ; ಸಚಿವ ಸುರೇಶ್​ ಕುಮಾರ್


  8.ಡ್ರಗ್ಸ್ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು  ಚಂದನವನದ ತಾರೆಯರ ತೀವ್ರ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದು, ಇವರ ಮಾಹಿತಿ ಮೇರೆಗೆ ಹಲವರ ವಿಚಾರಣೆ ನಡೆಸಿದ್ದಾರೆ. ನಿನ್ನೆಯಷ್ಟೇ ತಾರಾ ದಂಪತಿಗಳಾದ ದಿಂಗತ್​-ಐಂದ್ರಿತಾ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದರ ಬೆನ್ನಲ್ಲೇ  ಇಂದು ಮತ್ತೆ ಮೂವರಿಗೆ ಸಿಸಿಬಿ ನೋಟಿಸ್​ ನೀಡಿದೆ. ಖ್ಯಾತ ಟಿವಿ ನಿರೂಪಕ ಅಕುಲ್​ ಬಾಲಾಜಿ, ನಟ ಸಂತೋಷ್​ ​, ಮಾಜಿ ಕಾಂಗ್ರೆಸ್​ ಶಾಸಕ ಆರ್​ ವಿ ದೇವರಾಜ್​ ಮಗ ಯುವರಾಜ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ. ಈ ಮೂವರನ್ನು ನಾಳೆ ಬೆಳಗ್ಗೆ  ವಿಚಾರಣೆಗೆ ಹಾಜರಾಗಲು ತಿಳಿಸಿದೆ.


  Akul Balaji: ಡ್ರಗ್ಸ್​ ಪ್ರಕರಣ: ಖ್ಯಾತ ನಿರೂಪಕ ಅಕುಲ್​ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿ ನೋಟಿಸ್​


  9.ರಶ್ಮಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಿಂದ ಆದರೂ ಹೆಸರು ಮಾಡುತ್ತಿರುವುದು ಮಾತ್ರ ಟಾಲಿವುಡ್​ನಲ್ಲಿ. ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ, ಟಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ದಿನೇ ದಿನೇ ರಶ್ಮಿಕಾ ಅವರಿಗೆ ತೆಲುಗಿನಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. ಟಾಲಿವುಡ್​ನ ಸ್ಟಾರ್​ ನಟರಾದ ಮಹೇಶ್​ ಬಾಬು, ನಿತಿನ್​, ನಾನಿ, ನಾಗಾರ್ಜುನ ಸೇರಿದಂತೆ ಸಾಕಷ್ಟು ಮಂದಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಷ್ಟೇಅಲ್ಲ, ಅಲ್ಲು ಅರ್ಜುನ್​ ಜೊತೆ ಈಗ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


  Rashmika Mandanna: ಹೈದರಾಬಾದಿನಲ್ಲಿ ಮನೆ ಖರೀದಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ..!


  10.ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ಉಳಿದಿರುವುದು ಕೇವಲ ಒಂದು ದಿನ ಮಾತ್ರ. ಈ ಮಧ್ಯೆ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಥೀಮ್ ಸಾಂಗ್​ನ್ನು ಬಿಡುಗಡೆ ಮಾಡಿತ್ತು. ಆದರೆ ಹಾಡು ಕೇಳಿದ ಬಹುತೇಕ ಕನ್ನಡಿಗರು ಸಾಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.


  IPL 2020: ಥೀಮ್ ಸಾಂಗ್ ಬಗ್ಗೆ ಕನ್ನಡಾಭಿಮಾನಿಗಳ ಆಕ್ರೋಶ: ಮತ್ತೊಂದು ಹಾಡು ಬಿಡುಗಡೆ ಮಾಡಿದ RCB

  Published by:G Hareeshkumar
  First published: