• Home
 • »
 • News
 • »
 • state
 • »
 • Evening Digest: ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ, ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ ನಿಧನ

Evening Digest: ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ, ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ ನಿಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಸೆಪ್ಟೆಂಬರ್ 17, 2020ಕ್ಕೆ ಸರಿಯಾಗಿ 70 ವರ್ಷ. ಇಂದು ಅವರದ್ದು 71ನೇ ಜನ್ಮದಿನ. ಎರಡನೇ ಬಾರಿ ಪ್ರಧಾನಿ ಮಂತ್ರಿ ಆಗಿರುವ ಅವರು ಆ ಮುಂಚೆ ಸತತ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿ 2001ರಿಂದ 2014ರವರೆಗೆ ಆಡಳಿತ ಮಾಡಿದ ಅನುಭವ ಹೊಂದಿದ್ದರು. ಹಲವು ಟೀಕೆಗಳ ಮಧ್ಯೆಯೂ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವುದರಲ್ಲಿ ಮೀನಮೇಷ ಎಣಿಸದ ನರೇಂದ್ರ ಮೋದಿ ಈಗ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲೊಬ್ಬರಾಗಿ ಬೆಳೆದಿದ್ದಾರೆ.


  PM Modi Birthday - ನರೇಂದ್ರ ಮೋದಿಗೆ 70 ವರ್ಷ; ಇಲ್ಲಿದೆ ಅವರು ಬೆಳೆದುಬಂದ ಹಾದಿ


  2.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಿರುದ್ಧ ಇದೀಗ ಮತ್ತೆ ಲೈಂಗಿಕ ದೌರ್ಜನ್ಯದ ಅರೋಪ ಸದ್ದು ಮಾಡುತ್ತಿದೆ. ಎರಡು ದಶಕಗಳ ಹಿಂದೆ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಡೊನಾಲ್ಡ್ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಓರ್ವ ಮಾಡೆಲ್‌ ನೀಡಿರುವ ಸಂದರ್ಶನ ಇದೀಗ ಅಮೆರಿಕದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ.


  ಡೊನಾಲ್ಡ್‌ ಟ್ರಂಪ್ ವಿರುದ್ಧ ಮತ್ತೆ ಸದ್ದು ಮಾಡುತ್ತಿದೆ ಲೈಂಗಿಕ ದೌರ್ಜನ್ಯದ ಆರೋಪ; ಮಾಡೆಲ್ ಆಮಿ ಡೋರಿಸ್‌ರಿಂದ ದೂರು


  3.ಭಾರತ ಮತ್ತು ಚೀನಾ ಗಡಿಬಿಕ್ಕಟ್ಟಿನ ವಿಚಾರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಜಗತ್ತಿನ ಯಾವ ಶಕ್ತಿಯೂ ಭಾರತೀಯ ಸೈನಿಕರನ್ನು ಗಡಿಭಾಗದಲ್ಲಿ ಪಹರೆ ನಡೆಸದಂತೆ ತಡೆಯಲು ಅಸಾಧ್ಯ ಎಂದು ಹೇಳಿದರು. ಮಾಜಿ ರಕ್ಷಣಾ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ರಾಜನಾಥ್ ಸಿಂಗ್ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.


  ಜಗತ್ತಿನ ಯಾವ ಶಕ್ತಿಯೂ ನಮ್ಮ ಸೈನಿಕರ ಗಡಿಪಹರೆ ತಡೆಯಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್


  4. ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಹೈಕಮಾಂಡ್​​​​ ಜತೆ ಚರ್ಚಿಸಲು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದಿಢೀರ್ ದೆಹಲಿಗೆ ಆಗಮಿಸಿದ್ದಾರೆ. ಹಲವು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಲುವಾಗಿ ಯಡಿಯೂರಪ್ಪ ಮೂರು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.


  ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ - ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಹೈಕಮಾಂಡ್​​ ಜತೆ ಚರ್ಚೆ


  5.ಕೊರೋನಾ ಸೋಂಕಿಗೆ ಗುರಿಯಾಗಿದ್ದ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸೋಂಕಿಗೆ ಗುರಿಯಾಗಿದ್ದ ಅವರು, ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಅವರು ಸಾವನ್ನಪ್ಪಿದ್ದಾರೆ.


  Ashok Gasti: ಕೊರೋನಾ ಸೋಂಕಿನಿಂದ ರಾಜ್ಯಸಭಾ ಸದಸ್ಯ ಅಶೋಕ್​ ಗಸ್ತಿ ನಿಧನ


  6.ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಪ್ರಮುಖ ದ್ರಾವಿಡ ಭಾಷೆಯೂ ಹೌದು..! ಕನ್ನಡ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗಿರುವಾಗಲೇ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಹಿಂದಿ ಹೇರಿಗೆ ಮುಂದಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ "ಹಿಂದಿ ದಿವಸ್‌" ಆಚರಣೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಕನ್ನಡಿಗರು ವಿರೋಧಿಸಿದ್ದರು. ಹಾಗೆಯೇ "ಕೇಂದ್ರ ಸರ್ಕಾರ ಹಿಂದಿಯಂತೆ ಕನ್ನಡಕ್ಕೂ ಸ್ಥಾನಮಾನ ನೀಡಬೇಕು" ಎಂದು ಆಗ್ರಹಿಸಿದ್ದರು. ಆದರೀಗ, ಭಾರತ ಸರ್ಕಾರ ಈ ಕೋರಿಕೆಯನ್ನು ತಳ್ಳಿಹಾಕುವ ಮೂಲಕ ಮತ್ತೊಮ್ಮೆ ಕನ್ನಡಿಗರನ್ನು ಕೆಣಕಿದೆ. ಪರಿಣಾಮ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ.


  ’ಹಿಂದಿಯಂತೆಯೇ ಕನ್ನಡಕ್ಕೂ ಸ್ಥಾನಮಾನ ನೀಡಲೇಬೇಕು‘ - ಕೇಂದ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯ


  7. ಅಧಿವೇಶನಕ್ಕೂ  ಮುಂಚಿತವಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಅಪೇಕ್ಷೆಯಿದ್ದು, ಪಕ್ಷದ ನಾಯಕರ ತೀರ್ಮಾನದ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.


  ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಅಪೇಕ್ಷೆ; ಹೈಕಮಾಂಡ್ ನಿರ್ಧಾರ ಅಂತಿಮ ಎಂದ ಸಿಎಂ ಯಡಿಯೂರಪ್ಪ


  8.ಸಿಲಿಕಾನ್ ಸಿಟಿಯಲ್ಲಿ ಮಾದಕ ಜಾಲದ ಬೇಟೆಯನ್ನ ಪೊಲೀಸರು ಮತ್ತೆ ಮುಂದುವರೆಸಿದ್ದಾರೆ. ಸಿಸಿಬಿ ಮತ್ತು ಆಗ್ನೇಯ ವಿಭಾಗ ಪೊಲೀಸರು ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಗಾಂಜಾವನ್ನ ನಗರದಲ್ಲಿ ಜಪ್ತಿ ಮಾಡಿ 14 ಜನರನ್ನು ಬಂಧಿಸಿದ್ದಾರೆ.


  Drug Mafia: ಬೆಂಗಳೂರಿನಲ್ಲಿ ಒಂದು ಕೋಟಿ ಮೌಲ್ಯದ ಗಾಂಜಾ ವಶ; 14 ಮಂದಿಯ ಬಂಧನ


  9.ಅನುಷ್ಕಾ ಶೆಟ್ಟಿ ಬಹಳ ದಿನಗಳ ನಂತರ ನಟಿಸಿರುವ ಸಿನಿಮಾ ನಿಶ್ಯಬ್ಧಂ. ಈ ಸಿನಿಮಾವನ್ನು ಐದು ಭಾಷೆಗಳಲ್ಲಿ ನಿರ್ಮಿಸಿದ್ದು, ಇದನ್ನು ಚಿತ್ರಮಂದಿರದಲ್ಲೇ ರಿಲೀಸ್​ ಮಾಡುವುದಾಗಿ ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ಈ ಸಿನಿಮಾ ಒಟಿಟಿ ಮೂಲಕ ರಿಲೀಸ್​ಗೆ ಸಿದ್ಧವಾಗಿದೆ. ಭಾಗಮತಿ ಸಿನಿಮಾದ ನಂತರ ಅನುಷ್ಕಾ ಶೆಟ್ಟಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಕಾರಣ ಅವರ ಹೆಚ್ಚಿದ್ದ ಅವರ ದೇಹದ ತೂಕ. ಸೈಜ್​ ಝೀರೋ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು.


  Anushka Shetty: ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್​..!


  10. ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಸೀಸನ್ 13ರ ಮೊದಲ ಪಂದ್ಯವನ್ನಾಡಲು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಸಕಲ ಸಿದ್ದತೆಯಲ್ಲಿದೆ. ಇತ್ತ ಇತರೆ ತಂಡಗಳೂ ಕೂಡ ಜಯದೊಂದಿಗೆ ಟೂರ್ನಿಯನ್ನು ಆರಂಭಿಸಲು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಈ ಬಾರಿಯ ಐಪಿಎಲ್​ನ ಅಪಾಯಕಾರಿ ಬ್ಯಾಟ್ಸ್​ಮನ್ ಯಾರೆಂಬುದನ್ನು ತಿಳಿಸಿದ್ದಾರೆ. 


  IPL 2020: ರೋಹಿತ್ ಶರ್ಮಾ ಅತ್ಯಂತ ಅಪಾಯಕಾರಿ ಬ್ಯಾಟ್ಸ್​ಮನ್​: ಡೆಲ್ಲಿ ಕ್ಯಾಪಿಟಲ್ಸ್ ಕೋಚ್

  Published by:G Hareeshkumar
  First published: