1.ಜಪಾನ್‌ನ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಅಧಿಕೃತವಾಗಿ ಆಯ್ಕೆಯಾಗಿಯಾಗಿದ್ದಾರೆ. ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ಸಂಪುಟದ ಮುಖ್ಯ ಕಾರ್ಯದರ್ಶಿಯಾಗಿದ್ದ ಸುಗಾ ಅವರನ್ನು ಸಂಸತ್ತಿನ ಕೆಳಮನೆ ಚುನಾಯಿಸಿದೆ.
Yoshihide Suga: ಜಪಾನ್ ದೇಶದ ನೂತನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆ
2.ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ, ವೃತ್ತಿಯಲ್ಲಿ ವಕೀಲರಾಗಿದ್ದ ವಿಲಿಯಂ ಹೆನ್ರಿ ಗೇಟ್ಸ್ (ಬಿಲ್ ಗೇಟ್ಸ್ ಸೀನಿಯರ್) ಸೋಮವಾರ ಸಾವನ್ನಪ್ಪಿದ್ದಾರೆ. ಸೀಟಲ್ ಪ್ರದೇಶದ ಹೂಡ್ ಕೆನಲ್ನಲ್ಲಿರುವ ಬೀಚ್ ಹೌಸ್ನಲ್ಲಿ 94 ವರ್ಷದ ಅವರು ಕೊನೆಯುಸಿರೆಳೆದಿದ್ದಾರೆ. ಅಲ್ಜೀಮರ್ ರೋಗದಿಂದ ಬಳಲುತ್ತಿದ್ದ ಸೀನಿಯರ್ ಬಿಲ್ ಗೇಟ್ಸ್ ಸಾವಿನ ಸುದ್ದಿಯನ್ನು ಅವರ ಕುಟುಂಬಸ್ಥರು ನಿನ್ನೆ ಘೋಷಿಸಿದ್ದಾರೆ.
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ತಂದೆ ನಿಧನ
3. ಕೊರೋನಾ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ಅಂತರ ರಾಜ್ಯ ಓಡಾಡ ಹಾಗೂ ಪ್ರವಾಸಕ್ಕೂ ಸಹ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಹ ಹಂತಹಂತವಾಗಿ ರೈಲು ಸಂಖ್ಯೆಯನ್ನು ಅಧಿಕಗೊಳಿಸುತ್ತಿದ್ದು, ಪ್ರಯಾಣದ ಬೇಡಿಕೆ ಅಧಿಕವಾಗಿರುವ ಕಾರಣ ಸೆಪ್ಟೆಂಬರ್ 21 ರಿಂದ 20 ಜೋಡಿ ರೈಲುಗಳನ್ನು (40 ರೈಲುಗಳು) ನಿರ್ದಿಷ್ಟ ಮಾರ್ಗಗಳಲ್ಲಿ ಓಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
4.ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತ ಹಾಗೂ ಡ್ರಗ್ಸ್ ಪ್ರಕರಣ ಕುರಿತು ಸಾಕಷ್ಟು ವಾದ- ವಿವಾದಗಳು ಕೇಳಿ ಬರುತ್ತಿವೆ. ಅದರಲ್ಲಿಯೂ ನಟಿ ಕಂಗನಾ ರನೌತ್ ಬಾಲಿವುಡ್ ನಟ- ನಟಿಯರ ಮೇಲೆ ನೇರ ಆರೋಪ ಮಾಡುತ್ತಿರುವುದು ಹಿರಿಯ ನಟರಲ್ಲಿ ಸಾಕಷ್ಟು ಅಸಮಾಧಾನ ಮೂಡಿಸಿದೆ.
Hema Malini: ಬಾಲಿವುಡ್ ಬಗ್ಗೆ ಟೀಕಿಸಿದರೆ ಸಹಿಸಲು ಅಸಾಧ್ಯ; ಪರೋಕ್ಷವಾಗಿ ಕಂಗನಾ ನಡೆ ಖಂಡಿಸಿದ ಹೇಮಾ ಮಾಲಿನಿ
5.ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಳೆ ಹೆಚ್ಚಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡದ ಹಲವೆಡೆ ಮಳೆ ಅಧಿಕವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಸೆಪ್ಟೆಂಬರ್ 19ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Karnataka Weather: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆ ಸಾಧ್ಯತೆ
6.ವಿಡಿಯೋ ಕಾನ್ಫೆರೆನ್ಸ್ ಮೂಲಕ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಭಾರತ ಸರ್ಕಾರದ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಹಾಜರಿಯಲ್ಲಿ ಭಾರತೀಯ ರೈಲ್ವೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.) ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ್ದು, ಇದರಡಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣ (ಹಾಲ್ಟ್)ದ ನಿರ್ಮಾಣಕ್ಕಾಗಿ ನವೀನ ರೀತಿಯ ಹಣಕಾಸು ವ್ಯವಸ್ಥೆ ಜೊತೆಗೆ ಅನನ್ಯ ಪಾಲುದಾರಿಕೆ ಮಾರ್ಗದಲ್ಲಿ ಜಂಟಿ ಪ್ರಯತ್ನ ಕೈಗೊಳ್ಳಲಾಗಿದೆ.
ಕೆಂಪೇಗೌಡ ಏರ್ಪೋರ್ಟ್- ರೈಲ್ವೆ ಇಲಾಖೆ ಮಹತ್ವದ ಒಪ್ಪಂದ; ವಿಮಾನ ನಿಲ್ದಾಣಕ್ಕೆ ಬರಲಿದೆ ರೈಲು
7. ಇಷ್ಟು ದಿನಗಳ ಕಾಲ ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿ ಬರಹಗಳನ್ನು ಬರೆಯುವ ಮೂಲಕ ಪರೋಕ್ಷವಾಗಿ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆಗೆ ಮುಂದಾಗುತ್ತಿದ್ದ ಕೇಂದ್ರ ಸರ್ಕಾರ, ಇದೀಗ ನೂತನ ಶಿಕ್ಷಣ ನೀತಿಯ ಮೂಲಕ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿ, ಆ ಮೂಲಕ ಶಾಲೆಗಳಲ್ಲಿ ಹಿಂದಿ ಓದನ್ನು ಖಡ್ಡಾಯಗೊಳಿಸಿ ಪ್ರತ್ಯಕ್ಷವಾಗಿಯೇ ಹಿಂದಿ ಏತರರ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂಬುದು ಕನ್ನಡ ಪರ ಹೋರಾಟಗಾರರ ಆರೋಪ. ಹೀಗಾಗಿ "ಹಿಂದಿ ದಿವಸ್" ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಕನ್ನಡಿಗರು ವಿರೋಧಿಸಿದ್ದರು.
ಹಿಂದಿಯಂತೆ ಕನ್ನಡಕ್ಕೆ ಸ್ಥಾನಮಾನ ನೀಡಲಾಗದು ಎಂದ ಕೇಂದ್ರ; ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ
8.ಕೊರೋನಾ ಮಹಾಮಾರಿ ಅಟ್ಟಹಾಸ ಇಡೀ ಪ್ರಪಂಚ ದೇಶ ರಾಜ್ಯ ಸೇರಿದಂತೆ ಎಲ್ಲಾ ಕಡೆ ಹರಡುತ್ತಿದೆ. ಜನ ಸಾಮಾನ್ಯರ ಜೊತೆಗೆ ರಾಜಕಾರಣಿಗಳನ್ನು ಕೊರೋನಾ ಬಿಡುತ್ತಿಲ್ಲ. ಅದೇ ರೀತಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕೊರೋನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಡವಾಗಿದೆ.
Basavaraj Bommai : ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕೊರೋನಾ ಸೋಂಕು ದೃಢ
9.ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡನೇ ಬಾರಿಯೂ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಇಂದು ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಕೋರ್ಟ್ ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ.
Ragini Dwivedi: ಸ್ಯಾಂಡಲ್ವುಡ್ ಡ್ರಗ್ ಕೇಸ್; ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸೆ. 19ಕ್ಕೆ ಮುಂದೂಡಿಕೆ
10. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವುದಾಗಿ ಎಂದು ಪಂಜಾಬ್ ಸರ್ಕಾರ ತಿಳಿಸಿದೆ. ಆಗಸ್ಟ್ 19 ರಂದು ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ಥರಿಯಾಲ್ ಗ್ರಾಮದಲ್ಲಿ ರೈನಾ ಅವರ ಕುಟುಂಬಸ್ಥರ ಮೇಲೆ ದರೋಡೆಕೋರರ ಗುಂಪು ದಾಳಿ ಮಾಡಿತ್ತು. ಈ ವೇಳೆ ಚಿಕ್ಕಪ್ಪ ಹಾಗೂ ಸಹೋದರ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ