Evening Digest: ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ, ದಾಳಿ ವೇಳೆ ಆದಿತ್ಯ ಆಳ್ವ ಮನೆಯಲ್ಲಿ ಗಾಂಜಾ ಪತ್ತೆ:ಟಾಪ್10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಭೂಮಿಗೆ ಅತ್ಯಂತ ಸಮೀಪದ ಗ್ರಹವೆನಿಸಿರುವ ಶುಕ್ರನಲ್ಲಿ ಜೀವ ಸಾಧ್ಯತೆ ಇರಬಹುದು ಎಂಬ ಸುಳಿವು ಸಿಕ್ಕಿದೆ. ಜೀವಿಸಲು ಸಾಧ್ಯವೇ ಇಲ್ಲವೆನ್ನುವಂಥ ವಾತಾವರಣ ಇರುವ ಶುಕ್ರ ಗ್ರಹದಲ್ಲೂ ಜೀವ ಜಗತ್ತು ನಿರ್ಮಾಣಗೊಂಡಿರಬಹುದು ಎಂಬ ಆಶಯದಲ್ಲಿ ವಿಜ್ಞಾನಿಗಳಿದ್ದಾರೆ. ಶುಕ್ರ (venus) ಗ್ರಹದಲ್ಲಿ ಯಾವುದೇ ಜೀವ ಪತ್ತೆಯಾಗಿಲ್ಲ. ಬದಲಾಗಿ ಜೀವಿಗಳಿಂದ ಸೃಷ್ಟಿಯಾಗಿರುವ ಅನಿಲ ಅಸ್ತಿತ್ವದಲ್ಲಿರುವುದು ಬೆಳಕಿಗೆ ಬಂದಿದೆ.

  Alien Life on Venus - ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ; ವಿಜ್ಞಾನಿಗಳಲ್ಲಿ ಗರಿಗೆದರಿದ ಕುತೂಹಲ

  2. ನ್ಯಾಯಾಂಗ ನಿಂದನೆ ಪ್ರಕರಣದ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಪ್ರಶಾಂತ್ ಭೂಷಣ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. 2014ಕ್ಕೆ ಮುಂಚೆ ಅಣ್ಣಾ ಹಜಾರೆ ನೇತೃತ್ವದಲ್ಲಿ ದೇಶವ್ಯಾಪಿ ನಡೆದಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿಂದಿನ ಶಕ್ತಿ ಆರೆಸ್ಸೆಸ್ ಎಂದು ಅವರು ಹೇಳಿದ್ದಾರೆ. ಯುಪಿಎ ಸರ್ಕಾರವನ್ನು ಬೀಳಿಸಲು ಭ್ರಷ್ಟಾಚಾರ ವಿರೋಧಿ ಆಂದೋಲನ ರೂಪಿಸಿದ್ದ ಇಂಡಿಯಾ ಎಗೇಂಸ್ಟ್ ಕರಪ್ಷನ್ (ಐಎಸಿ) ಅನ್ನು ಹುಟ್ಟು ಹಾಕಿದ್ದೇ ಬಿಜೆಪಿ ಮತ್ತು ಆರೆಸ್ಸೆಸ್ ಎಂದು ಭೂಷಣ್ ಹೇಳಿದ್ಧಾರೆ.

  ಐಎಸಿ ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದ ಪ್ರಶಾಂತ್ ಭೂಷಣ್; ಐಎಸಿ, ಎಎಪಿಯ ಬಣ್ಣ ಬಯಲಾಯಿತೆಂದ ರಾಹುಲ್

  3. ಭಾರತದ ಉತ್ತರ ಭಾಗದ ಎರಡೂ ಕಡೆಯ ಗಡಿಭಾಗದಲ್ಲಿ ನೆರೆ ದೇಶಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಎಲ್​ಒಸಿಯಲ್ಲಿ ಪಾಕಿಸ್ತಾನ ಪದೇಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಕಳೆದ 17 ವರ್ಷಗಳಲ್ಲೇ ಇಲ್ಲಿ ಪಾಕಿಸ್ತಾನ ಈಗ ಅತಿಹೆಚ್ಚು ಕಿತಾಪತಿ ಮಾಡುತ್ತಿದೆ. ಇನ್ನೊಂದೆಡೆ ಚೀನಾ ದೇಶ ಲಡಾಖ್​ನ ಎಲ್​ಎಸಿಯಲ್ಲಿ ಭಾರತದ ಭೂಭಾಗವನ್ನೇ ಅತಿಕ್ರಮಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

  ಅತ್ತ ಪಾಕಿಸ್ತಾನ, ಇತ್ತ ಚೀನಾ; ದ್ವಿಮುಖಿ ಯುದ್ಧದ ಸಾಧ್ಯತೆಯಲ್ಲಿ ಭಾರತ

  4. ಪಾಕಿಸ್ತಾನದ ವಾಯುಪಡೆಗೆ ಸೇರಿದ ವಿಮಾನ ಇಂದು ಮುಂಜಾನೆ ಅಪಘಾತಕ್ಕೀಡಾಗಿದೆ. ಪಿಂಡಿಘೇಬ್ ಬಳಿ ಪಾಕಿಸ್ತಾನದ ತರಬೇತಿ ವಿಮಾನ ಪತನಗೊಂಡಿದ್ದು, ಈ ಅವಘಡ ಸಂಭವಿಸುತ್ತಿದ್ದಂತೆ ಪೈಲಟ್ ವಿಮಾನದಿಂದ ಕೆಳಗೆ ಹಾರಿ ಬಚಾವಾಗಿದ್ದಾರೆ. ಪ್ರತಿನಿತ್ಯದಂತೆ ಬೆಳಗ್ಗೆ ತರಬೇತಿ ನೀಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಪತನಗೊಂಡಿದೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ. ಈ ಘಟನೆಗೆ ನಿಖರವಾದ ಕಾರಣವೇನೆಂದು ತಿಳಿದು ಬಂದಿಲ್ಲ.

  PAF Aircraft Crash: ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನ ಪತನ; ಜಿಗಿದು ಜೀವ ಉಳಿಸಿಕೊಂಡ ಪೈಲಟ್

  5.ಇಂದು ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಡೆಯಿತು. ಮುಂದಿನ ವಾರ ಮಳೆಗಾಲದ ಅಧಿವೇಶನ ಆರಂಭವಾಗುವ ಕಾರಣ ಈ ಸಂಪುಟ ಸಭೆ ಭಾರೀ ಮಹತ್ವ ಪಡೆದುಕೊಂಡಿತ್ತು. ಈ ಬಾರಿ ಕೊರೋನಾ ವೈರಸ್​​ ಹಾವಳಿಯಿಂದಾಗಿ ಸಚಿವ ಸಂಪುಟದ ಸಭಾಂಗಣದ ಬದಲಿಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಈ ಸಂಪುಟ ಸಭೆ ನಡೆಸಲಾಯ್ತು.

  ರಾಜ್ಯ ಸಚಿವ ಸಂಪುಟ ಸಭೆ: ಇಲ್ಲಿವೆ ಸರ್ಕಾರ ಕೈಗೊಂಡ ನಿರ್ಯಣಗಳು; ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ 

  6. ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ಸಿಲುಕಿಕೊಂಡಿದ್ದಾರೆ. ನಟಿ ರಾಗಿಣಿ ದ್ವಿವೇದಿ, ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದ. ಆತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಇಂದು ಆದಿತ್ಯ ಆಳ್ವನ ರೆಸಾರ್ಟ್​ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಆದಿತ್ಯ ಆಳ್ವ ಅವರ ಫಾರ್ಮ್ ಹೌಸ್ ಮ್ಯಾನೇಜರ್ ರಾಮದಾಸ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  Aditya Alva: ಸ್ಯಾಂಡಲ್​ವುಡ್ ಡ್ರಗ್ ದಂಧೆ; ಸಿಸಿಬಿ ದಾಳಿ ವೇಳೆ ಆದಿತ್ಯ ಆಳ್ವ ಮನೆಯಲ್ಲಿ ಗಾಂಜಾ ಪತ್ತೆ

  7.ರಾಜ್ಯದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಸಿಎಂ ಸ್ಥಾನದಲ್ಲಿ ಬದಲಾವಣೆ ಆಗಬಹುದು ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಯಡಿಯೂರಪ್ಪ ಅವರೇ ಪೂರ್ಣಾವಧಿಯವರೆಗೆ ಸಿಎಂ ಅಗಿ ಮುಂದುವರಿಯುತ್ತಾರೆಂದು ಬಿಜೆಪಿಯ ಎಲ್ಲಾ ಹಿರಿಯ ನಾಯಕರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರಾದರೂ, ನಾಯಕತ್ವ ಬದಲಾವಣೆ ಸಾಧ್ಯತೆ ಬಗ್ಗೆ ಒಳಗಿಂದೊಳಗೆ ಪ್ರಯತ್ನಗಳು ನಡೆಯುತ್ತಿರುವುದು ಎಂದು ಅನುಮಾನ ಮೂಡುವಂಥ ಬೆಳವಣಿಗೆಗಳು ಆಗುತ್ತಿವೆ.

  ಕುತೂಹಲಗೊಳಿಸಿದೆ ಜಗದೀಶ್ ಶೆಟ್ಟರ್ ರಹಸ್ಯ ಕಾರ್ಯಸೂಚಿ; ನಾಯಕತ್ವ ಬದಲಾವಣೆಗೆ ನಡೆದಿದೆಯಾ ಪ್ರಯತ್ನ?

  8. ಇಂದು ಸೆಪ್ಟೆಂಬರ್ 15 ಎಂಜಿನಿಯರ್ಸ್​ ಡೇ. ಭಾರತ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಸರ್​​ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಹುಟ್ಟಿದ ದಿನವನ್ನು ಅವರ ಗೌರವಾರ್ಥವಾಗಿ ಅಭಿಯಂತರರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ.

  Happy Engineers Day 2020: ಇಂದು ದೇಶ ಕಂಡ ಅಪ್ರತಿಮ ಮೇಧಾವಿ ಸರ್​.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ

  9.ಸ್ಯಾಂಡಲ್​ವುಡ್​ ಹಾಗೂ ಡ್ರಗ್ಸ್​ ಮಾಫಿಯಾಗೂ ನಂಟಿರುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಕಳೆದ ಕೆಲವು ವಾರಗಳಿಂದ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಐಂದ್ರಿತಾ ರೇ ಹಾಗೂ ದಿಗಂತ್​ ಅವರಿಗೂ ಸಿಸಿಬಿ ಪೊಲೀಸ್ರು ನೋಟಿಸ್​ ನೀಡಿದ್ದಾರೆ. ಈ ಮಾದಕ ವಸ್ತು ಪ್ರಕರಣದಲ್ಲಿ ಮಾಹಿತಿ ಕಲೆ ಹಾಕುವ ಅಗತ್ಯವಿದೆ. ಅದಕ್ಕಾಗಿಯೇ ಸ್ಟಾರ್​ ದಂಪತಿ ದಿಗಂತ್  ಹಾಗೂ ಐಂದ್ರಿತಾರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

  Aindrita Ray: ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ: ಐಂದ್ರಿತಾ-ದಿಗಂತ್​ಗೆ ನೋಟಿಸ್​ ನೀಡಿದ ಸಿಸಿಬಿ ಪೊಲೀಸರು..!

  10.ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಫೀವರ್ ಶುರುವಾಗಿದೆ. ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಹೊಡಿಬಡಿ ಟೂರ್ನಿಗೆ ಇನ್ನೇನು ಕೇವಲ ನಾಲ್ಕು ದಿನಗಳಷ್ಟೆ ಬಾಕಿಯಿದೆ. ಎಲ್ಲ ಫ್ರಾಂಚೈಸಿ ತಂಡದ ಆಟಗಾರರು ಮೈದಾನದಲ್ಲಿ ಭರ್ಜರಿ ಆಗಿ ಅಭ್ಯಾಸ ನಡೆಸುತ್ತಾ ಬೆವರು ಹರಿಸುತ್ತಿದ್ದಾರೆ.

  Dream11 IPL 2020: ಐಪಿಎಲ್ ಆರಂಭಕ್ಕೆ ಇನ್ನು ಕೇವಲ ನಾಲ್ಕು ದಿನ ಬಾಕಿ: ತುದಿಗಾಲಿನಲ್ಲಿ ಕಾಯುತ್ತಿರುವ ಅಭಿಮಾನಿಗಳು
  Published by:G Hareeshkumar
  First published: