• Home
 • »
 • News
 • »
 • state
 • »
 • Evening Digest: ಇಂದಿನಿಂದ ಸಂಸತ್ ಅಧಿವೇಶನ, ಆರ್​ಎಸ್​ಎಸ್ ಮಾದರಿ ತರಬೇತಿಗೆ ಕಾಂಗ್ರೆಸ್ ಸಿದ್ದತೆ : ಟಾಪ್ 10 ಸುದ್ದಿಗಳು

Evening Digest: ಇಂದಿನಿಂದ ಸಂಸತ್ ಅಧಿವೇಶನ, ಆರ್​ಎಸ್​ಎಸ್ ಮಾದರಿ ತರಬೇತಿಗೆ ಕಾಂಗ್ರೆಸ್ ಸಿದ್ದತೆ : ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಕೊರೋನಾ ಹಿನ್ನಲೆಯಲ್ಲಿ ಈ ಬಾರಿಯ ಸಂಸತ್ತಿನ ಅಧಿವೇಶನ ಭಿನ್ನವಾಗಿ ನಡೆಯುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕಲಾಪಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅದೇ ಕಾರಣಕ್ಕೆ ಶಿಫ್ಟ್ ನಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಶನಿವಾರ ಮತ್ತು ಭಾನುವಾರವೂ ರಜೆ ನೀಡದೆ ನಿರಂತರವಾಗಿ ಅಧಿವೇಶನ ನಡೆಸಲಾಗುತ್ತಿದೆ. ಅಕ್ಟೋಬರ್ 1ರವರೆಗೆ ಒಟ್ಟು 18 ದಿನಗಳ ಕಾಲ ನಿರಂತರವಾಗಿ ಅಧಿವೇಶನ ನಡೆಯಲಿದೆ.


  Monsoon Session 2020: ಇಂದಿನಿಂದ ಸಂಸತ್ ಅಧಿವೇಶನ; ಹತ್ತು-ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ


  2.ಚೀನಾದಿಂದ ಭಾರತದ ವಿರುದ್ಧ 'ಹೈಬ್ರೀಡ್ ವಾರ್' ಶುರುವಾಗಿದೆ. ಪ್ರತಿದಿನ ಭಾರತದ 150 ಮಿಲಿಯನ್ ಡೇಟಾಗಳ ಪರಿಶೀಲನೆ ಮಾಡಲಾಗುತ್ತಿದೆ. ಪ್ರಧಾನಿ, ಮುಖ್ಯಮಂತ್ರಿಗಳು, ಮಿಲಿಟರಿ, ಉದ್ಯಮಿಗಳು, ರಕ್ಷಣಾ ಸಚಿವಾಲಯದ ಸಿಬ್ಬಂದಿ, ಸಂಸದರು, ಕೆಲವು ರೌಡಿ ಶೀಟರ್​ಗಳ ಆನ್​ಲೈನ್ ಡೇಟಾವನ್ನು ಕೂಡ ಚೀನಾ ಮೂಲದ ಸಂಸ್ಥೆ ಕಲೆಹಾಕಿದೆ ಎಂಬ ಮಾಹಿತಿ ಹೊರಬಿದ್ದಿದೆ.


  ಭಾರತದ ಮೇಲೆ ಚೀನಾ ಹದ್ದಿನ ಕಣ್ಣು; ಮೋದಿ, ರಾಷ್ಟ್ರಪತಿ ಸೇರಿ 1,350ಕ್ಕೂ ಹೆಚ್ಚು ರಾಜಕಾರಣಿಗಳ ಡೇಟಾ ಸಂಗ್ರಹ


  3.ಕಳೆದ ವಾರ ಜಿಎಸ್‌ಟಿ ತೆರಿಗೆ ಸಭೆ ನಡೆಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಗಳಿಗೆ ನೀಡಲಾಗುವ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ ಜಿಎಸ್‌ಟಿ ಪರಿಹಾರ ಹಣವನ್ನು ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಎಲ್ಲಾ ರಾಜ್ಯಗಳಿಗೂ ವಿಶೇಷ ಸಾಲ ಸೌಲಭ್ಯ ನೀಡಲಾಗುವುದು ಎಂದು ಆಯ್ಕೆಯೊಂದನ್ನು ಮುಂದಿಟ್ಟಿದ್ದರು. ಈ ಆಯ್ಕೆಗೆ ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂರೆ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ಇದೀಗ ಈ ವಿಶೇಷ ಸಾಲವನ್ನು ಪಡೆಯಲು 13 ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗುತ್ತಿದೆ.


  ಜಿಎಸ್‌ಟಿ ಪರಿಹಾರ ನೀಡಲ್ಲ, ಸಾಲ ನೀಡುತ್ತೇವೆ; ಕೇಂದ್ರದಿಂದ ಸಾಲ ಪಡೆಯಲು ಒಪ್ಪಿದ 13 ರಾಜ್ಯಗಳು


  4. ಮಾರ್ಚ್ ನಂತರದಲ್ಲಿ ದೇಶಾದ್ಯಂತ ಸುದೀರ್ಘ 68 ದಿನಗಳ ಕಾಲ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಎಷ್ಟು ಮಂದಿ ವಲಸಿಗ ಕಾರ್ಮಿಕರು ಸಾವನ್ನಪ್ಪಿದ್ದರು ಎಂಬುದರ ಲೆಕ್ಕ ಇಟ್ಟಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಂದು ಪ್ರಾರಂಭವಾದ ಮುಂಗಾರು ಅಧಿವೇಶನದ ವೇಳೆ ಕೇಳಲಾದ ಪ್ರಶ್ನೆಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಈ ಮೇಲಿನ ಉತ್ತರ ನೀಡಿದರು. ಹಾಗೆಯೇ, ವಲಸೆಯ ವೇಳೆ ಮೃತಪಟ್ಟವರಿಗೆ ಪರಿಹಾರ ನೀಡಲಾಗಿದೆಯಾ ಎಂಬ ಪ್ರಶ್ನೆಗೆ, ಯಾವ ಪರಿಹಾರ ನೀಡಿಲ್ಲ ಎಂಬ ಉತ್ತರ ಬಂದಿದೆ.


  ವಲಸೆ ಕಾರ್ಮಿಕರ ಸಾವಿನ ಲೆಕ್ಕ ಇಟ್ಟಿಲ್ಲ; ಪರಿಹಾರದ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ ಸರ್ಕಾರ


  5. ಕೋವಿಡ್-19 ನಿರ್ವಹಣೆ ಮತ್ತು ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಈಗ ಮತ್ತೆ ರಾಹುಲ್​​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ.


  ‘ನವಿಲು ಜತೆ ಬ್ಯುಸಿಯಾದ ಮೋದಿ; ಕೊರೋನಾ ಟೈಮಲ್ಲಿ ನಿಮ್ಮ ಜೀವನ ನೀವೇ ನೋಡಿಕೊಳ್ಳಬೇಕು‘ - ರಾಹುಲ್​ ಗಾಂಧಿ


  6.ಸರ್ಕಾರ ರಚನೆ ಮಾಡಲು ಪಕ್ಷವನ್ನು ಸಂಘಟಿಸಲು ನಮ್ಮ ರಾಜಕೀಯ ನಾಯಕರು ಏನೆಲ್ಲ ವಿಚಾರ ಮಾಡುತ್ತಾರೆ ಎಂಬುದಕ್ಕೆ ಇದೊಂದು ಸ್ಪಷ್ಠ ಉದಾಹರಣೆ. ಬಿಜೆಪಿಯ ಅಧಿಕಾರದ ಹಿಂದಿನ ಶಕ್ತಿ ಅಂದರೆ ಅದು ಆರ್​ಎಸ್​ಎಸ್​ ಎಂಬುದು ಜಗಜ್ಜಾಹೀರಾಗಿದೆ.‌ ಈಗ ಅದೇ ಮಾದರಿಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡ ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಲು ಮುಂದಾಗಿದೆ.


  ಅಕ್ಟೋಬರ್ 2ರಿಂದ ಆರ್​ಎಸ್​ಎಸ್ ಮಾದರಿ ತರಬೇತಿಗೆ ಕಾಂಗ್ರೆಸ್ ಸಿದ್ದತೆ


  7.ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಜಾಲದಲ್ಲಿ ದೊಡ್ಡವರು ಸಣ್ಣವರು ಎನ್ನುವುದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಲಿ.


  ಡ್ರಗ್ಸ್ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಲಿ : ಸಿದ್ದರಾಮಯ್ಯ


  8.ಕರ್ನಾಟಕದ ಬಹುತೇಕ ಭಾಗಗಳಲ್ಲಿ ಐದಾರು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ದಕ್ಷಿಣ ಕನ್ನಡದ ಹಲವೆಡೆ ಒಂದೇ ಸಮನೆ ಮಳೆಯಾಗುತ್ತಿದೆ. ಇಂದಿನಿಂದ ಸೆಪ್ಟೆಂಬರ್ 17ರವರೆಗೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


  Karnataka Rain: ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಸೆ. 17ರವರೆಗೆ ಭಾರೀ ಮಳೆ ಸಾಧ್ಯತೆ


  9.ಸ್ಯಾಂಡಲ್​​ವುಡ್​​​ ಡ್ರಗ್ಸ್​​ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಟಿ ರಾಗಿಣಿ ಮತ್ತು ಚಿತ್ರ ನಟಿ ಸಂಜನಾರನ್ನು ಬಂಧಿಸಿದ್ದಾರೆ. ಈ ಇಬ್ಬರು ನಟಿಯರನ್ನು ಈಗಾಗಲೇ ಕೋರ್ಟ್​​ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಹೀಗಾಗಿ ಸಿಸಿಬಿ ಪೊಲೀಸರು ಇಬ್ಬರು ನಟಿಯರನ್ನು ಕಳೆದ ಎರಡು ವಾರಗಳಿಂದ ತೀವ್ರ ವಿಚಾರಣೆ ನಡೆಸುತ್ತಿದ್ದರು. ಈ ಮಧ್ಯೆ ಇಂದು ಕೋರ್ಟ್​, ಪ್ರಕರಣದ ಪ್ರಮುಖ ಆರೋಪಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಐವರಿಗೆ ನ್ಯಾಯಾಂಗ ಬಂಧನ ಆದೇಶ ವಿಧಿಸಿದೆ.


  ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​​: ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿಗೆ - ಕೋರ್ಟ್ ಆದೇಶ


  10.ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಇದಕ್ಕಾಗಿಯೆ ಆರ್​ಸಿಬಿ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಅದರಲ್ಲೂ ಮೊನ್ನೆಯಷ್ಟೆ ಕ್ಯಾಪ್ಟನ್ ಕೊಹ್ಲಿಯ ನಟರಾಜಾ ಶಾಟ್ ತುಂಬಾನೇ ವೈರಲ್ ಆಗಿತ್ತು. ಧಮಾಕೆದಾರ್ ಶಾಟ್​ಗಳನ್ನ ಹೊಡೆದ ವಿರಾಟ್ ಮೊಗದಲ್ಲಿ ಮಂದಹಾಸ ಮೂಡಿತ್ತು. ಇದರಿಂದ ಅಭಿಮಾನಿಗಳಂತು ಖುಷಿಯಲ್ಲಿದ್ದಾರೆ.


  IPL 2020: ಐಪಿಎಲ್ ಆರಂಭಕ್ಕೂ ಮುನ್ನ ಆರ್​ಸಿಬಿಗೆ ಶುರುವಾಗಿದೆ ನಡುಕ: ಯಾಕೆ?, ಈ ವಿಡಿಯೋ ನೋಡಿ

  Published by:G Hareeshkumar
  First published: