• Home
 • »
 • News
 • »
 • state
 • »
 • Evening Digest: ಆಕ್ಸ್​ಫರ್ಡ್ ಲಸಿಕೆಗೆ ಹಿನ್ನಡೆ, ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರದಲ್ಲಿ ಭಾರೀ ಏರಿಕೆ :ಟಾಪ್ 10 ಸುದ್ದಿಗಳು

Evening Digest: ಆಕ್ಸ್​ಫರ್ಡ್ ಲಸಿಕೆಗೆ ಹಿನ್ನಡೆ, ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರದಲ್ಲಿ ಭಾರೀ ಏರಿಕೆ :ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1. ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದ ವೇಳೆ ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರು ಭೇಟಿಯಾಗಿ ಗಡಿಬಿಕ್ಕಟ್ಟು ಸಂಬಂಧ ಮಾತುಕತೆ ನಡೆಸಿದ್ದಾರೆ. ಈ ವೇಳೆ ಐದು ಅಂಶಗಳಿಗೆ ಎರಡೂ ದೇಶಗಳು ಸಹಮತ ಹೊಂದಿವೆ. ಆದರೆ, ಚೀನಾದ ಕೆಲ ಹೇಳಿಕೆಗಳು ಅದರ ಹಠಮಾರಿತನದ ಧೋರಣೆ ಮುಂದುವರಿಯಲಿರುವ ಸಾಧ್ಯತೆಯನ್ನು ಸೂಚಿಸುವಂತಿವೆ ಎಂದು ಸರ್ಕಾರದ ಉನ್ನತ ಮಟ್ಟದಲ್ಲಿರುವ ಮೂಲಗಳು ಅಭಿಪ್ರಾಯಪಟ್ಟಿವೆ.


  ಮಾಸ್ಕೋ ಸಭೆ ನಂತರವೂ ಗಡಿಬಿಕ್ಕಟ್ಟಿಗೆ ಪರಿಹಾರ ಅನುಮಾನ; ಮುಂದುವರಿಯುತ್ತಾ ಚೀನಾ ಹಠಮಾರಿತನ?


  2.ಭಾರತದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 40 ಲಕ್ಷ ಗಡಿ ದಾಟಿ ಹೋಗಿದೆ. ಅಮೆರಿಕ ಬಿಟ್ಟರೆ ವಿಶ್ವದಲ್ಲಿ ಭಾರತವೇ ಅತಿ ಹೆಚ್ಚು ಪ್ರಕರಣಗಳನ್ನ ಹೊಂದಿರುವುದು. ಆದರೆ, ವಾಸ್ತವವಾಗಿ ಪ್ರಕರಣಗಳು ಇನ್ನೂ ಹೆಚ್ಚಿವೆ ಎಂದು ತಜ್ಞರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಐಸಿಎಂಆರ್ ನಡೆಸಿದ ಸೆರೋ ಸಮೀಕ್ಷೆ ಕೂಡ ಈ ವಾದವನ್ನು ಪುಷ್ಟೀಕರಿಸುವಂತಿದೆ. ಈ ಸಮೀಕ್ಷೆ ಪ್ರಕಾರ ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು ತಗುಲಿದ್ದಿರಬಹುದು. ಮೇ 11ರಿಂದ ಜೂನ್ 4ರವರೆಗೆ ನಡೆಸಿದ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.


  ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು: ಸೆರೋ ಸಮೀಕ್ಷೆ ಅಂದಾಜು


  3.ಮಾರಕ‌ ರೋಗ ಕೊರೋನಾಗೆ ಲಸಿಕೆ ಕಂಡುಹಿಡಿಯಲಾಗುತ್ತಿದ್ದ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಪ್ರಯೋಗಕ್ಕೆ ತಾತ್ಕಲಿಕವಾಗಿ ತಡೆ ನೀಡಲಾಗಿರುವುದರ ಸಂಬಂಧ ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯ‌ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, 'ಕೊರೊನಾಗೆ ಲಸಿಕೆ ಕಂಡುಹಿಡಿಯುವ ಬಗ್ಗೆ ಇನ್ನೂ‌ ಬಹಳಷ್ಟು ಪ್ರಯೋಗ ಆಗಬೇಕು' ಎಂದಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಮತ್ತು ಅಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದ ಬ್ರಿಟನ್ ಮೂಲದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದರು.


  ಆಕ್ಸ್​ಫರ್ಡ್ ಲಸಿಕೆಗೆ ಹಿನ್ನಡೆ; ಇನ್ನೂ ಬಹಳ ಪ್ರಯೋಗ ಬೇಕು ಎಂದ ಡಬ್ಲ್ಯೂಎಚ್ಒ ಮುಖ್ಯ ವಿಜ್ಞಾನಿ


  4.ಮಾರಣಾಂತಿಕ ಕೊರೋನಾ ವೈರಸ್ ದೇಶದಲ್ಲಿ ಮತ್ತಷ್ಟು ಹರಡುವುದನ್ನು ತಡೆಯುವ ಸಲುವಾಗಿ ಮಹತ್ವದ ನಿರ್ಧಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ರೈಲ್ವೇ ನಿಲ್ದಾಣದಲ್ಲಿ ಜನ ಸಂದಣಿಯನ್ನು ನಿಯಂತ್ರಿಸಿ, ಜನರು ಗುಂಪುಗಳಾಗಿ ಒಟ್ಟುಗೂಡುವುದನ್ನು ಕಡಿಮೆಗೊಳಿಸುವ ಸಲುವಾಗಿ ದೇಶದ ಆಯ್ದ ಕೆಲವು ರೈಲ್ವೇ ನಿಲ್ದಾಣಗಳಲ್ಲಿ 10 ರೂ ಇದ್ದ ಪ್ಲಾಟ್‌ಫಾರ್ಮ್‌ ಟಿಕೆಟ್ ಶುಲ್ಕವನ್ನು 50 ರೂ.ಗೆ ಹೆಚ್ಚಿಸಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಇಂದು ಮಾಹಿತಿ ನೀಡಿದ್ದಾರೆ.


  ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರದಲ್ಲಿ ಭಾರೀ ಏರಿಕೆ; 10 ರಿಂದ 50 ರೂಗೆ ಏರಿಸಿದ ಕೇಂದ್ರ ಸರ್ಕಾರ!


  5.ಕೊರೋನಾದಿಂದಾಗಿ ಈ ವರ್ಷ ವಿಶ್ವವಿಖ್ಯಾತ ಮೈಸೂರು ದಸರಾ ಕೂಡ ಕಳೆಗುಂದಲಿದೆ. ಈ ಬಾರಿ ಸರಳವಾಗಿ ಮೈಸೂರು ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಹೆಚ್ಚು ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೈಸೂರು ದಸರಾದಲ್ಲಿ ಆನೆಗಳ ಮೆರವಣಿಗೆಯೇ ದೊಡ್ಡ ಆಕರ್ಷಣೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸರಳ ದಸರಾಗೆ 5 ಆನೆಗಳ ಆಯ್ಕೆ ಅಂತಿಮವಾಗಿದ್ದು, ಮೈಸೂರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಆನೆಗಳ ಅಂತಿಮ ಪಟ್ಟಿ ರವಾನೆಯಾಗಿದೆ. ಕೇಂದ್ರ ಅರಣ್ಯಾಧಿಕಾರಿಗೆ ಆನೆಗಳ ಅಂತಿಮ ಪಟ್ಟಿ ಹಾಗೂ ಆನೆಗಳ ಆರೋಗ್ಯ ಸ್ಥಿತಿಯ ವರದಿ ರವಾನೆ ಮಾಡಲಾಗಿದೆ.


  Mysuru Dasara 2020: ಮೈಸೂರು ದಸರಾ ಆನೆಗಳ ಪಟ್ಟಿ ಅಂತಿಮ; ಗಜಪಡೆಗೆ ಕೋವಿಡ್ ಟೆಸ್ಟ್​ ಕಡ್ಡಾಯ


  6.ಹಿಂದಿ ದಿವಸ್‌ ಹತ್ತಿರವಾಗುತ್ತಿದ್ದಂತೆ "ಹಿಂದಿ ಗೊತ್ತಿಲ್ಲ ಹೋಗೋ" ಮತ್ತು "ಕೇಂದ್ರ ಸರ್ಕಾರದ ಸೇವೆಗಳು ಕನ್ನಡದಲ್ಲೇ ಸಿಗಬೇಕು" ಎಂದು ಒತ್ತಾಯಿಸುವ #ServeInMyLanguage ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಇಂದು ಭಾರೀ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ 14ಅನ್ನು ಹಿಂದಿ ದಿವಸ್ ಎಂದು ಕರೆಯಲಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರವೇ ಹಿಂದಿ ದಿವಸ್‌ಗೆ ಸಂಬಂಧಿಸಿದಂತೆ ಅನೇಕ ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸುತ್ತದೆ. ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ಹಿಂದಿ ದಿವಸ್ ವಿರುದ್ಧ ಅಪಸ್ವರಗಳು ಹಾಗೂ ಭಾರೀ ವಿರೋಧಗಳು ಕೇಳಿ ಬರುತ್ತಿವೆ.


  ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ ServeInMyLanguage; ಹಿಂದಿ ದಿವಸ್‌ಗೆ ವಿರೋಧ, ಸರ್ಕಾರದ ಸೇವೆ ಕನ್ನಡದಲ್ಲೇ ಬೇಕೆಂದು ಆಗ್ರಹ


  7.ರಾಜ್ಯದೆಲ್ಲೆಡೆ ಮೂರ್ನಾಲ್ಕು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಇಂದು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡದಲ್ಲಿ ಬೆಳಗ್ಗೆಯಿಂದಲೇ ಮಳೆ ಶುರುವಾಗಿದೆ. ಕರಾವಳಿಯಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್​ ಘೋಷಿಸಲಾಗಿದೆ.


  Karnataka Weather: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಹೆಚ್ಚಳ; ಕರಾವಳಿಯಲ್ಲಿಂದು ರೆಡ್ ಅಲರ್ಟ್​


  8.ಶಾಸಕಿಯಾದ ಮೇಲೆ ಎಲ್ಲಾ ಒಳ್ಳೆಯದು ಆಗುತ್ತದೆ ಅಂದುಕೊಂಡಿದೆ. ಆದರೆ, ಶಾಸಕಿಯಾದ ಮೆಲೆ ಸಂಘರ್ಷಗಳು ಹೆಚ್ಚಾಗಿವೆ. ಒಬ್ಬ ಹೆಣ್ಣುಮಗಳಿಗೆ ಎಲ್ಲಾ ಕಷ್ಟಗಳು ಒಮ್ಮೆಲೆ ಬಂದಿವೆ. ಆದರು, ಇಡೀ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.


  ಶಾಸಕಿಯಾದ ಮೇಲೆ ಸಂಘರ್ಷಗಳು ಹೆಚ್ಚಾಗಿವೆ - ನನಗೆ ಯಾರು ಕಷ್ಟ ಕೊಡುತ್ತಿದ್ದಾರಂತ ನಿಮಗೇ ಗೊತ್ತು : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್


  9.ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ ಬಾಸ್​ ಈ ಬಾರಿ ಇರಲ್ಲ ಎಂಬ ಸುದ್ದಿ ಕಿರುತೆರೆಯಲ್ಲಿ ಕೇಳಿಬರುತ್ತಿದೆ. ಕಿಚ್ಚ ಸುದೀಪ್​​ ನಿರೂಪಣೆಯಲ್ಲಿ ಕನ್ನಡದ ಬಿಗ್​ ಬಾಸ್ ​ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಈ ಬಾರಿಯ ಬಿಗ್​ ಬಾಸ್​ ಸೀಸನ್​ 8 ಪ್ರಾರಂಭಕ್ಕೆ ಪ್ರೇಕ್ಷಕರು ಕಾದುಕುಳಿತ್ತಿದ್ದರು. ಆದರೀಗ ಕೇಳಿ ಬರುತ್ತಿರುವಂತೆ  ಬಿಗ್​ ಬಾಸ್​ ಸೀಸನ್​ 8 ಈ ಬಾರಿ ನಡೆಯಲ್ಲ ಎನ್ನಲಾಗುತ್ತಿದೆ.


  Bigg Boss Kannada: ಈ ಬಾರಿ ಕನ್ನಡ ಬಿಗ್ ಬಾಸ್ ನಡೆಯುತ್ತೋ ಇಲ್ಲವೋ: ಇಲ್ಲಿದೆ ಮಾಹಿತಿ


  10. ವರ್ಷ ಕಳೆದಂತೆ ವಿಶ್ವದಲ್ಲಿ ಗುಡುಗು- ಮಿಂಚಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಾಂಗ್ಲಾದೇಶದಲ್ಲಿ ಈ ಬಾರಿ ಗುಡುಗು- ಮಿಂಚಿನ ಆರ್ಭಟ ಜೋರಾಗಿದೆ. ಸದ್ಯ ಕ್ರಿಕೆಟ್ ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಬೇಕು ಎಂದು ಅಂದುಕೊಂಡಿದ್ದ ಇಬ್ಬರು ಯುವ ಕ್ರಿಕೆಟಿಗರು ಮೈದಾನದಲ್ಲೇ ಮಿಂಚಿನಿಂದ ಸಾವನ್ನಪ್ಪಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.


  ಕ್ರೀಡಾ ಲೋಕಕ್ಕೆ ದೊಡ್ಡ ಆಘಾತ: ಸಿಡಿಲು ಬಡಿದು ಇಬ್ಬರು ಯುವ ಕ್ರಿಕೆಟಿಗರು ಸಾವು

  Published by:G Hareeshkumar
  First published: