Evening Digest: ವಿಶ್ವಸಂಸ್ಥೆಯ ಆಹಾರ ವಿಭಾಗಕ್ಕೆ ನೊಬೆಲ್ ಶಾಂತಿ ಪುರಸ್ಕಾರ, ಅ. 17ರಿಂದ 26ರವರೆಗೆ ಮೈಸೂರು ದಸರಾ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ವಿಶ್ವ ಸಂಸ್ಥೆಯ ವರ್ಲ್ಡ್ ಫೂಡ್ ಪ್ರೋಗ್ರಾಮ್ (ಡಬ್ಲ್ಯೂಎಫ್​ಪಿ) ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದೆ. ಸಂಘರ್ಷದ ಪ್ರದೇಶಗಳಲ್ಲಿ ಜನರ ಸಂಕಷ್ಟ ಮತ್ತು ಹಸಿವನ್ನು ನೀಗಿಸಲು ಮಾಡುತ್ತಿರುವ ಪ್ರಯತ್ನಗಳನ್ನ ಗುರುತಿಸಿ ಡಬ್ಲ್ಯೂಎಫ್​ಪಿಗೆ ಈ ಗೌರವ ನೀಡಲಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಮುನ್ನೂರಕ್ಕೂ ಹೆಚ್ಚು ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳ ಮಧ್ಯೆ ನಾರ್ವೇಜಿಯನ್ ನೊಬೆಲ್ ಕಮಿಟಿ ವರ್ಲ್ಡ್ ಫೂಡ್ ಪ್ರೋಗ್ರಾಮ್​ಗೆ ಈ ಗೌರವ ನೀಡಿದೆ.

  Nobel Peace Prize - ವಿಶ್ವಸಂಸ್ಥೆಯ ಆಹಾರ ವಿಭಾಗಕ್ಕೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ

  2. ಮುಂದಿನ ಮಾರ್ಚ್ ತಿಂಗಳಲ್ಲಿ ಅಂತ್ಯಗೊಳ್ಳುವ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ. 9.5ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಅಂದರೆ, ಜಿಡಿಪಿ ಈ ವರ್ಷ ಮೈನಸ್ 9.5 ಪರ್ಸೆಂಟ್ ಇರಲಿದೆ. ಇದು ನಿಜವಾದರೆ ಭಾರತದ ಇತ್ತೀಚಿನ ಇತಿಹಾಸದಲ್ಲೇ ಕಳಪೆ ಆರ್ಥಿಕ ಬೆಳವಣಿಗೆ ಕಂಡಂತಾಗುತ್ತದೆ.

  ಈ ಹಣಕಾಸು ವರ್ಷ ದೇಶದ ಜಿಡಿಪಿ ಶೇ. 9.5 ಕುಸಿತ: ಆರ್​ಬಿಐ ಅಧಿಕೃತ ಅಂದಾಜು

  3. ತೈವಾನ್​ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಭಾರತೀಯ ಮಾಧ್ಯಮಗಳಲ್ಲೂ ಪುಟಗಟ್ಟಲೆ ಜಾಹೀರಾತು ಪ್ರಕಟವಾಗಿತ್ತು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ತೈವಾನ್​ ಮತ್ತು ಭಾರತವೆರಡೂ ಜೊತೆಗಾರರು ಎಂದು ತೈವಾನ್ ಸರ್ಕಾರದ ಜಾಹೀರಾತು ಭಾರತೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.

  ಭಾರತೀಯ ಮಾಧ್ಯಮದ ಮೇಲೆ ಸೆನ್ಸಾರ್​ ಹೇರಲು ಮುಂದಾದ ಚೀನಾಗೆ ಗೆಟ್​ ಲಾಸ್ಟ್ ಎಂದ ತೈವಾನ್

  4. ಆಂಧ್ರಪ್ರದೇಶ, ಬಿಹಾರ್, ಗುಜರಾತ್, ಉತ್ತರ ಪ್ರದೇಶ ಮೂಲದ 7 ಮಂದಿ ಭಾರತೀಯರನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ತಿಂಗಳು ಏಳು ಭಾರತೀಯರನ್ನು ಅಪಹರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಆಫ್ರಿಕನ್ ದೇಶವಾದ ಲಿಬಿಯಾದ ಅಧಿಕಾರಿಗಳ ಜೊತೆ ಭಾರತ ನಿಕಟ ಸಂಪರ್ಕದಲ್ಲಿದೆ. ಸೆಪ್ಟೆಂಬರ್ 14ರಂದು ಭಾರತಕ್ಕೆ ಮರಳಲು ತ್ರಿಪೋಲಿ ಏರ್​ಪೋರ್ಟ್​ಗೆ ತೆರಳುತ್ತಿದ್ದಾಗ ಲಿಬಿಯಾದ ಆಶ್ವೆರಿಫ್ ಎಂಬ ಸ್ಥಳದಿಂದ 7 ಭಾರತೀಯರನ್ನು ಅಪಹರಿಸಲಾಗಿದೆ.

  ಲಿಬಿಯಾದಿಂದ ಭಾರತಕ್ಕೆ ಹೊರಟಿದ್ದ 7 ಭಾರತೀಯರ ಅಪಹರಣ; ವಿದೇಶಾಂಗ ಸಚಿವಾಲಯ ಮಾಹಿತಿ

  5.ದೇವಸ್ಥಾನವೊಂದನ್ನು ಅತಿಕ್ರಮಿಸುವ ಉದ್ದೇಶದಿಂದ ಐವರು ವ್ಯಕ್ತಿಗಳು ಅರ್ಚಕನನ್ನು ಸಜೀವವಾಗಿ ದಹಿಸಿ ಕೊಂದ ದಾರುಣ ಘಟನೆ ರಾಜಸ್ಥಾನದ ಕರೋಲಿ ಜಿಲ್ಲೆಯಲ್ಲಿ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಇಲ್ಲಿಯ ಬುಕ್ನಾ ಗ್ರಾಮದ ದೇವಸ್ಥಾನದ ಅರ್ಚಕ ಬಾಬು ಲಾಲ್ ವೈಷ್ಣವ್ ಎಂಬುವವರ ಮೇಲೆ ಐವರು ವ್ಯಕ್ತಿಗಳು ಮೊನ್ನೆ ಬುಧವಾರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

  ರಾಜಸ್ಥಾನದಲ್ಲಿ ದೇವಸ್ಥಾನ ಅತಿಕ್ರಮಣಕ್ಕಾಗಿ ಅರ್ಚಕನ ಸಜೀವ ದಹನ

  6. ರಾಜ್ಯದಲ್ಲಿ ಶಾಲೆ ತೆರೆಯುವ ವಿಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ರವರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಶಾಲೆಗಳನ್ನು ತೆರೆಯುವ ಕುರಿತಂತೆ ಅಭಿಪ್ರಾಯಗಳನ್ನು ಸಲಹೆಗಳನ್ನು ಸಂಗ್ರಹಿಸುವ ಕುರಿತಾದ ನಿಮ್ಮ ಪತ್ರ ನನಗೆ ಬಂದಿದ್ದು. ಈಗ ಸಿದ್ದರಾಮಯ್ಯ ಅಭಿಪ್ರಾಯ ಹೀಗಿದೆ ಕೊರೋನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ.

  ರಾಜ್ಯದಲ್ಲಿ ಶಾಲೆ ತೆರೆಯಬೇಡಿ, ಎಲ್ಲಕ್ಕಿಂತ ಜೀವ ಮುಖ್ಯ ; ಶಿಕ್ಷಣ ಸಚಿವರಿಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

  7. ಶಿರಾ ಉಪಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸ್ಥಳೀಯ ಮುಖಂಡರ ದೊಡ್ಡ ವಿರೋಧ ಸಹ ಎದುರಿಸುತ್ತಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಕೊರೋನಾ ಪಾಸಿಟಿವ್ ಆಗಿದ್ದು, ಕಾರ್ಯಕರ್ತರ ಉತ್ಸಾಹ ಕುಂದಿದೆ. ಈ ನಡುವೇ ಸಖತ್ ಆಕ್ಟೀವ್ ಆಗಿರೋ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

  ಶಿರಾ ಬೈಎಲೆಕ್ಷನ್: JDS ಅಭ್ಯರ್ಥಿಗೆ ಕೊರೋನಾ, BJP ಅಭ್ಯರ್ಥಿ ಯಾರಂತನೇ ಗೊತ್ತಿಲ್ಲ,ಕಾಂಗ್ರೆಸ್​​ನಿಂದ ರಣತಂತ್ರ

  8. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅರಮನೆ ಪಾರಂಪರಿಕ ದಸರಾ ಕಾರ್ಯಕ್ರಮಗಳ ಪಟ್ಟಿ ಸಿದ್ದವಾಗಿದೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಜಂಬೂಸವಾರಿಯ ಗಜಪಡೆ ಅರಮನೆಗೆ ಆಗಮಿಸಿದೆ. ಕುಶಾಲುತೋಪು, ಮರಳಿನ ಮೂಟೆ ಹೊರುವ ತಾಲೀಮನ್ನು ನಡೆಸಲಾಗುತ್ತಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ.

  Mysuru Dasara 2020: ಅ. 17ರಿಂದ 26ರವರೆಗೆ ಮೈಸೂರು ದಸರಾ; ಅರಮನೆಯಲ್ಲಿ ನಡೆಯುವ ಕಾರ್ಯಕ್ರಮದ ಪಟ್ಟಿ ಇಲ್ಲಿದೆ

  9. ಪ್ರಭಾಸ್ ‘ರಾಧೆ ಶ್ಯಾಮ್​​​’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಕೃಷ್ಣ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಈ ಸಿನಿಮಾ ಫಸ್ಟ್ ಲುಕ್ ರಿಲೀಸ್​​​ ಆಗಿದ್ದು, ಚಿತ್ರಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

  Prabhas: ನನಸಾಯ್ತು ಪ್ರಭಾಸ್​ ಕಂಡಿದ್ದ ಕನಸು: ಅಮಿತಾಭ್​ ಬಚ್ಚನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ರೆಬೆಲ್​ ಸ್ಟಾರ್​..!

  10. ಇಂದು ಶಾರ್ಜಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿ ಆಗಲಿವೆ. ಈಗಾಗಲೇ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ತಂಡಕ್ಕೆ ಗೆಲುವಿನ ಲಯಕ್ಕೆ ಮರಳುವ ಅಗತ್ಯತೆ ಇದೆ. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ತಂಡ ರಾಜಸ್ಥಾನಕ್ಕೆ ಸತತ ನಾಲ್ಕನೇ ಸೋಲುಣಿಸಲು ಸಿದ್ಧವಾಗಿದೆ.

  RR vs DC: ಇಂದು ರಾಜಸ್ಥಾನ್​-ಡೆಲ್ಲಿ ಮುಖಾಮುಖಿ; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಾರಾ ಕ್ಯಾಪಿಟಲ್ಸ್​?
  Published by:G Hareeshkumar
  First published: