Evening Digest: ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳ ಪೊಲೀಸರ ನಡುವೆ ಘರ್ಷಣೆ, ಆಗಸದಲ್ಲಿ ಜನ್ಮತಾಳಿದ ಮಗು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಮಾನ್ಯತೆ ಪಡೆಯದೆಯೇ ಕಾರ್ಯನಿರ್ವಹಿಸುತ್ತಿರುವ 24 ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು, ಹೆಚ್ಚಿನವು ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ಬೆಳಗಾವಿಯಿಂದಲೂ ಒಂದು ಸ್ವಘೋಷಿತ ವಿವಿ ಅಸ್ತಿತ್ವದಲ್ಲಿರುವುದು ತಿಳಿದುಬಂದಿದೆ.

  ಕರ್ನಾಟಕದ ಒಂದು ಸೇರಿ ದೇಶದ ಈ 24 ವಿಶ್ವವಿದ್ಯಾಲಯಗಳು ನಕಲಿ: ಪಟ್ಟಿ ಹಾಕಿದ ಯುಜಿಸಿ

  2. ದೇಶಾದ್ಯಂತ ಸುದ್ದಿಯಾಗಿರುವ ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳೆದವಾರ ಆದೇಶ ಹೊರಡಿಸಿದ್ದರು. ಶನಿವಾರ ನಡೆದ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದರು.

  ಸಂತ್ರಸ್ತೆಗೆ ನ್ಯಾಯ ನೀಡಿ, ಪ್ರತಿಷ್ಠೆಗೆ ಧಕ್ಕೆ ತರುವ ಮಾತುಗಳನ್ನಲ್ಲ; ಪ್ರಿಯಾಂಕಾ ಗಾಂಧಿ

  3.ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರತಿಭಟನಾ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಹಿನ್ನಲೆ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಇಂದು ಬಿಜೆಪಿ ಕಾರ್ಯಕರ್ತರು ಕೊಲ್ಕತ್ತಾ ಮತ್ತು ಹೌರಾದಿಂದ ನಬನ್ನಾದವರೆಗೆ  ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು.

  Nabanna Chalo: ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳ ಪೊಲೀಸರ ನಡುವೆ ಘರ್ಷಣೆ: ಟಿಯರ್​ ಗ್ಯಾಸ್​ ಪ್ರಯೋಗ

  4.ವಿಶ್ವದ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವೇ ಪ್ರಮುಖ ಪಾತ್ರವಹಿಸುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ. ಇದಕ್ಕೆ ಪೂರಕವಾಗಿ ಜಿಯೋ ಭಾರತದಲ್ಲಿ ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟರು.

  ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತದ್ದು ಪ್ರಮುಖ ಪಾತ್ರ: ಮುಕೇಶ್ ಅಂಬಾನಿ

  5.ಆಂಧ್ರ ಪ್ರದೇಶ ಸಿಎಂ ರಿಲೀಫ್​ ಫಂಡ್​ಗೆ ಕನ್ನ ಹಾಕಲು ಹೋದ ಕೋಸ್ಟಲ್​ವುಡ್​ ನಿರ್ದೇಶಕ ಉದಯ್ ಕುಮಾರ್ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಂದೇ ಬಾರಿಗೆ ಶ್ರೀಮಂತರಾಗಬೇಕು ಎಂದು ದುರಾಸೆ ಮಾಡಿದವರು ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

  ಆಂಧ್ರ ಸಿಎಂ ಖಾತೆಯಿಂದ 58 ಕೋಟಿ ರೂ. ದೋಚಲು ಯತ್ನ; ಕೋಸ್ಟಲ್​ವುಡ್ ನಿರ್ದೇಶಕ ಉದಯ ಶೆಟ್ಟಿ ಅರೆಸ್ಟ್​

  6. ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಹೊರಟ ಇಂಡಿಗೋ  ವಿಮಾನಯಾನ  ಸಂಸ್ಥೆಯ ಫ್ಲೈಟ್​ ನಂಬರ್ 6E 122 ವಿಮಾನದಲ್ಲಿ ಗಂಡು  ಮಗುವಿನ ಜನನವಾಗಿದೆ.

  ಆಗಸದಲ್ಲಿ ಜನ್ಮತಾಳಿದ ಮಗು; ಬೆಂಗಳೂರಿನ ಕೆಂಪೇಗೌಡ ಏರ್​​​ಪೋರ್ಟ್​​​ನಲ್ಲೊಂದು ಅಪರೂಪದ ಘಟನೆ

  7.ಮುಖ್ಯಮಂತ್ರಿಯನ್ನು ಭೇಟಿಯಅಗಲೂ ಬರುವ ಸಾರ್ವಜನಿಕರಿಗೆ ಇನ್ಮುಂದೆ ಕೋವಿಡ್​ ಪರೀಕ್ಷೆ ಕಡ್ಡಾಯ. ಪರೀಕ್ಷೆ ಮಾಡದೇ ಯಾರು ಕೂಡ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅದರಲ್ಲಿಯೂ ವರದಿ ನೆಗೆಟಿವ್​ ಬಂದವರಿಗೆ ಮಾತ್ರ ಸಿಎಂ ಗೃಹ ಕಚೇರಿ ಕೃಷ್ಣಗೆ ಪ್ರವೇಶ ಸಾಧ್ಯ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ.

  ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಸಾರ್ವಜನಿಕರಿಗೆ ಕೋವಿಡ್​ ಪರೀಕ್ಷೆ ಕಡ್ಡಾಯ

  8. ಬರೀ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತಪ್ಪು ಹುಡುಕುವುದೇ ನನ್ನ ಕೆಲಸವಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದರು. ಎಲ್ಲದಕ್ಕೂ ಮೋದಿಯವರನ್ನು ಹೊಣೆಯಾಗಿಸುವುದು ಸರಿಯಲ್ಲ ಎಂದರು.

  ಪ್ರಧಾನಿ ನರೇಂದ್ರ ಮೋದಿಯವರ ತಪ್ಪುಗಳನ್ನು ಹುಡುವುದೇ ನನ್ನ ಕೆಲಸವಲ್ಲ; ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

  9.ಸ್ಯಾಂಡಲ್​ವುಡ್​ನತ್ತ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್​ ಚಾಪ್ಟರ್​ 1. ಐದು ಭಾಷೆಗಳಲ್ಲಿ ತೆರೆಕಂಡು ಹೊಸ ದಾಖಲೆ ನಿರ್ಮಿಸಿದ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಸಿನಿಪ್ರಿಯರು ಕಾತರರಾಗಿ ಕಾಯುತ್ತಿದ್ದಾರೆ. ಲಾಕ್​ಡೌನ್​ ಆರಂಭದಲ್ಲಿ ಈ ಸಿನಿಮಾ ಬಗ್ಗೆ ಅಪ್ಡೇಟ್​ ಕೊಡುವಂತೆ  ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು.

  KGF Chapter 2: ಮಂಗಳೂರು ಸೇರಿಕೊಂಡ ಯಶ್​: ಕಡಲ ಕಿನಾರೆಯಲ್ಲಿ ನಿಂತ ರಾಕಿ ಭಾಯ್​ ಕೆಜಿಎಫ್​ 2 ಬಗ್ಗೆ ಹೇಳಿದ್ದೇನು..!

  10. IPLನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತಿದೆ. ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿರುವ ವಿರಾಟ್ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 59 ರನ್​ಗಳ ಹೀನಾಯ ಸೋಲು ಇದೀಗ ಮತ್ತೊಮ್ಮೆ ಆರ್​ಸಿಬಿ ಪಾಳಯವನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಮುಂದಿನ 8 ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ಪಂದ್ಯಗಳನ್ನು ಆಡಲಿದೆ.

  IPL 2020: CSK ವಿರುದ್ಧದ ಪಂದ್ಯಕ್ಕೆ RCB ತಂಡದಲ್ಲಿ ಮಹತ್ವದ ಬದಲಾವಣೆ..!
  Published by:G Hareeshkumar
  First published: