• Home
  • »
  • News
  • »
  • state
  • »
  • Top-5 News: ಅತ್ಯಾಚಾರ ಮಾಡಿ ಬಾಲಕಿ ಕೊಲೆ ಯತ್ನ, ಅತ್ತ ಗ್ರಾಮವೊಂದರಲ್ಲಿ ದೈವದ ಸುಳಿವು! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top-5 News: ಅತ್ಯಾಚಾರ ಮಾಡಿ ಬಾಲಕಿ ಕೊಲೆ ಯತ್ನ, ಅತ್ತ ಗ್ರಾಮವೊಂದರಲ್ಲಿ ದೈವದ ಸುಳಿವು! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಕಾಂತಾರ ಸಿನಿಮಾ ಜೊತೆಗೆ ನೆನಪಾದ ದೈವದ ಕಥೆ


ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಕಾಂತಾರ ಸಿನಿಮಾ (Kantara Cinema) ದೇಶದೆಲ್ಲೆಡೆ ಭಾರೀ ಸಂಚಲನವನ್ನು ಉಂಟು ಮಾಡಿದೆ. ಕನ್ನಡದಲ್ಲಿ (Kannada) ಮೊದಲಿಗೆ ರಿಲೀಸ್ ಆದ ಈ ಚಿತ್ರ ಐದು ಭಾಷೆಗಳಲ್ಲಿ ಡಬ್ ಆಗಲಿದೆ. ಕರಾವಳಿ ಭಾಗದ (Coastal Karnataka) ಭಾರೀ ನಂಬಿಕೆಗೆ ಪಾತ್ರವಾದ ದೈವಗಳ (Daiva) ಕಾರಣೀಕವನ್ನು ಮೂಲಕಥೆಯನ್ನಾಗಿ ನಿರ್ಮಿಸಲಾಗಿರುವ ಈ ಕಥೆ ತನ್ನನ್ನು ಮರೆತು ಮೆರದವರನ್ನು ದೈವ ಯಾವ ರೀತಿ ಧರ್ಮದಲ್ಲಿ ನಡೆಯುವಂತೆ ಮಾಡಿತು ಎನ್ನುವುದನ್ನು ತಿಳಿಸಿ ಕೊಟ್ಟಿದೆ. ಇಂಥಹುದೇ ಹಲವು ನಿದರ್ಶನಗಳು ಕರಾವಳಿ ಭಾಗದಲ್ಲಿ ಸಾಕಷ್ಟು ನಡೆದಿದ್ದು, ಇಂಥಹುದೇ ಒಂದು ಘಟನೆಯನ್ನು ಕಾಂತಾರದ ಸಿನಿಮಾ ಚಾಲ್ತಿಯಲ್ಲಿರುವ ಸಮಯದಲ್ಲಿ ನೆನಪಿಸಬೇಕಿದೆ. ಹೌದು ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwala, Dakshina kannada) ತಾಲೂಕಿನ ಪೆರ್ನೆ (Perne Village) ಎನ್ನುವ ಗ್ರಾಮದಲ್ಲಿ.


ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! 


ಅಸ್ಸಾಂ: ಕಾಮುಕನೊಬ್ಬ ಅಪ್ರಾಪ್ತ ಬಾಲಕಿ (Miner Girl) ಮೇಲೆ ಅತ್ಯಾಚಾರ ಮಾಡಿದ್ದಾನೆ. ಸಾಲದ್ದಕ್ಕೆ ಆಕೆಯನ್ನು ಕೊಲ್ಲುವ (Murder) ಉದ್ದೇಶದಿಂದ, ರಾಕ್ಷಸನಂತೆ ವರ್ತಿಸಿದ್ದಾನೆ. ಏನೂ ಅರಿಯದ ಬಾಲಕಿ ಮೇಲೆ ಮೃಗದಂತೆ ಎರಗಿದ್ದಲ್ಲದೇ, ಆಕೆಯನ್ನು ಬ್ಯಾಗ್‌ನಲ್ಲಿ (Bag) ತುಂಬಿ, ದಟ್ಟಾರಣ್ಯಕ್ಕೆ (Forest) ಕರೆದುಕೊಂಡು ಹೋಗಿ, ಆ ಬ್ಯಾಗ್ ಸಮೇತ ಆಕೆಯನ್ನು ಬಿಟ್ಟು, ಏನೂ ಆಗಿಯೇ ಇಲ್ಲ ಎನ್ನುವಂತೆ ತನ್ನ ಊರಿಗೆ (Village) ವಾಪಸ್ ಬಂದಿದ್ದಾನೆ. ಹಾಗೆ ಬಂದವ ನಾನಿನ್ನು ತಪ್ಪಿಸಿಕೊಂಡೆ ಅಂತ ಖುಷಿಯಿಂದ ಮನೆಗೆ (Home) ಹೋಗಿದ್ದಾನೆ. ಆದರೆ ಆಗ ಅವನಿಗೆ ಅಲ್ಲಿ ಬಿಗ್ ಶಾಕ್ (Big Shock) ಕಾದಿತ್ತು! ಇದೀಗ ಆ ಪಾಪಿ ಪೊಲೀಸರ (Police) ಅತಿಥಿಯಾಗಿದ್ದಾನೆ.


ಇದನ್ನೂ ಓದಿ: Harassment: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!


ಫಿಲ್ಮ್ ಫೇರ್ ಪ್ರಶಸ್ತಿಗೆ ಹೆಚ್ಚಿದ ಶಿವಾಜಿ ಸುರತ್ಕಲ್ ನಿರೀಕ್ಷೆ


ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bangalore) ಹೆಚ್ಚಿದ ಫಿಲ್ಮಂ ಫೇರ್ (Film Fair Award) ಪ್ರಶಸ್ತಿಯ ಕಲರವ. 2020-2021 ರ ಸಾಲಿನ ಪ್ರಶಸ್ತಿಗೆ ಸಜ್ಜಾಯಿತು ಬೃಹತ್ ವೇದಿಕೆ. ಹೌದು, ಬೆಂಗಳೂರು ಈಗ ಮುಂಬೈ ರೀತಿ ಪ್ರಶಸ್ತಿಗಳ ಸಡಗರಕ್ಕೆ ಸಾಕ್ಷಿ ಆಗುತ್ತಿದೆ. ಮೊನ್ನೆ ಸೈಮಾ (SIIMA) ಅವಾರ್ಡ್ ಇದೇ ಬೆಂಗಳೂರಿನಲ್ಲಿಯೇ ನಡೆಯಿತು. ಈಗ ಫಿಲ್ಮಂ ಫೇರ್ ಪ್ರಶಸ್ತಿಯ ಸಡಗರ ಶುರು ಆಗಿದೆ. ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ಎಕ್ಸಿಬಿಷನ್ ಕೇಂದ್ರದಲ್ಲಿಯೇ ನಡೆಯುತ್ತಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣದ ಅಷ್ಟೂ ಭಾಷೆಯ ಸಿನಿಮಾಗಳು ಇಲ್ಲಿ ಪ್ರಶಸ್ತಿಗೆ (Nomination) ನಾಮಿನೇಷನ್ ಆಗಿವೆ. ಇದರಲ್ಲಿ ಕನ್ನಡದ ಶಿವಾಜಿ ಸುರತ್ಕಲ್ ಸಿನಿಮಾನೂ ಇದೆ. ರಮೇಶ್ ಅರವಿಂದ್ ಚಿತ್ರ ಜೀವನದ ಈ ವಿಶೇಷ ಸಿನಿಮಾ ಬರೋಬ್ಬರಿ ನಾಲ್ಕು ವಿಭಾಗದಲ್ಲಿ ನಾಮಿನೇಷನ್ ಆಗಿದೆ. ಈ ಬಗ್ಗೆ ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ ನ್ಯೂಸ್ 18 ಕನ್ನಡ ಜೊತೆಗೆ ನಾಮಿನೇಷನ್ ಆಗಿರೋ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.


ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!


ಬೆಂಗಳೂರು: ಆ ಗ್ರಾಹಕರೆಲ್ಲ (customers) ಫ್ಲಿಪ್‌ಕಾರ್ಟ್‌ನಲ್ಲಿ (Flipkart) ದುಬಾರಿ ಬೆಲೆ (Costly), ಆಧುನಿಕ ತಂತ್ರಜ್ಞಾನದ (technology), ಬ್ರ್ಯಾಂಡೆಡ್ ಗ್ಯಾಜೆಟ್‌ (branded gadget) ಬುಕ್ ಮಾಡಿದ್ರು. ಇಂಥದ್ದೇ ದಿನ, ಇಂಥದ್ದೇ ತಾರೀಖು, ಇಷ್ಟೇ ಹೊತ್ತಿಗೆ ಬರುತ್ತೆ ಅಂತ ಕಂಪನಿಯೂ (Company) ಅವರಿಗೆ ಭರವಸೆ ನೀಡಿತ್ತು. ಆದರೆ ಆ ದಿನ, ದಿನಾಂಕ, ಟೈಮ್ ಬಂದ್ರೂ ಆ ಗ್ಯಾಜೆಟ್‌ ಮಾತ್ರ ಅವರ ಮನೆ ಸೇರಲೇ ಇಲ್ಲ. ಯಾಕೆಂದ್ರೆ ಅವರೆಲ್ಲರ ಮನೆಗೆ ಆ ದುಬಾರಿ ಬೆಲೆಯ ಗ್ಯಾಜೆಟ್‌ ತಲುಪಿಸ ಬೇಕಿದ್ದ ಡೆಲಿವರಿ ಬಾಯ್ (Delivery Boy) ಎಸ್ಕೇಪ್ ಆಗಿದ್ದ. ಬರೀ ಆತನೊಬ್ಬನೇ ಎಸ್ಕೇಪ್ (Escape) ಆದರೆ ತೊಂದರೆ ಇರಲಿಲ್ಲ. ಆತ ನಾಪತ್ತೆಯಾಗುವಾಗ ತನ್ನೊಂದಿಗೆ ಬರೋಬ್ಬರಿ 61 ದುಬಾರಿ ಗ್ಯಾಜೆಟ್‌ಗಳನ್ನು ತೆಗೆದುಕೊಂಡು ಹೋಗಿದ್ದ! ಅಂದಹಾಗೆ ಅದರ ಬೆಲೆ ಬರೋಬ್ಬರಿ 4 ಲಕ್ಷ ರೂಪಾಯಿ! ಇದೀಗ ನಾಪತ್ತೆಯಾಗಿರುವ ಡೆಲಿವರಿ ಬಾಯ್‌ಗಾಗಿ ಪೊಲೀಸರು (Police) ಬಲೆ ಬೀಸಿದ್ದಾರೆ. ಅಂದಹಾಗೆ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru)!


ಇದನ್ನೂ ಓದಿ: Flipkart Delivery Boy: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್‌! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!


ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಚಹಾರ್​ ಔಟ್​, ಯುವ ಆಲ್​ರೌಂಡರ್​ಗೆ ಅವಕಾಶ


ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ 2 ಏಕದಿನ (ODI) ಪಂದ್ಯಗಳಿಂದ ದೀಪಕ್ ಚಹಾರ್ (Deepak Chahar) ಔಟ್​ ಆಗಿದ್ದಾರೆ. ಅವರ ಸ್ಥಾನದಲ್ಲಿ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಸರಣಿಯ ಎರಡನೇ ಏಕದಿನ ಪಂದ್ಯ ಭಾನುವಾರ (ಅಕ್ಟೋಬರ್ 8) ರಾಂಚಿಯಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಆರಂಭಿಕ ಪಂದ್ಯವನ್ನು ಗೆದ್ದ ನಂತರ, ಅವರು 1-0 ಮುನ್ನಡೆ ಸಾಧಿಸಿದೆ. ಇಂದೋರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಅಂತಿಮ T20I ನಂತರ ಬೆನ್ನು ನೋವು ಮತ್ತು ಬಿಗಿತದ ಬಗ್ಗೆ ಚಾಹರ್ ಮಾಹಿತಿ ನೀಡಿದ್ದರು. ಇದರಿಂದಾಗಿ ಅವರು ಲಕ್ನೋದಲ್ಲಿ ನಡೆದ ಮೊದಲ ODI ನಲ್ಲಿ ಭಾರತೀಯ ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಳ್ಳಲಿಲ್ಲ.

Published by:Annappa Achari
First published: