Evening Digest: ರಿಯಾ ಚಕ್ರವರ್ತಿಗೆ ಷರತ್ತು ಬದ್ದ ಜಾಮೀನು, ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಶಾಹೀನ್​ಬಾಗ್​ನಂತಹ ಸಾರ್ವಜನಿಕ ಸ್ಥಳಗಳನ್ನು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ. ಸಂಜಯ್​ ಕೌಲ್​ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳನ್ನು ಪ್ರತಿಭಟನೆಗಾಗಿ ಬಳಸಿಕೊಳ್ಳಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ಪೀಠ ತಿಳಿಸಿದೆ.

  ಶಾಹೀನ್​ಬಾಗ್​ನಂತಹ ಸಾರ್ವಜನಿಕ ಸ್ಥಳಗಳನ್ನು ಪ್ರತಿಭಟನೆಗೆ ಬಳಸಿಕೊಳ್ಳುವಂತಿಲ್ಲ; ಸುಪ್ರೀಂಕೋರ್ಟ್​

  2. ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಹಿರಿಯ ಬ್ಯಾಂಕರ್ ದಿನೇಶ್​ ಕುಮಾರ್ ಖರಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಜನೀಶ್​ ಕುಮಾರ್ ಅವರ ಸ್ಥಾನಕ್ಕೆ ದಿನೇಶ್​ ಕುಮಾರ್​ ಅವರನ್ನು ನೇಮಿಸಲಾಗಿದೆ. ರಜನೀಶ್​ ಕುಮಾರ್ ತಮ್ಮ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಿನ್ನೆಲೆ, ನೂತನ ಅಧ್ಯಕ್ಷರ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರವು ಮೂರು ವರ್ಷಗಳ ಅವಧಿಗೆ ದಿನೇಶ್​ ಕುಮಾರ್​ ಅವರನ್ನು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿದೆ.

  ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನೂತನ ಅಧ್ಯಕ್ಷರಾಗಿ ದಿನೇಶ್​ ಕುಮಾರ್ ಖರಾ ನೇಮಕ

  3.ದಲಿತ ಯುವತಿಯ ಅತ್ಯಾಚಾರ ಕೊಲೆ ಸಂಭವಿಸಿದ ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಗೆ ಹೊರಟಿದ್ದ ನಾಲ್ವರು ವ್ಯಕ್ತಿಗಳನ್ನು ಮಥುರಾದಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದರು. ಇದೀಗ ಈ ನಾಲ್ವರಿಗೆ ಉಗ್ರ ಸಂಘಟನೆ ಪಿಎಫ್​ಐನ ನಂಟಿರುವ ಶಂಕೆಯ ಮೇಲೆ ಪೊಲೀಸರು ಇಂದು ದೇಶದ್ರೋಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

  ಪಿಎಫ್ಐ ನಂಟು: ಹಾಥ್ರಸ್​ಗೆ ಹೋಗುವಾಗ ಬಂಧಿತರಾಗಿದ್ದ ನಾಲ್ವರ ವಿರುದ್ಧ ದೇಶದ್ರೋಹ ಪ್ರಕರಣ

  4. ಒಂದು ತಿಂಗಳ ಕಾಲ ಜೈಲಿನಲ್ಲಿ ಕಳೆದ ನಟಿ ರಿಯಾ ಚಕ್ರವರ್ತಿಗೆ ಕೊನೆಗೂ ಜಾಮೀನು ಸಿಕ್ಕಿದೆ. ನಿನ್ನೆಯಷ್ಟೆ ರಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷೆನ್ಸ್​ ಕೋರ್ಟ್​ ತಿರಸ್ಕರಿಸಿತ್ತು. ಆದರೆ ಇಂದು ಮುಂಬೈ ಹೈಕೋರ್ಟ್​ ರಿಯಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

  Rhea Chakraborty: ಒಂದು ತಿಂಗಳ ನಂತರ ರಿಯಾ ಚಕ್ರವರ್ತಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ..!

  5. ದುಬಾರಿ ದಂಡಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜನಸಾಮಾನ್ಯರಿಂದ ಜನಪ್ರತಿನಿಧಿಗಳವರೆಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನಲೆ ರಾಜ್ಯ ಸರ್ಕಾರ ಈ ದಂಡ ಪ್ರಮಾಣ ಇಳಕೆ ಮಾಡಿ ಆದೇಶ ಮಾಡಿದೆ. ನಗರ ಪ್ರದೇಶದಲ್ಲಿ 1000ರೂ ಇದ್ದ ದಂಡ ಪ್ರಮಾಣವನ್ನು 250 ರೂಗೆೆ ಗ್ರಾಮೀಣ ಪ್ರದೇಶದಲ್ಲಿ 500 ರೂ ನಿಂದ 100ರೂಗೆ ಇಳಿಸಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.

  ದುಬಾರಿ ಮಾಸ್ಕ್​ ದಂಡ: ವಿರೋಧ ಹಿನ್ನಲೆ 1000ರೂ ನಿಂದ 250ಕ್ಕೆ ಬೆಲೆ ಇಳಿಸಿದ ಕರ್ನಾಟಕ ಸರ್ಕಾರ

  6.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಚಿಕ್ಕಮಗಳೂರು ಶಾಸಕ ಅವರಿಗೆ ಬಿಜೆಪಿ ಹೈಕಮಾಂಡ್​ ಮತ್ತೊಂದು ಪ್ರಮುಖ ಜವಾಬ್ದಾರಿ ವಹಿಸಿದೆ. ರಾಷ್ಟ್ರ ಮಟ್ಟದ ಜವಾಬ್ದಾರಿ ಇರುವುದರಿಂದ ಎರಡು ಹುದ್ದೆಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ ಎಂದು ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಸಿ.ಟಿ. ರವಿ ಅವರು ಕೆಲವೇ ದಿನಗಳ ಹಿಂದೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸಿಟಿ ರವಿ ಅವರಿಗೆ ದಕ್ಷಿಣ ಭಾರತದ ಸಂಪೂರ್ಣ ಉಸ್ತುವಾರಿ ನೀಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.

  CT Ravi: ಸಿ.ಟಿ. ರವಿಗೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಉಸ್ತುವಾರಿ ನೀಡಿದ ಬಿಜೆಪಿ ಹೈಕಮಾಂಡ್

  7. ಶಿರಾ ಮತ್ತು ಆರ್​.ಆರ್​. ನಗರ ಉಪ ಚುನಾವಣೆಗೆ ನಾವೆಲ್ಲ ಒಟ್ಟಾಗಿ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದೆವು. ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಟಿ.ಬಿ. ಜಯಚಂದ್ರ, ಆರ್.ಆರ್. ನಗರಕ್ಕೆ ಕುಸುಮಾ ಅವರ ಹೆಸರನ್ನು ಹೈಕಮಾಂಡ್​ಗೆ ಶಿಫಾರಸು ಮಾಡಿದ್ದೆವು. ಆ ಶಿಫಾರಸನ್ನು ಒಪ್ಪಿರುವ ಕಾಂಗ್ರೆಸ್ ಹೈಕಮಾಂಡ್, ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ನಮ್ಮ ಮನೆ ಮೇಲೆ ಸಿಬಿಐ ದಾಳಿಯಾಗಿದ್ದನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಿಲ್ಲ. ರಾಜ್ಯದ ಮತದಾರರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

  ಚುನಾವಣೆ ಪ್ರಚಾರಕ್ಕೆ ಸಿಬಿಐ ದಾಳಿಯನ್ನು ಬಳಸಿಕೊಳ್ಳೋದಿಲ್ಲ; ಡಿಕೆ ಶಿವಕುಮಾರ್ ಸ್ಪಷ್ಟನೆ

  8.ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಈ ಬಾರಿ ಡೋಲಾಯಮಾನ ಸ್ಥಿತಿಯಲ್ಲಿದೆ. ದಸರಾ ಹೈಪರ್ ಕಮಿಟಿ ಮೀಟಿಂಗ್ ನಂತರವು ದಸರಾ ಆಚರಣೆಗೆ ಸ್ಪಷ್ಟನೆ ಸಿಗದೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ನಿತ್ಯ ಸಭೆ ಮೇಲೊಂದು ಸಭೆ ನಡೆದರೂ ದಸರಾ ಬಗ್ಗೆ ಚಿತ್ರಣ ಸಿಗದಿದ್ದಕ್ಕೆ ನಾಳೆ ಆರೋಗ್ಯ ಇಲಾಖೆಯಿಂದ ಟೆಕ್ನಿಕಲ್ ತಂಡದಿಂದಲೂ ದಸರಾ ಬಗ್ಗೆ ಸಭೆ ನಡೆಯಲಿದೆ.

  ಡೋಲಾಯಮಾನ ಸ್ಥಿತಿಯಲ್ಲಿ ದಸರಾ ಸಿದ್ದತೆ : ಕೆಲವೇ ದಿನ ಬಾಕಿ ಇದ್ದರೂ ಇನ್ನು ನಿರ್ಧಾರವಾಗದ ಉದ್ಘಾಟಕರ ಹೆಸರು

  9.ಒಂದೆರಡು ಸಿನಿಮಾ ಮಾಡಿ ಸಣ್ಣ ಪುಟ್ಟ ಪ್ರಶಸ್ತಿ ಬಂದೊಡನೆ ತಾನೊಬ್ಬ ದೊಡ್ಡ ನಟ ಎಂಬುದನ್ನು ತಲೆಯಲ್ಲಿ ಇರಿಸಿಕೊಂಡು ಓಡಾಡುವ ಕೆಲವು ಮಂದಿ ಸ್ಯಾಂಡಲ್​ವುಡ್​ನಲ್ಲಿ​ ಇದ್ದಾರೆ. ಅಂತವರ ಮಧ್ಯದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಬಂದರು ನಾನೊಬ್ಬ ಸಾಮಾನ್ಯ ಕಲಾವಿದನೆಂದು ಹೇಳುತ್ತಾ ಇಂದಿಗೂ ಬಣ್ಣ ಹಚ್ಚಿ ಜನರಿಗೆ ಸರಿಯಾಗಿ ಮನರಂಜನೆ ಒದಗಿಸುವ ನಟರು ಇದ್ದಾರೆ. ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲ!. ಅಂತವರಲ್ಲಿ ಕನ್ನಡದ ಖ್ಯಾತ ಕಲಾವಿದ ವೈಜನಾಥ್​ ಬಿರಾದರ್​ ಕೂಡ ಒಬ್ಬರು. ಸ್ಯಾಂಡಲ್​ವುಡ್​ನ  ಹಲವಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ಮನರಂಜಿಸಿದ್ದ ಖ್ಯಾತಿ ಬಿರಾದರ್​ ಅವರಿಗಿದೆ.

  ಅಮಿತಾಭ್​ ಬಚ್ಚನ್​ ಮನಗೆದ್ದ ಕನ್ನಡದ ಖ್ಯಾತ ನಟ!; ಕರೆ ಮಾಡಿದ ಬಿಗ್​ ಬಿ ಹೇಳಿದ್ದೇನು ಗೊತ್ತಾ?

  10. ಭಾರತದ ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸದ ವೇಳಾಪಟ್ಟಿ ನಿಶ್ಚಿತವಾಗಿದೆ. ನವೆಂಬರ್ 26ರಿಂದ ಜನವರಿ 19ವರೆಗೆ ಬಹುತೇಕ ಎರಡು ತಿಂಗಳ ಪ್ರವಾಸ ಇದಾಗಿರಲಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ 3 ಏಕದಿನ, 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿಗಳಲ್ಲಿ ಮುಖಾಮುಖಿಯಾಗಲಿವೆ.

  Australia-India Cricket Series –ಆಸ್ಟ್ರೇಲಿಯಾ-ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ
  Published by:G Hareeshkumar
  First published: