• Home
  • »
  • News
  • »
  • state
  • »
  • Top-5 News: ಕೊಹ್ಲಿ ಕೈಯಲ್ಲಿ ದುಬಾರಿ ವಾಚ್, ಬಿಗ್ ಬಾಸ್‌ನಲ್ಲಿ ಲವ್ ಸ್ಟೋರಿ ಸ್ಟಾರ್ಟ್! ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

Top-5 News: ಕೊಹ್ಲಿ ಕೈಯಲ್ಲಿ ದುಬಾರಿ ವಾಚ್, ಬಿಗ್ ಬಾಸ್‌ನಲ್ಲಿ ಲವ್ ಸ್ಟೋರಿ ಸ್ಟಾರ್ಟ್! ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ವಿರಾಟ್ ಕೈಯಲ್ಲಿ ದುಬಾರಿ ವಾಚ್!


ಮುಂಬರುವ T20 ವಿಶ್ವಕಪ್‌ಗಾಗಿ (T20 World Cup 2022) ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ (Team India) ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿದೆ. ಈ ವೇಳೆ ಸಂಪೂರ್ಣ ತಂಡ ಫೋಟೋಶೂಟ್​ ಮಾಡಿಸಿದ್ದು, ಇದರಲ್ಲಿ ಕೊಹ್ಲಿಯ ವಾಚ್​ ಬಗ್ಗೆ ಸಖತ್​ ಚರ್ಚೆಯಾಗುತ್ತಿದೆ. ಕೊಹ್ಲಿ ಧರಿಸಿದ್ದ ವಾಚ್ ರೋಲೆಕ್ಸ್ ಕಂಪನಿಯದ್ದಾಗಿದೆ. ಇದರ ಬೆಲೆ ಸರಿ ಸುಮಾರು 28 ಲಕ್ಷ ರೂ. ಎನ್ನಲಾಗಿದೆ. ಅಲ್ಲದೇ ಈ ವಾಚನ್ನು ರೋಲೆಕ್ಸ್ ಕಂಪನಿ ನಮಗೆ ಹೇಗೆ ಬೇಕೋ ಹಾಗೆ ರೆಡಿ ಮಾಡಿಕೊಡುತ್ತದೆಯಂತೆ. ಹೀಗಾಗಿಯೇ ಕೊಹ್ಲಿ ಧರಿಸಿದ್ದ ಈ ವಾಚ್​ ಚಿನ್ನದ ಲೇಪಿತವಾಗಿದೆ. ಇದೇ ಕಾರಣಕ್ಕೆ ಅವರ ಬೆಲೆಯೂ ಅಷ್ಟೇ ದುಬಾರಿಯಾಗಿದೆ.


ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ


ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಮುಗಿದಿದೆ. 10 ದಿನಗಳ  ಕಾಲ ‘ನ ಭೂತೋ, ನ ಭವಿಷ್ಯತಿ‘ ಎನ್ನುವಂತೆ ಅದ್ಧೂರಿಯಾಗಿ ಮೈಸೂರು ದಸರಾ ಮಹೋತ್ಸವ ನಡೆದಿತ್ತು. ಮೊನ್ನೆ ವಿಜಯ ದಶಮಿ (Vijaya Dashami) ದಿನ ಅಧಿದೇವತೆ ಚಾಮುಂಡೇಶ್ವರಿಯ (Chamundeshwari) ವಿಗ್ರಹ ಸಮೇತ ಚಿನ್ನದ ಅಂಬಾರಿಯ (Ambari) ಮೆರವಣಿಗೆ ನಡೆದು, 2022ರ 10 ದಿನಗಳ ದಸರಾ ಮಹೋತ್ಸವಕ್ಕೆ ಮುಕ್ತಾಯ ಹಾಡಲಾಗಿತ್ತು. “ಮೈಸೂರು ದಸರಾ, ಎಷ್ಟೊಂದು ಸುಂದರ” ಎನ್ನುವುದು ಕವಿವಾಣಿ. ಮೈಸೂರು ದಸರಾವನ್ನು ಕಣ್ತುಂಬಿಕೊಂಡವರಿಗೆ ಈ ಮಾತು ಅಕ್ಷರಶಃ ಸತ್ಯ ಎನ್ನುವುದು ಮನದಟ್ಟಾಗಿರುತ್ತದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ (PM Narendra Modi) ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಬಗ್ಗೆ, ಇಲ್ಲಿನ ಸಾಂಸ್ಕೃತಿಕ, ಧಾರ್ಮಿಕ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಟ್ವೀಟ್ (Tweet) ಮಾಡಿ ಮೈಸೂರಿನ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: Mysuru Dasara: ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ, ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ


ಕೊನೆ ಉಸಿರು ಇರೋ ತನ ಪ್ರೀತಿ ಮಾಡ್ತೀನಿ, ಬಿಗ್​ ಬಾಸ್ ಮನೆಯಲ್ಲಿ ಲವ್​ಸ್ಟೋರಿ!


ಬಿಗ್​ ಬಾಸ್ ಕನ್ನಡ ಓಟಿಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಜೋಡಿ ನಡುವೆ ಟಿವಿ ಬಿಗ್ ಸೀಸನ್ 9ರಲ್ಲಿ ಈಗ ತುಸು ಹೆಚ್ಚೇ ಲವ್ ಶುರುವಾಗಿದೆ. ರೂಪೇಶ್ ಸಾನ್ಯಾ ಮಧ್ಯೆ ಕಾವ್ಯ ಎಂಟ್ರಿಯಿಂದ ಸಾನ್ಯ ಬೇಸರಗೊಂಡಿದ್ದರು. ಇದೀಗ ಮೊದಲ ವಾರದ ಜೋಡಿ ಟಾಸ್ಕ್ ಮುಗಿದ ಬಳಿಕ ಸಾನ್ಯ ನಿರಾಳವಾಗಿದ್ದಾರೆ. ರೂಪೇಶ್ ಸಾನ್ಯಗೆ ಹೆಚ್ಚಿನ ಸಮಯ ಕೊಡ್ತಿದ್ದಾರೆ. ಸಾನ್ಯ ಮತ್ತು ರೂಪೇಶ್ ಸಂಭಾಷಣೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗುತ್ತಿದೆ. ನನ್ನ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದು ರೂಪೇಶ್‌ಗೆ ಸಾನ್ಯ ಪ್ರಪ್ರೋಸ್ ಮಾಡಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ಪ್ರೇಮ ಕಹಾನಿ ರೊಮ್ಯಾಂಟಿಕ್ ತಿರುವು ಪಡೆದಿದೆ.


ಜೋರಾಯ್ತು ಚೋಳರ ಧರ್ಮದ ಕುರಿತ ಚರ್ಚೆ!


ತಮಿಳುನಾಡು: ಭಾರತವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಚೋಳ ಸಾಮ್ರಾಜ್ಯವೂ (Chola Empire) ಒಂದು. ತಮಿಳುನಾಡಿನ (Tamil Nadu) ಪ್ರದೇಶಗಳನ್ನೇ ಕೇಂದ್ರವಾಗಿರಿಸಿಕೊಂಡು ರಾಜ್ಯ ಆಳಿದ್ದ ಚೋಳರು (Cholas), ಸಿಂಹಳ ದ್ವೀಪ (Sinhala island) ಅಂದರೆ ಈಗಿನ ಶ್ರೀಲಂಕಾದಲ್ಲೂ (Sri Lanka) ಆಳ್ವಿಕೆ ನಡೆಸಿದ್ದರು. ಇದೀಗ ಚೋಳದ ಧರ್ಮ (religion) ಯಾವುದು ಎನ್ನುವ ಬಗ್ಗೆ ತಮಿಳುನಾಡಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ರಾಜಕಾರಣಿಯೂ (Politician) ಆಗಿರುವ ಖ್ಯಾತ ನಟ (Actor Kamal Haasan) ಕಮಲ್ ಹಾಸನ್ ನೀಡಿದ ಹೇಳಿಕೆ. ಚೋಳರ ಕಾಲದಲ್ಲಿ ಹಿಂದೂ ಧರ್ಮವೇ (Hindu religion) ಇರಲಿಲ್ಲ ಅಂತ ಕಮಲ್ ಹಾಸನ್ ಹೇಳಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್ ಹಾಸನ್ ವಿರುದ್ಧ ತಮಿಳುನಾಡಿನ ಬಿಜೆಪಿ ನಾಯಕರು (Tamil Nadu BJP Leaders) ಮುಗಿ ಬಿದ್ದಿದ್ದಾರೆ.


ಇದನ್ನೂ ಓದಿ: Chola King: ಜೋರಾಯ್ತು ಚೋಳರ ಧರ್ಮದ ಕುರಿತ ಚರ್ಚೆ! ಕಮಲ್‌ ಹಾಸನ್‌ಗೆ ಬಿಜೆಪಿ ಸವಾಲು


ಇದೇ ಮೊದಲ ಬಾರಿ ಫ್ರೆಂಚ್ ಲೇಖಕಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ


2022 ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು (Nobel Prize in literature 2022) ಫ್ರೆಂಚ್ ಬರಹಗಾರ್ತಿ ಅನ್ನಿ ಎರ್ನಾಕ್ಸ್ ಅವರಿಗೆ ಅಕ್ಟೋಬರ್ 6, 2022 ರಂದು ಸ್ಟಾಕ್‌ಹೋಮ್‌ನಲ್ಲಿರುವ ಸ್ವೀಡಿಷ್ ಅಕಾಡೆಮಿಯಲ್ಲಿ ನೀಡಲಾಯಿತು. ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (£807,000) ಮೌಲ್ಯದ್ದಾಗಿದೆ. ವೈಯಕ್ತಿಕ ಸ್ಮರಣೆಯ ಮೂಲಾಧಾರಗಳು, ಪ್ರತ್ಯೇಕತೆ ಹಾಗೂ ಸಾಮೂಹಿಕ ನಿರ್ಬಂಧಗಳನ್ನು ಬಹಿರಂಗಪಡಿಸಲು ಪ್ರದರ್ಶಿಸಿದ ಧೈರ್ಯ ಹಾಗೂ ನಿಷ್ಠತೆಗಾಗಿ ಅನ್ನಿ ಎರ್ನಾಕ್ಸ್ ಅವರಿಗೆ (French Author Annie Ernaux) ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.

Published by:Annappa Achari
First published: