HOME » NEWS » State » EVENING DIGEST OCTOBER 5TH TOP 10 KANNADA POLITICAL SPORTS AND OTHER NEWS ARE HERE HK

Evening Digest: ಮೂವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ, ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ : ಟಾಪ್​​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

news18-kannada
Updated:October 5, 2020, 4:59 PM IST
Evening Digest: ಮೂವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ, ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ : ಟಾಪ್​​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ವೈದ್ಯಕೀಯ ಕ್ಷೇತ್ರದಲ್ಲಿನ  ಸಾಧನೆಗೆ ಮೂವರಿಗೆ ಜಂಟಿಯಾಗಿ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಮೆರಿಕರದವರಾದ ಹಾರ್ವೆ ಆಲ್ಟರ್​, ಚಾರ್ಲ್ಸ್​ ರೈಸ್​ ಹಾಗೂ ಬ್ರಿಟನ್​ನ ಮೈಕೆಲ್​ ಹೌಟನ್​ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈಪಟೈಟಿಸ್​ ಸಿ ವೈರಸ್​ ಅನ್ವೇಷಣೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.  ರಕ್ತದಿಂದ ಹರಡುವ ಹೆಪಟೈಟಿಸ್​ ವಿರುದ್ಧದ ಹೋರಾಟ ಕುರಿತು ಈ ಮೂವರು ಅನ್ವೇಷಣೆ ನಡೆಸಿದ್ದರು.

ಹೈಪಟೈಟಿಸ್​ ಸಿ ವೈರಸ್​ ಅನ್ವೇಷಣೆ: ಮೂವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

2.ನೌಕಾಪಡೆಗೆ ಸೇರಿದ ಗ್ಲೈಡರ್ ವಿಮಾನ ಭಾನುವಾರ ಕೇರಳದ ಕೊಚ್ಚಿ ಬಳಿ ಇರುವ ತೊಪ್ಪುಂಪಾಡಿಯಲ್ಲಿ ಪತನವಾದ ಪರಿಣಾಮ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ವಾಯುನೆಲೆಯಲ್ಲಿ ಪ್ರತಿನಿತ್ಯದಂತೆ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಐಎನ್​ಎಸ್​ ಗರುಡ ವಿಮಾನದ ತರಬೇತಿ ನೀಡುತ್ತಿದ್ದಾಗ ಭಾನುವಾರ ಬೆಳಗ್ಗೆ 7 ಗಂಟೆಗೆ ಗ್ಲೈಡರ್ ಪತನಗೊಂಡಿದೆ.

ಕೇರಳದ ಕೊಚ್ಚಿಯಲ್ಲಿ ತರಬೇತಿ ವೇಳೆ ಗ್ಲೈಡರ್ ಪತನ; ಇಬ್ಬರು ನೌಕಾಧಿಕಾರಿಗಳು ಸಾವು

3. ಹ್ಯಾಂಬರ್ಗ್​ನಲ್ಲಿ ಆಯೋಜಿಸಿರುವ ಭಾರತೀಯ ಕಾನ್ಸಲೇಟ್​​ ಸಮ್ಮೇಳನಕ್ಕೆ ಸಂಸದ ತೇಜಸ್ವಿ ಸೂರ್ಯ ಆಹ್ವಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಸಂಸದ, ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ. ಗ್ಲೋಮನ್​ ಕನ್ಸಲ್ಟಿಂಗ್​ ಜಿಎಂಬಿಎಸ್​ ಸಹಭಾಗಿತ್ವದಲ್ಲಿ ಅಕ್ಟೋಬರ್​ 7ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ, ಜರ್ಮನಿಯ ಅನಿವಾಸಿ ಭಾರತೀಯರು ತೇಜಸ್ವಿ ಸೂರ್ಯ ಆಹ್ವಾನಕ್ಕೆ ವಿರೋಧಿಸಿದ್ದಾರೆ.

ಹ್ಯಾಂಬರ್ಗ್​ ಸಮ್ಮೇಳನಕ್ಕೆ ತೇಜಸ್ವಿ ಸೂರ್ಯ; ಯುರೋಪಿಯನ್​ ಭಾರತೀಯರಿಂದ ತೀವ್ರ ವಿರೋಧ

4.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಭ್ರಷ್ಟಾಚಾರದಿಂದ ಹಣ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಇಂದು ಮುಂಜಾನೆ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ಮನೆ ಮೇಲೆ ದಾಳಿ ನಡೆಸಿದ ಐವರು ಸಿಬಿಐ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ 6 ಗಂಟೆಗೆ ಸಿಬಿಐ ದಾಳಿ ನಡೆಸಲಾಗಿದೆ.DK Shivakumar: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ; ಟ್ರಬಲ್ ಶೂಟರ್​ಗೆ ಮತ್ತೊಂದು ಸಂಕಷ್ಟ

5. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಪಕ್ಷ ಎಲ್ಲಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಮೊದಲು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಲಿ. ಅವರ ಇತಿಹಾಸ ತೆಗೆದರೆ ಅವರ ಸಂಸ್ಕೃತಿ ಏನೆಂದು ಗೊತ್ತಾಗಲಿದೆ.

ಸಿದ್ದರಾಮಯ್ಯ ಮೊದಲು ಚಿಲ್ಲರೆ ರಾಜಕಾರಣ ಮಾಡೋದನ್ನು ಬಿಡಲಿ; ಕಿಡಿಕಾರಿದ ಮಾಜಿ ಸಿಎಂ ಕುಮಾರಸ್ವಾಮಿ

6.ಈಗ ರಾಜ್ಯದಲ್ಲಿ ಉಪ ಚುನಾವಣೆ ಇದೆ. ಈ ಪರಿಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರ  ಮನೆಯ ಮೇಲೆ ಸಿಬಿಐ ದಾಳಿ ಆಗಿದೆ. ತಪ್ಪು ಆಗಿದ್ರೆ ದಾಳಿ ಮಾಡಲು ಅಧಿಕಾರ ಇದೆ. ಆದರೆ, ರಾಜಕೀಯ ಪ್ರೇರಿತ ದಾಳಿ ಬೇಡ.

ತಪ್ಪು ಮಾಡಿದ್ರೆ ದಾಳಿ ಮಾಡಿ - ಆದರೆ ಉಪ ಚುನಾವಣೆ ವೇಳೆ ರಾಜಕೀಯ ಪ್ರೇರಿತ ದಾಳಿ ಸರಿಯಲ್ಲ ; ಸಿದ್ಧರಾಮಯ್ಯ ಕಿಡಿ

7.ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಹಾಗೂ ರಾಷ್ಟ್ರೀಯ ಕಾಂಗ್ರೆಸ್​​ ನಾಯಕರ ಮೇಲಿನ ಹಲ್ಲೆಯನ್ನು ಖಂಡಿಸಿ ಕೇಂದ್ರದ ಬಿಜೆಪಿ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್​ಭವನದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ನೂರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಮೋದಿ ಟ್ರಂಪ್ ಹೆಂಡತಿಗೆ ವಿಶ್ ಮಾಡ್ತಾರೆ, ಆದ್ರೆ ಸಂತ್ರಸ್ತೆ ಬಗ್ಗೆ ಮಾತನಾಡಲ್ಲ; ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

8.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ದಾಳಿ ನಡೆದಿದೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ ದಾಳಿ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಡಿಕೆಶಿ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿರುವ ರಮೇಶ್ ಜಾರಕಿಹೊಳಿ ಕೂಡ ಇದೇವೇಳೆ ಡಿಕೆ ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ. ಡಿಕೆ ಶಿವಕುಮಾರ್ ನನ್ನ ಹಳೆಯ ಗೆಳೆಯ. ಅವರು ಕಾನೂನು ಹೋರಾಟದಲ್ಲಿ ಗೆದ್ದು ಬರಲಿ ಎಂದು ಹಾರೈಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಕಾನೂನು ಹೋರಾಟದಲ್ಲಿ ಗೆಳೆಯ ಡಿಕೆ ಶಿವಕುಮಾರ್ ಗೆದ್ದು ಬರಲಿ; ಸಚಿವ ರಮೇಶ್ ಜಾರಕಿಹೊಳಿ ಹಾರೈಕೆ!

9.ಬಾಲಿವುಡ್ ಆ್ಯಕ್ಷನ್​ ಕಿಂಗ್​​  ಅಕ್ಷಯ್​ ಕುಮಾರ್​ ಕೊರೋನಾ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ತಮ್ಮ ಬಹುನಿರೀಕ್ಷಿತ ಸಿನಿಮಾ ಬೆಲ್​ ಬಾಟಮ್​ ಚಿತ್ರೀಕರಣ ಆರಂಭಿಸಿದ್ದರು. ಇನ್ನು ಲಾಕ್​ಡೌನ್​ ಸಂಪೂರ್ಣವಾಗಿ ಅಂತ್ಯಗೊಳ್ಳುವ ಮುನ್ನವೇ ಈ ಸಿನಿಮಾದ ಚಿತ್ರೀರಕಣ ಸಹ ಪೂರ್ಣಗೊಳಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅಕ್ಷಯ್​ ಅವರ 'ಬೆಲ್​ಬಾಟಂ' ಸಿನಿಮಾ ಲಾಕ್​ಡೌನ್​ನಲ್ಲೇ ಸೆಟ್ಟೇರಿತ್ತು. ಈಗ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗುತ್ತಿದೆ.

BellBottom Teaser: ರಿಲೀಸ್​ ಆಯ್ತು ಅಕ್ಷಯ್​ ಅಭಿನಯದ ಬೆಲ್​ಬಾಟಮ್​ ಸಿನಿಮಾದ ಟೀಸರ್​..!

10. ಸತತ ಎರಡು ಗೆಲುವು ದಾಖಲಿಸುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಇಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ತಲಾ ಮೂರು ಗೆಲುವು ಒಂದು ಸೋಲು ದಾಖಲಿಸಿದ್ದು, ಅಗ್ರ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಲಿವೆ.

IPL 2020, RCB vs DC: ಹ್ಯಾಟ್ರಿಕ್ ಜಯದ ಕನಸಲ್ಲಿ ಆರ್​ಸಿಬಿ; ಕೊಹ್ಲಿ ತಂಡದಲ್ಲಿ ಮಹತ್ವದ ಬದಲಾವಣೆ
Published by: G Hareeshkumar
First published: October 5, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories