1.ಕೊರೋನಾ ವೈರಸ್ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್ ಎಸ್ಟೇಟ್ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.
Gold Price Today: ವಾರಾಂತ್ಯಕ್ಕೆ ಕುಸಿತ ಕಂಡ ಚಿನ್ನದ ದರ; ಆಭರಣ ಖರೀದಿಸಲು ಇದು ಸುಸಂದರ್ಭ
2. ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿಕೂಟ ಹಾಗೂ ಕಾಂಗ್ರೆಸ್-ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿ ಕಂಡು ಬರುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದ್ದು ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ. ಈ ನಡುವೆ ಇಂದು ಚುನಾವಣಾ ಪ್ರಚಾರ ನಡೆಸಿರುವ ನಿತೀಶ್ ಕುಮಾರ್ ಆರ್ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಯಾದವ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
10 ಲಕ್ಷ ಉದ್ಯೋಗ ನೀಡುವ ತೇಜಸ್ವಿ ಯಾದವ್ ಭರವಸೆ ಬೋಗಸ್; ಬಿಹಾರ ಸಿಎಂ ನಿತೀಶ್ ಕುಮಾರ್ ಆರೋಪ
3. ವಿಶ್ವದ ಅನೇಕ ದೇಶಗಳಲ್ಲಿ, ಅದರಲ್ಲೂಅಮೆರಿಕ ಮತ್ತು ಬ್ರಿಟನ್ನಲ್ಲಿ ನೆಲಸಿರುವ ಭಾರತೀಯ ಸಮುದಾಯ ಅಲ್ಲಿಯ ರಾಜಕಾರಣದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಅಮೆರಿಕದಲ್ಲೂ ಸಾಕಷ್ಟು ಭಾರತೀಯ ಸಮುದಾಯದವರು ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ಧಾರೆ. ವಿಪಕ್ಷ ಡೆಮಾಕ್ರಾಟಿಕ್ನ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಇದ್ದಾರೆ. ಅದೇ ಪಕ್ಷದಲ್ಲಿ ಕನ್ನಡಿಗರೊಬ್ಬರು ಗಮನಾರ್ಹವಾಗಿ ಗುರುತಿಸಿಕೊಂಡಿದ್ಧಾರೆ. 43 ವರ್ಷದ ಡಾ. ವಿವೇಕ್ ಹೆಚ್ ಮೂರ್ತಿ ಅವರು ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಅವರ ಪ್ರಚಾರ ತಂಡದ ಪ್ರಮುಖ ಭಾಗವಾಗಿದ್ಧಾರೆ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಸೋತು ಬೈಡೆನ್ ಅಮೆರಿಕ ಅಧ್ಯಕ್ಷರಾದರೆ ಕನ್ನಡಿಗ ಡಾ. ವಿವೇಕ್ ಮೂರ್ತಿ ಅವರು ಬಹುದೊಡ್ಡ ಸ್ಥಾನ ಅಲಂಕರಿಸುವ ಸಂಭವನೀಯತೆ ಹೆಚ್ಚಿದೆ
ಅಮೆರಿಕಾ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮದ್ದೂರು ಯುವಕ ವಿವೇಕ್ ಮೂರ್ತಿ
4.ಈ ಯಡಿಯೂರಪ್ಪ ಆಡಿದ ಮಾತನ್ನು ಅಕ್ಷರಶಃ ನಡೆಸಿಕೊಡುವಂತವನು. ಇನ್ನು ಎರಡೂವರೆ ವರ್ಷಗಳಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಎಲ್ಲಾ ವರ್ಗದ ಜನರಿಗೆ ಯಾವುದೇ ಅನಾನುಕೂಲ ಆಗಬಾರದು. ಕೋವಿಡ್ ನಿಂದ ಸ್ವಲ್ಪ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಇವಾಗ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಿದೆ. ಶಿರಾ ಹಾಗೂ ತುಮಕೂರು ಕ್ಷೇತ್ರಗಳನ್ನು ಮಾದರಿ ತಾಲ್ಲೂಕು ಆಗಿ ಮಾಡ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
6 ತಿಂಗಳೊಳಗೆ ಮದಲೂರು ಕೆರೆಗೆ ನೀರು ತುಂಬಿಸಿ, ನಾನೇ ಉದ್ಘಾಟನೆ ಮಾಡ್ತೇನೆ; ಸಿಎಂ ಬಿಎಸ್ ಯಡಿಯೂರಪ್ಪ
5. ಆರ್ಆರ್ ನಗರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ನೀನು ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದ್ದಿ. ನಿನ್ನನ್ನು ಸೋಲಿಸಲೇಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ. ನಿನ್ನಂಥವರು ರಾಜಕೀಯದಲ್ಲಿ ಇರಬಾರದು. ಕಣ್ಣೀರು ಹಾಕಿದ್ರೆ ಅನುಕಂಪ ಬರುತ್ತದೆ ಅಂತ ನೀನು ಅಂದ್ಕೊಂಡಿದ್ರೆ ತಪ್ಪು. ಕಾಂಗ್ರೆಸ್ ತಾಯಿಗೆ ಚೂರಿ ಹಾಕಿ ಹೋದ ನಿನ್ನನ್ನು ಜನ ನಂಬ್ತಾರಾ? ಎಂದು ಮುನಿರತ್ನ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ತಾಯಿಗೆ ಚೂರಿ ಹಾಕಿದ ನಿನ್ನನ್ನು ಜನ ನಂಬ್ತಾರಾ?; ಮುನಿರತ್ನ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
6. ಮುನಿರತ್ನ ಸೇರಿದಂತೆ ಕಾಂಗ್ರೆಸ್ನ ಶಾಸಕರು ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅದಕ್ಕೆ ತಿರುಗೇಟು ನೀಡಿರುವ ಸಚಿವ ಬಿ. ಶ್ರೀರಾಮುಲು, ಬೆನ್ನಿಗೆ ಚೂರಿ ಹಾಕಿದ್ದು ನಮ್ಮ ಶಾಸಕರಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ನೀವು ಕಾಂಗ್ರೆಸ್ಗೆ ಸೇರ್ಪಡೆಯಾದಿರಿ. ನಿಮ್ಮನ್ನು ಸಿದ್ದರಾಮಯ್ಯ ಎನ್ನುವ ಬದಲು ಚೂರಿ ರಾಮಯ್ಯ ಎನ್ನಬೇಕಾ? ಎಂದು ಲೇವಡಿ ಮಾಡಿದ್ದಾರೆ.
ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ನೀವು ಚೂರಿ ರಾಮಯ್ಯ; ಸಿದ್ದರಾಮಯ್ಯ ಬಗ್ಗೆ ಶ್ರೀರಾಮುಲು ಲೇವಡಿ
7.ಕೆ.ಆರ್.ಪೇಟೆ ಪುರಸಭಾ ಅಧ್ಯಕ್ಷಗಾದಿಗಾಗಿ ಮತ್ತೆ ರಾಜಕೀಯ ಗುದ್ದಾಟ ಶುರು ಆಗಿದೆ. ಈ ಬಾರಿ ಕೆ.ಆರ್.ಪೇಟೆ ಪಟ್ಟಣ ಪುರಸಭೆಯ ಅಧಿಕಾರ ಹಿಡಿಯಲು ಸಚಿವ ನಾರಾಯಣಗೌಡ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ಜೆಡಿಎಸ್ನಿಂದ ಗೆದ್ದ8 ಜನ ಪುರಸಭಾ ಸದಸ್ಯರನ್ನು ಬಿಜೆಪಿಗೆ ಕರೆ ತಂದಿದ್ದಾರೆ. ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ವಿಪ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.
ನಾಳೆ ಕೆಆರ್ಪೇಟೆ ಅಧ್ಯಕ್ಷಗಾದಿಗೆ ಚುನಾವಣೆ; ಅಧಿಕಾರ ಗದ್ದುಗೆಗಾಗಿ ಸಚಿವ ನಾರಾಯಣಗೌಡ ರಣತಂತ್ರ
8. ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರವಾಗಿ ಇಂದು ಚುನಾವಣಾ ಪ್ರಚಾರ ಪಡೆಸುತ್ತಿದ್ದಾರೆ. ಯಶವಂತಪುರದಿಂದ ರೋಡ್ ಶೋ ನಡೆಸುತ್ತಿರುವ ದರ್ಶನ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅವರ ಪರ ಪ್ರಚಾರ ಮಾಡಿದ್ದೇನೆ. ಕೊರೋನಾ ಸಮಯದಲ್ಲಿ ಮುನಿರತ್ನ ಅವರು ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ಅವರು ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಈ ವೇಳೆ ನಟ ದರ್ಶನ್ ಹೇಳಿದ್ದಾರೆ.
Darshan: ಪಕ್ಷಕ್ಕಿಂತ ನನಗೆ ವ್ಯಕ್ತಿ ಮುಖ್ಯ; ಮುನಿರತ್ನ ಪರ ನಟ ದರ್ಶನ್ ಪ್ರಚಾರ
9. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಗ ಯಥರ್ವನಿಗೆ ಒಂದು ಜನುಮ ದಿನದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಟಿ ರಾಧಿಕಾ ಪಂಡಿತ್ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಯಥರ್ವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಕೋರಿದ್ದಾರೆ.
Yash: ಯಥರ್ವ್ ಮೊದಲನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಶೇಷ ಪೋಸ್ಟ್ ಹಾಕಿದ ಯಶ್ - ರಾಧಿಕಾ ಪಂಡಿತ್
10. ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಲಿದೆ. ಉಭಯ ತಂಡಗಳಿಗೂ ಇಂದಿನ ಪಂದ್ಯವು ಮಹತ್ವದಾಗಿದ್ದು, ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಿರಿಸಿಕೊಳ್ಳುವ ತವಕದಲ್ಲಿದೆ. ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಹೀಗಾಗಿ ಇಂದಿನ ಪಂದ್ಯ ಭರ್ಜರಿ ಪೈಪೋಟಿಗೆ ಕಾರಣವಾಗಲಿದೆ.
RR vs KXIP: ರಾಬಿನ್ vs ರಾಹುಲ್: ಇಂದು ಕಣಕ್ಕಿಳಿಯುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ