• Home
  • »
  • News
  • »
  • state
  • »
  • Top-5 News: ರಾಹುಲ್ ಭಾಷಣಕ್ಕೆ ರಮ್ಯಾ ಕಾಮೆಂಟ್, ದೆವ್ವವಾಗಿ ಬರ್ತಾಳಂತೆ ಬಾಲಕಿ! ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

Top-5 News: ರಾಹುಲ್ ಭಾಷಣಕ್ಕೆ ರಮ್ಯಾ ಕಾಮೆಂಟ್, ದೆವ್ವವಾಗಿ ಬರ್ತಾಳಂತೆ ಬಾಲಕಿ! ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

PFI ಭಾಗ್ಯ ಕೂಡ ಸಿದ್ದರಾಮಯ್ಯ ಅವರದ್ದೇ; ಪೋಸ್ಟರ್ ಮೂಲಕ ಟಾಂಗ್ ಕೊಟ್ರು R ಅಶೋಕ್​


ಪೇಸಿಎಂ ಪೋಸ್ಟರ್​ ಅಂಟಿಸಿಕೊಂಡು ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಿಡಿಕಾರಿದ ಕಾಂಗ್ರೆಸ್​ಗೆ ಸಚಿವ ಆರ್. ಅಶೋಕ್ (Minister R Ashok)​ ಕೂಡ ಸಿದ್ದರಾಮಯ್ಯ  (Siddaramaiah) ಬಗ್ಗೆ ಪೋಸ್ಟರ್​ ರಿಲೀಸ್​ ಮಾಡುವ ಮೂಲಕವೇ ತಿರುಗೇಟು ನೀಡಿದ್ದಾರೆ. ​ ಎಲ್ಲಾ ಭಾಗ್ಯಗಳು ನಮ್ಮದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕಾಗಿ ಇಂದು PFI ಭಾಗ್ಯ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ (Press Meet) ಮಾತನಾಡಿದ ಅವರು, ಪಿಎಫ್ಐ ಬ್ಯಾನ್ ನಿಂದ ಕಾಂಗ್ರೆಸ್ ಸೂತಕದ ಮನೆಯಾಗಿದೆ. ಅವರ ಕುಟುಂಬದ ಬಂಧುಗಳು ( PFI Ban) ಬ್ಯಾನ್ ಆಗಿದ್ದಾರೆ. ಯಾವ ಮುಖ ಇಟ್ಟುಕೊಂಡು ಪಿಎಫ್ಐ ಬ್ಯಾನ್  ಬಗ್ಗೆ ಕಾಂಗ್ರೆಸ್ ನವ್ರು ಮಾತಾಡ್ತಾರೆ. ಸಿದ್ದರಾಮಯ್ಯ ನವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆರ್​. ಅಶೋಕ್ ಹೇಳಿದ್ದಾರೆ.


ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದು ಸುದ್ದಿಯಲ್ಲ! 


ಬೆಂಗಳೂರು: ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ‘ಭಾರತ್ ಜೋಡೋ’ ಪಾದಯಾತ್ರೆ (Bharat Jodo Yatra) ಮುಂದುವರೆದಿದೆ. ಕರ್ನಾಟಕದಲ್ಲೂ (Karnataka) ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಚಾಮರಾಜನಗರದಲ್ಲಿ (Chamarajanagr) ಯಾತ್ರೆ ಮುಗಿದಿದ್ದು, ಮೈಸೂರಿನಲ್ಲಿ (Mysuru) ಮುಂದುವರೆದಿದೆ. ನಿನ್ನೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಮಳೆ ನಡುವೆಯೂ ಭಾಷಣ ಮಾಡಿದ್ದರು. ಬಿರುಸಿನ ಮಳೆ ಮಧ್ಯೆಯೂ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು, ರಾಹುಲ್ ಗಾಂಧಿ ಅಭಿಮಾನಿಗಳು ಮಳೆ, ಚಳಿ ಲೆಕ್ಕಿಸದೇ ರಾಹುಲ್ ಗಾಂಧಿ ಭಾಷಣ ಕೇಳಿದ್ದರು. ಈ ವಿಡಿಯೋ (Video) ಸೋಶಿಯಲ್ ಮೀಡಿಯಾಗಳಲ್ಲಿ (Social Media) ಭಾರೀ ವೈರಲ್ (Viral) ಆಗಿತ್ತು. ಇನ್ನು ಈ ವಿಡಿಯೋ ನೋಡಿದ ಮಾಜಿ ಸಂಸದೆ, ಚಿತ್ರ ನಟಿ ರಮ್ಯಾ (Ramya Divyaspandana) ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಶೇರ್‌ ಮಾಡಿ, ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Rahul Gandhi-Ramya: ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದು ಸುದ್ದಿಯಲ್ಲ! ಹೀಗಂದಿದ್ದೇಕೆ ನಟಿ ರಮ್ಯಾ?


ಗಂಡನ ಆದಾಯ ತಿಳಿಯೋಕೆ RTI ಮೊರೆಹೋದ ಮಹಿಳೆ!


ಆರ್​ಟಿಐ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಮಹಿಳೆಯೊಬ್ಬರು ತನ್ನ ಪತಿಯ ಆದಾಯದ ವಿವರಗಳನ್ನು ಕೋರಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ತನ್ನ ಇತ್ತೀಚಿನ ಆದೇಶದಲ್ಲಿ ಮಹಿಳೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.


ನನ್ನ ಮೃತದೇಹ ನೋಡೋಕೆ ಬಂದಿಲ್ಲ ಅಂದ್ರೆ ದೆವ್ವವಾಗಿ ಬರ್ತೀನಿ! 


ರಾಯಚೂರು: ಆಕೆ ಇನ್ನೂ ಬಾಳಿ ಬದುಕಬೇಕಾದ ಬಾಲಕಿ (Girl). ಜೀವನದಲ್ಲಿ (Life) ಕಳೆದಿದ್ದು ಕೆಲವೇ ವರ್ಷಗಳು ಮಾತ್ರ. ಇನ್ನು ಬದುಕಬೇಕಾಗಿದ್ದು ತುಂಬಾ ವರುಷ. ಆದರೆ ಅಷ್ಟರಲ್ಲಾಗಲೇ ಆ ಬಾಲಕಿ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ. ಗಣೇಶ ವಿಸರ್ಜನೆಗಾಗಿ (Ganesh Visarjane) ನಿರ್ಮಿಸಿದ್ದ ಹೊಂಡದಲ್ಲಿ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ಇಷ್ಟು ಚಿಕ್ಕ ಹುಡುಗಿ, ಅದ್ಯಾಕೆ ಬದುಕಿಗೆ ವಿದಾಯ ಹೇಳಿದ್ದಳು ಅಂತ ಊರಿನವರೆಲ್ಲ ಶಾಕ್‌ಗೆ (Shock) ಒಳಗಾಗಿದ್ದರು. ಆಕೆಯ ಮನೆಯವರು ಮಗಳನ್ನು ಕಳೆದುಕೊಂಡ ಶೋಕದಲ್ಲಿದ್ದರು. ಈ ನಡುವೆಯೇ ಆಕೆ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ ನೋಟ್ (Death Note) ಸಿಕ್ಕಿದೆ. ಆ ಪತ್ರ ನೋಡಿ ಎಲ್ಲರೂ ಮತ್ತೊಮ್ಮೆ ಶಾಕ್‌ಗೆ ಒಳಗಾಗಿದ್ದಾರೆ.


ಇದನ್ನೂ ಓದಿ: Suicide: ನನ್ನ ಮೃತದೇಹ ನೋಡೋಕೆ ಬಂದಿಲ್ಲ ಅಂದ್ರೆ ದೆವ್ವವಾಗಿ ಬರ್ತೀನಿ! ಡೆತ್‌ ನೋಟ್‌ ಬರೆದಿಟ್ಟು ಬಾಲಕಿ ಸೂಸೈಡ್


ನಟ ಚಂದನ್ ಕುಮಾರ್ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಲಾಕ್!


ಲಕ್ಷ್ಮಿ ಬಾರಮ್ಮ ಧಾರಾವಾಹಿ (Serial) ಖ್ಯಾತಿ ನಟ ಚಂದನ್ ಕುಮಾರ್ (Chandan Kumar) ಅವರ ಹೋಟೆಲ್‍ನಲ್ಲಿ (Hotel) ಕಳ್ಳತನ ನಡೆದಿತ್ತು. ನಟನ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್‍ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಸಿಕಿಹಾಕಿಕೊಂಡಿದ್ದಾನೆ. ಜುಲೈ 3 ರಿಂದ ಸೆಪ್ಟೆಂಬರ್ 13 ರ ನಡುವೆ 73 ದಿನಗಳಲ್ಲಿ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

Published by:Annappa Achari
First published: