Evening Digest: ಭಾರತದಲ್ಲಿ ನಿಲ್ಲದ ಕೊರೋನಾ ಅಬ್ಬರ, ಮಾಸ್ಕ್ ಧರಿಸದಿದ್ದರೆ 1,000 ರೂ. ದಂಡ: ಟಾಪ್​​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಜೋರಾಗುತ್ತಿದೆ. ನಿತ್ಯವೂ ಪ್ರಚಾರದಲ್ಲಿ ತೊಡಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಈಗ ಕೊರೋನಾ ಪಾಸಿಟಿವ್​ ಬಂದಿದೆ. ಹೀಗಾಗಿ ಅವರು ಕ್ವಾರಂಟೈನ್​ ಆಗಿದ್ದಾರೆ. ಈ ಬೆಳವಣಿಗೆಯಿಂದ ಅವರ ಚುನಾವಣಾ ಪ್ರಚಾರಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.

  Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಕೊರೋನಾ ಪಾಸಿಟಿವ್​

  2.ಉತ್ತರ ಪ್ರದೇಶ ಸರ್ಕಾರ ಮಹಿಳೆಯ ರಕ್ಷಣೆಗೆ ಸದಾ ಬದ್ಧವಾಗಿದ್ದು, ಎಲ್ಲಾ ತಾಯಂದಿರು ಹಾಗೂ ಸಹೋದರಿಯ ಸಂರಕ್ಷಣೆ, ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ. ಹಥ್ರಾಸ್​ ಅತ್ಯಾಚಾರ ಪ್ರಕರಣ ಕುರಿತು ಇಡೀ ದೇಶದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದು, ವಿಪಕ್ಷಗಳು ಬಿಜೆಪಿ ಆಡಳಿತವನ್ನು ಟೀಕಿಸುತ್ತಿವೆ. ಯೋಗಿ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಅಲ್ಲಿನ ಮಹಿಳೆಯರಲ್ಲಿ ಅಭದ್ರತೆ ಕಾಡುವಂತೆ ಆಗಿದೆ.

  ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧ ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​

  3.ಜಗತ್ತಿನಲ್ಲೇ ಅತಿ ಉದ್ದವಾದ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿರುವ ಅಟಲ್ ಸುರಂಗ ಮಾರ್ಗಕ್ಕೆ ನಾಳೆ ಚಾಲನೆ ನೀಡಲಾಗುತ್ತದೆ. ಮನಾಲಿಯಿಂದ ಲೇಹ್ ವರೆಗೆ ಇರುವ ಅಟಲ್ ಸುರಂಗ ಮಾರ್ಗವು 46 ಕಿಲೋ ಮೀಟರ್ ದೂರವನ್ನು 9.2 ಕಿಲೋ ಮೀಟರ್ ದೂರಕ್ಕೆ ತಗ್ಗಿಸಲಿದೆ. ಸುಮಾರು 4 ರಿಂದ 5 ಗಂಟೆಯ ಪ್ರಯಾಣದ ಸಮಯಾವಕಾಶವು ಉಳಿತಾಯವಾಗಲಿದೆ. ಅಕ್ಟೋಬರ್ 3 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಟಲ್ ಸುರಂಗ ಮಾರ್ಗವನ್ನು ಉದ್ಧಾಟಿಸಲಿದ್ದಾರೆ.

  ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

  4. ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ಬಿರಬಿರನೆ ಸಾಗುತ್ತಿದ್ದು ದೇಶದಲ್ಲಿದ ಕೊರೊನಾ ಸೋಂಕಿತರ ಸಂಖ್ಯೆ 63 ಲಕ್ಷ ದಾಟಿದೆ. ಅಲ್ಲದೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಲಕ್ಷದತ್ತ ಸಮೀಪಿಸಿದೆ.

  ಭಾರತದಲ್ಲಿ ನಿಲ್ಲದ ಕೊರೋನಾ ಅಬ್ಬರ; ದೇಶದಲ್ಲಿ ಮಹಾಮಾರಿಗೆ 99,773 ಜನ ಬಲಿ!

  5. ಹಥ್ರಾಸ್ ​ ಪ್ರಕರಣದ ಬಳಿಕ ಆಡಳಿತ ಯಂತ್ರಕ್ಕೆ ಮೇಜರ್​ ಸರ್ಜರಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಏಕಾಏಕಿ ಪೊಲೀಸ್​ ಅಧಿಕಾರಿಗಳ ವರ್ಗಾವಣೆ ನಡೆಸಿದ್ದಾರೆ. ಗುರುವಾರ ರಾತ್ರಿ ಆರು ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿರುವ ಬಿಜೆಪಿ ಸರ್ಕಾರ ಮಾಹಿತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಅಗಿ ನವನೀತ್​ ಸೆಹ್ಗಲ್​ ಅವರನ್ನು ನೇಮಕ ಮಾಡಿದೆ.

  ಹಥ್ರಾಸ್​ ಪ್ರಕರಣದ ಬಳಿಕ ಆಡಳಿತ ಯಂತ್ರಕ್ಕೆ ಮೇಜರ್​ ಸರ್ಜರಿ ನಡೆಸಿದ ಯೋಗಿ ಸರ್ಕಾರ

  6.ಇನ್ನುಮುಂದೆ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಟ್ಟರೆ ದುಬಾರಿ ದಂಡ ತೆರಬೇಕಾದೀತು. ಹೌದು, ಕೊರೋನಾ ಸೋಂಕಿನ ಪ್ರಮಾಣ ಮಿತಿಮೀರುತ್ತಿದ್ದರೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ತೋರುತ್ತಿರುವವರಿಗೆ ದುಬಾರಿ ದಂಡ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

  ಮನೆಯಿಂದ ಹೊರಹೋಗುವ ಮುನ್ನ ಎಚ್ಚರ!; ಮಾಸ್ಕ್ ಧರಿಸದಿದ್ದರೆ 1,000 ರೂ. ದಂಡ

  7. ಗಾಂಧಿ ಜಯಂತಿ ಹಾಗೂ ಲಾಲ್​ ಬಹೂದ್ದೂರ್​  ಶಾಸ್ತ್ರಿ ಅವರ ಜನ್ಮ ದಿನ ಅಂಗವಾಗಿ ಇಂದು ಸಿಎಂ ಗಾಂಧಿ ಹಾಗೂ ಶಾಸ್ತ್ರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ್ದಾರೆ. ಈ ವೇಳೆ ಕರ್ನಾಟಕದ ಪತ್ರಕರ್ತರ ಕುಟುಂಬಕ್ಕೆ ನೆರವಾಗುವ ಹೆಲ್ತ್​ ಕಾರ್ಡ್​​ ಯೋಜನೆಗೆ ಚಾಲನೆ ನೀಡಿದರು.

  ಪತ್ರಕರ್ತರ ಕುಟುಂಬಕ್ಕೆ ಹೆಲ್ತ್​ ಕಾರ್ಡ್​; ಯೋಜನೆಗೆ ಚಾಲನೆ ನೀಡಿದ ಸಿಎಂ ಬಿಎಸ್​ ಯಡಿಯೂರಪ್ಪ

  8.ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ಶುರುವಾಗಿದ್ದು ಜಿಲ್ಲಾಡಳಿತ ಭರ್ಜರಿ ತಯಾರಿ ನಡೆಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಭಾರೀ ಮುಂಜಾಗ್ರತೆಯನ್ನು ವಹಿಸಲಾಗಿದ್ದು, ಬಹಳ ಮಹತ್ವ ಪಡೆದಿರುವ ರಾಜಕೀಯ ಜಿದ್ದಾಜಿದ್ದಿಗೆ ಜಿಲ್ಲಾಡಳಿತ ಚುನಾವಣೆ ಸಂಬಂಧ ಆಡಳಿತಾತ್ಮಕವಾಗಿ ಸಿದ್ಧಗೊಂಡಿದೆ.

  Sira Assembly Bypolls: ಶಿರಾ ವಿಧಾನಸಭೆ ಉಪಚುನಾವಣೆ; ತುಮಕೂರಿನಲ್ಲಿ ಮಾದರಿ ನೀತಿಸಂಹಿತೆ ಜಾರಿ

  9.ಸ್ಯಾಂಡಲ್​ವುಡ್​ನಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡವರು ರಚಿತಾ ರಾಮ್​. ದರ್ಶನ್​, ಪುನೀತ್​ ರಾಜ್​ಕುಮಾರ್​ ಸೇರಿ ಸಾಕಷ್ಟು ಹೀರೋಗಳ ಜೊತೆ ರಚಿತಾ ತೆರೆ ಹಂಚಿಕೊಂಡಿದ್ದಾರೆ.

  Happy Birthday Rachita Ram: ರಚಿತಾ ರಾಮ್​ಗೆ ಇಂದು ಜನ್ಮದಿನದ ಸಂಭ್ರಮ; ಇಲ್ಲಿವೆ ಅವರ ವಿಶೇಷ ಚಿತ್ರಗಳು

  10. ಕಳೆದ ಮೂರು ಪಂದ್ಯಗಳಲ್ಲಿ ರನ್ ಕಲೆಹಾಕಲು ಸಂಪೂರ್ಣ ವಿಫಲವಾಗಿರುವ ಮುರಳಿ ವಿಜಯ್ ಅವರನ್ನು ಕೈಬಿಟ್ಟು ಗಾಯದಿಂದ ಚೇತರಿಸಿಗೊಂಡಿರುವ ಅಂಬಟಿ ರಾಯುಡು ಆಡುವ ಸಾಧ್ಯತೆ ಇದೆ.

  CSK vs SRH: ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಸಿಎಸ್​ಕೆ ಮಾಡಿದೆ ಮಾಸ್ಟರ್ ಪ್ಲ್ಯಾನ್: ಆ ಆಟಗಾರ ಇಂದು ಕಣಕ್ಕೆ?
  Published by:G Hareeshkumar
  First published: