Evening Digest: ಬಿಹಾರದಲ್ಲಿ ಆರಂಭವಾದ ಮೊದಲ ಹಂತದ ಮತದಾನ , ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಭಾರತದ ಮಟ್ಟಿಗೆ ಭ್ರಷ್ಟಾಚಾರ ಎಂಬುದು ರಾಜವಂಶದ ಸಂಪ್ರದಾಯದಂತೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ನೇರಾನೇರ ಟೀಕಿಸಿದ್ದಾರೆ.

  ಭಾರತದಲ್ಲಿ ಭ್ರಷ್ಟಾಚಾರ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದಿದೆ: ಸೋನಿಯಾ ಗಾಂಧಿಗೆ ಟಾಂಗ್ ನೀಡಿದ ಪ್ರಧಾನಿ ಮೋದಿ

  2.ಬಿಗಿ ಭದ್ರತೆ ಮತ್ತು ಕೋವಿಡ್ -19 ಮಾರ್ಗಸೂಚಿಗಳ ಮಧ್ಯೆ ಇಂದು ಬಿಹಾರ ವಿಧಾನಸಭೆಗೆ ಮೂರು ಹಂತದ ಭಾಗವಾಗಿ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಬಿಹಾರದ 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದ್ದು, 1,066 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾ ಆಯೋಗವು ನೀಡಿರುವ ಅಂಕಿಅಂಶಗಳ ಪ್ರಕಾರ ಸುಮಾರು 2.15 ಕೋಟಿ ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಪೈಕಿ 1.12 ಕೋಟಿ ಪುರುಷರು, 1.01 ಕೋಟಿ ಮಹಿಳೆಯರು ಮತ್ತು 599 ಜನರನ್ನು ಮೂರನೇ ಲಿಂಗ ಎಂದು ವರ್ಗೀಕರಿಸಲಾಗಿದೆ.

  Bihar Assembly Elections 2020: ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಿಹಾರದಲ್ಲಿ ಆರಂಭವಾದ ಮೊದಲ ಹಂತದ ಮತದಾನ: ಯಾರ ಪಾಲಾಗಲಿದೆ ಗೆಲುವು?

  3.ಕೋಚಡೈಯಾನ್ ಸಿನಿಮಾ ರೈಟ್ಸ್ ಹಣಕಾಸಿನ ವಿವಾದ ಸಂಬಂಧ ನಟ ರಜನಿಕಾಂತ್ ಪತ್ನಿ ವಿರುದ್ದ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ಕೆಳ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿನಿಮಾ ನಿರ್ಮಾಪಕರಿಗೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ಸಿನಿಮಾ ನಿರ್ಮಾಪಕರು ಕೋರ್ಟ್ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಆ್ಯಡ್ ಬ್ಯೂರೋ ಕಂಪನಿಯಿಂದ ಕೋಚ್ಚಡೈಯಾನ್ ಸಿನಿಮಾ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದ್ದು, ನವೆಂಬರ್ 2 ಕ್ಕೆ ಕೋರ್ಟ್ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

  ಲತಾ ರಜನಿಕಾಂತ್ ವಿರುದ್ಧ ಬೆಂಗಳೂರಿನ ಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ದೂರು

  4.ಆರ್​ಆರ್​ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಘೋಷಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊನೆಗೂ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ಶುಕ್ರವಾರ (ಅ. 30) ಶಿರಾದಲ್ಲಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಅ. 31ರಂದು ಆರ್​ಆರ್​ ನಗರದಲ್ಲಿ ಸಿಎಂ ಪ್ರಚಾರ ನಡೆಸಲಿದ್ದಾರೆ.

  ಕೊನೆಗೂ ಉಪಚುನಾವಣಾ ಅಖಾಡಕ್ಕಿಳಿದ ಯಡಿಯೂರಪ್ಪ; ಅ. 30, 31ರಂದು ಶಿರಾ, ಆರ್​ಆರ್​ ನಗರದಲ್ಲಿ ಸಿಎಂ ಪ್ರಚಾರ

  5. ಶಿರಾದಲ್ಲಿ ವಿಜಯೇಂದ್ರ ಚುನಾವಣಾ ತಂತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಬಿಜೆಪಿಯವರು ಚುನಾವಣೆ ನಡೆಸೋ ರೀತಿ ಬಗ್ಗೆ ನನಗೆ ಗೊತ್ತಿದೆ. ಅವರು ಯಾವ ರೀತಿ ಚುನಾವಣೆ ನಡೆಸ್ತಾರೆ ಎಂಬ ಬಗ್ಗೆ ವರದಿ ಕೂಡ ಇದೆ. ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ಮಾತನಾಡಿ ಯಾವುದೇ ಉಪಯೋಗವಿಲ್ಲ.

  ಶಿರಾದಲ್ಲಿ ಪೊಲೀಸರ ಮೂಲಕವೇ ಹಣ ಹಂಚುತ್ತಿದ್ದಾರೆ; ಬಿವೈ ವಿಜಯೇಂದ್ರ ವಿರುದ್ಧ ಹೆಚ್​ಡಿ ದೇವೇಗೌಡ ಆರೋಪ

  6.ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಿದ್ದ ಆರೋಪದಲ್ಲಿ ವಿಶ್ವನಾಥ್ ಭಟ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪರಶಿವಮೂರ್ತಿ ಅವರ ಕೊಲೆಗೆ ವಿಶ್ವನಾಥ್ ಭಟ್ 7 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆ ವೇಲೆ ಬಯಲಾಗಿತ್ತು. ಹೀಗಾಗಿ, ಮೈಸೂರು ಪೊಲೀಸರು ವಿಶ್ವನಾಥ್ ಭಟ್ ಅವರನ್ನು ಬಂಧಿಸಿದ್ದಾರೆ.

  ಮೈಸೂರಿನ ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ; ಖ್ಯಾತ ಗಾಯಕಿಯ ತಂದೆ ವಿಶ್ವನಾಥ್ ಭಟ್ ಬಂಧನ

  7.ರಾಜ್ಯ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ - 2020 ಪಟ್ಟಿಯನ್ನು ಪ್ರಕಟಿಸಿದ್ದು ಈ ವರ್ಷದ ಸಾಲಿನಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣವಾಗಬೇಕು ಎಂದು ಸತತ ಮೂರು ವರ್ಷ ಅಲಹಾಬಾದ್​ ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಕೆ.ಎನ್. ಭಟ್ ಸೇರಿದಂತೆ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

  Rajyotsava award 2020: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಕೆ.ಎನ್. ಭಟ್ ಸೇರಿದಂತೆ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

  8.ಬಿಜೆಪಿ ಪಕ್ಷದಲ್ಲಿ ಸಿಎಂ ಯಡಿಯೂರಪ್ಪ ಒಬ್ಬರೇ ರಾಜಾಹುಲಿ. ಕಾಂಗ್ರೆಸ್​ನಲ್ಲಿ ಯಾರು ರಾಜ ಯಾರು ಹುಲಿ ಎಂದು ಅವರಿಗೇ ಗೊತ್ತಿಲ್ಲ. ಒಕ್ಕಲಿಗ ಎಂದು ಹೇಳಿಕೊಂಡು ಜಾತಿ ರಾಜಕಾರಣ ಮಾಡುತ್ತಿರುವ ಡಿಕೆ ಶಿವಕುಮಾರ್ ಕಪಾಲ ಬೆಟ್ಟ ಕಾಲಭೈರವನ ಬೆಟ್ಟವೋ ಅಥವಾ ಏಸುವಿನ ಬೆಟ್ಟವೋ ಎಂದು ಸ್ಪಷ್ಟಪಡಿಸಲಿ. ಇದು ನಮ್ಮ ಸವಾಲು ಎಂದು ಸಚಿವ ಆರ್​. ಅಶೋಕ್ ಗುಡುಗಿದ್ದಾರೆ.

  ಯುದ್ಧಕ್ಕೆ ಮೊದಲೇ ಡಿಕೆ ಶಿವಕುಮಾರ್ ಪಲಾಯನ ಮಾಡಿದ್ದಾರೆ; ಸಚಿವ ಆರ್​. ಅಶೋಕ್ ಲೇವಡಿ

  9. ಸ್ಯಾಂಡಲ್​ವುಡ್​ಗೆ ಬೇರೆ ಭಾಷೆಯ ಹಲವಾರು ಕಲಾವಿದರು ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ, ವಿದೇಶಿ ಕಲಾವಿದರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಖ್ಯಾತಿಯನ್ನು ಪಡೆದಿದ್ದಾರೆ. ಅದರಲ್ಲಿ ಮಾಲಿವುಡ್​ ಚಿತ್ರ ನಟಿ ಮೀರಾ ಜಾಸ್ಮಿನ್ ಕೂಡ ಒಬ್ಬರು. ಮೂಲತಃ ಕೇರಳದವರಾಗಿರುವ ಇವರು ಮಲಯಾಳಂನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಕನ್ನಡ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

  ಮೀರಾ ಜಾಸ್ಮಿನ್ ವೈವಾಹಿಕ ಜೀವನದಲ್ಲೇನಾಯಿತು?; ಮೌರ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಎಲ್ಲಿದ್ದಾರೆ ಗೊತ್ತಾ?

  10. ಐಪಿಎಲ್​ನಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಅಬುಧಾಬಿಯ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ಸೆಣೆಸಾಟ ನಡೆಸಲಿವೆ.

  IPL 2020, MI vs RCB: ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಗೆದ್ದರೆ ಏನಾಗಲಿದೆ?: ಇಲ್ಲಿದೆ ಮಾಹಿತಿ
  Published by:G Hareeshkumar
  First published: