Evening Digest: ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕೇಸ್ ದಾಖಲು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಇಸ್ಲಾಮಿಕ್ ಸೆಮಿನರಿಯ ಧಾರ್ಮಿಕ ಶಾಲೆಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ ಏಳು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 70 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

  ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ; ಪೇಶಾವರದ ಮದರಸಾವನ್ನು ಸ್ಪೋಟಿಸಿದ ಉಗ್ರರು; 7 ಮಕ್ಕಳ ಸಾವು, 70 ಜನರಿಗೆ ಗಾಯ!

  2. ಉತ್ತರಪ್ರದೇಶದ ಹತ್ರಾಸ್​ನಲ್ಲಿನ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಸಿಬಿಐ ನೇತೃತ್ವದಲ್ಲಿ ನಡೆಯುತ್ತಿದೆ. ಈ ತನಿಖೆಯನ್ನು ಅಲಹಾಬಾದ್​ ಹೈಕೋರ್ಟ್​ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್​ ಇಂದು ಸ್ಪಷ್ಟಪಡಿಸಿದೆ.

  ಹತ್ರಾಸ್​ ಪ್ರಕರಣದ ಸಿಬಿಐ ಮೇಲ್ವಿಚಾರಣೆಯನ್ನು ಅಲಹಾಬಾದ್​ ಹೈಕೋರ್ಟ್​ ನಿರ್ವಹಿಸಲಿ; ಸುಪ್ರೀಂ ಆದೇಶ

  3.ಕಳೆದ ಒಂದು ದಶಕದಲ್ಲಿ ಮೂರು ಪಕ್ಷಗಳನ್ನು ಬದಲಿಸಿರುವ ಖುಷ್ಬೂ ಕಳೆದ ವಾರವಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ತಮಿಳುನಾಡಿನಲ್ಲಿ ಅಷ್ಟೇನು ಬಲವಾದ ನೆಲೆ ಇಲ್ಲದ ಬಿಜೆಪಿ ದ್ರಾವಿಡ ರಾಜ್ಯದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುವ ಸಲುವಾಗಿ ಖುಷ್ಬೂ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿತ್ತು. ಆದರೆ, ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಅರೆಸ್ಟ್​ ಆಗುವ ಮೂಲಕ ಖುಷ್ಭೂ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

  ತಮಿಳುನಾಡಿನಲ್ಲಿ ಮತ್ತೆ ಭುಗಿಲೆದ್ದ ಮನುಸ್ಮೃತಿ ವಿವಾದ; ಪ್ರತಿಭಟನೆಗೆ ತೆರಳುತ್ತಿದ್ದ ನಟಿ ಖುಷ್ಬೂ ಬಂಧನ

  4.ಆರ್​ ಆರ್​ ನಗರ ಬಿಜೆಪಿ ಅಭ್ಯರ್ಥಿ  ಮುನಿರತ್ನ ಅವರು ನನ್ನ ಗಾಡ್‌ಫಾದರ್‌ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ಅವರ ಹಾಗೂ ನನ್ನ ಸಂಬಂಧ ಮುಗಿದಿದೆ ಎಂದು ನಟ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

  Nikhil Kumaraswamy : ಕುರುಕ್ಷೇತ್ರ ಮುಗಿಯುತ್ತಿದ್ದಂತೆ ನನ್ನ ಹಾಗೂ ಮುನಿರತ್ನ ಸಂಬಂಧ ಮುಗಿದಿದೆ : ನಿಖಿಲ್ ಕುಮಾರಸ್ವಾಮಿ

  5.ದಿನೇದಿನೆ ಆರ್​ಆರ್​ ನಗರ ಉಪಚುನಾವಣೆ ರಂಗೇರುತ್ತಲೇ ಇದೆ. ಒಂದು ಕಡೆ ಈಗಾಗಲೇ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ‌ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಈಗ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೇಲೆಯೂ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಯಶವಂತಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ನೀಡಿದ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ.

  ಆರ್​ಆರ್​ ನಗರ ಉಪಚುನಾವಣೆ; ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕೇಸ್ ದಾಖಲು

  6. ನಾನು ಯಾವತ್ತಿದ್ದರೂ ಹೀರೋ ಹೊರತು ಯಾರಿಗೂ ವಿಲನ್ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಮೇಲೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇಂದು ಮೈಸೂರಿನಲ್ಲಿ ಇದೇ ವಿಷಯವಾಗಿ ಮಾತನಾಡುವಾಗ ಸಚಿವ ಎಸ್​ಟಿ ಸೋಮಶೇಖರ್ ಎಡವಟ್ಟು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅಲ್ಲ ಯಡಿಯೂರಪ್ಪ ಹೀರೋ ಎಂದು ಹೇಳುವ ಭರದಲ್ಲಿ ಸಿಎಂ ಯಡಿಯೂರಪ್ಪನವರೇ ನಿಜವಾದ ವಿಲನ್ ಎಂದು ಹೇಳಿದ್ದಾರೆ.

  ಸಿಎಂ ಯಡಿಯೂರಪ್ಪ ನಿಜವಾದ ವಿಲನ್!; ಮಾತಿನ ಭರದಲ್ಲಿ ಸಚಿವ ಎಸ್​ಟಿ ಸೋಮಶೇಖರ್ ಎಡವಟ್ಟು

  7.ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಉಪಯೋಗ ಮಾಡದ ಕ್ಷೇತ್ರವೇ ಇಲ್ಲ. ಶೇ. 90ರಷ್ಟು ಜನರು ಇಂದು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇವತ್ತಿನ ಕಾಲದಲ್ಲಿ ಏನೇ ಮಾಡಿದರೂ ಅದು ತಂತ್ರಜ್ಞಾನದ ಹೊರತಾಗಿಲ್ಲ. ಒಂದು ಮನೆ ನಿರ್ಮಾಣ ಮಾಡಬೇಕು ಅಂದರೂ ತಂತ್ರಜ್ಞಾನದ ಸಹಾಯದಿಂದಲೇ ಪ್ಲಾನ್ ಮಾಡಿ ಮನೆ ನಿರ್ಮಾಣ ಮಾಡುತ್ತಾರೆ. ಆದರೆ ಇಲ್ಲೊಂದು ಖತರ್ನಾಕ್​ ತಂಡ ತಂತ್ರಜ್ಞಾನದ ಸಹಾಯದಿಂದಲೇ ಮನೆ ಕಳ್ಳತನ ಮಾಡುತ್ತಿತ್ತು. ಅಂತಹ ಕಳ್ಳರನ್ನು ಬೆಳಗಾವಿ ಪೊಲೀಸರು ಹಿಡಿದು ಕಂಬಿ ಹಿಂದೆ ಹಾಕಿದ್ದಾರೆ.

  ಕಳ್ಳತನಕ್ಕೂ ಗೂಗಲ್ ಮೊರೆ!; ಮ್ಯಾಪ್​ ಸಹಾಯದಿಂದ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ

  8.ಕಳೆದ ಬಾರಿಯ ಗೊಂದಲದಿಂದ ಎಚ್ಚೆತ್ತ ಚುನಾವಣಾ ಆಯೋಗ ಈ ಬಾರಿ ಎಚ್ಚರ ವಹಿಸಿದೆ. 2018ರ ‍ಚುನಾವಣೆಯಲ್ಲಿ ನಕಲಿ ಗುರುತಿನ ಚೀಟಿ ಸದ್ದು ಮಾಡಿತ್ತು. ಕಳೆದ ಬಾರಿ ಆರ್.ಆರ್. ನಗರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಅಧಿಕಾರಿಗಳನ್ನು ಎಲೆಕ್ಷನ್ ಡ್ಯೂಟಿಗೆ ನಿಯೋಜಿಸಲಾಗಿತ್ತು. ಈ ಬಾರಿಗೆ ಆರ್.ಆರ್ ನಗರ ಚುನಾವಣೆಗೆ ಆರ್.ಆರ್. ನಗರ ವ್ಯಾಪ್ತಿಯಲ್ಲಿ ಬರುವ ಯಾವುದೇ ಅಧಿಕಾರಿಗಳ ನಿಯೋಜನೆ ಇಲ್ಲ. ಬಿಬಿಎಂಪಿ ಅಬಕಾರಿ ಪೊಲೀಸ್ ಸಿಬ್ಬಂದಿಗಳನ್ನು ಬೇರೆಡೆಯಿಂದ ನಿಯೋಜನೆ ಮಾಡಲಾಗಿದೆ.

  RR Nagar Bypoll: ಉಪಚುನಾವಣೆ ಹಿನ್ನೆಲೆ ಆರ್​ಆರ್​ ನಗರದಲ್ಲಿ ಹದ್ದಿನಕಣ್ಣು; 9 ಕಡೆ ಕಡೆ ಚೆಕ್​ಪೋಸ್ಟ್​ ಓಪನ್

  9. ಅದು 2017ರ ಸಮಯ. ಆದಿತ್ಯ ರಾವ್​ ಕಪೂರ್​ ವಿರುದ್ಧ ರಣವೀರ್​ ಸಿಂಗ್​ ಆರೋಪ ಒಂದನ್ನು ಮಾಡಿದ್ದರು. ಕಾಲೇಜು ದಿನಗಳಲ್ಲಿರುವ ಗರ್ಲ್​ಫ್ರೆಂಡ್​ ಜೊತೆ ಬ್ರೇಕಪ್​ ಆಗೋಕೆ ಆದಿತ್ಯ ರಾಯ್​ ಕಪೂರ್​ ಕಾರಣ ಎಂದು ದೂರಿದ್ದರು ರಣವೀರ್​ ಸಿಂಗ್​. ಇದಾದ ಮೂರು ವರ್ಷಗಳ ನಂತರದಲ್ಲಿ ಈ ಬಗ್ಗೆ ಆದಿತ್ಯ ರಾಯ್​ ಕಪೂರ್​ ಪ್ರತಿಕ್ರಿಯೆ ನೀಡಿದ್ದಾರೆ.

  ರಣವೀರ್​ ಸಿಂಗ್​ ಪ್ರೀತಿಸಿದ ಹುಡುಗಿ ಕೈಕೊಡೋಕೆ ಆದಿತ್ಯ ರಾಯ್​ ಕಪೂರ್​ ಕಾರಣವಂತೆ!

  10.  ಐಪಿಎಲ್​ನಲ್ಲಿಂದು ನಡೆಯಲಿರುವ 47ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎಸ್​ಆರ್​ಹೆಚ್​ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇತ್ತ ಡೆಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಿ ಪ್ಲೇ ಆಫ್ ಹಂತವನ್ನು ಖಚಿತಪಡಿಸಲಿದೆ.

  IPL 2020, SRH vs DC: ವಾರ್ನರ್ ಪಡೆಗೆ ಗೆದ್ದರಷ್ಟೆ ಉಳಿಗಾಲ: ಡೆಲ್ಲಿ ಗೆದ್ದರೆ ಪ್ಲೇ ಆಫ್ ಖಚಿತ
  Published by:G Hareeshkumar
  First published: