Evening Digest: ವಾರಾಂತ್ಯದಲ್ಲಿ ಇಳಿಕೆ ಕಂಡ ಚಿನ್ನದ ದರ, ಬೆಂಗಳೂರಲ್ಲಿ ಗಗನಕ್ಕೇರಿದ ಹೂವು-ಹಣ್ಣಿನ ಬೆಲೆ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಇಂದಿನ ದಿನಗಳಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಳಸದವರ ಸಂಖ್ಯೆ ಅತಿ ಕಡಿಮೆ ಎಂದೇ ಹೇಳಬಹುದು. ಇಂಟರ್ನೆಟ್​ ಬದುಕಿನ ಅತೀ ಅವಶ್ಯಕ ವಿಚಾರ ಎಂಬಂತೆ ಬದಲಾಗಿದೆ. ಆದರೆ, ಇದೇ ವೇಳೆ ಅಧ್ಯಯನದ ವರದಿಯೊಂದು ಭಾರತದಲ್ಲಿ ನಾವು ಬಳಸುವ ಇಂಟರ್ನೆಟ್ ಸ್ಪೀಡ್ ಜಗತ್ತಿನ ಉಳಿದ ದೇಶಗಳಿಗಿಂತ ಅತ್ಯಂತ ಕೆಳಮಟ್ಟದಲ್ಲಿದ್ದು, ಜಗತ್ತಿನ 138 ದೇಶಗಳ ಪೈಕಿ ಭಾರತವು 131ನೇ ಸ್ಥಾನದಲ್ಲಿದೆ.

  ಭಾರತದ ಇಂಟರ್ನೆಟ್​​ ಸ್ಪೀಡ್​ ವಿಶ್ವದಲ್ಲಿಯೇ ಅತ್ಯಂತ ಕಳಪೆ; ಪ್ರಶ್ನಾರ್ಥಕವಾದ ಡಿಜಿಟಲ್ ಇಂಡಿಯಾ

  2. ಭಾರತೀಯ ಸೇನೆ ಯಾವ ದೇಶದವರಿಗೂ ನಮ್ಮ ದೇಶದ ಒಂದಿಂಚು ಜಾಗವನ್ನೂ ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ. ಚೀನಾದ ಜೊತೆಗಿನ ಗಡಿ ಬಿಕ್ಕಟ್ಟು ಆದಷ್ಟು ಬೇಗ ಬಗೆಹರಿಯಲಿ ಎಂದು ಭಾರತ ಬಯಸುತ್ತಿದೆ. ಗಡಿ ಗಲಾಟೆ ಬಗೆಹರಿದು, ಶಾಂತಿ ನೆಲೆಸುವ ದಿನಕ್ಕಾಗಿ ನಾವು ಕೂಡ ಕಾಯುತ್ತಿದ್ದೇವೆ. ಹಾಗಂತ ನಮ್ಮ ಸೈನಿಕರು ನಮ್ಮ ತಾಯ್ನಾಡಿನ ತಂಟೆಗೆ ಬಂದರೆ ಸುಮ್ಮನೆ ಕೂರುವವರಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

  ಭಾರತದ ಒಂದಿಂಚು ಜಾಗವನ್ನೂ ಸೈನಿಕರು ಬಿಟ್ಟುಕೊಡುವುದಿಲ್ಲ; ಶಸ್ತ್ರ ಪೂಜೆ ಬಳಿಕ ರಾಜನಾಥ್ ಸಿಂಗ್ ಹೇಳಿಕೆ

  3.ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ

  Gold Rate: ಗ್ರಾಹಕರಿಗೆ ಸಿಹಿ ಸುದ್ದಿ; ವಾರಾಂತ್ಯದಲ್ಲಿ ಇಳಿಕೆ ಕಂಡ ಚಿನ್ನದ ದರ

  4.ಇಡೀ ಭಾರತ ಇಂದು ದಸರಾ ಹಬ್ಬದ ಸಂಭ್ರಮದಲ್ಲಿದೆ. ಹಬ್ಬದ ಪ್ರಯುಕ್ತ ದೇಶದ ಜನರಿಗೆ 70ನೇ ಮನ್​ ಕಿ ಬಾತ್​ನಲ್ಲಿ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದು, "ಧೈರ್ಯಶಾಲಿ ಸೈನಿಕರು ಮತ್ತು ಭದ್ರತಾ ಪಡೆಗಳೊಂದಿಗೆ ಭಾರತ ದೃಢವಾಗಿ ನಿಂತಿದೆ. ಕೊರೋನಾ ಸಾಂಕ್ರಾಮಿಕದ ನಡುವೆ ಹಬ್ಬಗಳನ್ನು ಆಚರಿಸುವಾಗ ಸೈನಿಕರಿಗಾಗಿ ದೀಪ ಬೆಳಗಿಸಬೇಕು" ಎಂದು ದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ.

  ದೀಪಾವಳಿ ಹಬ್ಬದ ವೇಳೆ ದೇಶದ ಸೈನಿಕರಿಗಾಗಿ ದೀಪ ಬೆಳಗಿಸಿ; ಮನ್​ ಕಿ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ

  5.ಕೊರೋನಾ ಭೀತಿಯ ನಡುವೆಯೂ ನಾಡಿನಾದ್ಯಂತ ನವರಾತ್ರಿ ಹಬ್ಬವನ್ನು ತಮ್ಮ ಮನೆಗಳಲ್ಲಿ ವೈಭವದಿಂದಲೇ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ ದಸರಾ ಹಬ್ಬವನ್ನು ವಿಜೃಂಭಣೆಯಿಂದಲೇ ಆಚರಿಸಲಾಗುತ್ತಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು, ತರಕಾರಿಗಳ ಖರೀದಿ ಜೋರಾಗಿದೆ.

  ಬೆಂಗಳೂರಲ್ಲಿ ಗಗನಕ್ಕೇರಿದ ಹೂವು-ಹಣ್ಣಿನ ಬೆಲೆ; ಕೆಆರ್​ ಮಾರ್ಕೆಟ್​ನಲ್ಲಿಂದು ಜನಸಾಗರ!

  6.ಸಿದ್ಧರಾಮಯ್ಯನವರಿಗಿಂತ ನಮಗೆ ಹೆಚ್ಚು ಧಮ್ ಇದೆ ಎಂಬ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆಗೆ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಧಮ್ ಅಂದ್ರೆ ಕುಸ್ತಿ ಮಾಡೋದು ಅಂತಲ್ಲ. ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ಪರಿಹಾರ ತಗೆದುಕೊಂಡು ಬರಲಿ. ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರೂ ಪ್ರಯೋಜನವಿಲ್ಲ.

  ಧಮ್ ಬೇಕಿರೋದು ಕುಸ್ತಿಯಾಡೋಕಲ್ಲ, ಕೇಂದ್ರದಿಂದ ಹಣ ತರೋಕೆ; ಸಿದ್ದರಾಮಯ್ಯ ಟೀಕೆ

  7.ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದಾಗಿ ನೂರಾರು ಗ್ರಾಮಗಳು ಜಲಾವೃತವಾಗಿವೆ. ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ನಿರೀಕ್ಷೆಗೂ ಮೀರಿದ ಮಳೆಯಿಂದಾಗಿ ಸಾಕಷ್ಟು ಅನಾಹುತವಾಗಿವೆ. ಸುಮಾರು 600 ಮನೆಗಳನ್ನು ನಾನು ಪರಿಶೀಲನೆ ನಡೆಸಿದ್ದೇನೆ. ಅನಾಹುತವಾದ ಪ್ರತಿ ಮನೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

  ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ 25 ಸಾವಿರ ರೂಪಾಯಿ ಪರಿಹಾರ ; ಸಿಎಂ ಯಡಿಯೂರಪ್ಪ

  8. ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸವಾಗಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಮುಗ್ದ ಜನರ ಮನವೊಲಿಕೆ ಮಾಡಲು ಯತ್ನಿಸುತ್ತಿದ್ದಾರೆ. ವಿಶ್ವದಲ್ಲಿಯೇ ಕೋವಿಡ್ ಲಸಿಕೆ ಬರದೆ ಇದ್ದರೂ ಉಚಿತ ಲಸಿಕೆ ಕೊಡುತ್ತೇವೆ ಎಂದು ಹೇಳಿ, ಕೀಳು ಮಟ್ಟಕ್ಕೆ ರಾಜಕಾರಣ ತೆಗೆದುಕೊಂಡು ಹೋಗಿದ್ದು ಬಿಜೆಪಿಯವರು ಎಂದು ಚಿತ್ರದುರ್ಗದಲ್ಲಿ ಮಾಜಿ‌ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

  ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸ; ಡಾ.ಜಿ. ಪರಮೇಶ್ವರ್ ಆರೋಪ

  9. ಶೂಟಿಂಗ್‌ ಜತೆಜತೆಗೆ ಎಡಿಟಿಂಗ್‌ ಕೂಡ ಮಾಡುತ್ತಿದ್ದ ಕಾರಣ ಈಗಾಗಲೇ ಆರು ತಾಸುಗಳ ಕಂಟೆಂಟ್‌ ರೆಡಿಯಿದೆ. ಇನ್ನೂ ಆರು ತಾಸುಗಳ ಕಂಟೆಂಟ್‌ ಬೇಕಿದೆ, ಅದನ್ನೇ ಪ್ಲ್ಯಾನ್‌ ಮಾಡಿಕೊಂಡು ಸದ್ಯ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ವಾರದಿಂದ ಬಾಲಿವುಡ್‌ನ ಖ್ಯಾತ ನಟ ಸುನೀಲ್‌ ಶೆಟ್ಟಿ ಅವರೂ ನಮ್ಮ ತಂಡ ಸೇರಿಕೊಳ್ಳಲಿದ್ದಾರೆ.

  ಡಿಸೆಂಬರ್‌ಗೆ ವೀರಪ್ಪನ್‌ ವೆಬ್‌ಸಿರೀಸ್‌ ರೆಡಿ!; ಶಂಕರ್‌ ಬಿದರಿ ಪಾತ್ರದಲ್ಲಿ ಸುನೀಲ್‌ ಶೆಟ್ಟಿ!

  10.ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್​ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

  IPL 2020, RCB vs CSK: ಅಂಕಿ ಅಂಶಗಳ ಪ್ರಕಾರ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ಮೇಲುಗೈ
  Published by:G Hareeshkumar
  First published: