Evening Digest: ಚೀನಾ ಸೈನಿಕನನ್ನು ಬಿಡುಗಡೆ ಮಾಡಿದ ಭಾರತೀಯ ಸೇನೆ : ಬೆಂಗಳೂರಿನಲ್ಲಿ ಮಳೆಯ ಅಬ್ಬರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಭಾರತ ಮತ್ತು ಚೀನಾ ಗಡಿ ವಿವಾದ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರುತ್ತಲೇ ಇದೆ.  ವಾಸ್ತವಿಕ ನಿಯಂತ್ರಣ ರೇಖೆ ದಾಟಿ ಪೂರ್ವ ಲಡಾಖ್‌ನಲ್ಲಿ ಭಾರತೀಯ ಪಡೆಗಳಿಗೆ ಸಿಕ್ಕಿಬಿದ್ದಿದ್ದ ಚೀನಾದ ಸೈನಿಕನನ್ನು ಮಂಗಳವಾರ ರಾತ್ರಿ ಚೀನಾಕ್ಕೆ ಹಿಂತಿರುಗಿಸಲಾಗಿದೆ.

  ಗಡಿ ತಪ್ಪಿ ಸೆರೆಸಿಕ್ಕ ಚೀನಾ ಸೈನಿಕನನ್ನು ಇಂದು ಬಿಡುಗಡೆಗೊಳಿಸಿದ ಭಾರತೀಯ ಸೇನೆ!

  2.ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಂಗಳವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್​ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿದ್ದರು. ಆದರೆ, ಈ ವೇಳೆ ಅವರು ರಾಜ್ಯದಲ್ಲಿ ಲವ್ ಜಿಹಾದ್​ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ರಾಜ್ಯಪಾಲ ಭಗತ್​ ಸಿಂಗ್ ಕೊಶ್ಯಾರಿ ಅವರ ಬಳಿ ಆರೋಪಿಸಿರುವುದು ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.

  ಲವ್​ ಜಿಹಾದ್​ ಪದ ಬಳಸಿ ವಿವಾದಕ್ಕೀಡಾದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ; ನೆಟ್ಟಿಗರಿಂದ ರಾಜೀನಾಮೆಗೆ ಒತ್ತಾಯ

  3.ಕರಾಚಿಯ ಗುಲ್ಶನ್​-ಇ-ಇಕ್ಬಾಲ್​ ಮಸ್ಕನ್ ಚೌರಂಗಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಜನರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಸ್ಫೋಟದ ಹಿಂದೆ ಕೆಲ ಉಗ್ರ ಸಂಘಟನೆಗಳ ಕೈವಾಡ ಇದೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ, ಇದೊಂದು ಸಿಲಿಂಡರ್​ ಬ್ಲಾಸ್ಟ್ ಎಂದಷ್ಟೇ ಪೊಲೀಸರು ಹೇಳಿದ್ದಾರೆ.

  ಪಾಕಿಸ್ತಾದಲ್ಲಿ ಭಾರೀ ಸ್ಫೋಟ; ಮೂರು ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ

  4. ಮಹಾರಾಷ್ಟ್ರದ ಅಸಮಾಧಾನಿತ ಬಿಜೆಪಿ ಮುಖಂಡ ಏಕನಾಥ್ ಖಡಸೆ ತಾನು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದಾಗಿ ತಿಳಿಸಿದ್ಧಾರೆ. ಇದರೊಂದಿಗೆ ಕೆಲ ದಿನಗಳಿಂದ ಅವರು ಬಿಜೆಪಿ ತೊರೆದು ಎನ್​ಸಿಪಿ ಸೇರಬಹುದು ಎಂದು ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗಿದೆ.

  ಮಹಾರಾಷ್ಟ್ರದಲ್ಲಿ ಬಿಜೆಪಿ ತೊರೆದು ಎನ್​ಸಿಪಿಯತ್ತ ಹೊರಟ ಏಕನಾಥ್ ಖಡಸೆ

  5.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ಅದರಲ್ಲೂ ಪ್ರಮುಖವಾಗಿ ಕೋರಮಂಗಲ ಸುತ್ತಮುತ್ತ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿತ್ತು. ರಾಜ್ಯದಲ್ಲಿ ಮಳೆರಾಯನ ರುದ್ರ ನರ್ತನ ಮುಂದುವರೆದಿದೆ

  ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಮನೆಗಳಿಗೆ ನುಗ್ಗಿದ ನೀರು, ಇಂದು ಸಹ ಜೋರು ಮಳೆ ಸಾಧ್ಯತೆ

  6. ಸಮ್ಮಿಶ್ರ ಸರ್ಕಾರ ಬೀಳಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ. ಯಾವ ಶಾಸಕರನ್ನು ಎಲ್ಲೆಲ್ಲಿ ಕಳಿಸಿದ್ದರು, ಯಾರ ಜತೆ ಮಾತನಾಡಿದ್ದರು ಎಂಬುದು ಮುಂದೆ ಗೊತ್ತಾಗಲಿದೆ. ಮುನಿರತ್ನ ಒಬ್ಬರೇ ಅಲ್ಲ, ಎಲ್ಲಾ ಶಾಸಕರು ಮುಂದೆ ಮಾತನಾಡುತ್ತಾರೆ. ಇನ್ನೂ ಮುಂದೆ ಇದೇಸಿರೀಸ್ ಓಪನ್ ಆಗುತ್ತೆ. ಮಾಜಿ ಸಿಎಂ  ಎಚ್ ಡಿ ಕುಮಾರಸ್ವಾಮಿ ಅವರು ಮುಕ್ತವಾಗಿ ಎಲ್ಲವನ್ನೂ ಮಾತನಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಲ್ಲದಂತೆ ಅವರ ಪಕ್ಷದ ನಾಯಕರು ಕೆಲಸ ಮಾಡಿದ್ದಾರೆ.

  ಸಮ್ಮಿಶ್ರ ಸರ್ಕಾರ ಬೀಳಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ; ಡಿಸಿಎಂ ಅಶ್ವಥ್ ನಾರಾಯಣ್

  7. ಸಮಗ್ರ ಕರ್ನಾಟಕದ ಆಶಯಕ್ಕೆ ಮಣ್ಣು ಹಾಕುವ ಕೆಲಸ ಯಾರೂ ಮಾಡಬಾರದು. ಯೋಗ, ಯೋಗ್ಯತೆ ಇರುವ ಯಾರಾದರೂ ಸಮಗ್ರ ಕರ್ನಾಟಕದ ಸಿಎಂ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.

  ಯೋಗ್ಯತೆ ಇದ್ದವರು ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗಲಿ; ಯತ್ನಾಳ್​​​ಗೆ ಸಿ.ಟಿ.ರವಿ ತಿರುಗೇಟು

  8.ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಮತಯಾಚನೆ ಮಾಡಿದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, "ಆಡಳಿತ ನಡೆಸಲಾಗದ ಯಡಿಯೂರಪ್ಪ ಕುರ್ಚಿ ಬಿಟ್ಟು ಹೋಗಲಿ‌. ಯಡಿಯೂರಪ್ಪ ಯಾವುದೇ ಕೆಲಸಕ್ಕೂ ದುಡ್ಡು ಇಲ್ಲಾ ಅಂತಾರೆ. ನಾವು ಅಧಿಕಾರಕ್ಕೆ ಬಂದು ದುಡ್ಡು ಹುಟ್ಟುಹಾಕ್ತೀವಿ, ಹಣ ಜನರೇಟ್ ಮಾಡೋದು ನಮಗೆ ಗೊತ್ತಿದೆ. ಯಡಿಯೂರಪ್ಪನವರದ್ದು ವಸೂಲಿ ಭಾಗ್ಯ. ಉಳ್ಳವನೇ ಭೂಮಿಗೆ ಒಡೆಯ ಅನ್ನೋ ಕಾನೂನು ಮಾಡಿದ್ದಾರೆ.

  ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ;‌ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಸಿದ್ದರಾಮಯ್ಯ ಮತಯಾಚನೆ

  9. ಏಕ್​ಲವ್​ ಯಾ ಸಿನಿಮಾದ ಚಿತ್ರೀಕರಣಕ್ಕಾಗಿ ಲೊಕೇಷನ್​ ಹುಡುಕಾಟದಲ್ಲಿದ್ದಾರೆ ನಿರ್ದೇಶಕ ಪ್ರೇಮ್​. ಅದಕ್ಕಾಗಿ ಅವರು ಇತ್ತೀಚೆಗೆ ಊಟಿಗೆ ಹೋಗಿದ್ದರು. ಲಾಕ್​ಡೌನ್​ನಿಂದಾಗಿ ನಿಂತಿರುವ ಸಿನಿಮಾದ ಶೂಟಿಂಗ್​ನ ಪ್ಯಾಚ್​ ವರ್ಕ್​ ಮುಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.


  HBD Prem: ಹುಟ್ಟುಹಬ್ಬದಂದು ಊಟಿಯಲ್ಲಿದ್ದರೂ ಅಭಿಮಾನಿಗಳನ್ನು ಭೇಟಿ ಮಾಡ್ತಾರಂತೆ ಜೋಗಿ ಪ್ರೇಮ್..!

  10. ಶೇಕ್ ಝಯೇದ್ ಕ್ರೀಡಾಂಗಣದಲ್ಲಿಂದು ಐಪಿಎಲ್​ನ 39ನೇ ಪಂದ್ಯ ನಡೆಯಲಿದ್ದು, ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿ ಆಗಲಿವೆ. ಆರ್​ಸಿಬಿ ಈ ಪಂದ್ಯ ಗೆದ್ದು ಪ್ಲೇ ಆಫ್ ಹಂತವನ್ನು ಸನಿಹಗೊಳಿಸುವ ಅಂದಾಜಿನಲ್ಲಿದ್ದರೆ, ಇತ್ತ ಕೆಕೆಆರ್​ ಪಾಲಿಗೆ ಈ ಮ್ಯಾಚ್ ಮಹತ್ವ ಪಡೆದಿದೆ.

  IPL 2020, KKR vs RCB: ಪ್ಲೇ ಆಫ್ ಸನಿಹದಲ್ಲಿ ಆರ್​ಸಿಬಿ: ಕೋಲ್ಕತ್ತಾಗೆ ಮಹತ್ವದ ಪಂದ್ಯ
  Published by:G Hareeshkumar
  First published: