Evening Digest: ಇಂದಿನಿಂದ ದೇಶಾದ್ಯಂತ 392 ವಿಶೇಷ ರೈಲು ಸಂಚಾರ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ದ ಕಾಂಗ್ರೆಸ್​ ದೂರು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಬೆನ್ನಿಗೆ ನಿಂತಿರುವ ದೆಹಲಿ ಸರ್ಕಾರವು ಸಹಾಯ ಹಸ್ತ ಚಾಚಿದ್ದು, 15 ಕೋಟಿ ದೇಣಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಸ್ವತಃ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್​ ಮಾಡಿದ್ದಾರೆ.

  ತೆಲಂಗಾಣ ಪ್ರವಾಹ: 15 ಕೋಟಿ ರೂ. ದೇಣಿಗೆ ನೀಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

  2.ಈಗಾಗಲೇ ದೇಶಾದ್ಯಂತ ದಸರಾ ಉತ್ಸವ ಆರಂಭವಾಗಿದೆ. ನವರಾತ್ರಿ ಬೆನ್ನಲ್ಲೇ ಒಂದರ ಹಿಂದೊಂದರಂತೆ ಸಾಲಾಗಿ ಹಬ್ಬಗಳು ಇರುವುದರಿಂದ ಭಾರತೀಯ ರೈಲ್ವೆ ಇಲಾಖೆ ಇಂದಿನಿಂದ ನವೆಂಬರ್ 30ರವರೆಗೆ 392 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.

  ಹಬ್ಬಗಳ ಪ್ರಯುಕ್ತ ಇಂದಿನಿಂದ ದೇಶಾದ್ಯಂತ 392 ವಿಶೇಷ ರೈಲು ಸಂಚಾರ; ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

  3.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ರೈತ ಮಸೂದೆಗಳನ್ನು ಸಂಸತ್​ನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ, ಕೇಂದ್ರ ಸರ್ಕಾರದ ಈ ಮಸೂದೆಗಳ ವಿರುದ್ಧ ದೇಶದಾದ್ಯಂತ ದೊಡ್ಡ ಮಟ್ಟದ ರೈತ ಚಳುವಳಿಯೇ ನಡೆಯುತ್ತಿದೆ. ಇನ್ನೂ ಪಂಜಾಬ್ ರಾಜ್ಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ ತಾರಕಕ್ಕೇರಿದೆ

  ಕೇಂದ್ರದ ಕೃಷಿ ಕಾಯ್ದೆ ವಿವಾದ: 3 ಕಾಯ್ದೆಗಳನ್ನೂ ತಿರಸ್ಕರಿಸುವ ನಿರ್ಣಯ ತೆಗೆದುಕೊಂಡ ಪಂಜಾಬ್ ವಿಧಾನಸಭೆ

  4.ರಾಜರಾಜೇಶ್ವರಿ ನಗರ (ಆರ್​ಆರ್​ ನಗರ) ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಅಡ್ಡ ದಾರಿ ಹಿಡಿದಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತದಾರರಿಗೆ ಹಣ ನೀಡಿ ಗುರುತಿನ ಚೀಟಿಯನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಮತಕ್ಕೆ ಕುಕ್ಕರ್​ ಸೀರೆ ಕೊಡುವ ಮೂಲಕ ಅಕ್ರಮ ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದಾರೆ. ಅಲ್ಲದೆ, ಚುನಾವಣಾ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ.

  ಆರ್​ಆರ್​ ನಗರ ಉಪ ಚುನಾವಣೆ: ಹಣ-ಕುಕ್ಕರ್​ ಕೊಟ್ಟು ಮತ ಕೇಳುತ್ತಿರುವ ಮುನಿರತ್ನ, ಕಾಂಗ್ರೆಸ್​ ನಾಯಕರಿಂದ ದೂರು

  5.ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ನಮ್ಮ ಗುರಿಯಾಗಿದೆ. ಅಲ್ಲದೇ ಸರ್ಕಾರದಿಂದ ನಿವೇಶನ ನೀಡಿದ ಪ್ರತಿಯೊಬ್ಬರಿಗೂ ಮನೆ ಕಟ್ಟಿಕೊಡಬೇಕು ಎಂಬ ಆಪೇಕ್ಷೆ ಇದೆ. ಹಂತ ಹಂತವಾಗಿ ಮನೆಗಳನ್ನು ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ.

  ಪ್ರತಿಯೊಬ್ಬರಿಗೂ ನಿವೇಶನ, ಸೂರು ಒದಗಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  6. ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ.  ಬಿ ಎಸ್​​​ ವೈ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

  ಯಡಿಯೂರಪ್ಪ ಕೇಂದ್ರಕ್ಕೂ ಸಾಕಾಗಿದ್ದಾರೆ, ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ; ಯತ್ನಾಳ ಹೊಸ ಬಾಂಬ್

  7. ಕರ್ನಾಟಕದ ಕಮ್ಯೂನಿಸ್ಟ್​ ಸಿದ್ಧಾಂತಗಳ ನಾಯಕ  ದಿಟ್ಟ ರೈತ ಹೋರಾಟಗಾರರಾಗಿದ್ದ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರೂ ಆಗಿದ್ದ ಕಾಮ್ರೆಡ್ ಮಾರುತಿ ಮಾನ್ಪಡೆಯವರು ಕೊರೋನಾ ಕಾರಣದಿಂದಾಗಿ (65) ಇಂದು ನಿಧನರಾಗಿದ್ದಾರೆ. ಇತ್ತೀಚಿನ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಅವರು, ಅಕ್ಟೋಬರ್ 3 ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದರು.

  ಕರ್ನಾಟಕದ ದಿಟ್ಟ ರೈತ ಹೋರಾಟಗಾರ ಮಾರುತಿ ಮಾನ್ಪಡೆ ಕೊರೋನಾಗೆ ಬಲಿ!

  8. ಸದ್ಯಕ್ಕೆ 3 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿಎಂ ಸೀಟ್ ಖಾಲಿ ಇದ್ದರೆ ಟವೆಲ್ ಹಾಕಬಹುದು. ಸೀಟ್ ಖಾಲಿ ಇಲ್ಲ ಎಂದಮೇಲೆ ಟವೆಲ್ ಎಲ್ಲಿ ಹಾಕುತ್ತೀರ? ಖಾಲಿ ಇಲ್ಲದ ಸೀಟ್​ಗೆ ಟವೆಲ್ ಹಾಕಿ, ಸುಮ್ಮನೆ ಸಮಯ ವ್ಯರ್ಥ ಮಾಡೋದು ಸರಿಯಲ್ಲ ಎಂದು ಕಂದಾಯ ಸಚಿವ ಆರ್​. ಅಶೋಕ್ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಲೇವಡಿ ಮಾಡಿದ್ದಾರೆ.

  ಖಾಲಿ ಇಲ್ಲದ ಸಿಎಂ ಕುರ್ಚಿಗೆ ಟವೆಲ್ ಹಾಕುವುದು ವ್ಯರ್ಥ; ಬಸನಗೌಡ ಯತ್ನಾಳ್​ಗೆ ಸಚಿವ ಆರ್​. ಅಶೋಕ್ ಲೇವಡಿ

  9.ಅಪ್ಪಟ ದೇಸಿ ಪ್ರತಿಭೆ ಸತೀಶ್​ ನೀನಾಸಂ. ಪೋಷಕ ಪಾತ್ರಗಳ ಮೂಲಕ ನಾಯಕನಾಗಿ ಬಡ್ತಿ ಪಡೆದು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ನಾಯಕ ನಟ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ನಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸತೀಶ್​ ನೀನಾಸಂ ಈಗ ಒಂದೊಂದಾಗಿ ಚಿತ್ರಗಳ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ನಿನ್ನೆಯಷ್ಟೆ ಒಂದೇ ದಿನ ಎರಡು ಸಿನಿಮಾಗಳ ಮುಹೂರ್ತ ನೆರವೇರಿಸಿದ್ದು, ಚಿತ್ರೀಕರಣ ಸಹ ಶುರು ಮಾಡಿದ್ದಾರೆ.

  Sathish Ninasam: ಒಂದೇ ದಿನ ಎರಡು ಸಿನಿಮಾಗಳ ಚಿತ್ರೀಕರಣ ಆರಂಭಿಸಿದ ಸತೀಶ್​ ನೀನಾಸಂ..!

  10. 3ನೇ ಆವೃತ್ತಿಯ ಐಪಿಎಲ್​ನಲ್ಲಿಂದು 38ನೇ ಪಂದ್ಯ ನಡೆಯಲಿದ್ದು ಕೆ. ಎಲ್ ರಾಹುಲ್ ನಾಯಕತ್ವದ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

  IPL 2020, KXIP vs DC: ಗೆಲುವಿನ ಲಯಕ್ಕೆ ಮರಳಿರುವ ಪಂಜಾಬ್​ಗೆ ಅಗ್ನಿಪರೀಕ್ಷೆ
  Published by:G Hareeshkumar
  First published: