• Home
  • »
  • News
  • »
  • state
  • »
  • Top-5 News: ಮೈಸೂರಿಗೆ ಬರ್ತಾರೆ ಸೋನಿಯಾ, ಕಾಂತಾರಾ ವೀಕ್ಷಣೆ ವೇಳೆ ದೈವ ಆವಾಹನೆ! ಇಂದು ಸದ್ದು ಮಾಡಿದ ಸುದ್ದಿ ಯಾವುದು ಗೊತ್ತಾ?

Top-5 News: ಮೈಸೂರಿಗೆ ಬರ್ತಾರೆ ಸೋನಿಯಾ, ಕಾಂತಾರಾ ವೀಕ್ಷಣೆ ವೇಳೆ ದೈವ ಆವಾಹನೆ! ಇಂದು ಸದ್ದು ಮಾಡಿದ ಸುದ್ದಿ ಯಾವುದು ಗೊತ್ತಾ?

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ನಾಳೆ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ


ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಳ್ಳಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Congress Leader Sonia Gandhi) ನಾಳೆ ಮೈಸೂರಿಗೆ (Mysuru) ಆಗಮಿಸಲಿದ್ದಾರೆ. ನಾಳೆ ಮೈಸೂರು ನಗರದಿಂದ TS ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್​ಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.


ಅತ್ಯಂತ ಸ್ವಚ್ಛನಗರದ ಪಟ್ಟಿಯಲ್ಲಿ ಮೈಸೂರಿಗೆ ಎಷ್ಟನೇ ಸ್ಥಾನ?


ನವದೆಹಲಿ: ಮಹಾತ್ಮಾ ಗಾಂಧೀಜಿಯವರ (Mahatma Gandhiji) ಜನ್ಮ ದಿನಾಚರಣೆ (Birthday) ಹಿನ್ನೆಲೆಯಲ್ಲಿ ದೇಶದ ಸ್ವಚ್ಛ ನಗರಗಳ ಪಟ್ಟಿ (List of cleanest cities in the country) ಹೊರ ಬಿದ್ದಿದೆ. ಮಧ್ಯ ಪ್ರದೇಶ (Madhya Pradesh) ರಾಜ್ಯದ ಇಂದೋರ್‌ ನಗರ (Inodre City) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸತತ 7ನೇ ಬಾರಿಗೆ ಇಂದೋರ್ ನಗರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ಗುಜರಾತ್‌ನ (Gujarat) ಸೂರತ್ (Surat) ಹಾಗೂ ಮಹಾರಾಷ್ಟ್ರದ (Maharashtra) ನವಿ ಮುಂಬೈ (Navi Mumbai) ಇದೆ. ಟಾಪ್ 10ರ (Top-10) ಪಟ್ಟಿಯಲ್ಲಿ ಕರ್ನಾಟಕದ (Karnataka) ಮೈಸೂರು ನಗರ (Mysuru City) ಮಾತ್ರ ಸ್ಥಾನ ಪಡೆದಿದೆ. ಮೈಸೂರಿಗೆ ಈ ಪಟ್ಟಿಯಲ್ಲಿ 8ನೇ ಸ್ಥಾನ ಧಕ್ಕಿದೆ. ಇನ್ನುಳಿದಂತೆ ರಾಷ್ಟ್ರ ರಾಜಧಾನಿ ನವದೆಹಲಿ (New Delhi) 9ನೇ ಸ್ಥಾನ ಹಾಗೂ ಛತ್ತೀಸ್‌ಗಡ್‌ನ (Chhattisgarh) ಅಂಬಿಕಾಪುರ (Ambikapur) 10ನೇ ಸ್ಥಾನ ಪಡೆದಿದೆ.


ಇದನ್ನೂ ಓದಿ: Cleanest City: ಅತ್ಯಂತ ಸ್ವಚ್ಛನಗರವಾಗಿ ಹೊರಹೊಮ್ಮಿದ ಇಂದೋರ್‌, ಮೈಸೂರಿಗೆ ಎಷ್ಟನೇ ಸ್ಥಾನ ಗೊತ್ತಾ?


C T Ravi: ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸೋ ಡಿ ಕೆ ಶಿವಕುಮಾರ್​ಗೆ ಆಸ್ಕರ್​ ಕೊಡಬೇಕು


ಚಿಕ್ಕಮಗಳೂರು (ಅ.02): ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ (D K Shivakumar) ಸಿಟಿ ರವಿ ಟಾಂಗ್​ ಕೊಟ್ಟಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ (Bharth Jodo Yatre) ಡಿಕೆ ಶಿವಕುಮಾರ್​ ಕಣ್ಣೀರು ಹಾಕಿರುವುದಕ್ಕೆ ಸಿಟಿ ರವಿ (C T Ravi) ವ್ಯಂಗ್ಯವಾಡಿದ್ದಾರೆ. ಡಿ.ಕೆ ಶಿವಕುಮಾರ್​ ಒಳಗಡೆ ಇಂತಹ ಕಲಾವಿದ ಇದ್ದಾನೆಂದು ನಾನು  ಅಂದುಕೊಂಡಿರಲಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಪಹಾಸ್ಯ ಮಾಡಿದ್ದಾರೆ.


ಅಡುಗೆ ಕೋಣೆಯಲ್ಲಿ ಹುಗಿದಿತ್ತು ಮೃತದೇಹ!


ಕೇರಳ: ಮರ್ಡರ್ ಮಿಸ್ಟ್ರಿ (murder mystery) ಕಥಾ ಹಂದರದ ‘ದೃಶ್ಯಂ’ ಸಿನಿಮಾದ (Drushyam Cinema) ಬಗ್ಗೆ ಎಲ್ಲರಿಗೂ ಗೊತ್ತು. ಮೂಲ ಮಲಯಾಳಂನಲ್ಲಿ (Malayalam) ಬಂದಿದ್ದ ಸಿನಿಮಾ, ಅಲ್ಲಿ ಯಶಸ್ವಿಯಾಗಿತ್ತು. ಬಳಿಕ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗೆ ರಿಮೇಕ್ ಆಗಿತ್ತು. ಎಲ್ಲಾ ಕಡೆ ಜನಮನ ಸೆಳೆದಿದ್ದ ಈ ಸಿನಿಮಾ, ಗಲ್ಲಾ ಪೆಟ್ಟಿಗೆ (Box Office) ದೋಚಿತ್ತು. ದೃಶ್ಯಂ 2 (Drushyam 2) ಸಹ ನಿರ್ಮಾಣವಾಗಿ, ರಿಲೀಸ್ ಆಗಿತ್ತು. ವಿಪರ್ಯಾಸ ಅಂದ್ರೆ ಇದೇ ಸಿನಿಮಾ ಅನೇಕ ಕೊಲೆಗಳಿಗೆ (Murder), ಕೊಲೆಗಾರರಿಗೆ ಸ್ಫೂರ್ತಿಯಾಗಿತ್ತು. ಇದೀಗ ಇದೇ ಸಿನಿಮಾದ ಕಥೆಗೆ ಹೋಲುವಂತ ನೈಜ ಘಟನೆ (Real Incident) ಕೇರಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಅಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತನೊಬ್ಬನ (BJP Party Worker) ಕೊಲೆಯಾಗಿದ್ದು, ಇದೇ ದೃಶ್ಯಂ ಸಿನಿಮಾ ಮಾದರಿಯಲ್ಲಿ (Drushyam Cinema Style) ಕೊಲೆ ಮಾಡಿ, ಕೊಲೆ ವಿಚಾರ ಮುಚ್ಚಿಡುವ ಯತ್ನ ಮಾಡಿರೋದು ಬೆಳಕಿಗೆ ಬಂದಿದೆ.


ಇದನ್ನೂ ಓದಿ: Drushya Movie Style Murder: ಅಡುಗೆ ಕೋಣೆಯಲ್ಲಿ ಹುಗಿದಿತ್ತು ಮೃತದೇಹ! ಸಿನಿ ಸ್ಟೈಲ್ ಕೊಲೆ 'ದೃಶ್ಯ' ನೋಡಿದವರಿಗೆ ಶಾಕ್


ಕಾಂತಾರ ಕ್ಲೈಮ್ಯಾಕ್ಸ್​​ ನೋಡ ನೋಡುತ್ತಲೇ ದೈವ ಆವಾಹನೆ!


Rishab Shetty: ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಮಹಿಳೆ ವರ್ತಿಸಿದ್ದಾರೆ. ಮಂಗಳೂರಿನ ಪಿವಿಆರ್ ಮಾಲ್​​ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಮಹಿಳೆಯ ವರ್ತನೆ ಕಂಡು ಅಲ್ಲಿ ನೆರೆದಿದ್ದ ಜನ ಭಯಬೀತಗೊಂಡಿದ್ದಾರೆ. ವಿಡಿಯೋ ಮಾಡುವುದಕ್ಕೂ ಸಹ ಹೆದರಿಕೊಂಡಿದ್ದಾರೆ.

Published by:Annappa Achari
First published: