1.ಇಡೀ ವಿಶ್ವವೇ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಕೇವಲ 15 ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾದ ಜೋ ಬಿಡೆನ್ ಮತ್ತು ಡೋನಾಲ್ಡ್ ಟ್ರಂಪ್ ನಡುವೆ ಅಧ್ಯಕ್ಷ ಸ್ಥಾನ್ಕಕೆ ಭಾರೀ ಪೈಪೋಟಿ ನಡೆಯುತ್ತಿದ್ದು ಇಬ್ಬರೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಚುನಾವಣಾ ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಆಡಿರುವ ಮಾತು ಇಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ
.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸೋತರೆ ದೇಶ ತೊರೆಯುತ್ತೇನೆ; ಡೊನಾಲ್ಡ್ ಟ್ರಂಪ್
2.ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದ ಬಳಿಕ ಸೂಕ್ಷ್ಮವಾಗಿರುವ ಲಡಾಖ್ನಲ್ಲಿ ಇದೀಗ ಚೀನಾದ ಪಿಎಲ್ಎ ಪಡೆಯ ಒಬ್ಬ ಸೈನಿಕ ಸೆರೆ ಸಿಕ್ಕಿದ್ದಾನೆ. ಲಡಾಖ್ನ ಡೇಮ್ಚೋಕ್ ಪ್ರದೇಶದ ಬಳಿ ಪಿಎಲ್ಎ ಸೈನಿಕನನ್ನ ಸೆರೆ ಹಿಡಿಯಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಲಡಾಖ್ನ ಡೇಮ್ಚೋಕ್ನಲ್ಲಿ ಚೀನೀ ಸೈನಿಕ ಸೆರೆ
3.ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ 20 ವರ್ಷದ ಯುವತಿಯ ಮೇಲೆ ಜೈಲಿನಲ್ಲಿ ಐವರು ಪೊಲೀಸ್ ಅಧಿಕಾರಿಗಳು 10 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯಲ್ಲಿ ಈ ಹೀನ ಕೃತ್ಯ ನಡೆದಿದೆ.
Gang Rape: ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಯುವತಿ ಮೇಲೆ ಪೊಲೀಸರಿಂದಲೇ ಸಾಮೂಹಿಕ ಅತ್ಯಾಚಾರ!
4.ಕಳೆದ ವಾರ ಉತ್ತರಪ್ರದೇಶದ ಬಲ್ಲಿಯಾ ಎಂಬಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರ ಆಪ್ತನಾದ ಧೀರೇಂದ್ರ ಸಿಂಗ್ ಎಂಬಾತ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದ. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಇದೇ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುರೇಂದ್ರ ಸಿಂಗ್ ಆರೋಪಿಯ ಪರವಾಗಿ ಹೇಳಿಕೆ ನೀಡುವ ಮೂಲಕ ಇದೀಗ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಲ್ಲಿಯ ಶೂಟೌಟ್ ಪ್ರಕರಣ; ತನಿಖೆಯಿಂದ ದೂರವಿರುವಂತೆ ಬಿಜೆಪಿ ಶಾಸಕನಿಗೆ ಜೆಪಿ ನಡ್ಡಾ ಸೂಚನೆ
5.ಅಸಾಮಾನ್ಯ ಜನರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಸೈಬರ್ ಕ್ರೈಮ್ ಕಳ್ಳರು ಇದೀಗ ಪೊಲೀಸರ ಹೆಸರಲ್ಲೂ ವಂಚನೆ ಮಾಡಲು ಮುಂದಾಗಿದ್ದಾರೆ. ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಆಸಾಮಿಗಳು ಪರಿಚಯಸ್ಥರಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.
ಐಪಿಎಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ; ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು
6. ಸಿಎಂ ಬಿಎಸ್ ಯಡಿಯೂರಪ್ಪ ಕೈಗೊಂಡಿರುವ ಸ್ವಕ್ಷೇತ್ರ ಶಿಕಾರಿಪುರ ಪ್ರವಾಸದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಸಿಎಂ ಬಿಎಸ್ವೈ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಊರಿಗೆ ಊರೇ ಮುಳುಗಿ ಹೋಗಿದೆ; ಸಿಎಂಗೆ ಶಿಕಾರಿಪುರ ಪ್ರವಾಸ ಹೆಚ್ಚಾಯ್ತು; ಎಚ್.ಡಿ.ಕುಮಾರಸ್ವಾಮಿ ಕಿಡಿ
7.ನೆರೆ ವಿಷಯವನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಳೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡರು.
ನೆರೆಯ ಬಗ್ಗೆ ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ: ಡಿಸಿಎಂ ಅಶ್ವತ್ಥನಾರಾಯಣ
8.ಕೋವಿಡ್-19 ಹಾಗೂ ಪ್ರವಾಹ ನಿರ್ವಹಣೆ ರಾಜ್ಯ ಸರ್ಕಾರದ ಮುಂದಿರುವ ಪ್ರಮುಖ ಕಾರ್ಯವಾಗಿದೆ. ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ತರುವ ಜೊತೆಗೆ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರಿಗೆ ಪರಿಹಾರ ಕಲ್ಪಿಸಬೇಕಾಗಿದೆ. ಈ ಮಧ್ಯೆ ರಾಜ್ಯದ ಅಭಿವೃದ್ದಿಗೂ ಕೂಡ ಗಮನ ನೀಡಬೇಕು. ಇದೇ ಕಾರಣದಿಂದಾಗಿ ಇಂದು ನಾನು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಕೋವಿಡ್, ಪ್ರವಾಹದಿಂದ ರಾಜ್ಯದ ಅಭಿವೃದ್ಧಿ ನಿಲ್ಲಬಾರದು; ಸಿಎಂ ಬಿಎಸ್ ಯಡಿಯೂರಪ್ಪ
9.ಡಿಸೆಂಬರ್ ಕನ್ನಡ ಚಿತ್ರರಂಗದ ಪಾಲಿನ ಅದೃಷ್ಟದ ತಿಂಗಳು. ವರ್ಷದ ಕೊನೆಯ ತಿಂಗಳು ಯಾವಾಗಲೂ ಚಂದನವನಕ್ಕೆ ಅದೃಷ್ಟ ಹೊತ್ತು ಬರುತ್ತೆ. ಅದರಲ್ಲೂ ಡಿಸೆಂಬರ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ಸಿನಿಮಾ ರಿಲೀಸ್ ಆದರಂತೂ ಆ ಸಿನಿಮಾ ಇಂಡಸ್ಟ್ರಿ ಹಿಟ್ ಅನ್ನೋದು ಅಲಿಖಿತ ನಿಯಮವಾಗಿದೆ.
ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ನಿರ್ದೇಶಕರು ಅದೇ ತಿಂಗಳು ರಿಲೀಸ್ ಮಾಡುತ್ತಿರೋದು ಯಾಕೆ?
10. ಮುಂಬೈ ವಿರುದ್ಧ ಎರಡನೇ ಸೂಪರ್ ಓವರ್ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಗೆದ್ದು ಬೀಗಿತ್ತು. ಪಂಜಾಬ್ ತಂಡ ನೀಡಿದ ಅದ್ಭುತ ಪ್ರದರ್ಶನ ಕಂಡು ಎಲ್ಲರೂ ಮೆಚ್ಚುಗೆ ಹೊರ ಹಾಕಿದ್ದಾರೆ. ಈ ಮಧ್ಯೆ ಪಂಜಾಬ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಹುಲ್ ತಂಡ ಫೈನಲ್ಗೆ ಏರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪಂಜಾಬ್-ಮುಂಬೈ ಫೈನಲ್ಗೇರಲಿದೆ ಎಂದ ಯುವಿ; ಆರ್ಸಿಬಿ ಪರವಾಗಿ ಚಹಾಲ್ ಕೊಟ್ಟ ಉತ್ತರವೇನು ಗೊತ್ತಾ? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ