Evening Digest: ಚಿನ್ನದ ದರದಲ್ಲಿ ಭಾರೀ ಏರಿಕೆ, ಕಿರುತೆರೆಯ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ನಿಧನ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಕೇಂದ್ರದ ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಎಲ್​ಜೆಪಿ ಪಕ್ಷ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಈ ಬಗ್ಗೆ ನ್ಯೂಸ್18 ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅಮಿತ್ ಶಾ, ತಾವು ಎಲ್​ಜೆಪಿ ಜೊತೆ ಹಲವು ಬಾರಿ ಮಾತುಕತೆ ನಡೆಸಿ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡುವ ಭರವಸೆ ನೀಡಿದ್ದೆವು. ಆದರೂ ಎಲ್​ಜೆಪಿ ಸಹಮತಕ್ಕೆ ಬರದೆ ಏಕಾಂಗಿ ಹೋರಾಟದ ನಿರ್ಧಾರ ಮಾಡಿತು ಎಂದು ತಿಳಿಸಿದ್ದರು.

  ಮೈತ್ರಿಕೂಟದಿಂದ ಹೊರ ಬಂದಿರುವುದು ನನ್ನದೇ ನಿರ್ಧಾರ; ಅಮಿತ್​ ಶಾ ಹೇಳಿಕೆ ಬಗ್ಗೆ ಚಿರಾಗ್​ ಪಾಸ್ವಾನ್​ ಸ್ಪಷ್ಟನೆ

  2.ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ.

  Gold Rate: ಹಬ್ಬದ ಸಮಯದಲ್ಲಿ ಚಿನ್ನದ ದರದಲ್ಲಿ ಭಾರೀ ಏರಿಕೆ; ಇಲ್ಲಿದೆ ಇಂದಿನ ದರ

  3. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮೂರು ದಿನಗಳ ಹಿಂದೆ ಪೊಲೀಸರ ಎದುರಿನಲ್ಲೇ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ, ಕೊಲೆ ಮಾಡಿದ್ದ ಆರೋಪದಲ್ಲಿ ಪ್ರಮುಖ ಆರೋಪಿ ಧೀರೇಂದ್ರ ಸಿಂಗ್​ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಾನು ನಿರಪರಾಧಿ ಎಂದು ವಿಡಿಯೋ ರಿಲೀಸ್ ಮಾಡಿದ್ದ ಧೀರೇಂದ್ರ ಸಿಂಗ್ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರಿಗೆ ಆಪ್ತನಾಗಿದ್ದ ಎನ್ನಲಾಗಿದೆ.

  ಬಲ್ಲಿಯಾ ಶೂಟೌಟ್ ಪ್ರಕರಣ; ಪ್ರಮುಖ ಆರೋಪಿ ಧೀರೇಂದ್ರ ಸಿಂಗ್ ಬಂಧನ

  4. ಜಾತಿ ಜನಗಣತಿ ಜಾರಿಗೆ ತರುತ್ತೇನೆಂದು ಹೇಳಿದ ಈಶ್ವರಪ್ಪಗೆ ನಮೋ ನಮೋ ನಮೋ ಎಂದು ಶ್ಲಾಘಿಸಿದರು. ಈ ವರದಿ ಜಾರಿಗೆ ಬರಲಿಲ್ಲ ಎಂದರೆ ಬೀದಿಗಳಿಯುತ್ತೇನೆ ಎಂದು ಹೇಳಿದ್ದೆನೇ ಹೊರತು, ವರದಿ ಜಾರಿಯಾದರೆ ಬೀದಿಗೆ ಇಳಿತೀನಿ ಎಂದು ಹೇಳಿಲ್ಲ. ಈಶ್ವರಪ್ಪ ಈ ವರದಿ ಜಾರಿಗೆ ತರಿಸಿದರೆ ಅವರಿಗೆ ನಮೋ ನಮೋ ನಮೋ. ಅವರ ಮಾತುಗಳ ಮೇಲೆ ನಂಬಿಕೆ ಇಡುತ್ತೇನೆ. ವರದಿಯ ಸ್ವೀಕಾರ ಮತ್ತು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

  ಜಾತಿ ಜನಗಣತಿ ಪ್ರಕಟಿಸುತ್ತೇವೆ ಎಂದ ಈಶ್ವರಪ್ಪ; ನಮೋ ನಮೋ ಎಂದ ಸಿದ್ದರಾಮಯ್ಯ

  5. ಕೋವಿಡ್‌ ಸಮಯದಲ್ಲೂ ದೇಶದಲ್ಲಿ ಶೇಕಡ 40 ರಷ್ಟು ಹೆಚ್ಚು ರಾಸಾಯನಿಕ ಗೊಬ್ಬರಗಳ ಮಾರಾಟವಾಗಿದ್ದು, ಜನರು ಕೃಷಿಯತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಕೋವಿಡ್‌ ಸಂಕಷ್ಟ ಕಾಲದಲ್ಲೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಂತಹ ಕಾರ್ಯಕ್ಕೆ ಚಾಲನೆ ಸಿಗುತ್ತಿರುವುದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪುನಶ್ಚೇತಗೊಳ್ಳುವತ್ತ ದಾಪುಗಾಲು ಹಾಕುತ್ತಿರುವುದನ್ನು ತೋರಿಸುತ್ತವೆ. ವಿಶ್ವ ಬ್ಯಾಂಕ್‌ ವರದಿಯ ಪ್ರಕಾರ ಮುಂದಿನ ವರ್ಷ ದೇಶದ ಆರ್ಥಿಕತೆ ಹಾದಿಗೆ ಬರಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಹೇಳಿದರು.

  ಮುಂದಿನ ವರ್ಷ ದೇಶದ ಆರ್ಥಿಕತೆ ಸಹಜ ಸ್ಥಿತಿಗೆ : ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ

  7.ಭೀಮಾ ನದಿಯಲ್ಲಿ ಪ್ರವಾಹ ಮುಂದುವರಿದಿದೆ. ಭಾರಿ ಪ್ರವಾಹದಿಂದಾಗಿ ಕಲಬುರ್ಗಿ ಜಿಲ್ಲೆಯ ನೂರಾರು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ ಇಂದು 8.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಬಿಡಲಾಗಿದೆ.

  ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಿದರೂ ಮನೆ ತೊರೆಯಲು ಹಿಂದೇಟು ; ನ್ಯೂಸ್ 18 ನಿಂದ ಸಂತ್ರಸ್ತರ ಮನವೊಲಿಕೆ

  6. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದ ಗೋದಾಮಿನಿಂದ 2.5 ಕೆಜಿ ಚಿನ್ನವನ್ನು ಕದಿಯಲಾಗಿದೆ. ಚಿನ್ನ ಕಳ್ಳಸಾಗಣೆಯ ವೇಳೆ ಸೀಜ್ ಮಾಡಲಾಗಿದ್ದ ಚಿನ್ನವನ್ನು ಬೆಂಗಳೂರು ಏರ್​ಪೋರ್ಟ್ ಗೋದಾಮಿನಲ್ಲಿ ಇರಿಸಲಾಗಿತ್ತು. ಆ ಚಿನ್ನವನ್ನು ಕಳವು ಮಾಡಿರುವ ಆರೋಪದಲ್ಲಿ 5 ಜನ ಕಸ್ಟಮ್ಸ್​ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ  ಬೆಂಗಳೂರು ವಿಮಾನ ನಿಲ್ದಾಣದ ಗೋದಾಮಿನಿಂದ 2.5 ಕೆಜಿ ಚಿನ್ನ ನಾಪತ್ತೆ; ಐವರು ಕಸ್ಟಮ್ಸ್​ ಅಧಿಕಾರಿಗಳ ವಿರುದ್ಧ ಕೇಸ್ ದಾಖಲು

  8.ಭೀಮಾ ಪ್ರವಾಹ ಬಸವ ನಾಡಿನ ಸಹಸ್ರಾರು ಜನರನ್ನು ಕಂಗಾಲಾಗಿಸಿದೆ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಪ್ರವಾದಿಂದಾಗಿ ಜನರಷ್ಟೇ ಅಲ್ಲ ಜಾನುವಾರುಗಳನ್ನೂ ಕಂಗೆಡಿಸಿದೆ.  ಒಂದೆಡೆ ಜನರ ರಕ್ಷಣಾ ಕಾರ್ಯ ಸಾಗಿದ್ದರೆ, ಮತ್ತೋಂದೆಡೆ ಜಾನುವಾರುಗಳ ಪಾಡು ಹೇಳತೀರದಾಗಿದೆ. ತಾರಾಪುರ ಗ್ರಾಮದಲ್ಲಿ ಪ್ರವಾಹ ಹೆಚ್ಚಾಗಿದೆ.

  ಮರಿಗಳನ್ನ ಉಳಿಸಲು ತಾಯಿಯ ಸಂಕಟ; ಪ್ರವಾಹದಲ್ಲೊಂದು ಮನಮಿಡಿಯುವ ಘಟನೆ

  9.ಕನ್ನಡ ಧಾರಾವಾಹಿ ಮತ್ತು ಚಿತ್ರರಂಗದ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ ನಟನಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಮೂರ್ತಿ ನಾಡಿಗ್ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ.

  ಎದೆ ನೋವಿನಿಂದ ಕಿರುತೆರೆಯ ಹಿರಿಯ ನಟ ಕೃಷ್ಣಮೂರ್ತಿ ನಾಡಿಗ್ ನಿಧನ

  10. ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಆವೃತ್ತಿ ಐಪಿಎಲ್​ನ 35ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ.

  SRH vs KKR, IPL 2020 Live Score: ಕೆಕೆಆರ್ ದಿಢೀರ್ ಕುಸಿತ: ಕ್ರೀಸ್​ನಲ್ಲಿ ರಸೆಲ್-ಮಾರ್ಗನ್
  Published by:G Hareeshkumar
  First published: