• Home
  • »
  • News
  • »
  • state
  • »
  • Top-5 News: ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ  ಸ್ಪರ್ಧೆ ಫಿಕ್ಸ್​, ಒಕ್ಕಲಿಗರಿಗೂ ಬೇಕು ಮೀಸಲಾತಿ; ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top-5 News: ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ  ಸ್ಪರ್ಧೆ ಫಿಕ್ಸ್​, ಒಕ್ಕಲಿಗರಿಗೂ ಬೇಕು ಮೀಸಲಾತಿ; ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಒಕ್ಕಲಿಗರಿಗೂ ಬೇಕು ಮೀಸಲಾತಿ


ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ (SC-ST Reservation) ಹೆಚ್ಚಳ ಮಾಡಿದ್ದ ಬಳಿಕ ಒಕ್ಕಲಿಗರಿಗೂ ಮೀಸಲಾತಿ ಬೇಕು ಎನ್ನುವ ಕೂಗು ಕೇಳಿಬರ್ತಿದೆ. ಕೋಲಾರದಲ್ಲಿ ಮಾತಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanath Swamiji ), ಒಕ್ಕಲಿಗರ ಸಮುದಾಯದಕ್ಕೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಒಕ್ಕಲಿಗರಿಗೂ (Vokkaliga) ಮೀಸಲಾತಿ (Reservation) ಬೇಕು ಎನ್ನುವ ಮೂಲಕ ನಿರ್ಮಲಾನಂದನಾಥ ಸ್ವಾಮೀಜಿ ಹೋರಾಟದ ಸುಳಿವು ಕೊಟ್ಟಿದ್ದಾರೆ. 1993ರ ನಂತರ ನಮ್ಮ ಸಮುದಾಯ ಯಾವುದೇ ಮೀಸಲಾತಿ ಹೋರಾಟ ದಲ್ಲಿ ಪಾಲ್ಗೊಂಡಿಲ್ಲ. ಅಲ್ಲದೇ ಅಂದಿನಿಂದ ಮೀಸಲಾತಿ ಕೂಗು ನಮ್ಮ‌ ಸಮುದಾಯದಲ್ಲಿ (Community) ಎದ್ದಿಲ್ಲ ಎಂದು ಹೇಳಿದ್ರು.


 ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ  ಸ್ಪರ್ಧೆ ಫಿಕ್ಸ್​

 ಮುಂಬರುವ ಚುನಾವಣೆಯೇ (Election) ನನ್ನ ಕೊನೆಯ ಚುನಾವಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ.  ಸಿದ್ದರಾಮಯ್ಯ ಈ ಬಾರಿ ಬಾದಾಮಿ (Badami) ಕ್ಷೇತ್ರದಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಹೇಳಲಾಗ್ತಿದೆ. ಯಾವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ (Varuna Constituency) ಅಖಾಡಕ್ಕಿಳಿಯೋದು ಬಹುತೇಕ ಫಿಕ್ಸ್​ ಆಗಿದೆ.




ದೀಪಾವಳಿ ಹಬ್ಬದ ಅಂದ್ರೆ ಪಟಾಕಿಯ ಸದ್ದು ಇರಲೇಬೇಕು. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಹಬ್ಬಗಳ ಆಚರಣೆ ಸರಳವಾಗಿತ್ತು. ಈ ಭಾರೀ ಎಲ್ಲಾ ಹಬ್ಬಗಳ ಆಚರಣೆ ಅದ್ಧೂರಿಯಾಗಿದ್ದು, ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾದವರಿಗೆ ಪರಿಸರ ಮಾಲಿನ್ಯ ಮಂಡಳಿ ಶಾಕ್ ನೀಡಿದೆ. ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಮಾಲಿನ್ಯ ಹೆಚ್ಚಾಗದಂತೆ ಪರಿಸರ ಮಾಲಿನ್ಯ ಮಂಡಳಿಯಿಂದ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ವರ್ಷವು ಹಸಿರು ಪಟಾಕಿಯನ್ನಷ್ಟೇ ಮಾರಲು ಅವಕಾಶ ಕಲ್ಪಿಸಲಾಗಿದೆ.


ಉಕ್ರೇನ್ ಮಹಿಳೆಯರಷ್ಟೇ ಅಲ್ಲ, ಮಕ್ಕಳು, ಪುರುಷರಿಗೂ ನರಕ!


ಕೈಯಿವ್, ಉಕ್ರೇನ್: ರಷ್ಯಾ (Russia) ಯುದ್ಧ ದಾಹ ಮುಂದುವರೆದಿದೆ. ಉಕ್ರೇನ್‌ (Ukraine) ಅನ್ನು ಬಗ್ಗು ಬಡಿಯಲು ಸತತ ಪ್ರಯತ್ನ ಮಾಡುತ್ತಿರುವ ರಷ್ಯಾ, ಅಕ್ಷರಶಃ ರಾಕ್ಷಸನಂತೆ ವರ್ತಿಸುತ್ತಿದೆ. ಇದೀಗ ರಷ್ಯಾ ಸೈನಿಕರ (Russian soldiers) ಘೋರ ವಿಚಾರವೊಂದು ಹೊರ ಬಿದ್ದಿದೆ. ರಷ್ಯಾ ಸೈನಿಕರು ಕಾಮತ್ತೋಜಕವಾದ ವಯಾಗ್ರ ಮಾತ್ರೆಗಳನ್ನು (Viagra tablets) ಸೇವಿಸಿ, ಉಕ್ರೇನ್ ಮಹಿಳೆಯರ (Ukrainian women) ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಹೊರ ಬಿದ್ದಿದೆ.  ಫೆಬ್ರವರಿಯಲ್ಲಿ ಯುದ್ಧವು (War) ಪ್ರಾರಂಭ ಆದಾಗಿನಿಂದ ಯುಎನ್ (UN) 100 ಕ್ಕೂ ಹೆಚ್ಚು ಅತ್ಯಾಚಾರ ಅಥವಾ ವಿವಿಧ ರೀತಿಯ ಲೈಂಗಿಕ ದೌರ್ಜನ್ಯದ (violence) ಪ್ರಕರಣಗಳನ್ನು ಪರಿಶೀಲಿಸಿದೆ ಎಂದು ವಿಶ್ವಸಂಸ್ಥೆ ರಾಯಭಾರಿ ಗಂಭೀರ ಆರೋಪ ಮಾಡಿದ್ದಾರೆ.


ಹಿಂದಿಯಲ್ಲೂ ಅಬ್ಬರಿದ ಕಾಂತರಾ


ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಹವಾ ಸೃಷ್ಟಿಸುತ್ತಿದೆ. ಇತ್ತೀಚೆಗಷ್ಟೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕೂಡ ಬಿಡುಗಡೆಯಾದ ಕಾಂತಾರ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಹಿಂದಿ (Hindi) ಭಾಷೆಯಲ್ಲಿ ಕಾಂತಾರ ಬಿಡುಗಡೆಯಾದ (Release) ದಿನದಿಂದ ಭರ್ಜರಿಯಾಗಿಯೇ ಸದ್ದು ಮಾಡುತ್ತಿದ್ದು ಊಹಿಸಿದ್ದಕ್ಕಿಂತ ಹೆಚ್ಚಿನ ದಾಖಲೆಯನ್ನು ನಿರ್ಮಿಸುತ್ತಲೇ ಇದೆ. ಟ್ರೇಡ್ ವರದಿಗಳ ಪ್ರಕಾರ, ಅಕ್ಟೋಬರ್ 16 ರ ಶನಿವಾರದ ದಾಖಲೆಗಳಿಗೆ ಹೋಲಿಸಿದರೆ ಕನ್ನಡದ ಹಿಂದಿ ಆವೃತ್ತಿಯ ಕಾಂತಾರ ಚಿತ್ರವು ಅಕ್ಟೋಬರ್ 16 ರ ಭಾನುವಾರದಂದು ದುಪ್ಪಟ್ಟು ಲಾಭ ಗಳಿಸಿ ದಾಖಲೆ ಸೃಷ್ಟಿಸಿದೆ. ಚಿತ್ರ ಇತ್ತೀಚೆಗೆ ವಿಶ್ವದಾದ್ಯಂತ  100 ಕೋಟಿ ರೂ ಗಿಂತಲೂ ಅಧಿಕ ಹಣವನ್ನು ಬಾಚಿಕೊಂಡಿದೆ ಮತ್ತು ನಾಗಲೋಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ (Box Office) ಇನ್ನೂ ಪ್ರಬಲವಾಗಿ ಸಾಗುತ್ತಿದೆ.

Published by:ಪಾವನ ಎಚ್ ಎಸ್
First published: