• Home
  • »
  • News
  • »
  • state
  • »
  • Top-5 News: ಕಾಂತಾರ ಟೈಟಲ್ ಕೊಟ್ಟಿದ್ಯಾರು? IPL-2023 ಹರಾಜಿಗೆ ಮುಹೂರ್ತ! ಸೂಪರ್ ಸಂಡೇಯ ಸಖತ್ ನ್ಯೂಸ್ ಇಲ್ಲಿವೆ

Top-5 News: ಕಾಂತಾರ ಟೈಟಲ್ ಕೊಟ್ಟಿದ್ಯಾರು? IPL-2023 ಹರಾಜಿಗೆ ಮುಹೂರ್ತ! ಸೂಪರ್ ಸಂಡೇಯ ಸಖತ್ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಕಾಂತಾರ ಎಂಬ ಟೈಟಲ್ ಕೊಟ್ಟಿದ್ದು ಯಾರು?


ಕಾಂತಾರ ಎನ್ನುವ ಪದ ಎಷ್ಟು ಸುಂದರವಾಗಿದೆ ಅಲ್ವಾ? ಈ ಟೈಟಲ್​ನ ಸಿನಿಮಾ ಇನ್ನಷ್ಟು ಅದ್ಭುತವಾಗಿದೆ. ಕಥೆ, ನಿರ್ದೇಶನ ಎಲ್ಲವೂ ರಿಷಬ್ ಅವರದ್ದೇ. ಆದರೆ ಟೈಟಲ್ ಕೊಟ್ಟಿದ್ದು ಅವರಲ್ಲ. ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿದ ಈ ಕಾಂತಾರ ಸಿನಿಮಾ ಕನ್ನಡ ಭಾಷೆಯಲ್ಲಿಯೇ 78 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ಈಗ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಆಗಿದೆ. ಹಾಗಿದ್ದರೆ ಈ ಸಿನಿಮಾಗೆ ಟೈಟಲ್ ಕೊಟ್ಟಿದ್ದು ಯಾರು? ರಿಷಬ್ ಶೆಟ್ಟಿ ಅಲ್ವೇ ಅಲ್ಲ. ಟೈಟಲ್ ಹಿಂದಿರೋ ಮಾಸ್ಟರ್ ಮೈಂಡ್ ರಾಜ್ ಬಿ. ಶೆಟ್ಟಿ ಅವರದ್ದು. ಅದರ ಟ್ಯಾಗ್ ಲೈನ್ ರಕ್ಷಿತ್ ಶೆಟ್ಟಿ ಐಡಿಯಾ.


ಕಾಂತಾರ ಮೆಚ್ಚಿದ ಕರಾವಳಿ ಬೆಡಗಿ


‘ಕಾಂತಾರಾ’ ಸಿನಿಮಾ (Kantara Cinema) ಅಬ್ಬರ ಮುಂದುವರೆದಿದೆ. ಕನ್ನಡದಲ್ಲಿ (Kannada) ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರಾ ಸಿನಿಮಾ, ಈಗ ಹಿಂದಿಯಲ್ಲೂ (Hindi) ಅಬ್ಬರಿಸುತ್ತಿದೆ. ಅತ್ತ ತೆಲುಗಿನಲ್ಲೂ (Telugu) ಕಾಂತಾರದ ಬಗ್ಗೆ ಟಾಕ್ಸ್ ಜೋರಾಗಿದೆ. ಮಲಯಾಳಂನಲ್ಲೂ (Malayalam) ಕಾಂತಾರ ರಿಲೀಸ್‌ಗೆ ಹೊಂಬಾಳೆ ಫಿಲ್ಮ್ (Hombale Films) ಪ್ಲಾನ್ ಮಾಡಿದೆ. ಈ ನಡುವೆ ಭಾರತೀಯ ಚಿತ್ರರಂಗದ ಗಣ್ಯರು ಕಾಂತಾರ ಸಿನಿಮಾ ನೋಡಿ, ಕಥೆ, ರಿಷಬ್ ಶೆಟ್ಟಿ (Rishab Shetty) ಅಭಿನಯ, ನಿರ್ದೇಶನ, ಒಟ್ಟಾರೆ ಕಾಂತಾರ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ನಟರಾದ ಧನುಷ್ (Dhanush), ಪೃಥ್ವಿರಾಜ್ (Prithviraj), ಪ್ರಭಾಸ್ (Prabhas) ಸೇರಿದಂತೆ ಹಲವರು ಕಾಂತಾರಕ್ಕೆ ಫಿದಾ ಆಗಿದ್ದಾರೆ. ಇದೀಗ ಖ್ಯಾತ ನಟಿ, ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ (Anushka Shetty) ಕೂಡ ಕಾಂತಾರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.


ಇದನ್ನೂ ಓದಿ: Anushka Shetty on Kantara: ಕಾಂತಾರ ಮೆಚ್ಚಿದ ಕರಾವಳಿ ಬೆಡಗಿ, ರಿಷಬ್ ನಟನೆಗೆ ಅನುಷ್ಕಾ ಶೆಟ್ಟಿ ಫಿದಾ!


6 ವರ್ಷಗಳ ಹಿಂದೆ ಮದುವೆಯಾಗಿದ್ದ ನಯನತಾರಾ-ವಿಘ್ನೇಶ್!


ವಿಘ್ನೇಶ್ ಶಿವನ್ ಹಾಗೂ ನಯನತಾರಾ ಬಾಡಿಗೆ ತಾಯ್ತನ ವಿವಾದದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇದೀಗ ಈ ಜೋಡಿ 6 ವರ್ಷದ ಹಿಂದೆ ಕಾನೂನಾತ್ಮಕವಾಗಿ ಮದುವೆಯಾಗಿದ್ದರು ಎನ್ನುವ ವಿಚಾರ ಹೊರ ಬಿದ್ದಿದೆ. ನಟಿ ನಯನತಾರಾ ಮತ್ತು ನಿರ್ದೇಶಕ ಪತಿ ವಿಘ್ನೇಶ್ ಶಿವನ್ ಅವರು ಅಕ್ಟೋಬರ್ 9 ರಂದು ಅವಳಿ ಗಂಡುಮಕ್ಕಳಿಗೆ ಪೋಷಕರಾದ ಸಿಹಿ ಸುದ್ದಿ ಕೊಟ್ಟರು. ಆದರೆ ಇದು ಭಾರೀ ಚರ್ಚೆಗೆ ಕಾರಣವಾಯಿತು.


ಶಾರುಖ್, ಸಲ್ಮಾನ್‌ ಖಾನ್‌ ಡ್ರಗ್ಸ್ ತೆಗೆದುಕೊಳ್ಳುತ್ತಾರೆ!


ಮೊರಾದಾಬಾದ್, ಉತ್ತರ ಪ್ರದೇಶ: ಚಿತ್ರರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ದಂಧೆ (arge-scale drug peddling) ನಡೆಯುತ್ತಿದೆ ಎನ್ನುವ ಆರೋಪ ಇಂದು, ನಿನ್ನೆಯದಲ್ಲ. ಅದರಲ್ಲೂ ಬಾಲಿವುಡ್‌ನಲ್ಲಿ (Bollywood) ಡ್ರಗ್ಸ್ ಪಾರ್ಟಿಗಳು (Drugs Party) ಸಾಮಾನ್ಯ ಎನ್ನುವುದು ದೊಡ್ಡ ಆರೋಪ. ಇದೀಗ ಬಾಲಿವುಡ್‌ ಡ್ರಗ್ಸ್‌ ದಂಧೆ ಕುರಿತಂತೆ ಯೋಗ ಗುರು ಬಾಬಾ ರಾಮ್‌ದೇವ್‌ (yoga guru Baba Ramdev) ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು (Super Stars) ಡ್ರಗ್ಸ್‌ ದಂಧೆಯಲ್ಲಿ ಶಾಮೀಲಾಗಿದ್ದಾರೆ ಅಂತ ಬಾಬಾ ರಾಮ್‌ದೇವ್ ಆರೋಪಿಸಿದ್ದಾರೆ. ಅದರಲ್ಲೂ ಬಾಲಿವುಡ್‌ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ (Salman Khan) ಸೇರಿದಂತೆ ಪ್ರಮುಖರು ಡ್ರಗ್ಸ್ ಸೇವಿಸುತ್ತಾರೆ ಅಂತ ಆರೋಪಿಸಿದ್ದಾರೆ. ಬಾಬಾ ರಾಮ್‌ದೇವ್‌ ಅವರ ಈ ಗಂಭೀರ ಆರೋಪ, ಇದೀಗ ಬಾಲಿವುಡ್‌ನಲ್ಲಿ ಕೋಲಾಹಲ ಎಬ್ಬಿಸಿದೆ.


ಇದನ್ನೂ ಓದಿ: Drugs Scam in Bollywood: ಶಾರುಖ್, ಸಲ್ಮಾನ್‌ ಖಾನ್‌ ಡ್ರಗ್ಸ್ ತೆಗೆದುಕೊಳ್ಳುತ್ತಾರೆ! ಬಾಬಾ ರಾಮ್‌ದೇವ ಸ್ಫೋಟಕ ಹೇಳಿಕೆ


ಐಪಿಎಲ್ 2023 ಹರಾಜಿಗೆ ಮುಹೂರ್ತ ಫಿಕ್ಸ್


ಐಪಿಎಲ್ 16ನೇ (IPL 2023) ಸೀಸನ್ ಗಾಗಿ ಪ್ರಾಂಚೈಸಿಗಳು ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದೆ. ಮುಂದಿನ ಋತುವಿನಲ್ಲಿ ಹತ್ತು ತಂಡಗಳು ಟ್ರೋಫಿಗಾಗಿ ಸೆಣಸಾಡಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮುಂದಿನ ಋತುವಿಗಾಗಿ ತಯಾರಿ ನಡೆಸುತ್ತಿದೆ. 2022ರ ಋತುವಿನಲ್ಲಿ ತಂಡಗಳಲ್ಲಿ ಮೆಗಾ ಹರಾಜು ಬಹಳಷ್ಟು ಬದಲಾಗಿದ್ದರೂ, ಅಭಿಮಾನಿಗಳು ಮಿನಿ ಹರಾಜಿಗೆ ಸಾಕ್ಷಿಯಾಗುತ್ತಾರೆ. ವರದಿಗಳನ್ನು ಪ್ರಕಾರ BCCI ಈ ವರ್ಷ ಡಿಸೆಂಬರ್ 16 ರಂದು ಹರಾಜು ನಡೆಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

Published by:Annappa Achari
First published: