Evening Digest: ತೀವ್ರ ಹಿನ್ನಡೆ ಕಂಡ ಭಾರತದ ಆರ್ಥಿಕತೆ, ಇಂದಿನಿಂದ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿಷೇಧ: ಟಾಪ್​​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಅಸಮರ್ಪಕ ಆರ್ಥಿಕ ನೀತಿ ಮತ್ತು ಕೊರೋನಾ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ಏಷ್ಯಾ ಮತ್ತು ವಿಶ್ವದ ಬಲಿಷ್ಠ ಆರ್ಥಿಕತೆ ಎಂದು ಗುರುತಿಸಿಕೊಂಡಿದ್ದ ಭಾರತದ ಪ್ರಸ್ತುತ ಸ್ಥಿತಿ ಇದೀಗ ಚಿಂತಾಜನಕವಾಗಿದೆ. ಜಿಡಿಪಿ ಮೌಲ್ಯ ಋಣಾತ್ಮಕವಾಗಿ ಕುಸಿಯುತ್ತಿದೆ. ಇದು ಸಾಮಾನ್ಯವಾಗಿ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

  ತೀವ್ರ ಹಿನ್ನಡೆ ಕಂಡ ದೇಶದ ಅರ್ಥಿಕತೆ; ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ

  2. ಭಾರತದಲ್ಲಿ ಮಹಿಳಾ ಮೀಸಲಾತಿಯ ಕೂಗು ಹಲವು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಸಾಂವಿಧಾನಿಕವಾಗಿ ಮಹಿಳೆಯರ ಅಭಿವೃದ್ಧಿಯ ಸಲುವಾಗಿ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗುತ್ತಿದೆಯಾದರೂ ಈ ಮೀಸಲಾತಿ ಮಹಿಳೆಯರ ಪಾಲಿಗೆ ನ್ಯಾಯಯುತವಾಗಿ ದಕ್ಕುತ್ತಿಲ್ಲ ಎಂಬ ಕೂಗುಗಳು ಸಹ ಕೇಳಿ ಬರುತ್ತಲೇ ಇದೆ. ಈ ನಡುವೆ ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರ ಅಭಿವೃದ್ಧಿಗೆ ಪಣತೊಟ್ಟಿರುವ ಪಂಜಾಬ್ ಸರ್ಕಾರ  ನಾಗರಿಕ ಸೇವೆಗಳಲ್ಲಿ ಮಹಿಳೆಯರಿಗೆ ಕೊನೆಗೂ ಶೇ.33 ರಷ್ಟು ಮೀಸಲಾತಿಗೆ ಅನುಮೋದನೆ ನೀಡಿದೆ.

  ನಾಗರೀಕ ಸೇವೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಇತಿಹಾಸ ಬರೆದ ಪಂಜಾಬ್ ಸರ್ಕಾರ

  4. ಇತ್ತೀಚೆಗೆ ಮುಂಬೈನಲ್ಲಿ ಟಿಆರ್​ಪಿ ಗೋಲ್ಮಾಲ್ ಬೆಳಕಿಗೆ ಬಂದ ಬೆನ್ನಲ್ಲೇ ಬಾರ್ಕ್ ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್​ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ, ರಾಜ್ಯವಾರು ಮತ್ತು ಭಾಷಾವಾರು ನ್ಯೂಸ್ ವಿಭಾಗಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ನೀಡುವ ಕಾರ್ಯ ಮುಂದುವರಿಯುತ್ತದೆ ಎಂದು ಬ್ರಾಡ್​ಕ್ಯಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಸ್ಪಷ್ಟಪಡಿಸಿದೆ.

  ನ್ಯೂಸ್ ಚಾನಲ್​ಗಳ ಟಿಆರ್​ಪಿ ರೇಟಿಂಗ್ ಮೂರು ತಿಂಗಳ ಕಾಲ ಸ್ಥಗಿತ

  5. ವಿಪರೀತ ವಾಯು ಮಾಲಿನ್ಯದಿಂದಾಗಿ ಕುಖ್ಯಾತಿ ಗಳಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಮತ್ತೆ ಅತ್ಯಂತ ಕಳಪೆ ವಾಯು ಮಾಲಿನ್ಯವನ್ನು ದಾಖಲಿಸಿದೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟದ ಕುರಿತು ಸರ್ಕಾರ ಇಂದು ಸೂಚ್ಯಾಂಕ (ಎಕ್ಯೂಐ) ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆ ಹಂತಕ್ಕೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದೆ.

  ಅತ್ಯಂತ ಕಳಪೆಯಾದ ದೆಹಲಿ ವಾಯು ಗುಣಮಟ್ಟ; ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಡೀಸೆಲ್​ ಜನರೇಟರ್​ ಬಳಕೆ ನಿಷೇಧ

  6. ಭಾರೀ ಮಳೆಯಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತಗಳಿಂದ ರೆಡ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

  ಮಳೆಗೆ ತತ್ತರಿಸಿರುವ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ; ಹೆಚ್​ಡಿ ಕುಮಾರಸ್ವಾಮಿ ಒತ್ತಾಯ

  7. ಕೇಂದ್ರ ಸರಕಾರದ ಸೂಚನೆಯಂತೆ ಅತಿ ಶೀಘ್ರದಲ್ಲಿಯೇ ಕಾಲೇಜುಗಳು ಆರಂಭವಾಗುತ್ತಿದ್ದು, ಅದರಂತೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾದ ಕೂಡಲೇ ಕೌನ್ಸೆಲಿಂಗ್‌ ಮುಗಿಸಿಕೊಂಡು ನೇಮಕಾತಿ ಅದೇಶದ ನೀರಿಕ್ಷೆಯಲ್ಲಿರುವ ಎಲ್ಲ ಉಪನ್ಯಾಸಕರಿಗೆ ನೇಮಕಾತಿ ಪತ್ರವನ್ನು ನೀಡಲು ಸರಕಾರ ನಿರ್ಧರಿಸಿದೆ ಎಂದು  ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

  ಧರಣಿನಿರತ ಉಪನ್ಯಾಸಕರಿಗೆ ಕಾಲೇಜು ಆರಂಭವಾದ ತಕ್ಷಣ ನೇಮಕಾತಿ ಆದೇಶ: ಡಿಸಿಎಂ ಅಶ್ವತ್ಥನಾರಾಯಣ

  8. ಕೊರೋನಾ ಭೀತಿಯಿಂದಾಗಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಬಾಗಿಲು ತೆರೆದಿವೆ. ಏಳು ತಿಂಗಳ ನಂತರ ಅಂದರೆ, ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಮಾರ್ಚ್ 14ರಿಂದ ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಅಕ್ಟೋಬರ್-15ರಿಂದ ಮತ್ತೆ ಆರಂಭವಾಗಿವೆ.

  ಇಂದಿನಿಂದ ಬಾಗಿಲು ತೆರೆದ ಚಿತ್ರಮಂದಿರಗಳು: ಊಹಿಸಿದಷ್ಟು ಸಂಖ್ಯೆಯಲ್ಲಿ ಬಾರದ ಪ್ರೇಕ್ಷಕರು..!

  10. ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿಂದು ಐಪಿಎಲ್​ನ 31ನೇ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೆ. ಎಲ್ ರಾಹುಲ್ ನಾಯಕತ್ವದ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿ ಆಗಲಿವೆ.

  IPL 2020, RCB vs KXIP: ಆರ್​ಸಿಬಿಗೆ ಸೇಡಿನ ಪಂದ್ಯ: ಪಂಜಾಬ್​ಗೆ ಮಾಡು ಇಲ್ಲವೇ ಮಡಿ ಪಂದ್ಯ!
  Published by:G Hareeshkumar
  First published: