• Home
  • »
  • News
  • »
  • state
  • »
  • Top-5 News: ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ! ಪ್ರೇಯಸಿ ಜೊತೆ ಸಿಕ್ಕಿಬಿದ್ದವನಿಗೆ ಬೀದಿಯಲ್ಲೇ ಧರ್ಮದೇಟು; ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top-5 News: ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ! ಪ್ರೇಯಸಿ ಜೊತೆ ಸಿಕ್ಕಿಬಿದ್ದವನಿಗೆ ಬೀದಿಯಲ್ಲೇ ಧರ್ಮದೇಟು; ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ


ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ (Narendra Babu Sharma)  ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ರಾಜ್ಯದ ಬಗ್ಗೆ ಭೀಕರ ಭವಿಷ್ಯ ನುಡಿದಿದ್ದಾರೆ. ದೇವರ ಸತ್ಯವಾಗಿ ಹೇಳುತ್ತೇನೆ. 31 ವರ್ಷದೊಳಗೆ ಕರ್ನಾಟಕ (Karnataka) ಮೂರು ಭಾಗ ಆಗಿ, ಮೂರು ಮುಖ್ಯಮಂತ್ರಿ (Chief Minister), ಮೂವರು ರಾಜ್ಯಪಾಲರಾಗುತ್ತಾರೆ. ಇದು ಶಿವನ ಆಣೆಗೂ ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.  ಭಾರತ ದೇಶ ಎರಡು ಭಾಗ ಆಗುತ್ತೆ, ಎರಡು, ಎರಡು ರಾಷ್ಟ್ರಪತಿ ಆಗೋದು ಸತ್ಯ. ಇದು ನಡೆಯೋದು ನಿಜ, ಸತ್ಯ ಬ್ರಹ್ಮಾಂಡ ಗುರೂಜಿ ದೇಶವೇ ಬೆಚ್ಚಿಬೀಳೋ ಭವಿಷ್ಯ ನುಡಿದಿದ್ದಾರೆ.


ಓಲಾ, ಉಬರ್​ ಸದ್ಯ ನಿರಾಳ


ಬೆಂಗಳೂರು: ಜನರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪದಡಿ ಆಟೋ ಸೇವೆ ಬ್ಯಾನ್ ವಿರುದ್ಧ ಓಲಾ, ಉಬರ್ (Ola Uber Ban In Bengaluru) ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court)  ಮಧ್ಯಂತರ ತಡೆ ನೀಡಿದೆ. ಓಲಾ ಉಬರ್ ಆಟೋ ಸೇವೆ ಒದಗಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಯ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ. ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತೆ ಇಲ್ಲ. ಓಲಾ, ಉಬರ್ ಕಂಪನಿ (Ola Uber Service in Bengaluru) ಅನುಕೂಲಕರ ದರವನ್ನು ವಿಧಿಸಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್​ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶ ನೀಡಿದೆ.


ಮೃತ ಬಾಲಕಿ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ,


ಮಂಡ್ಯ (ಅ.14): ಟ್ಯೂಷನ್​​ಗೆ (Tuition) ಹೋಗಿದ್ದ ದಿವ್ಯಾ ಎಂಬ 10 ವರ್ಷದ ಬಾಲಕಿ ನೀರಿನ ಸಂಪಿನಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಟ್ಯೂಷನ್ ಶಿಕ್ಷಕನೇ (Teacher) ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದಾನೆ. ಕಾಂತರಾಜ್ (Kantaraj) ಎಂಬ ಶಿಕ್ಷಕ ವಿದ್ಯಾರ್ಥಿ ದಿವ್ಯಾಳನ್ನ ಟ್ಯೂಷನ್​ಗೆ ಕರೆಸಿ ಕೊಲೆ ಮಾಡಿ ಸಂಪಿನಲ್ಲಿ ಎಸೆದಿದ್ದಾನೆ. ಆರೋಪಿ ಕಾಂತರಾಜ್ ಬಂಧಿಸಿ ಪೊಲೀಸರು (Police) ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಮಳವಳ್ಳಿ ಟೌನ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ಬಾಲಕಿ ಮನೆಗೆ ಇಂದು ಜೆಡಿಎಸ್​ ಯುವ ಸಂಘಟನೆ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.


ಬೀದಿಯಲ್ಲೇ ಗಂಡನ ಗ್ರಹಚಾರ ಬಿಡಿಸಿದ ಪತ್ನಿ


ಗಾಜಿಯಾಬಾದ್, ಉತ್ತರ ಪ್ರದೇಶ: ಉತ್ತರ ಭಾರತದ (North India) ಬಹುತೇಕ ರಾಜ್ಯಗಳಲ್ಲಿ ಆಚರಿಸುವ ಜನಪ್ರಿಯ ಹಬ್ಬಗಳಲ್ಲಿ ಕರ್ವಾ ಚೌತ್ ಕೂಡ ಒಂದು. ಗಂಡನ (Husband) ಆಯುಷ್ಯ, ಆರೋಗ್ಯ (Health) ವೃದ್ಧಿಯಾಗಲಿ ಅಂತ ದಕ್ಷಿಣ ಭಾರತದ ರಾಜ್ಯಗಳಲ್ಲಿ (South Indian States) ಹೆಂಡತಿಯರು (Wives) ಮಾಡುವ ಭೀಮನ ಅಮಾವಾಸ್ಯೆ (Bhimana Amavasye), ವಟ ಸಾವಿತ್ರಿ ವೃತದಂತೆ (Vata Savitri Vrith) ಕರ್ವಾ ಚೌತ್ ಕೂಡ ಆಚರಿಸಲ್ಪಡುತ್ತದೆ. ಗಂಡನ ಶ್ರೇಯೋಭಿವೃದ್ಧಿಗಾಗಿ ಹೆಂಡತಿಯರು ಈ ರೀತಿಯ ವೃತ ಮಾಡುತ್ತಾರೆ. ಆದರೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ಭೂಪನೊಬ್ಬ ಕರ್ವಾ ಚೌತ್ ದಿನವೇ ಹೆಂಡತಿಯಿಂದ ಬೀದಿಯಲ್ಲೇ ಹೊಡೆತ ತಿಂದಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.


ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ಕ್ಕೆ ಎಲೆಕ್ಷನ್


ನವದೆಹಲಿ: ದೇಶದ ಗಮನ ಸೆಳೆದಿರುವ ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಗೆ (Gujarat assembly elections) ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ. ಇಂದು ಸುದ್ದಿಗೋಷ್ಠಿ (Press meet) ನಡೆಸಿದ ಕೇಂದ್ರ ಚುನಾವಣಾ ಆಯೋಗ (Central Election Commission), ಗುಜರಾತ್‌ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಪ್ರಕಟಿಸಿಲ್ಲ. ಇನ್ನು ಹಿಮಾಚಲ ಪ್ರದೇಶ (Himachal Pradesh) ರಾಜ್ಯದ ವಿಧಾನಸಭಾ ಚುನಾವಣೆಗೆ ಇಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಇದೇ ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

Published by:ಪಾವನ ಎಚ್ ಎಸ್
First published: