Evening Digest: ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಉಗ್ರರ ಎನ್​ಕೌಂಟರ್, ಆರ್ ಆರ್ ನಗರಕ್ಕೆ ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಕಳೆದ ವರ್ಷ ಡಿಸೆಂಬರ್​ ವೇಳೆಗೆ ಚೀನಾದಲ್ಲಿ ಆರಂಭವಾಗಿ ಪ್ರಸ್ತುತ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಸೋಂಕು ಈಗಾಗಲೇ ಲಕ್ಷಾಂತರ ಜನರ ಪ್ರಾಣವನ್ನು ಬಲಿಪಡೆದಿದೆ. ಕೋಟ್ಯಾಂತರ ಜನ ಈ ಸೋಂಕಿಗೆ ತುತ್ತಾಗಿ ಅವಸ್ತೆಪಡುತ್ತಿದ್ದಾರೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅನೇಕ ಖಾಸಗಿ ಭಾಗೀದಾರರು ಈ ಸೋಂಕಿಗೆ ಔಷಧಿ ಕಂಡುಹಿಡಿಯಲು ಮುಂದಾಗಿದ್ದಾರೆ.

  ಕೊರೋನಾ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಿದ ಅಮೆರಿಕ ಮೂಲದ ಜಾನ್ಸನ್​ ಅಂಡ್ ಜಾನ್ಸನ್ ಕಂಪೆನಿ

  2. ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ (ಎಲ್​ಇಟಿ) ಉಗ್ರ ಸಂಘಟನೆಯ ಟಾಪ್ ಕಮಾಂಡರ್​ ಸೇರಿ ಇಬ್ಬರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಸೇನಾಪಡೆ ಸಿಬ್ಬಂದಿ ಎನ್​ಕೌಂಟರ್​ ನಡೆಸಿ, ಹತ್ಯೆ ಮಾಡಿದ್ದಾರೆ. ಸೋಮವಾರ ಎಲ್​ಇಟಿ ಮತ್ತು ಭಾರತೀಯ ಸೇನೆಯ ನಡುವೆ ಶ್ರೀನಗರದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಯಲ್ಲಿ ಎಲ್​ಇಟಿ ಕಮಾಂಡರ್ ಸೇರಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

  ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಉಗ್ರರ ಎನ್​ಕೌಂಟರ್

  3. ಉತ್ತರಪ್ರದೇಶದ ಹತ್ರಾಸ್‌ ಎಂಬಲ್ಲಿ ಮೇಲ್ಜಾತಿಯ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ಇನ್ನೂ ಮರೆಯಾಗಿಲ್ಲ. ಈ ಘಟನೆ ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ಮತ್ತು ಜನರ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಿಗೆ ಉತ್ತರಪ್ರದೇಶದಲ್ಲಿ ಮತ್ತಷ್ಟು ಅತ್ಯಾಚಾರ ಪ್ರಕರಣಗಳು  ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

  ಉತ್ತರಪ್ರದೇಶದಲ್ಲಿ ಶಾಲಾ ಬಾಲಕಿಯ ಮೇಲೆ ಕಾಲೇಜು ಆವರಣದಲ್ಲೇ ಅತ್ಯಾಚಾರ; 8 ಜನ ಕಾಮುಕರ ಬಂಧನ!

  4. ದೇಶದಲ್ಲಿ ಸುನಾಮಿ ಸ್ವರೂಪ ಪಡೆದುಕೊಂಡಿದ್ದ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆಯಲ್ಲಿ ಈಗ ತುಸು ತಗ್ಗಿದೆ.‌‌ ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ 71 ಲಕ್ಷವನ್ನೂ ದಾಟಿದ್ದರೂ ಪ್ರತಿದಿನ ಈಗ 6 ಸಾವಿರಕ್ಕೂ ಕಡಿಮೆ ಪ್ರಕರಣಗಳು ಗೋಚರಿಸುತ್ತಿವೆ.

  Coronavirus India Updates: ದೇಶದಲ್ಲಿ ನಿಲ್ಲದ ಕೊರೋನಾ ಉಪಟಳ; ನಿನ್ನೆ ದೇಶದಲ್ಲಿ 55,342 ಕೇಸ್ ಪತ್ತೆ

  5. ಸಚಿವ ಬಿ. ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಸಚಿವ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ನೀಡಲಾಗಿತ್ತು. ಸಚಿವ ಶ್ರೀರಾಮುಲು ಅವರ ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯನ್ನೂ ವಾಪಾಸ್ ಪಡೆದಿದ್ದ ಸಿಎಂ ಯಡಿಯೂರಪ್ಪ ಎರಡು ಖಾತೆಗಳ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿದ್ದರು.

  ಖಾತೆ ಬದಲಾವಣೆಗೆ ಅಸಮಾಧಾನಗೊಂಡಿದ್ದ ಶ್ರೀರಾಮುಲು ಮನವೊಲಿಕೆ ಯಶಸ್ವಿ

  6.ರಾಜರಾಜೇಶ್ವರಿ ನಗರ ಉಪಕದನಕ್ಕೆ ಸ್ಪರ್ಧಾಳುಗಳು ಬಹುತೇಕ ಫಿಕ್ಸ್ ಆಗಿದ್ಧಾರೆ. ಮಾಜಿ ಶಾಸಕ ಮುನಿರತ್ನಗೆ ಬಿಜೆಪಿ ಟಿಕೆಟ್ ಕೊಡುವುದು ನಿಶ್ಚಿತವಾಗುತ್ತಿದ್ದಂತೆಯೇ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕೃಷ್ಣಮೂರ್ತಿ ಅವರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

  ಆರ್ ಆರ್ ನಗರಕ್ಕೆ ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿ; ನಾಳೆ ನಾಮಪತ್ರ ಸಲ್ಲಿಕೆ

  7. 2018ರಲ್ಲಿ ನಡೆದ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಗೌಡ ಕೋರ್ಟ್​ ಮೆಟ್ಟಿಲೇರಿದ್ದರು. ತುಳಸಿ ಮುನಿರಾಜು ಗೌಡ ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್​ ಮರು ಚುನಾವಣೆ ನಡೆಸಲು ಸೂಚಿಸಿತ್ತು. ಅದಾದ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಇಂದು ಈ ಬಗ್ಗೆ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್​ ಹೈಕೋರ್ಟ್​ನ ತೀರ್ಪನ್ನು ಎತ್ತಿ ಹಿಡಿದಿದೆ.

  ಆರ್​ಆರ್​ ನಗರ ಉಪಚುನಾವಣೆ; ಬಿಜೆಪಿ ಟಿಕೆಟ್ ವಿಚಾರದಲ್ಲಿ ಗೊಂದಲವಿಲ್ಲ ಎಂದ ತುಳಸಿ ಮುನಿರಾಜು ಗೌಡ

  8. ಕೊರೋನಾ ಸಂಕಷ್ಟದ ಹಿನ್ನಲೆ ರಾಜ್ಯದ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗಳಿಗೆ ಆಯ್ಜೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡುವುದು ತಡವಾಗಿದೆ. ಈ ಬಗ್ಗೆ ಉಪನ್ಯಾಸಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಕೋವಿಡ್​ ಹಿನ್ನೆಲೆಯಲ್ಲಿ ಕಾಲೇಜು ಆರಂಭ ತಡವಾಗುತ್ತಿದ್ದು, ಬೋಧಕರಿಗೆ ವರದಿ ಮಾಡಿಕೊಳ್ಳುವುದಕ್ಕೆ ತೊಂದರೆಯಾಗಬಾರದು ಎಂಬ ಅಂಶ ಗಮನದಲ್ಲಿಟ್ಟುಗೊಂಡು ಇನ್ನೂ ಆದೇಶ ಪತ್ರ ನೀಡಿಲ್ಲ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

  ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ನಿಶ್ಚಿತ: ಸಿಎಂ ಯಡಿಯೂರಪ್ಪ ಮತ್ತೆ ಭರವಸೆ

  9. ಸ್ಯಾಂಡಲ್‌ವುಡ್‌ ಯುವ ಸಾಮ್ರಾಟ್‌ ಚಿರು ಸರ್ಜಾ ಇವತ್ತು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಒಬ್ಬ ಉತ್ತಮ ನಟನಾಗಿ, ಅತ್ಯುತ್ತಮ ವ್ಯಕ್ತಿತ್ವಗಳಿಂದ ಎಲ್ಲ ಅಭಿಮಾನಿಗಳ ಮನದಲ್ಲೂ ಚಿರಂಜೀವಿಯಾಗಿದ್ದಾರೆ. ಚಿರು ಸರ್ಜಾ ಅಕಾಲಿಕ ನಿಧನದಿಂದಾಗಗಿ ಅವರು ನಟಿಸಿದ್ದ, ನಟಿಸುತ್ತಿದ್ದ ಹಾಗೂ ನಟಿಸಬೇಕಿದ್ದ ಹಲವು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿದ್ದವು.

  Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಕ್ಷತ್ರಿಯ ಚಿತ್ರದ ಟೀಸರ್‌; ಸರ್ಜಾ ಕುಟುಂಬಕ್ಕೆ ಗಿಫ್ಟ್​ ನೀಡೋಕೆ ರೆಡಿ ಆದ ಚಿತ್ರತಂಡ

  10. ಐಪಿಎಲ್​ನಲ್ಲಿ ಇಂದು ನಡೆಯಲಿರುವ 29ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ. ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉಭಯ ತಂಡಗಳಿರುವ ಕಾರಣ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

  SRH vs CSK: ಚೆನ್ನೈಗಿಂದು ಮಾಡು ಇಲ್ಲವೇ ಮಡಿ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉಭಯ ತಂಡಗಳು
  Published by:G Hareeshkumar
  First published: